ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 7/15 ಪು. 32
  • “ಆಕಾಶದಿಂದ ಒಂದು ಸೂಚನೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಆಕಾಶದಿಂದ ಒಂದು ಸೂಚನೆ”
  • ಕಾವಲಿನಬುರುಜು—1993
ಕಾವಲಿನಬುರುಜು—1993
w93 7/15 ಪು. 32

“ಆಕಾಶದಿಂದ ಒಂದು ಸೂಚನೆ”

ಒಂದು ಹಳೆಯ ಪ್ರಾಸ ಹೇಳುವುದು: “ರಾತ್ರಿಯ ಕೆಂಪಾಕಾಶ ನಾವಿಕಗೆ ಸಂತೋಷ, ಕೆಂಪಾಕಾಶದ ಮುಂಜಾನೆ ನಾವಿಕಗೆ ಎಚ್ಚರಿಕೆ.”

ಇಂದು ಹವಾಮಾನವನ್ನು ಮುನ್‌ಸೂಚಿಸಲು ಉಪಗ್ರಹಗಳು, ಕಂಪ್ಯೂಟರ್‌-ವರ್ಧಕ ಶಾಖಪರಿಶೀಲನೆಗಳು, ಡಾಪ್ಲರ್‌ ರೇಡಾರ್‌ ಮತ್ತು ಇತರ ವೈಜ್ಞಾನಿಕ ಉಪಕರಣಗಳು ಉಪಯೋಗಿಸಲ್ಪಡುತ್ತವೆ. ಕಾಲಜ್ಞಾನವು ಈಗ ಉದಾಹರಿಸಿದ ಪ್ರಾಸದೊಂದಿಗೆ ಆಗಾಗ್ಗೆ ಹೊಂದಿಕೊಳ್ಳುತ್ತದೆ. ಯೇಸು ಕ್ರಿಸ್ತನ ಧಾರ್ಮಿಕ ವಿರೋಧಿಗಳು ಒಮ್ಮೆ ಅವನೇ ಮೆಸ್ಸೀಯನೆಂದು ರುಜುಪಡಿಸಲು “ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು,” ಅಸಾಮಾನ್ಯವಾಗಿ ಪ್ರದರ್ಶಿಸುವಂತೆ ಕೇಳಿದಾಗ ಅವನು ಹವಾಮಾನದ ಕುರಿತಾಗಿ ಮಾತಾಡಿದನು. ಅವನು ಹೇಳಿದ್ದು, “ಸಂಜೇವೇಳೆಯಲ್ಲಿ ನೀವು—ಆಕಾಶವು ಕೆಂಪಾಗಿದೆ, ನಿರ್ಮಲದಿನ ಬರುವದು ಅನ್ನುತ್ತೀರಿ; ಬೆಳಗ್ಗೆ—ಆಕಾಶವು ಮೋಡಮುಚ್ಚಿಕೊಂಡು ಕೆಂಪಾಗಿದೆ, ಈ ಹೊತ್ತು ಗಾಳಿ ಮಳೆ ಅನ್ನುತ್ತೀರಿ ಅಲ್ಲವೇ. ಆಕಾಶದ ಸ್ಥಿತಿಯನ್ನು ನೋಡಿ ಇದು ಹೀಗೆ ಅದು ಹಾಗೆ ಅನ್ನುವದಕ್ಕೆ ಬಲ್ಲಿರಿ; ಆದರೆ ಈ ಕಾಲದ ಸೂಚನೆಗಳನ್ನು ತಿಳುಕೊಳ್ಳಲಾರಿರಿ. ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ; ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ.”—ಮತ್ತಾಯ 16:1-4

