ಪರಿಹಾರ ಸರಬರಾಯಿಗಳು ಕ್ರೈಸ್ತ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ
“ಸಹೋದರರನ್ನು ಪ್ರೀತಿಸಿರಿ,” ಎಂದು ಅಪೊಸ್ತಲ ಪೇತ್ರನು ತನ್ನ ಜೊತೆ ಕ್ರೈಸ್ತರನ್ನು ಒತ್ತಾಯಿಸಿದನು. (1 ಪೇತ್ರ 2:17) ಅಂತಹ ಪ್ರೀತಿಯು ಕುಲವರ್ಣೀಯ, ಸಾಮಾಜಿಕ, ಮತ್ತು ರಾಷ್ಟ್ರೀಯ ಸರಹದ್ದುಗಳನ್ನು ಮೀರಿ, ಒಂದು ಅಪ್ಪಟವಾದ ಭ್ರಾತೃತ್ವದಲ್ಲಿ ಜನರನ್ನು ಒಟ್ಟಾಗಿ ಸೆಳೆಯಬೇಕಾಗಿತ್ತು. ಆದಿ ಕ್ರೈಸ್ತರಲ್ಲಿ ಪ್ರಾಪಂಚಿಕ ಆವಶ್ಯಕತೆಯು ತಲೆದೋರಿದಾಗ, ಜರೂರಿಯಿದ್ದವರಿಗೆ ವಿತರಣೆಗಾಗಿ ಕಾಣಿಕೆಗಳನ್ನು ಅಪೊಸ್ತಲರಿಗೆ ಕೊಡುವಂತೆ ಪ್ರೀತಿಯು ಅನೇಕರನ್ನು ಪ್ರೇರಿಸಿತ್ತು. ದಾಖಲೆಯನ್ನುವುದು, “ಎಲ್ಲವೂ ಅವರಿಗೆ ಹುದುವಾಗಿ ಇತ್ತು.”—ಅ.ಕೃತ್ಯಗಳು 2:41-45; 4:32.
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು 1991ರ ಅಂತ್ಯದಲ್ಲಿ ಪಶ್ಚಿಮ ಯೂರೋಪಿನ ವಾಚ್ ಟವರ್ ಸೊಸೈಟಿಯ ಅನೇಕ ಶಾಖೆಗಳಿಗೆ, ಹಿಂದಣ ಸೋವಿಯೆಟ್ ಯೂನಿಯನ್ನ ಭಾಗಗಳ ಸಹಿತ ಪೂರ್ವ ಯೂರೋಪಿನಲ್ಲಿರುವ ಆವಶ್ಯಕತೆಯಿದ್ದ ಅವರ ಸಹೋದರರಿಗೆ ಆಹಾರ ಮತ್ತು ಬಟ್ಟೆಗೆಳನ್ನು ಒದಗಿಸಲು ಆಮಂತ್ರಣವನ್ನಿತ್ತಾಗ, ಅಂತಹ ಪ್ರೀತಿಯು ವ್ಯಕ್ತವಾಯಿತು. ಒಳಗೂಡಿದ್ದ ಕೆಲವು ಶಾಖೆಗಳಿಂದ ಬಂದ ವರದಿಗಳ ಒಂದು ಸರಣಿಯನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತೇವೆ.
ಸ್ವೀಡನ್
ದಶಂಬರ 5, 1991 ರಂದು, ಸ್ವೀಡನ್ನಲ್ಲಿರುವ ಎಲ್ಲಾ 348 ಸಭೆಗಳಿಗೆ ಆವಶ್ಯಕತೆಯನ್ನು ವಿವರಿಸುವ ಕಾಗದವನ್ನು ರವಾನಿಸಲಾಯಿತು. ಪ್ರತಿಕ್ರಿಯೆಯು ಶೀಘ್ರವಾಗಿತ್ತು. ಕೆಲವೇ ದಿನಗಳೊಳಗೆ, 15 ಟನ್ನು ಹಿಟ್ಟು, ಅಡುಗೆಗೆ ಬಳಸುವ ಕೊಬ್ಬು, ಡಬ್ಬದಲ್ಲಿ ಹಾಕಿಟ್ಟ ಗೋಮಾಂಸ, ಒಣಗಿಸಿದ ಹಾಲು, ಮತ್ತು ತದ್ರೀತಿಯ ವಸ್ತುಗಳಿಂದ ಹೇರಲ್ಪಟ್ಟ ಮೊದಲ ಸೆಮಿಟ್ರೆಯ್ಲರ್ ರಶ್ಯದ ಸೆಯಿಂಟ್ ಪೀಟರ್ಸ್ಬರ್ಗ್ನ ದಾರಿಯಲ್ಲಿ ಸಾಗಿತು. ಸ್ಥಳೀಕ ಯೆಹೋವನ ಸಾಕ್ಷಿಗಳು ಟ್ರಕ್ನ ಸಾಮಾನು ಇಳಿಸಿದರು ಮತ್ತು ಆವಶ್ಯಕತೆಯಲ್ಲಿರುವವರಿಗೆ 750 ಪ್ಯಾಕೇಜುಗಳನ್ನು ಬೇಗನೆ ಹಂಚಿದರು. ಅನಂತರ, ರಶ್ಯಕ್ಕೆ ಎರಡು ಅಧಿಕ ಸೆಮಿಟ್ರೆಯ್ಲರ್ಗಳು ಆಹಾರವನ್ನು ಕೊಂಡೊಯ್ದವು. ಒಟ್ಟಿಗೆ 51.5 ಟನ್ನುಗಳಿಗಿಂತಲೂ ಹೆಚ್ಚು ಸ್ವೀಡನ್ನಿಂದ ರವಾನಿಸಲಾಯಿತು.
ವಸ್ತ್ರಗಳನ್ನು ಮತ್ತು ಪಾದರಕ್ಷೆಗಳನ್ನು ಕೊಡುವ ಇಚ್ಛೆಯು ಎಲ್ಲಾ ನಿರೀಕ್ಷಣೆಗಳನ್ನು ಮೀರಿತ್ತು. ರಾಜ್ಯ ಸಭಾಗೃಹಗಳಲ್ಲಿ ವಸ್ತ್ರಗಳ ಪ್ಯಾಕೇಜುಗಳ ರಾಶಿಯು ಬಹುಬೇಗನೆ ಸಂಚಯವಾಯಿತು. ಅನೇಕ ಕ್ರೈಸ್ತರು ತಮ್ಮ ಸ್ವಂತ ಉಡುಪುಗಳನ್ನೇ ದಾನವಾಗಿ ಕೊಟ್ಟರು. ಇತರರು ಹೊಸ ವಸ್ತುಗಳನ್ನು ಖರೀದಿಸಿದರು. ಒಬ್ಬ ಸಹೋದರನು ಐದು ಸೂಟುಗಳನ್ನು ಖರೀದಿಸಿದನು. ಉದ್ದೇಶವನ್ನು ತಿಳಿದುಕೊಂಡು ಅಚ್ಚರಿಗೊಂಡ ಅಂಗಡಿಗಾರನು, ಇನ್ನು ಐದು ಸೂಟುಗಳನ್ನು ದಾನವಾಗಿ ಕೊಟ್ಟನು. ಇನ್ನೊಬ್ಬ ಸಹೋದರನು ಕಾಲುಚೀಲಗಳನ್ನು, ಕೈಚೀಲಗಳನ್ನು ಮತ್ತು ಕಂಠವಸ್ತ್ರಗಳ ಒಂದು ಪೆಟ್ಟಿಗೆಯನ್ನು ಖರೀದಿಸಿದನು. ಅವನು ಉದ್ದೇಶವನ್ನು ವಿವರಿಸಿದಾಗ, ಧಣಿಯು ಎರಡು ಸೂಟುಗಳ ಕ್ರಯಕ್ಕೆ 30 ಹೊಸ ಸೂಟುಗಳನ್ನು ಕೊಟ್ಟನು. ಕ್ರೀಡಾವಸ್ತ್ರಗಳ ಅಂಗಡಿಗಾರನೊಬ್ಬನು 100 ಜೊತೆ ಹೊಸ ಪಾದರಕ್ಷೆಗಳ ಮತ್ತು ಬೂಟುಗಳ ಕೊಡುಗೆಯನ್ನಿತ್ತನು.
