ಆರ್ಚ್ಬಿಷಪ್ ನಿಭಾಯಿಸಶಕ್ತರಲ್ಲ!
ಕಳೆದ ವರ್ಷ ಒಂದು ಕನ್ಸಿಸ್ಟರಿ (ಕಾರ್ಡಿನಲ್ಗಳ ವಿಧಿವಿಹಿತ ಸಭೆ) ಯು ಕ್ಯಾತೊಲಿಕ್ ಚರ್ಚ್ಗೆ ಬಹಳ ಚಿಂತೆಗೀಡುಮಾಡಿದ ನಿರ್ದಿಷ್ಟ ವಿಷಯಗಳನ್ನು ಚರ್ಚಿಸಲು ಸಂಸ್ಥಾಪಿಸಲ್ಪಟ್ಟಿತು. ಈಲ್ ಸಾಬಾಟೊ ವೃತ್ತಪತ್ರಕೆಗನುಸಾರ, ಇವುಗಳಲ್ಲಿ ಒಂದು “ಮತಪಂಥಗಳ ಆಕ್ರಮಣ ಮನೋಭಾವ” ಆಗಿತ್ತು. ಆದಾಗ್ಯೂ, ವಾರ್ತಾಪತ್ರವು ಹೇಳಿದ್ದು: “ಈ ವಿಷಯದ ಮೇಲೆ ಒಮ್ಮತಕ್ಕೆ ಬರಲು ಕಾರ್ಡಿನಲ್ಗಳಿಗೆ ಯಾವುದೇ ಸಮಸ್ಯೆ ಇರಕೂಡದು. ಹೊಸ ಧಾರ್ಮಿಕ ಚಳುವಳಿಗಳ ಬೃಹತ್ ಪ್ರಮಾಣದ ಬೆಳವಣಿಗೆಯ, ಮತ್ತು ಸಾಧ್ಯವಾಗುವಷ್ಟು ಅವರ ವಿಸ್ತರಿಸುವಿಕೆಯನ್ನು ತಡೆಗಟ್ಟುವ ಆವಶ್ಯಕತೆಯ ಕುರಿತು ಕೂಡ ಅಧಿಕ ಗಾಢ ಅಧ್ಯಯನವೊಂದನ್ನು ಮಾಡುವ ಜರೂರಿಯ ಕುರಿತು ಎಲ್ಲರೂ ಸಹಮತದಲ್ಲಿದ್ದಾರೆ.”
ಆದರೂ, “ಮತಪಂಥಗಳ ಆಕ್ರಮಣ ಮನೋಭಾವ” ವು ಕೇವಲ ಇಟೆಲಿಯಲ್ಲಿ ಮಾತ್ರವೇ ಅಲ್ಲವೆಂಬುದು ಸ್ಫುಟ. ಈಲ್ ಸಾಬಾಟೊ ವರದಿಸಿದ್ದು: “ಇತ್ತೀಚಿಗೆ ವ್ಯಾಟಿಕನನ್ನು ಸಂದರ್ಶಿಸುತ್ತಿರುವಾಗ, ಸ್ಮೊಲನ್ಸ್ಕ್ನ [ರಶ್ಯದ ಅತಿ ಪುರಾತನ ನಗರಗಳಲ್ಲಿ ಒಂದು] ಆರ್ಚ್ಬಿಷಪ್ ಕಿರಿಲ್ . . . ಸೋವಿಯೆಟ್ ಒಕ್ಕೂಟದಲ್ಲಿ ಯೆಹೋವನ ಸಾಕ್ಷಿಗಳ ಮತ್ತು ತದ್ರೀತಿಯ ಗುಂಪುಗಳ ತಡೆಯಲಸಾಧ್ಯವಾದ ಬೆಳವಣಿಗೆಯನ್ನು ನಿಭಾಯಿಸಲು ಸಮಸ್ತ ಕ್ರೈಸ್ತ ಪ್ರಪಂಚದ ನೆರವಿಗಾಗಿ ಪೋಪರನ್ನು ವಿನಂತಿಸಿದರು.”
ಮೊದಲನೆಯ ಶತಕದಲ್ಲಿ, ಕ್ರೈಸ್ತತ್ವವು ಅದರ ಅನುಯಾಯಿಗಳಿಂದ ಆಕ್ರಮಣಕಾರಿಯಾಗಿ ವಿಸ್ತರಿಸಲ್ಪಟ್ಟಾಗ, ಸ್ಥಾಪಿತ ಧರ್ಮದ ಮುಖಂಡರುಗಳಲ್ಲಿ ತದ್ರೀತಿಯ ದೂರುಗಳು ಇದ್ದವು. ಒಂದು ಸಂದರ್ಭದಲ್ಲಿ ಕೋಪೋದ್ರಿಕ್ತ ಯೆಹೂದ್ಯರು ನಗರದ ಅಧಿಕಾರಿಗಳಿಗೆ ದೂರನ್ನಿತ್ತದ್ದು: “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ”! (ಅ. ಕೃತ್ಯಗಳು 17:6) ಕ್ರೈಸ್ತತ್ವದ ಹಬ್ಬುವಿಕೆಯನ್ನು ನಿಲ್ಲಿಸಲು ಆಗಲೂ ಕಠಿಣವಾಗಿ ಪ್ರಯತ್ನಿಸಲಾಯಿತು, ಆದರೆ ನಿಷ್ಫಲಹೊಂದಿತು. ಇಂದೂ ಕೂಡ, ನಿಜ ಕ್ರೈಸ್ತತ್ವದ ಬೋಧನೆಯನ್ನು ಹಬ್ಬಿಸುವುದನ್ನು ನಿಲ್ಲಿಸಲು ಮಾಡುವ ಯಾವುದೇ ಪ್ರಯತ್ನವೂ ಕೂಡ ಖಂಡಿತವಾಗಿಯೂ ಪರಾಜಯಗೊಳ್ಳುವದು. ದೇವರು ತಾನೇ ಆಶ್ವಾಸನೆಯನ್ನಿತ್ತಿದ್ದಾನೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ.”—ಯೆಶಾಯ 54:17. (w92 8⁄15)