ಯೇಸುವಿನ ವಿರೋಧಿಗಳು ಹವಾಮಾನವನ್ನು ಮುನ್‌ಸೂಚಿಸಲು ಬಲ್ಲವರಾಗಿದ್ದರು ಆದರೆ ಆತ್ಮಿಕ ವಿಚಾರಗಳನ್ನು ಗ್ರಹಿಸಲು ಅಸಮರ್ಥರಾಗಿದ್ದರು. ಉದಾಹರಣೆಗೆ, “ಯೋನನ ಸೂಚಕಕಾರ್ಯ” ದ ಕುರಿತೇನು? ದೇವರ ಪ್ರವಾದಿಯಾದ ಯೋನನು ಒಂದು ದೊಡ್ಡ ಮೀನಿನ ಹೊಟ್ಟೆಯೊಳಗೆ ಸುಮಾರು ಮೂರು ದಿನಗಳನ್ನು ಕಳೆದ ಅನಂತರ, ನಿನವೆಯಲ್ಲಿ ಸಾರಿದನು ಮತ್ತು ಅದರಿಂದ ಆ ಅಶ್ಶೂರದ ರಾಜಧಾನಿಗೆ ಒಂದು ಸೂಚಕವಾದನು. ಯೇಸುವಿನ ಸಂತತಿಯು “ಯೋನನ ಸೂಚಕಕಾರ್ಯವನ್ನು” ಅನುಭವಿಸಿದ್ದು ಅವನು ಸಮಾಧಿಯಲ್ಲಿ ಮೂರು ದಿನ ರಾತ್ರಿ ಹಗಲು ಕಳೆದಾಗ ಮತ್ತು ಪುನರುತ್ಥಾನಗೊಳಿಸಲ್ಪಟ್ಟಾಗಲೆ. ಅವನ ಶಿಷ್ಯರು ಆ ಸಂಭವದ ರುಜುವಾತನ್ನು ಸಾರಿದರು, ಮತ್ತು ಹೀಗೆ ಯೇಸು ಆ ಸಂತತಿಗೆ ಒಂದು ಸೂಚನೆಯಾದನು.—ಮತ್ತಾಯ 12:39-41.

ಇನ್ನೊಂದು ಸಂದರ್ಭದಲ್ಲಿ, ರಾಜ್ಯಾಧಿಕಾರದಲ್ಲಿ ಅವನ ಭಾವೀ “ಸಾನ್ನಿಧ್ಯ”ದ “ಸೂಚನೆ” ಯನ್ನು ಯೇಸುವಿನ ಶಿಷ್ಯರು ಕೇಳಿದರು. ಅದಕ್ಕುತ್ತರವಾಗಿ, ಅಸಮಾನ ಯುದ್ಧಗಳು, ಮಹಾ ಭೂಕಂಪಗಳು, ಬರಗಳು, ಮತ್ತು ದೇವರ ಸ್ಥಾಪಿತ ಸ್ವರ್ಗೀಯ ರಾಜ್ಯದ ಕುರಿತು ಭೂ ವ್ಯಾಪಕ ಸಾರುವಿಕೆಯನ್ನು ಒಳಗೊಂಡ ಅನೇಕ ವೈಶಿಷ್ಟ್ಯಗಳಿಂದ ಕೂಡಿದ ಒಂದು ಸಂಘಟಿತ ಸೂಚನೆಯನ್ನು ಕೊಟ್ಟನು.—ಮತ್ತಾಯ 24:3-14.

ಪರಲೋಕದ ಅದೃಶ್ಯ ಅರಸನೋಪಾದಿ ಯೇಸುವಿನ ಪ್ರತ್ಯಕ್ಷತೆಯ ಸೂಚನೆಯನ್ನು ನೀವು ಗ್ರಹಿಸುತ್ತೀರೊ? ಅದರ ವೈಶಿಷ್ಟ್ಯಗಳು ಈ ಸಂತತಿಯ ಮೇಲೆ ನೆರವೇರುತ್ತಿವೆ. (ಮತ್ತಾಯ 24:34) ಮತ್ತು ಭವಿಷ್ಯತ್ತಿನ ಕುರಿತೇನು? ಬೈಬಲು ಈ ವಿಷಯ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಎಂದು ಪ್ರಕಟಿಸುವುದು ಮಾತ್ರವಲ್ಲ, ಶೀಘ್ರದಲ್ಲಿಯೇ ಮಾನವ ಕುಲಕ್ಕೆ ಸ್ಪಷ್ಟವಾಗಿಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸಲ್ಪಡಲಿರುವ ದೇವರ ವಾಗ್ದಾನಿತ ನೂತನ ದಿನವನ್ನು ಕೂಡ ಮುನ್‌ಸೂಚಿಸುತ್ತದೆ.—2 ಪೇತ್ರ 3:13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