ಅನಂತರ, ವಿಂಗಡಿಸಲು, ಪುನಃ ಪ್ಯಾಕ್ ಮಾಡಲು, ಮತ್ತು ಹೇರಲು ಇವೆಲ್ಲಾ ವಸ್ತುಗಳನ್ನು ಬ್ರಾಂಚ್ಗೆ ತರಲಾಯಿತು. ಬಟ್ಟೆಬರೆಗಳು—ಸುಮಾರು 40 ಸೆಮಿಟ್ರೆಯ್ಲರ್ಗಳು ಹಿಡಿಯುವಷ್ಟು ಸಮಾನವಾಗಿದ್ದು—ಬ್ರಾಂಚ್ನ ವಿಸ್ತಾರವಾದ ಜಾಗವನ್ನು ತುಂಬಿಸಿತು! ಪುರುಷರಿಗೆ, ಸ್ತ್ರೀಯರಿಗೆ, ಮತ್ತು ಮಕ್ಕಳಿಗೆ ಹೀಗೆ ರಾಶಿಗಳನ್ನಾಗಿ ವಿಂಗಡಿಸಲು ಮತ್ತು ಅದನ್ನು ಕಾಗದದ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಲು ಸಹೋದರ, ಸಹೋದರಿಯರು ವಾರಗಳ ತನಕ ಕೆಲಸ ಮಾಡಿದರು. ರಶ್ಯ, ಯುಕ್ರೇನ್, ಮತ್ತು ಎಸ್ಟೊನಿಯಗಳಿಗೆ ಸುರಕ್ಷಿತವಾಗಿ ಈ ಬಟ್ಟೆಗೆಳನ್ನು ಕೊಂಡೊಯ್ಯಲು ಹದಿನೈದು ಪ್ರತ್ಯೇಕವಾದ ಸೆಮಿಟ್ರೆಯ್ಲರ್ಗಳನ್ನು ಬಳಸಲಾಯಿತು.
ಸೊಸೈಟಿಯ ಟ್ರಕ್ಗಳಲ್ಲೊಂದನ್ನು ಎಂಟು ಬಾರಿ ಹಿಂದಣ ಸೋವಿಯೆಟ್ ಯೂನಿಯನ್ಗೆ ಚಲಾಯಿಸಿದ ಒಬ್ಬ ಸಹೋದರನು ಹೇಳಿದ್ದು: “ಗಮ್ಯಸ್ಥಾನಗಳಲ್ಲಿ ನಮ್ಮ ಸಹೋದರರು ನಮಗಿತ್ತ ಸ್ವಾಗತವು ಒಂದು ದೊಡ್ಡ ಬಹುಮಾನವಾಗಿತ್ತು. ಅವರು ನಮ್ಮನ್ನು ಅಪ್ಪಿಕೊಂಡರು ಮತ್ತು ಮುದ್ದುಕೊಟ್ಟರು, ಮತ್ತು ಅವರ ಕೊಂಚವೇ ಮೂಲ ಸಂಪತ್ತುಗಳ ಹೊರತಾಗಿಯೂ ಅವರು ನಮಗೆ ಕ್ರೈಸ್ತ ಉದಾರತೆಯಲ್ಲಿ ಒಂದು ಉತ್ತಮ ಪಾಠವನ್ನು ನೀಡಿದರು.”
ಫಿನ್ಲೆಂಡ್
ಫಿನ್ಲೆಂಡಿನಲ್ಲಿ ತೀವ್ರ ಹಣದ ಕುಸಿತ, ವ್ಯಾಪಕ ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳು ಇದ್ದಾಗ್ಯೂ, ಹಿಂದಣ ಸೋವಿಯೆಟ್ ಯೂನಿಯನ್ನಲ್ಲಿರುವ ಅವರ ಸಹೋದರರಿಗೆ ಸಹಾಯ ಮಾಡಲು ಸುಮಾರು 18,000 ಫಿನ್ನಿಷ್ ಸಹೋದರರ ನಡುವೆ ಇದ್ದ ಇಚ್ಛೆಯು ಮಹತ್ತಾದದ್ದು. ಅವರು ಸೆಯಿಂಟ್ ಪೀಟರ್ಸ್ಬರ್ಗ್, ಎಸ್ಟೊನಿಯ, ಲಾಟಿಯ್ವ, ಲಿತುಆ್ಯನಿಯ, ಮತ್ತು ಕಲಿನಿನ್ಗ್ರಾಡ್ಗೆ 4,850 ಕಾಗದದ ಪೆಟ್ಟಿಗೆಗಳಲ್ಲಿ 58 ಟನ್ನುಗಳಿಗಿಂತಲೂ ಹೆಚ್ಚು ಆಹಾರವನ್ನು ಕಳುಹಿಸಿದರು. ಟ್ರಕ್ಗಳ ಖಾಲಿ ಜಾಗಗಳನ್ನು ಕೂಡ ಅವರು 12 ಘನ ಮೀಟರ್ಗಳ ಬಟ್ಟೆಗೆಳಿಂದ ತುಂಬಿಸಿದರು. ಸುಮಾರು 25 ಬಳಸಿದ ಕಾರುಗಳನ್ನು ಮತ್ತು ವ್ಯಾನ್ಗಳನ್ನು ಕೂಡ ರಾಜ್ಯ ಕಾರ್ಯದಲ್ಲಿ ಬಳಸುವಂತೆ ಕಾಣಿಕೆಯನ್ನೀಯಲಾಯಿತು.
