ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 6/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಜೂಜು—ಬೈಬಲ್‌ ಇದನ್ನು ಖಂಡಿಸುತ್ತದೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1990
  • ಇಂಡೆಕ್ಸ್‌ನ ಸಹಾಯದೊಂದಿಗೆ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
    1991 ನಮ್ಮ ರಾಜ್ಯದ ಸೇವೆ
  • ಜೂಜಾಟ
    ಎಚ್ಚರ!—2015
ಇನ್ನಷ್ಟು
ಕಾವಲಿನಬುರುಜು—1993
w93 6/15 ಪು. 31

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತರು ಹಣವನ್ನು ಪಂದ್ಯಗಟ್ಟದಿರುವಾಗ, ಬಹುಮಾನಗಳನ್ನು ಗೆಲ್ಲಬಹುದಾದ ಟಿಕೆಟುಗಳನ್ನು ಅವರು ಸ್ವೀಕರಿಸಬಹುದೊ ಯಾ ಚೀಟಿ ಎತ್ತುವಿಕೆಗಳಲ್ಲಿ ಅವರು ಭಾಗವಹಿಸಬಹುದೊ?

ಇದು ಆಗಿಂದಾಗ್ಯೆ ಎದ್ದು ಬಂದಿರುವ ಪ್ರಶ್ನೆಯಾಗಿರುವುದರಿಂದ ಇದನ್ನು ನಮ್ಮ ಪ್ರಕಾಶನಗಳಲ್ಲಿ ಆಗಲೇ ಉತ್ತರಿಸಲಾಗಿದೆ. ಕೆಲವು ಭಾಷೆಗಳಲ್ಲಿ, ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 1930-1985 (ಇಂತಹದೇ ಆದ 1986-1990 ರ ಇನ್ನೊಂದು ಇಂಡೆಕ್ಸ್‌) ನಂತಹ ನಮ್ಮ ಸಾಹಿತ್ಯಗಳ ವಿಷಯಸೂಚಿಗಳನ್ನು ನಾವು ದೊರಕಿಸಿದ್ದೇವೆ. ಒಬ್ಬ ಕ್ರೈಸ್ತನೊಡನೆ ಇಂತಹ ಇಂಡೆಕ್ಸ್‌ಗಳು ಇರುವಲ್ಲಿ, ಅದು ತೃಪ್ತಿಕರವಾದ ಉತ್ತರಗಳನ್ನು ಬೇಗನೇ ಕಂಡುಹಿಡಿಯಲು ಅವನಿಗೆ ಬಹಳ ಉಪಯುಕ್ತವಾಗಿರಬಲ್ಲದು.

ಮೇಲೆ ಕೇಳಿರುವ ಪ್ರಶ್ನೆಯು ಇದಕ್ಕೆ ಒಂದು ಉದಾಹರಣೆ. ಇಂಡೆಕ್ಸ್‌ 1930-1985 ರಲ್ಲಿ “ಕ್ವೆಸ್ಟ್ಯನ್ಸ್‌ ಫ್ರಾಮ್‌ ರೀಡರ್ಸ್‌” ಶೀರ್ಷಿಕೆಯ ಕೆಳಗೆ ನೋಡುವಲ್ಲಿ, “‘ಡ್ರಾಯಿಂಗ್ಸ್‌,’ ಮೇ ಕ್ರಿಶ್ಚನ್‌ ಎಕ್ಸೆಪ್ಟ್‌ ಟಿಕೆಟ್‌ ಫಾರ್‌?” ಎಂಬ ಭಾಗವನ್ನು ನೀವು ಕಂಡುಹಿಡಿಯುವಿರಿ. ವಾಚಕನನ್ನು ಆಗ ದ ವಾಚ್‌ಟವರ್‌ ನ ಫೆಬ್ರವರಿ 15, 1973, ಪುಟ 127 ನ್ನು ನೋಡುವಂತೆ ಹೇಳಲಾಗುತ್ತದೆ.a ಅನೇಕ ಸಾಕ್ಷಿಗಳೊಂದಿಗೆ 1973 ರ ದ ವಾಚ್‌ಟವರ್‌ ನ ರಟ್ಟುಗಟ್ಟಿನ ಸಂಪುಟ (ಯಾ ಬಿಡಿ ಪ್ರತಿಗಳು) ಇರುತ್ತದೆ. ಅಥವಾ ಇದನ್ನು ಅನೇಕ ರಾಜ್ಯ ಸಭಾಗೃಹಗಳ ಲೈಬ್ರೆರಿಗಳಲ್ಲಿ ನೋಡಿ ವಿಚಾರಿಸಬಹುದು.

ಕ್ರೈಸ್ತರು ಸಮರ್ಪಕವಾಗಿಯೇ ಕೊಳ್ಳಲು ಸಂದರ್ಭ ಕೊಡುವ (ರ್ಯಾಫ್‌ಲ್‌ ಟಿಕೆಟಿನಂತಹ) ಪಣ ಹಂಚಿಕೆ ಪಂದ್ಯ ಯಾ ಚೀಟಿ ಎತ್ತುವಿಕೆ, ಯಾ ಬಹುಮಾನ ಗೆಲ್ಲಲು ಹಣಕಟ್ಟುವುದರಿಂದ ದೂರವಿರುತ್ತಾರೆ. ಸರಳವಾಗಿ ಹೇಳುವುದಾದರೆ, ನಾವು ಯಾವುದು ನಿಶ್ಚಯವಾಗಿಯೂ ಲೋಭದ ಒಂದು ಅಭಿವ್ಯಕ್ತಿಯಾಗಿದೆಯೋ ಆ ಜೂಜಾಟವನ್ನು ವಿಸರ್ಜಿಸುತ್ತೇವೆ.—1 ಕೊರಿಂಥ 5:11; 6:10; ಎಫೆಸ 4:19; 5:3, 5.

