ಹಿಂದಕ್ಕೆ ಬರುವ ಮಾರ್ಗದಲ್ಲಿ ಒಂದು ಹೆಜ್ಜೆ
‘ಅವನು ಅವರಿಗೆ ಸಾಮ್ಯಗಳನ್ನು ಹೇಳಿದನು.’ ಕರುಣೆಯ ಕುರಿತಾದ ಯೇಸುವಿನ ಮೂರು ಸ್ಮರಣಯೋಗ್ಯ ದೃಷ್ಟಾಂತಗಳನ್ನು—ಕಳೆದುಹೋಗಿದ್ದ ಕುರಿ, ಕಳೆದುಹೋಗಿದ್ದ ಪಾವಲಿ, ಮತ್ತು ಪೋಲಿ ಮಗ—ಬೈಬಲ್ ಹೀಗೆ ಪ್ರಸ್ತಾಪಿಸುತ್ತದೆ.—ಲೂಕ 15:3-32.
ಜನವರಿ 1, 1992 ಮತ್ತು ಫೆಬ್ರುಅರಿ 1, 1992 ರ ಕಾವಲಿನಬುರುಜು ಗಳ ಎರಡು ಅಭ್ಯಾಸ ಲೇಖನಗಳು ಈ ದೃಷ್ಟಾಂತಗಳನ್ನು ವಿಮರ್ಶಿಸಿತು ಮತ್ತು ಇಂದು ಕರುಣೆಯನ್ನು ಹೇಗೆ ವಿಸ್ತರಿಸಬಹುದಾಗಿದೆ ಎಂದು ಕಾಣಲು ಅನೇಕ ವಾಚಕರಿಗೆ ಸಹಾಯ ಮಾಡಿತು. ದಯಾಪೂರಿತ ಸಂದರ್ಶನಗಳಿಗೆ ಪ್ರತಿವರ್ತಿಸಬಹುದಾದ ಬಹಿಷ್ಕೃತರಾದ ವ್ಯಕ್ತಿಗಳನ್ನು ಭೇಟಿ ನೀಡುವುದರಲ್ಲಿ ಮೊದಲ ಹೆಜ್ಜೆಗಳನ್ನು ತಕ್ಕೊಳ್ಳುವ ಆತ್ಮಿಕ ಕುರುಬರ ಮೇಲೆ ಪ್ರಥಮವಾಗಿ ಕೇಂದ್ರಿತವಾಗಿತ್ತು. ಈ ಲೇಖನಗಳ ಮತ್ತು ಹೊಸ ಕಾರ್ಯವಿಧಾನದ ಫಲಿತಾಂಶಗಳೇನಾಗಿವೆ?
ಈ ಪತ್ರಿಕೆಯು ಪ್ರಕಾಶಿತವಾದ ನಂತರ ಬಲುಬೇಗನೆ, ಅಮೆರಿಕದ ವಾಷಿಂಗ್ಟನ್ ಪ್ರಾಂತ್ಯದ ಒಬ್ಬ ಮನುಷ್ಯನು ಬರೆದದ್ದು: “ಇಂದಿನ ನನ್ನ ಅಂಚೆಯಲ್ಲಿ ಯೆಹೋವನ ವಿಫುಲವಾದ ಪ್ರೀತಿಯ ದಯೆಯ ರುಜುವಾತು ಆಗಮಿಸಿತು. ಸರ್ವೋನ್ನತನಿಂದ ಒದಗಿಸಲ್ಪಟ್ಟ ಸರಬರಾಯಿಗಳ ಮತ್ತು ಪುನಃ ಅಳವಡಿಸುವಿಕೆಯ ಮೇಲೆ ನಾನು ಕಣ್ಣೀರಿಳಿಸುತ್ತಾ ಹಾಗೂ ನನ್ನ ಹೃದಯದಲ್ಲಿ ಆನಂದ ಪಡುತ್ತಾ ಇಲ್ಲಿ ಕುಳಿತಿದ್ದೇನೆ. ನಿಜವಾಗಿಯೂ ನ್ಯಾಯಿಯಾಗಿರುವ ದೇವರೊಬ್ಬನು ಮಾತ್ರವೇ ಕಳೆದುಹೋಗಿದ್ದ ಕುರಿಗಳಂಥವರಿಗೆ ಸಹಾಯವನ್ನು ಒದಗಿಸಶಕ್ತನು. . . . ಹೌದು, ನಾನು ಬಹಿಷ್ಕೃತನಾಗಿದ್ದೇನೆ, ಆದರೆ ಪುನರ್ಸ್ಥಾಪಿಸಲ್ಪಡುವ ಹಾದಿಯಲ್ಲಿದ್ದೇನೆ.” ಅಕ್ಟೋಬರ್ನಲ್ಲಿ ಅವನು ಪುನರ್ಸ್ಥಾಪನೆಗೊಂಡನು.