ಸೆಯಿಂಟ್ ಪೀಟರ್ಸ್ಬರ್ಗ್ನ ಪ್ರದೇಶದಲ್ಲಿರುವ 14 ಪ್ರಚಾರಕರ ಸ್ಲಂಟೀಯ ಸಭೆಗೆ ಆಹಾರದ ಕೆಲವು ಪೆಟ್ಟಿಗೆಗಳು ತಲುಪಿದವು. ಒಂದು ಪತ್ರದ ಮೂಲಕ ಅವರು ಮಹಾ ಗಣ್ಯತೆಯನ್ನು ವ್ಯಕ್ತಪಡಿಸಿದರು. “ನಮ್ಮ ಸಭೆಯಲ್ಲಿ ಹತ್ತು ಮಂದಿ ವಯಸ್ಸಾದ ಸಹೋದರಿಯರು ಇದ್ದಾರೆ. ನಮ್ಮಲ್ಲಿ ಹೆಚ್ಚಿನವರು ಗಂಭೀರವಾಗಿ ಅನಾರೋಗ್ಯದಲ್ಲಿದ್ದೇವೆ ಮತ್ತು ಆಹಾರವನ್ನು ಪಡೆಯಲು ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಶಕ್ತರಾಗಿಲ್ಲ. ಆದಾಗ್ಯೂ, ನಮ್ಮ ಸ್ವರ್ಗೀಯ ತಂದೆಯು ಈ ಸಂಕಟದ ಸಮಯದಲ್ಲಿ ನಿರುತ್ಸಾಹಗೊಳ್ಳಲು ಯಾವುದೇ ಕಾರಣವನ್ನು ನಮಗೀಯುವುದಿಲ್ಲ, ಬದಲಾಗಿ ಹರ್ಷದಿಂದ ನಮ್ಮ ಹೃದಯಗಳನ್ನು ತುಂಬಿಸುತ್ತಾನೆ. ನಾವು 43 ಮನೆ ಬೈಬಲ್ ಅಧ್ಯಯನಗಳನ್ನು ನಡಿಸುತ್ತೇವೆ.” ಸೆಯಿಂಟ್ ಪೀಟರ್ಸ್ಬರ್ಗ್ನಲ್ಲಿ ಸಹೋದರಿಯೊಬ್ಬಳು ಅವಳ ಪರಿಹಾರದ ಕಟ್ಟನ್ನು ಪಡೆದಾಗ, ಎಷ್ಟು ಭಾವಾವೇಶಗೊಂಡಳೆಂದರೆ ಅದನ್ನು ತೆರೆಯುವ ಮೊದಲು ಎರಡು ಗಂಟೆ ಕಾಲ ಅತಳ್ತು.
ಡೆನ್ಮಾರ್ಕ್
ಬಾಲಿಕ್ಟ್ ಸಮುದ್ರದ ಪ್ರವೇಶದ್ವಾರದಲ್ಲಿರುವ ಈ ಚಿಕ್ಕ ದೇಶದಲ್ಲಿ, ಸುಮಾರು 16,000 ಯೆಹೋವನ ಸಾಕ್ಷಿಗಳು ಒಟ್ಟಿಗೆ ಸೇರಿ, 4,200 ಪೆಟ್ಟಿಗೆಗಳಲ್ಲಿ ಆಹಾರ, 4,600 ಪೆಟ್ಟಿಗೆಗಳಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗೆಳು, ಮತ್ತು ಹೊಸ ಪಾದರಕ್ಷೆಗಳ 2,269 ಜೋಡಿಗಳು, ಹೀಗೆ 64 ಟನ್ನುಗಳ ಸಾಮಾನನ್ನು ಹೇರಿರುವ 19 ಟ್ರಕ್ಗಳನ್ನು ಯುಕ್ರೇನ್ಗೆ ಕಳುಹಿಸಿದರು. ಜರ್ಮನಿಯಲ್ಲಿರುವ ಒಬ್ಬ ಸಹೋದರನು ಐದು ಟ್ರಕ್ಗಳನ್ನು ಬಳಸುವಂತೆ ಬ್ರಾಂಚ್ಗೆ ಅನುಮತಿಸಿದನು, ಅನಂತರ ಅವುಗಳನ್ನು ಯುಕ್ರೇನ್ನ ಸಹೋದರರಿಗೆ ಕಾಣಿಕೆಯಾಗಿ ಕೊಟ್ಟನು. ಮನೆಗೆ ಹಿಂತೆರಳಿದ ನಂತರ, ಚಾಲಕರುಗಳಲ್ಲಿ ಒಬ್ಬನಂದದ್ದು: “ನಾವು ಕೊಂಡೊಯ್ದದಕ್ಕಿಂತಲೂ ಹೆಚ್ಚನ್ನು ಹಿಂದಕ್ಕೆ ತಂದಿದ್ದೇವೆ ಎಂದು ನಾವು ಕಂಡುಕೊಂಡೆವು. ಯುಕ್ರೇನಿನ ನಮ್ಮ ಸಹೋದರರಿಂದ ತೋರಿಸಲ್ಪಟ್ಟ ಪ್ರೀತಿ ಮತ್ತು ತ್ಯಾಗದ ಆತ್ಮವು ನಮ್ಮ ನಂಬಿಕೆಯನ್ನು ಬಹಳವಾಗಿ ದೃಢಗೊಳಿಸಿತು.”
ಹಿಂದಣ ಸೋವಿಯೆಟ್ ಯೂನಿಯನ್ನಲ್ಲಿ ದಾರಿಗಳ ಫಕ್ಕಗಳಲ್ಲಿರುವ ಕಳ್ಳರಿಗಾಗಿ ಚಾಲಕರು ಎಚ್ಚರಿಕೆಯಿಂದ ಇರಬೇಕಿತ್ತು. ಡ್ಯಾನಿಷ್ ಟ್ರಕ್ಗಳಲ್ಲೊಂದು ಸಾಗಿಹೋಗುವ ಆ ಮಾರ್ಗದಲ್ಲಿ ಕೆಲವು ದಿನಗಳ ಹಿಂದೆ ಒಂದು ಕಳ್ಳತನವು ನಡೆದಿತ್ತು. ಪರಿಹಾರಕಾರ್ಯದ ಇನ್ನೊಂದು ಸಂಸ್ಥೆಯ ಆಹಾರದ ಐದು ಟ್ರಕ್ಗಳ ತಂಡವೊಂದನ್ನು, ಹೆಲಿಕಾಪ್ಟರ್ಗಳು ಮತ್ತು ಸಬ್ಮೆಶೀನ್ ಗನ್ಗಳನ್ನು ಬಳಸಿದ ಕಳ್ಳರಿಂದ ತಡೆಹಿಡಿಯಲಾಗಿತ್ತು. ಅವರು ಚಾಲಕರನ್ನು ರಸ್ತೇಪಕ್ಕದಲ್ಲಿ ಬಿಟ್ಟು, ಎಲ್ಲಾ ಐದು ಟ್ರಕ್ಗಳನ್ನು ಕೊಂಡೊಯ್ದರು. ಅಂತಹ ಅಪಾಯದಲ್ಲೂ, ಡ್ಯಾನಿಷ್ ಬ್ರಾಂಚ್ನ ಎಲ್ಲಾ ಸರಬರಾಯಿಗಳು ಸಹೋದರರಿಗೆ ಸುರಕ್ಷಿತವಾಗಿ ತಲುಪಿದವು. ಅದಕ್ಕೆ ಪ್ರತಿಯಾಗಿ, ಬಹಳ ಕಷ್ಟದಿಂದ ಇಂಗ್ಲಿಷಿನಲ್ಲಿ ಬರೆದ ಈ ಪತ್ರವನ್ನು ಅವರಿಂದ ಚಾಲಕನೊಬ್ಬನು ಮನೆಗೆ ತರಲಿಕ್ಕಿತ್ತು: “ಪ್ರಿಯ ಡ್ಯಾನಿಷ್ ಸಹೋದರ ಸಹೋದರಿಯರೇ: ನಮಗೆ ನಿಮ್ಮ ನೆರವು ದೊರಕಿದೆ. ಯೆಹೋವನು ನಿಮಗೆ ಪ್ರತಿಫಲವನ್ನೀಯುವನು.”