ಆದರೆ ಒಂದು ಅಂಗಡಿ ಯಾ ವ್ಯಾಪಾರವು ಜಾಹೀರಾತಿಗಾಗಿ ಚೀಟಿ ಎತ್ತಬಹುದು. ಒಬ್ಬನು ಯಾವುದನ್ನೂ ಖರೀದಿಸದೆ ತನ್ನ ಹೆಸರನ್ನು ಯಾ ಒಂದು ಕಾಗದ ಯಾ ಒಂದು ಟಿಕೆಟನ್ನು ಕಳುಹಿಸಿದರೆ ಸಾಕು. ಈ ಚೀಟಿ ಎತ್ತುವಿಕೆ ಜಾಹೀರಾತಿನ ಹಂಚಿಕೆಯ ಒಂದು ಭಾಗ; ಯಾರಿಗೆ ಬಹುಮಾನವನ್ನು ಯಾ ಬಹುಮಾನಗಳನ್ನು ಕೊಡಲಾಗುವುದು ಎಂಬುದನ್ನು ನಿರ್ಣಯಿಸಲು ರೂಪಿಸಿದ ನಿಷ್ಪಕ್ಷಪಾತವಾದ ಒಂದು ವಿಧಾನ. ಕೆಲವು ಕ್ರೈಸ್ತರು ತಾವು ಅಂತಹ, ಜೂಜಿಲ್ಲದೆ ಎತ್ತಿದ ಬಹುಮಾನವನ್ನು, ಒಂದು ವ್ಯಾಪಾರ ಯಾ ಅಂಗಡಿ ತನ್ನ ಜಾಹೀರಾತು ಕಾರ್ಯಕ್ರಮದಲ್ಲಿ ಫ್ರೀ ಸ್ಯಾಂಪ್‌ಲ್‌ಗಳನ್ನು ಯಾ ಇತರ ಬಹುಮಾನಗಳನ್ನು ಕೊಡುವಾಗ ಮಾಡುವಂತೆಯೇ, ಅಂಗೀಕರಿಸಬಹುದೆಂದು ಭಾವಿಸಬಹುದು.

ಆದರೂ, ಕೆಲವು ಕ್ರೈಸ್ತರು ತಾವು ಇತರರನ್ನು ಮುಗ್ಗರಿಸಲು ಯಾ ಗಲಿಬಿಲಿಗೊಳಿಸಲು ಬಯಸದ ಕಾರಣ ಮತ್ತು ಅದೃಷ್ಟ ದೇವಿ ಎಂದು ಕರೆಯಲ್ಪಡುವ ದೇವಿಯಲ್ಲಿ ಭರವಸೆಯಿಡುವ ಯಾವ ಸೆಳೆತದ ವಿಷಯದಿಂದಲೂ ದೂರವಿರುವರು. ಯೆಶಾಯ 65:11 ತೋರಿಸುವಂತೆ, ದೇವರ ಸೇವಕರು “ಶುಭದಾಯಕ ದೇವತೆಗೆ” ಯಾ “ಗತಿದಾಯಕ ದೇವತೆಗೆ” ತಮ್ಮನ್ನು ಸಂಬಂಧಿಸಿಕೊಳ್ಳುವುದಿಲ್ಲ. ವಿಜೇತರು ಪಾಲಿಗರಾಗುವಂತೆ ಅವಶ್ಯಪಡಿಸುವ ಯಾವ ಪ್ರಕಟನೋದ್ಯೋಗದ ಭಾಗವೂ ತಾವಾಗಬಯಸುವುದಿಲ್ಲವೆಂದೂ ಅವರು ಅಭಿಪ್ರಯಿಸಬಹುದು. ಇಂತಹ ಅನಿಸಿಕೆ ಇರುವವರು, ಯಾರ ಮನಸ್ಸಾಕ್ಷಿ ಇಂತಹ ಎತ್ತುವಿಕೆಯಲ್ಲಿ ಸಿಕ್ಕಿಕೊಳ್ಳುವಂತೆ ಅವರನ್ನು ಅನುಮತಿಸುತ್ತದೋ ಅಂತಹ ಕ್ರೈಸ್ತನನ್ನು ಯಾ ಕ್ರೈಸ್ತರನ್ನು ನಿಶ್ಚಯವಾಗಿಯೂ ಟೀಕಿಸಬಾರದು.—ರೋಮಾಪುರ 14:1-4 ಹೋಲಿಸಿರಿ.

[ಅಧ್ಯಯನ ಪ್ರಶ್ನೆಗಳು]

a  ಇದೇ ವಿಷಯವನ್ನು “ಆ್ಯಡ್‌ವರ್ಟೈಸಿಂಗ್‌,” “ಬಿಸಿನೆಸ್‌,” ಮತ್ತು “ಗ್ಯಾಂಬ್ಲಿಂಗ್‌,” ಎಂಬ ಶೀರ್ಷಿಕೆಗಳ ಕೆಳಗೂ ನೋಡಸಾಧ್ಯವಿರುವುದರಿಂದ ಇಂಡೆಕ್ಸ್‌ ನ ಬಹುಮುಖ ಸಾಮರ್ಥ್ಯವು ಈ ಮಾಹಿತಿಯನ್ನು ಕಂಡುಹಿಡಿಯಲು ಒಬ್ಬನಿಗೆ ಸಹಾಯ ಮಾಡುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