ಆದರೆ ಸಭೆಯ ಇಬ್ಬರು ಹಿರಿಯರುಗಳಿಂದ ಮಾಡಲ್ಪಟ್ಟ ಸಂದರ್ಶನದ ಕುರಿತಾಗಿ ಏನು? ಕ್ರೈಸ್ತ ಹೆಂಡತಿಯೊಬ್ಬಳು ಬರೆದದ್ದು: “ನನ್ನ ಭಾವನೆ ಏನೆಂದು ಶಬ್ದಗಳು ವ್ಯಕ್ತಪಡಿಸಶಕ್ಯವಾಗಲಾರವು. ನನ್ನ ಗಂಡನು 13 ವರ್ಷಗಳಿಂದ ಬಹಿಷ್ಕೃತನಾಗಿದ್ದನು. ಲೇಖನದಲ್ಲಿ ಸೂಚಿಸಲ್ಪಟ್ಟಂತೆ, ಹಿರಿಯರು ಅವನ ಭೇಟಿ ಮಾಡಿದರು. ಅನೇಕ ವರ್ಷಗಳಿಂದ ಕಳೆದ ರಾತ್ರಿ ಮೊದಲ ಬಾರಿ ಅವನು ಕೂಟಗಳಲ್ಲೊಂದಕ್ಕೆ ಹೋದನು. ಅವನು ತನ್ನ ಜೀವಿತವನ್ನು ಬದಲಾಯಿಸಲು ಮತ್ತು ಹಿಂದಕ್ಕೆ ಬರಲು ಈಗ ಪ್ರಯತ್ನಿಸುತ್ತಿದ್ದಾನೆ.”
ಸಭೆಯಿಂದ ಸಭೆಗೆ ಸಂಚರಣಾ ಮೇಲ್ವಿಚಾರಕರು ಸಂದರ್ಶಿಸುತ್ತಿದ್ದಂತೆಯೇ, ಅವರು ಫಲಿತಾಂಶಗಳನ್ನು ಕಾಣುತ್ತಿದ್ದಾರೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಇತ್ತೀಚಿಗೆ ಬರೆದದ್ದು:
“ಜನವರಿ 1, 1992 ಮತ್ತು ಫೆಬ್ರುಅರಿ 1, 1992 ರ ಕಾವಲಿನಬುರುಜು ಗಳು ಪ್ರಕಾಶಿತವಾದಾಗ, ಭೇಟಿನೀಡುವ ಹಿರಿಯರಿಗೆ ಯಾವ ರೀತಿಯ ಪ್ರತಿಕ್ರಿಯೆ ದೊರಕಬಹುದು ಎಂದು ಅನೇಕರು ಅಚ್ಚರಿಪಟ್ಟಿದ್ದರು. ಉತ್ತರವು ಬಹಳಷ್ಟು ತೋರಿಬಂದಿದೆ.