ನೆದರ್ಲೆಂಡ್ಸ್
ನೆದರ್ಲೆಂಡ್ಸ್ ಬ್ರಾಂಚ್ 2,600 ಕಟ್ಟುಗಳಲ್ಲಿ 52 ಟನ್ನು ಆಹಾರವನ್ನು ಕಳುಹಿಸಿತು. ಅವುಗಳನ್ನು ಯುಕ್ರೇನ್ನಿಗೆ ವಾಹನಗಳ ಎರಡು ತಂಡಗಳಲ್ಲಿ ನೀಡಲಾಯಿತು. ಪ್ರತಿ ಸಲ ಆರು ಟ್ರಕ್ಗಳನ್ನು ಹಿಂದಕ್ಕೆ ಬಿಡಲಾಗಿತ್ತು, ಏಕೆಂದರೆ ಪೂರ್ವದಲ್ಲಿ ರಾಜ್ಯ ಕಾರ್ಯಕ್ಕಾಗಿ ಜರ್ಮನಿಯ ಸಹೋದರರು ಅವುಗಳನ್ನು ದಾನವಾಗಿ ನೀಡಿದ್ದರು. ಯುಕ್ರೇನಿನ ಸಹೋದರರು ಹೆಚ್ಚಿನ ಆಹಾರವನ್ನು ಮಾಸ್ಕೋ, ಸೈಬಿರಿಯ, ಮತ್ತು ಎಲ್ಲಿ ಹೆಚ್ಚಿನ ಅಗತ್ಯವಿತ್ತೋ ಆ ಇತರ ಸ್ಥಳಗಳಿಗೆ ರವಾನಿಸಿದರು. ಇನ್ನು ಅಧಿಕವಾಗಿ, ಡಚ್ ಸಹೋದರರಿಂದ 736 ಘನ ಮೀಟರುಗಳಷ್ಟು ಬಟ್ಟೆಗೆಳು ಮತ್ತು ಪಾದರಕ್ಷೆಗಳು ದಾನವಾಗಿ ಕೊಡಲ್ಪಟ್ಟವು. ಅವು ಯುಕ್ರೇನ್ನ ಲವೀಫ್ಗೆ 11 ಟ್ರಕ್ಗಳ ಒಂದು ವಾಹನಸಾಲಿನಲ್ಲಿ ಖಾಸಗಿ ಕಾರೊಂದರ ಮೈಗಾವಲು ಇದ್ದುಕೊಂಡು ತರಲ್ಪಟ್ಟವು.
ಜರ್ಮನಿ ಮತ್ತು ಪೋಲೆಂಡಿನ ಮೂಲಕ ಒಂದು ದೀರ್ಘ ಸವಾರಿಯ ನಂತರ, ವಾಹನಗಳ ತಂಡ ಯುಕ್ರೇನ್ ಸುಂಕಕಟ್ಟೆಯ ಮೂಲಕ ಸುಗಮವಾಗಿ ದಾಟಿ, ಬೆಳಿಗ್ಗೆ 3 ಗಂಟೆಗೆ ಲವೀಫ್ನ ನಗರದ ಹೊರಪ್ರದೇಶಕ್ಕೆ ಬಂದು ತಲುಪಿತು. ಚಾಲಕರು ವರದಿಸುವುದು: “ತುಸು ಸಮಯದೊಳಗೆ 140 ಸಹೋದರರ ಒಂದು ತಂಡವು ಟ್ರಕ್ಗಳ ಸಾಮಾನು ಇಳಿಸಲು ಸಿದ್ಧರಾಗಿ ಇದ್ದರು. ಕೆಲಸವನ್ನು ಆರಂಭಿಸುವ ಮೊದಲು, ಈ ದೀನ ಸಹೋದರರು ಒಂದು ಐಕ್ಯತೆಯ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಯೆಹೋವನ ಮೇಲೆ ತಮ್ಮ ಆತುಕೊಳ್ಳುವಿಕೆಯನ್ನು ತೋರಿಸಿದರು. ಕೆಲಸವು ಮುಗಿದ ನಂತರ, ಯೆಹೋವನಿಗೆ ಉಪಕಾರ ಸಲ್ಲಿಸಲು ಪ್ರಾರ್ಥನೆಗಾಗಿ ಅವರು ಪುನಃ ಒಟ್ಟಾಗಿ ಕೂಡಿಬಂದರು. ಅವರಲ್ಲಿದ್ದ ಕೊಂಚದರ್ದಲ್ಲಿ ವಿಪುಲವಾಗಿ ಕೊಟ್ಟ ಸ್ಥಳೀಕ ಸಹೋದರರ ಆದರೋಪಚಾರದಲ್ಲಿ ಉಲ್ಲಾಸಿಸಿದ ಅನಂತರ, ನಮ್ಮನ್ನು ಬೀಳ್ಕೊಡಲು ಅವರು ಮುಖ್ಯ ರಸ್ತೆಯ ತನಕ ಬಂದರು, ಅಲ್ಲಿ ರಸ್ತೆಯ ಫಕ್ಕದಲ್ಲಿ ನಮಗೆ ವಿದಾಯಹೇಳುವ ಮೊದಲು ಅವರು ಪ್ರಾರ್ಥನೆಯನ್ನು ಸಲ್ಲಿಸಿದರು.
“ಮನೆಗೆ ಹಿಂತೆರಳುವ ಉದ್ದ ಪಯಣದ ಸಮಯದಲ್ಲಿ, ಆಲೋಚಿಸಲು ಅಲ್ಲಿ ಬಹಳಷ್ಟು ಇತ್ತು—ಜರ್ಮನಿ ಮತ್ತು ಪೋಲೆಂಡಿನ, ಮತ್ತು ಲವೀಫ್ನ ನಮ್ಮ ಸಹೋದರರ ಅತಿಥಿಸತ್ಕಾರ; ಅವರ ದೃಢ ನಂಬಿಕೆ ಮತ್ತು ಪ್ರಾರ್ಥನಾಪೂರ್ವಕ ಮನೋಭಾವ; ಅವರು ಸ್ವತಃ ಆವಶ್ಯಕತೆಯ ಪರಿಸ್ಥಿತಿಯಲಿದ್ಲರ್ದೂ ವಸತಿಗಳನ್ನು ಮತ್ತು ಆಹಾರವನ್ನು ಒದಗಿಸುವುದರಲ್ಲಿ ಅವರ ಆದರೋಪಚಾರ; ಐಕ್ಯತೆಯ ಮತ್ತು ನಿಕಟತೆಯ ಅವರ ನಿದರ್ಶನ; ಮತ್ತು ಅವರ ಕೃತಜ್ಞತೆ. ಅಷ್ಟೊಂದು ಉದಾರವಾಗಿ ಕೊಟ್ಟ ನಮ್ಮ ಸ್ವದೇಶದ ಸಹೋದರ ಮತ್ತು ಸಹೋದರಿಯರ ಕುರಿತು ಕೂಡ ನಾವು ಯೋಚಿಸಿದೆವು.”
