ಸಮೃದ್ಧಿಯು ನಿಮ್ಮ ನಂಬಿಕೆಯನ್ನು ಪರೀಕ್ಷಿಸಬಲ್ಲದು
ಸಮೃದ್ಧಿಯು ಒಬ್ಬ ನೀತಿವಂತನ ನಂಬಿಕೆಯನ್ನು ಪರೀಕ್ಷಿಸಬಲ್ಲದು. ಪ್ರಾಪಂಚಿಕವಾಗಿ ಸಮೃದ್ಧರಾಗಲು ಹೆಣಗುವುದು ನಂಬಿಕೆಯ ನಷ್ಟಕ್ಕೆ ನಡಿಸಬಹುದು. (1 ತಿಮೊಥೆಯ 6:9, 10) ಆದರೆ ಸಮೃದ್ಧಿಯು ಇನ್ನೊಂದು ವಿಧದಲ್ಲಿಯು ಕೂಡ ನಂಬಿಕೆಯನ್ನು ಪರೀಕ್ಷಿಸಬಹುದು. ನೀತಿವಂತನಾದವನೊಬ್ಬನು ತಾನು ಕಷ್ಟಾನುಭವಿಸುವಾಗ ಅನೇಕ ಅನೀತಿವಂತರು ಪ್ರಾಪಂಚಿಕವಾಗಿ ಸಮೃದ್ಧರಾಗುವುದನ್ನು ನೋಡುವಾಗ, ಅವನು ಒಂದು ದೇವಭಕ್ತಿ ಇಲ್ಲದ ಮಾರ್ಗಕ್ರಮವನ್ನು ಬೆನ್ನಟ್ಟಲು ಶೋಧಿತನಾಗಬಹುದು. ಇದು ಯೆಹೋವನ ಸೇವಕರಲ್ಲಿ ಕೆಲವರು ಒಂದು ನೀತಿಯ ಜೀವಿತವನ್ನು ಬೆನ್ನಟ್ಟುವ ಮೌಲ್ಯವನ್ನು ಸಂಶಯಿಸುವಂತೆ ಕೂಡ ನಡೆಸಿರುತ್ತದೆ!
ಇಸ್ರಾಯೇಲ್ಯರ ಅರಸನಾದ ದಾವೀದನ ಆಳಿಕೆಯಲ್ಲಿ ಲೇವಿ ಸಂಗೀತಗಾರನಾದ ಆಸಾಫನಿಗೆ ಇದು ಸಂಭವಿಸಿತು. ಆಸಾಫನು ಸಾರ್ವಜನಿಕ ಆರಾಧನೆಯಲ್ಲಿ ಉಪಯೋಗಿಸಲಾಗುತ್ತಿದ್ದ ಕೀರ್ತನೆಗಳನ್ನು ರಚಿಸಿದನು. ಹೇಮಾನ್ ಮತ್ತು ಯೆದುತೂನರೊಂದಿಗೆ ಜತೆಯಾಗಿ, ಇನ್ನೂ ಅವನು ಯೆಹೋವ ದೇವರಿಗೆ ಸ್ತುತಿಯನ್ನು ಮತ್ತು ಉಪಕಾರಗಳನ್ನು ಸಂಗೀತದ ಹಿಮ್ಮೇಳಗಳೊಂದಿಗೆ ಪ್ರವಾದಿಸಿದ್ದನು. (1 ಪೂರ್ವಕಾಲವೃತ್ತಾಂತ 25:1; 2 ಪೂರ್ವಕಾಲವೃತ್ತಾಂತ 29:30) ಆಸಾಫನು ಸುಯೋಗಿತನಾಗಿದ್ದರೂ, ದುಷ್ಟರ ಪ್ರಾಪಂಚಿಕ ಸಮೃದ್ಧಿಯು ಅವನ ನಂಬಿಕೆಯ ಮಹಾ ಪರೀಕೆಯ್ಷಾಗಿ ಪರಿಣಮಿಸಿತು ಎಂದು ಕೀರ್ತನೆ 73 ತೋರಿಸುತ್ತದೆ.