“ನಮ್ಮ ಸರ್ಕಿಟಿನಲ್ಲಿ ನಾನು ಸಂದರ್ಶಿಸಿದ ಹಿಂದಿನ ನಾಲ್ಕು ಸಭೆಗಳು ರಾಜ್ಯ ಸಭಾಗೃಹಗಳಿಗೆ ಒಂಬತ್ತು ಮಂದಿ ಹಿಂತೆರಳಿದ್ದನ್ನು ನೋಡಿವೆ. ಕೇವಲ ಒಬ್ಬನು ಪುನರ್ಸ್ಥಾಪಿಸಲ್ಪಟ್ಟಿದ್ದರೂ ಕೂಡ, ಇತರ ಎಂಟು ಮಂದಿ ಉತ್ತಮ ಪ್ರಗತಿಯನ್ನು ಮಾಡುತ್ತಿದ್ದಾರೆ. ಅವರ ಕೆಲಸದ ಮತ್ತು ದೇವಪ್ರಭುತ್ವ ಮಾರ್ಗದರ್ಶನಗಳನ್ನು ಅನ್ವಯಿಸಿದ್ದರ ವಿವೇಕದ ಫಲಗಳನ್ನು ನೋಡುವುದರಲ್ಲಿ ಹಿರಿಯರು ಮತ್ತು ಸಭೆಗಳು ಉತ್ಸುಕರಾಗಿದ್ದಾರೆ.
“ಈ ಉತ್ತಮ, ಕರುಣಾಭರಿತ ಏರ್ಪಾಡಿನಲ್ಲಿ ನಾವು ಸಂತೋಷಿಸುತ್ತೇವೆ. ಪುನರ್ಸ್ಥಾಪಿಸಲ್ಪಟ್ಟ ಸಹೋದರಿಯೊಬ್ಬಳು ಅಂದಂತೆ, ‘ಸ್ವತಃ ನಾನಾಗಿಯೇ ಹಿಂದಕ್ಕೆ ಬರಲು ನನ್ನಲ್ಲಿ ಧೈರ್ಯವಿರಲಿಲ್ಲ, ಯಾಕಂದರೆ ಯೆಹೋವನ ಮುಂದೆ ಖಂಡಿಸಲ್ಪಟ್ಟವಳೆಂದು ನಾನು ಭಾವಿಸುತ್ತಿದ್ದೆ. ಆದರೆ ಹಿರಿಯರು ಭೇಟಿ ನೀಡಿದಾಗ, ಹಿಂದಕ್ಕೆ ಬರಲು ನನಗೆ ಆವಶ್ಯಕವಾದ ಉತ್ತೇಜನೆಯು ಅದಾಗಿತ್ತು.’ ಅವಳ ಉತ್ಸಾಹವು ಸಭೆಯನ್ನು ಬಹಳವಾಗಿ ಉತ್ತೇಜಿಸಿದೆ.”
ಭೇಟಿ ನೀಡುವ ಅನೇಕರು ಪ್ರತಿವರ್ತನೆ ತೋರಿಸದಿದ್ದರೂ ಕೂಡ, ಈ ಕರುಣಾಭರಿತ ಮೊದಲ ಹೆಜ್ಜೆಯಿಂದಾಗಿ ಖಂಡಿತವಾಗಿ ಒಳಿತನ್ನು ಪೂರೈಸಲಾಗಿದೆ. ಈ ರೀತಿಯಲ್ಲಿ, ಸಪ್ಟಂಬರದ ಆರಂಭದಿಂದ ಪ್ರತಿಯೊಂದು ಸಭೆಯ ಹಿರಿಯರು ಅವರ ಟೆರಿಟೊರಿಯಲ್ಲಿರುವ ಬಹಿಷ್ಕೃತರ ಹೆಸರುಗಳನ್ನು ಪರಾಮರ್ಶಿಸುವರು ಮತ್ತು ತೋರಿಸಲ್ಪಡುವ ಕರುಣೆಗೆ ಪ್ರತಿವರ್ತಿಸಬಹುದೆಂದು ಅವರು ಭಾವಿಸುವವರೆಲ್ಲರನ್ನು ಸಂದರ್ಶಿಸಲು ಏರ್ಪಾಡುಗಳನ್ನು ಮಾಡುವರು.