ಸ್ವಿಟ್ಸರ್ಲೆಂಡ್
ಸ್ವಿಸ್ ಬ್ರಾಂಚ್ ಯಾಕೋಬ 2:15, 16ನ್ನು ಉಲ್ಲೇಖಿಸಿ, ತನ್ನ ವರದಿಯನ್ನು ಆರಂಭಿಸುತ್ತದೆ: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು?” ಅನಂತರ ವರದಿಯು ಮುಂದರಿಸಿದ್ದು: “ಆವಶ್ಯಕತೆಯಿರುವ ನಮ್ಮ ಸಹೋದರರಿಗೆ ಪ್ರಾಪಂಚಿಕ ಸಹಾಯವನ್ನು ಒದಗಿಸಲು ನಮ್ಮನ್ನು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಆಮಂತ್ರಿಸಿದಾಗ, ಈ ಶಾಸ್ತ್ರವಚನವು ಮನಸ್ಸಿಗೆ ಬಂತು.
“ತಕ್ಷಣವೇ ಪ್ರತಿಯೊಬ್ಬರೂ ಕಾರ್ಯನಿರತರಾದರು! ಕೇವಲ ಎರಡೇ ದಿವಸಗಳಲ್ಲಿ, 600 ಕಟ್ಟುಗಳ 12 ಟನ್ನು ಆಹಾರವು ಜರ್ಮನಿಯಿಂದ ಮೂರು ಟ್ರಕ್ಗಳಲ್ಲಿ ಯುಕ್ರೇನ್ಗೆ ಕಳುಹಿಸಲ್ಪಟ್ಟಿತು, ಅವುಗಳು ಅಲ್ಲಿನ ಕೆಲಸಕ್ಕಾಗಿ ದಾನಮಾಡಲ್ಪಡಲಿದ್ದವು. ಎಲ್ಲವೂ ಸುರಕ್ಷಿತವಾಗಿ ತಲುಪಿದೆ ಎಂಬ ಸುದ್ದಿಯು ಇಲ್ಲಿ ನಮ್ಮ ಸಹೋದರರಲ್ಲಿ ಮಹಾ ಸಂತೋಷಕ್ಕೆ ಕಾರಣವನ್ನಿತಿತ್ತು. ತನ್ಮಧ್ಯೆ, ಸಭೆಗಳು ವಸ್ತ್ರಗಳನ್ನು ಸಂಗ್ರಹಿಸಿದರು, ಮತ್ತು ನಮ್ಮ ಬ್ರಾಂಚ್ ರಟಿನ್ಟ ಪೆಟ್ಟಿಗೆಗಳಿಂದ, ಸ್ಯೂಟ್ಕೇಸ್ಗಳಿಂದ, ಮತ್ತು ಚೀಲಗಳಿಂದ ತುಂಬಿತುಳುಕಿತು! ಮಕ್ಕಳ ಉಡುಪುಗಳಲ್ಲಿ ಸ್ವಿಸ್ ಮಕ್ಕಳಿಂದ ದೂರ ಉತ್ತರದ ಅಜ್ಞಾತ ಮಿತ್ರರುಗಳಿಗೆ ಕೆಲವು ಆಟಿಕೆಗಳು ಒಳಗೂಡಿದ್ದವು. ಬಹಳಷ್ಟು ಚಾಕೊಲೆಟ್ ತುಂಡುಗಳು ಕೂಡ ವಸ್ತ್ರಗಳ ನಡುವೆ ಇಡಲ್ಪಟ್ಟಿದ್ದವು.”
ಇದೆಲ್ಲವೂ ಹೇಗೆ ಕೊಂಡೊಯ್ಯಲ್ಪಟ್ಟು, ನೀಡಲ್ಪಡುವುದು? ವರದಿಯು ಹೇಳುವುದು: “ಎರಡು ಸೆಮಿಟ್ರೆಯ್ಲರುಗಳನ್ನು ಮತ್ತು ನಾಲ್ಕು ಚಾಲಕರನ್ನು ನಮ್ಮ ವಶಕ್ಕೆ ಕೊಡುವುದರ ಮೂಲಕ ಫ್ರಾನ್ಸ್ನಲ್ಲಿರುವ ಬ್ರಾಂಚ್ ನಮ್ಮ ಸಹಾಯಕ್ಕೆ ಬಂತು. ಇದಕ್ಕೆ ಕೂಡಿಸಿ, ನಮಗೆ 72 ಟನ್ನುಗಳನ್ನು ಯುಕ್ರೇನ್ಗೆ ದಾಟಿಸಲು ನಮ್ಮ ಬ್ರಾಂಚ್ನಿಂದ ಒಂದು ಮತ್ತು ಸ್ಥಳೀಕ ಸಹೋದರರ ಇನ್ನು ನಾಲ್ಕು ಟ್ರಕ್ಗಳು ಆವಶ್ಯವಿದ್ದವು.” ವಾಹನಗಳ ತಂಡ 15 ಮೀಟರುಗಳಷ್ಟು ಉದ್ದವಿದ್ದು, ಲವೀಫ್ನಲ್ಲಿರುವ ಡಿಪೋಗೆ ಸುರಕ್ಷಿತವಾಗಿ ತಲುಪಿತು, ಅಲ್ಲಿ ಸುಮಾರು 100 ಸ್ಥಳೀಕ ಸಹೋದರರು ಟ್ರಕ್ಗಳ ಸಾಮಾನು ಇಳಿಸಲು ಕಾದುನಿಂತಿದ್ದರು. ಭಾಷೆಯ ತಡೆಗಟ್ಟು ಯಾವುದೇ ಅಡ್ಡಿಯಾಗಿರಲಿಲ್ಲ ಯಾಕಂದರೆ ಅವರ ಮುಖಗಳು ಆಳವಾದ ಗಣ್ಯತೆಯನ್ನು ಪ್ರತಿಬಿಂಬಿಸಿದವು ಎಂದು ಚಾಲಕರು ವರದಿಸಿದರು.
ಆಸ್ಟ್ರಿಯ
ಆಸ್ಟ್ರಿಯನ್ ಸಹೋದರರು 48.5 ಟನ್ನು ಆಹಾರ, 5,114 ರಟಿನ್ಟ ಪೆಟ್ಟಿಗೆಳಲ್ಲಿ ಬಟ್ಟೆಗೆಳು, ಮತ್ತು 6,700 ಜೊತೆ ಪಾದರಕ್ಷೆಗಳನ್ನು ಯುಕ್ರೇನ್ನ ಲವೀಫ್ ಮತ್ತು ಉಸಗೆರಾಡ್ಗೆ ಕಳುಹಿಸಿದರು. ಅವರು ಸಹ 7 ಟನ್ನು ಆಹಾರ, 1,418 ಪೆಟ್ಟಿಗೆ ಬಟ್ಟೆಗೆಳು, ಮತ್ತು 465 ಜೊತೆ ಪಾದರಕ್ಷೆಗಳನ್ನು ಒಸಿವಕ್, ಬೆಲ್ಗ್ರೇಡ್, ಮೊಸ್ಟಾರ್, ಸರಾವವೊ, ಮತ್ತು ಹಿಂದಣ ಯುಗೊಸ್ಲಾವಿಯದ ಸಗ್ರೆಬ್ಗೆ ಕಳುಹಿಸಿದರು. ಬ್ರಾಂಚ್ ವರದಿ ತಿಳಿಸುವುದು: “ನಮಗೆ 34,000 ಕಿಲೊಮೀಟರುಗಳನ್ನು ಪಯಣಿಸುವ ಸಾಮಾನು ಹೇರಿದ 12 ಸೆಮಿಟ್ರೆಯ್ಲರ್ಗಳು ಇದ್ದವು. ವಾಹನ ಸಂಚಾರ ಉದ್ಯಮವಿರುವ ಒಬ್ಬ ಸಹೋದರ ಮತ್ತು ಅವನ ಮಗನಿಂದ ಇದರಲ್ಲಿನ ಹೆಚ್ಚಿನ ಸಾಗಾಟವು ಮಾಡಲ್ಪಟ್ಟಿತು.”
ದಾನವಾಗಿತ್ತ ಬಟ್ಟೆಗೆಳ ಕುರಿತು, ವರದಿಯು ಮುಂದರಿಸುವುದು: “ಅಸೆಂಬ್ಲಿ ಹಾಲ್ ಒಂದನ್ನು ನಾವು ಒಂದು ಕೇಂದ್ರ ಡಿಪೋ ಆಗಿ ಬಳಸಿದೆವು. ಟ್ರಕ್ಹೊರೆಗಳ ನಂತರ ಟ್ರಕ್ಹೊರೆಗಳು ಅಲ್ಲಿ ಸ್ಥಳವಕಾಶ ಇಲ್ಲದಿರುವ ತನಕ ಸುರಿಯುತ್ತಲೇ ಇದ್ದವು. ಮೋಶೆಯ ದಿನಗಳಲ್ಲಿ ಹೇಗೋ, ಹಾಗೆಯೇ ಜನರು ಇನ್ನು ತಾರದಂತೆ ನಿರ್ಬಂಧಿಸಬೇಕಾಗಿಬಂತು. (ವಿಮೋಚನಕಾಂಡ 36:6) ಯೆಹೋವನ ಸಾಕ್ಷಿಗಳಲ್ಲದ ಕೆಲವು ಜನರು ಸಹ ಹಣ ಸಹಾಯ ಮಾಡಿದರು, ‘ಯಾಕಂದರೆ’ ಅವರಂದದ್ದು, ‘ಈ ರೀತಿಯಲ್ಲಿ ಆವಶ್ಯಕತೆಯಿರುವ ವ್ಯಕ್ತಿಗಳಿಗೆ ಇದು ದೊರಕುತ್ತದೆ ಎಂದು ನಾವು ಬಲ್ಲೆವು.’ ಯಾವುದೇ ಕ್ರಯವಿಲ್ಲದೆ ಲೌಕಿಕ ಕಂಪೆನಿಗಳಿಂದ ನಮಗೆ ಅತಿ ಆವಶ್ಯಕವಾದ ಖಾಲಿ ರಟಿನ್ಟ ಪೆಟ್ಟಿಗೆಗಳು ಕೂಡ ದೊರಕಿದವು.” ಪ್ರತಿಯೊಂದನ್ನು ವಿಂಗಡಿಸಿ, ಮೂಟೆಕಟ್ಟುವುದರಲ್ಲಿ ಸಹಾಯ ಮಾಡಿದ ಸಹೋದರ, ಸಹೋದರಿಯರಲ್ಲಿ 9 ರಿಂದ 80 ವರ್ಷ ವಯಸ್ಸಿನವರೂ ಇದ್ದರು. ಪ್ರತಿಯೊಂದು ಸೂಟು ಉಡುಪಿಗೆ ಯೋಗ್ಯ ಟೈ ಮತ್ತು ಷರ್ಟನ್ನು ಸರಿಹೊಂದಿಸಲು ಕೂಡ ಅವರು ಪ್ರಯತ್ನಿಸಿದರು.
ವರದಿಯು ಹೇಳುವುದು: “ಆಸ್ಟ್ರಿಯದಲ್ಲಿದ್ದ ಮತ್ತು ಸರಹದ್ದಿನಲ್ಲಿದ್ದ ಅಧಿಕಾರಿಗಳು ವಿವಿಧ ಪರಿಹಾರ ಸಾಗಾಟಗಳನ್ನು ಮಾಡುವುದರಲ್ಲಿ ಮತ್ತು ಕಡಿಮೆ ತೊಂದರೆಯಿಂದ ವಿತರಣೆ ಮಾಡಲು ಸಾಧ್ಯವಾಗುವಂತಹ ಅಗತ್ಯವಾದ ಕಾಗದಪತ್ರಗಳನ್ನು ನೀಡುವುದರಲ್ಲಿ ಅತಿ ಸಹಾಯಕಾರಿಯಾಗಿದ್ದರು.”
ಇಟೆಲಿ
ರೋಮಿನಿಂದ 188 ಟನ್ನುಗಳಷ್ಟು ಆಹಾರವನ್ನು ಎರಡು ದೊಡ್ಡ ವಾಹನತಂಡಗಳಾಗಿ ಆಸ್ಟ್ರಿಯ, ಜೆಕೊಸ್ಲೊವಾಕಿಯ, ಮತ್ತು ಪೋಲೆಂಡ್ಗಳನ್ನು ದಾಟಿ ಹಿಂದಣ ಸೋವಿಯಟ್ ಯೂನಿಯನ್ಗೆ ಕಳುಹಿಸಲಾಯಿತು. ಪ್ರತಿಯೊಂದು ವಾಹನತಂಡದಲ್ಲಿ ಆರು ಜನ ಚಾಲಕರು, ಒಬ್ಬ ಮೆಕ್ಯಾನಿಕ್, ಒಬ್ಬ ಅಟೋ ಇಲೆಕ್ಟ್ರಿಶಿಯನ್, ಒಬ್ಬ ತರ್ಜುಮೆಗಾರ, ಒರ್ವ ಸಾಗಣೆಯ ಏಜೆಂಟ್, ಒಬ್ಬ ಬಾಣಸಿಗ, ಒಬ್ಬ ವೈದ್ಯ, ಜೀಪೊಂದರಲ್ಲಿ ತಂಡದ ಮುಂದಾಳು, ಮತ್ತು ಬೀಡುಹೂಡುವ ವಾಹನದೊಂದಿಗೆ ಸಹೋದರನೊಬ್ಬನು ಇರುತ್ತಿದ್ದರು.
ಆಹಾರವನ್ನು ಏಳು ಪೂರೈಕೆದಾರರಿಂದ ತಕ್ಕೊಳ್ಳಲಾಗಿತ್ತು. ಬ್ರಾಂಚ್ ವರದಿಸುವುದು: “ನಮ್ಮ ಮುಂತೊಡಗುವಿಕೆಯ ಕಾರಣವನ್ನು ಪೂರೈಕೆದಾರರು ಕೇಳಿದಾಗ, ಕೆಲವರು ಅದರಲ್ಲಿ ಪಾಲಿಗರಾಗಲು ಇಚ್ಛಿಸಿದರು. ನೂರಾರು ಕಿಲೊಗ್ರ್ಯಾಮ್ ನಾದಿದ ಹಿಟ್ಟು ಮತ್ತು ಅಕ್ಕಿ, ಹಾಗೂ ಮೂಟೆಗಟ್ಟುವ ರಟಿನ್ಟ ಪೆಟ್ಟಿಗೆಗಳು ಲೌಕಿಕ ಪೂರೈಕೆದಾರರಿಂದ ದಾನವಾಗಿ ಕೊಡಲ್ಪಟ್ಟವು. ಇನ್ನಿತರರು ಟ್ರಕ್ಗೆ ಹಿಮಬಂಡಿಯ ಟಯರುಗಳನ್ನು ದಾನವಾಗಿತರ್ತು ಯಾ ಹಣಸಹಾಯ ನೀಡಲು ಮುಂದೆಬಂದರು.
“ಇಟೆಲಿಯ ಸಹೋದರರು ಸಹಾಯ ಮಾಡುವ ಈ ಅವಕಾಶವನ್ನು ಗಣ್ಯಮಾಡಿದರು. ಮಕ್ಕಳು ಕೂಡ ಕಾಣಿಕೆಯನ್ನೀಯಲು ಬಯಸಿದರು. ಐದು ವರ್ಷ ಪ್ರಾಯದ ಬಾಲಕನೊಬ್ಬನು ಒಂದು ಚಿಕ್ಕ ಕಾಣಿಕೆಯನ್ನು ಕಳುಹಿಸಿ, ‘ರಶ್ಯದ ಸಹೋದರರಿಗೆ ಟುನಾ ಮೀನಿನ ಆಕಾಶದಷ್ಟು ಎತ್ತರದ ಡಬ್ಬವೊಂದನ್ನು’ ಖರೀದಿಸಬಹುದೆಂದು ನಿರೀಕ್ಷಿಸಿದನು. ಶಾಲೆಯಲ್ಲಿ ಅವಳ ಒಳ್ಳೆಯ ಅಂಕಗಳಿಗಾಗಿ, ಚಿಕ್ಕ ಬಾಲಕಿಯೊಬ್ಬಳು ಅವಳ ಹೆತ್ತವರಿಗೆ ಪಾರಿತೋಷಕವನ್ನು ಖರೀದಿಸಲು ಅಜ್ಜ-ಅಜಿಯ್ಜಿಂದ ಹಣವನ್ನು ಪಡೆದಳು. ‘ಆದರೆ’ ಅವಳು ಬರೆಯುವುದು, ‘ತಿನ್ನಲು ನನಗಿರುವ ಹಲವಾರು ಉತ್ತಮ ವಸ್ತುಗಳು ನನ್ನ ಸಹೋದರರಿಗೆ ಇಲ್ಲವೆಂಬುದನ್ನು ನಾನು ತಿಳಿದಾಗ, ನನ್ನ ಹೆತ್ತವರಿಗಾಗಿ ನಾನು ಖರೀದಿಸಬಹುದಾದ ಅತ್ಯುತ್ತಮ ಪಾರಿತೋಷಕವು ಆ ಸಹೋದರರಿಗೆ ಸಹಾಯ ಮಾಡುವುದೇ ಎಂದು ನಾನು ಯೋಚಿಸಿದೆ.’ ಅವಳು ಗಮನಾರ್ಹ ಮೊತ್ತದ ಹಣವನ್ನು ಕಾಣಿಕೆಪೆಟ್ಟಿಗೆಯೊಳಗೆ ಹಾಕಿದಳು. ‘ನಾನು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವುದನ್ನು ಮುಂದರಿಸಲು ನಿರೀಕ್ಷಿಸುತ್ತೇನೆ, ಆ ಮೂಲಕ ನಾನು ಅಧಿಕ ಹಣವನ್ನು ಕಳುಹಿಸ ಶಕ್ತಳಾಗುವೆನು,’ ಅಂದಳು ಅವಳು.” ಯುಕ್ರೇನ್ನಲ್ಲಿರುವ ಸಹೋದರರ ಬೆಚ್ಚಗೆನ ಗಣ್ಯತೆಯ ಪತ್ರಗಳು, ಇಟ್ಯಾಲಿಯನ್ ಸಹೋದರರ ಗಣ್ಯತೆಯ ಅನೇಕ ನುಡಿಗಳು, ಮತ್ತು ಸರಬರಾಯಿಗಳನ್ನು ಸಿದ್ಧಗೊಳಿಸುವುದರಲ್ಲಿ ಮತ್ತು ವಿತರಿಸುವುದರಲ್ಲಿನ ಉತ್ತಮ ಅನುಭವಗಳು ಮನತಟ್ಟುವಂತಹುಗಳು, ಪ್ರೋತ್ಸಾಹದಾಯಕಗಳು, ಮತ್ತು ಐಕ್ಯತೆಯನ್ನುಂಟುಮಾಡುವಂಥಹುಗಳಾಗಿದ್ದವು ಎಂದು ಹೇಳುತ್ತಾ ಬ್ರಾಂಚ್ ವರದಿಯು ಮುಕ್ತಾಯಗೊಳ್ಳುತ್ತದೆ.
ಸಾವಿರಾರು ಪ್ರತಿನಿಧಿಗಳಿಗೆ ಆಹಾರ
ಹಿಂದಣ ಸೋವಿಯಟ್ ಯೂನಿಯನ್ನಲ್ಲಿ ಯೆಹೋವನ ಸಾಕ್ಷಿಗಳ ಪ್ರಥಮ ಅಂತಾರಾಷ್ಟ್ರೀಯ ಅಧಿವೇಶನವು ರಶ್ಯದ ಸೆಯಿಂಟ್ ಪೀಟರ್ಸ್ಬರ್ಗ್ನ ಕೀರೊವ್ ಸ್ಟೇಡಿಯಮ್ನಲ್ಲಿ ಜೂನ್ 28-30, 1992 ರಲ್ಲಿ ಜರುಗಿತು. “ಬೆಳಕು ವಾಹಕರು” ಮುಖ್ಯವಿಷಯದೊಂದಿಗಿನ ಈ ಮೈಲಿಗಲ್ಲು ಅಧಿವೇಶನಕ್ಕೆ, 28 ದೇಶಗಳ 46,200 ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಹಾಜರಾಗಿದ್ದರು. “ಸಹೋದರರ ಇಡೀ ಸಂಘ”ಕ್ಕೆ ಕ್ರೈಸ್ತ ಪ್ರೀತಿಯನ್ನು ಪ್ರದರ್ಶಿಸಲು ಇದು ಇನ್ನೊಂದು ಅವಕಾಶವನ್ನು ಕೊಟ್ಟಿತು.—1 ಪೇತ್ರ 2:17, NW.
ಡೆನ್ಮಾರ್ಕ್, ಫಿನ್ಲೆಂಡ್, ಸ್ವೀಡನ್, ಪಶ್ಚಿಮ ಯೂರೋಪಿನ ಇತರ ದೇಶಗಳಿಂದ ಟನ್ನುಗಳಷ್ಟು ಆಹಾರವು ಹಿಂದಣ ಸೋವಿಯೆಟ್ ಯೂನಿಯನ್ನ ಅಧಿವೇಶನದ ಸಾವಿರಾರು ಪ್ರತಿನಿಧಿಗಳಿಗೆ ಅಧಿವೇಶನದ ಸಮಯದಲ್ಲಿ ಬಳಸಲು ಧರ್ಮಾರ್ಥವಾಗಿ ನೀಡಲಾಯಿತು. ಅಧಿವೇಶನದ ಕೊನೆಯ ಭಾಗದ ನಂತರ ಅವರು ಅಧಿವೇಶನವನ್ನು ಬಿಟ್ಟುಹೋಗುತ್ತಿದ್ದಂತೆ, ಅವರ ಮನೆಗೆ ಹೋಗುವ ಪ್ರಯಾಣಕ್ಕೆ ಬೇಕಾದ ಸರಬರಾಯಿಗಳೊಂದಿಗೆ ಆಹಾರದ ಒಂದು ಕಟ್ಟು ಕೂಡ ಅವರಿಗೆ ಕೊಡಲ್ಪಟ್ಟಿತು.
ಇಲ್ಲಿ ತೋರಿಸಲ್ಪಟ್ಟ ವರದಿಗಳು ಕೊಡುವಿಕೆ ಒಮ್ಮುಖವಾಗಿ—ಪೂರ್ವಾಭಿಮುಖವಾಗಿ—ಮಾತ್ರ ಇರಲಿಲ್ಲವೆಂದು ತೋರಿಸುತ್ತವೆ. ದಾನಕೊಡುವಿಕೆಯು ಅದಲು ಬದಲು ಆಗಿತ್ತು. ಪೂರ್ವಾಭಿಮುಖವಾಗಿ ಆಹಾರ ಮತ್ತು ಬಟ್ಟೆಬರೆಗಳು, ಹೌದು, ಆದರೆ ಪಶ್ಚಿಮಾಭಿಮುಖವಾಗಿ ಹೃದಯ ಬೆಚ್ಚಗೆಗೊಳಿಸುವ ಅಸಂಖ್ಯಾತ ಪ್ರೀತಿಯ ವ್ಯಕ್ತಪಡಿಸುವಿಕೆಗಳು ಮತ್ತು ಒತ್ತಡ ಮತ್ತು ಸಂಕಷ್ಟಗಳ ದಶಕಗಳಲ್ಲಿ ಯೆಹೋವನ ಸಾವಿರಾರು ಆರಾಧಕರ ಸತತ ಪ್ರಯತ್ನ ಮತ್ತು ನಂಬಿಗಸ್ತಿಕೆಯನ್ನು ಪ್ರತಿಬಿಂಬಿಸುವ ವಿಶ್ವಾಸ-ಪ್ರೇರಕ ಅನುಭವಗಳು. ಹೀಗೆ, ಎರಡು ಕಡೆಗಳವರೂ ಯೇಸುವಿನ ಮಾತುಗಳ ಸತ್ಯತೆಯನ್ನು ಅನುಭವಿಸಿದರು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ”—ಅ.ಕೃತ್ಯಗಳು 20:35.
[ಪುಟ 21ರಲ್ಲಿರುವಚಿತ್ರ]
1. ಫಿನ್ಲೆಂಡ್ನಿಂದ: ಸೆಯಿಂಟ್ ಪೀಟರ್ಸ್ಬರ್ಗ್, ರಶ್ಯ; ಟಾಲ್ಲಿನ್ ಮತ್ತು ಟಾರ್ಟು, ಎಸ್ಟೊನಿಯ; ರಿಗ, ಲಾಟಿಯ್ವ; ವಿಟ್ನಿಯುಸ್ ಮತ್ತು ಕೌನಸ್, ಲಿತುಆ್ಯನಿಯ; ಕಲಿನಿನ್ಗ್ರಾಡ್, ರಶ್ಯ; ಪೆಟ್ಟೊಸವೊಡ್ಸ್ಕ್, ಕರೆಲಿಯ
2. ನೆದರ್ಲೆಂಡ್ಸ್ನಿಂದ: ಲವೀಫ್, ಯುಕ್ರೇನ್
3. ಸ್ವೀಡನ್ನಿಂದ: ಸೆಯಿಂಟ್ ಪೀಟರ್ಸ್ಬರ್ಗ್, ರಶ್ಯ; ಲವೀಫ್, ಯುಕ್ರೇನ್; ನೆವಿನ್ನೊಮಿಸ್ಕ್, ರಶ್ಯ
4. ಡೆನ್ಮಾರ್ಕ್ನಿಂದ: ಸೆಯಿಂಟ್ ಪೀಟರ್ಸ್ಬರ್ಗ್, ರಶ್ಯ; ಲವೀಫ್, ಯುಕ್ರೇನ್;
5. ಆಸ್ಟ್ರಿಯದಿಂದ: ಲವೀಫ್, ಉಕ್ರೇನ್; ಬೆಲ್ಗ್ರೇಡ್, ಮೊಸರ್ಟ್, ಒಸಿವಕ್, ಸರಾವವೊ, ಸೆಗ್ರೆಬ್ (ಹಿಂದಣ ಯುಗೋಸ್ಲಾವಿಯದಲ್ಲಿ)
6. ಸ್ವಿಟ್ಸರ್ಲೆಂಡ್ನಿಂದ: ಲವೀಫ್, ಉಕ್ರೇನ್
7. ಇಟೆಲಿಯಿಂದ: ಲವೀಫ್, ಉಕ್ರೇನ್
[ಪುಟ 23 ರಲ್ಲಿರುವ ಚಿತ್ರಗಳು]
ಬಟ್ಟೆಗೆಳ ರಟ್ಟುಪೆಟ್ಟಿಗೆಗಳು ಸ್ವೀಡನ್ ಬ್ರಾಂಚ್ನಲ್ಲಿ
ಪರಿಹಾರ ಸರಬರಾಯಿಗಳನ್ನು ಹೇರುವುದು
ಒಂದು ಕಟ್ಟಿನಲ್ಲಿ ಆಹಾರದ ವಸ್ತುಗಳು
ಡೆನ್ಮಾರ್ಕ್ನಿಂದ ಬೆಕನ್ ಮತ್ತು ಹ್ಯಾಮ್
11 ಟ್ರಕ್ಗಳ ಮತ್ತು 1 ಕಾರಿನ ತಂಡ
ಕಟ್ಟುಗಳು ಮತ್ತು ಸ್ಯೂಟ್ಕೇಸುಗಳು ಆಸ್ಟ್ರಿಯ ಬ್ರಾಂಚ್ನಲ್ಲಿ
ಯುಕ್ರೇನ್ನ ಲವೀಫ್ನಲ್ಲಿ ಟ್ರಕ್ನ ಸಾಮಾನು ಇಳಿಸುವುದು