ಆಸಾಫನ ಅಪಾಯಕರ ಮನೋಭಾವ
“ದೇವರು ನಿರ್ಮಲಚಿತ್ತರಾದ ಇಸ್ರಾಯೇಲ್ಯರಿಗೆ ದಯಾಪರನೇ ಹೌದು. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” (ಕೀರ್ತನೆ 73:1, 3) ಈ ಮಾತುಗಳಿಂದ, ಇಸ್ರಾಯೇಲ್ ಜನಾಂಗಕ್ಕೆ ಯೆಹೋವನು ಒಳ್ಳೆಯವನಾಗಿದ್ದಾನೆಂದು ಆಸಾಫನು ಅಂಗೀಕರಿಸಿದನು. ನಿರ್ದಿಷ್ಟವಾಗಿ ‘ನಿರ್ಮಲ ಹೃದಯಿಗಳ’ ವಿಷಯದಲ್ಲಿ ಹಾಗಿತ್ತು, ಯಾಕಂದರೆ ದೇವರಿಗೆ ಸಂಪೂರ್ಣ ಭಕ್ತಿಯನ್ನು ಕೊಡುವ ಮತ್ತು ಆತನ ಪವಿತ್ರ ನಾಮದ ಪವಿತ್ರೀಕರಣದಲ್ಲಿ ಭಾಗವಹಿಸುವ ಬಯಕೆಯು ಅವರದಾಗಿತ್ತು. ಆ ಮನೋಭಾವವು ನಮ್ಮಲ್ಲಿರುವುದಾದರೆ, ನಾವು ದುಷ್ಟರ ಸಮೃದ್ಧಿ ಯಾ ಇತರ ಯಾವುದೆ ಸಂದರ್ಭದ ಮೂಲಕ ತೀವ್ರವಾಗಿ ಪರೀಕ್ಷಿಸಲ್ಪಟ್ಟರೂ ಕೂಡ ಯೆಹೋವನ ಕುರಿತು ಒಳ್ಳೇದನ್ನು ಮಾತಾಡಿ ಆತನನ್ನು ಕೊಂಡಾಡುವೆವು.—ಕೀರ್ತನೆ 145:1, 2.
ಆಸಾಫನಿಗೆ ಯೆಹೋವನ ಒಳ್ಳೇತನದ ಅರಿವು ಇದ್ದರೂ, ಅವನ ಕಾಲುಗಳು ನೀತಿಯ ಹಾದಿಯಿಂದ ಬಹು ಮಟ್ಟಿಗೆ ಬದಿಗೊತ್ತಲ್ಪಟ್ಟವು. ಬಹು ದೂರದ ಓಟದ ಸಮಯದಲ್ಲಿ ಹಿಮಮಯ ನೆಲದ ಮೇಲೆ ಜಾರುವಂಥ ರೀತಿಯಲ್ಲಿ ಅದಾಗಿತ್ತು. ಅವನ ನಂಬಿಕೆಯು ಅಷ್ಟು ಬಲಹೀನವಾದದ್ದೇಕೆ? ಅವನು ವಿವರಿಸಿದ್ದು: “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ಅವರ ಮರಣವು ನಿರ್ಬಾಧಕವಾಗಿದೆ; ಅವರ ಕಾಯವು ಕೊಬ್ಬುಳ್ಳದ್ದಾಗಿದೆ. ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವದಿಲ್ಲ.”—ಕೀರ್ತನೆ 73:2, 4, 5.
ಅನೀತಿವಂತರ ಪ್ರಾಪಂಚಿಕ ಸಮೃದ್ಧಿಯು ಆಸಾಫನನ್ನು ಅವರ ಮೇಲೆ ಹೊಟ್ಟೆಕಿಚ್ಚುಪಡುವಂತೆ ಮಾಡಿತು. ಅವರು ಮೋಸದ ವಿಧಾನಗಳ ಮೂಲಕ ಐಶ್ವರ್ಯವನ್ನು ಸಂಪಾದಿಸಿರುವುದಾದರೂ, ಸಮಾಧಾನಭರಿತ ಜೀವಿತದಲ್ಲಿ ಆನಂದಿಸುತ್ತಿದ್ದಂತೆ ಕಂಡುಬಂತು. (ಹೋಲಿಸಿರಿ ಕೀರ್ತನೆ 37:1) ಅವರ ದುಷ್ಟ ಕೃತ್ಯಗಳ ಎದುರಿನಲ್ಲಿಯೂ, ಹೊರಗಿನ ತೋರಿಕೆಗಳಲ್ಲಿ ಅವರು ಭದ್ರರಾಗಿದ್ದರು. ಮರಣದ ಭೀಕರ ಯಾತನೆಗಳೊಂದೂ ಇಲ್ಲದೇ ಅವರ ಜೀವಿತವು ಅಂತ್ಯವಾಗುವಂತೆಯೂ ಕಂಡಿತು! ಅವರು ಕೆಲವೊಮ್ಮೆ ಆತ್ಮಿಕ ಅವಶ್ಯಕತೆಯ ಯಾವುದೆ ಅರಿವಿಲ್ಲದೆ, ಸಮಾಧಾನ ಮತ್ತು ಸ್ವ ನಿಶ್ಚಿತತೆಯಿಂದ ಸತ್ತರು. (ಮತ್ತಾಯ 5:3) ಇನ್ನೊಂದು ಕಡೆಯಲ್ಲಿ, ಕೆಲವೊಂದು ದೇವರ ಸೇವಕರು ನೋವಿನ ಕಾಯಿಲೆ ಮತ್ತು ಮರಣವನ್ನು ಅನುಭವಿಸುತ್ತಾರೆ, ಆದರೆ ಆತನು ಅವರಿಗೆ ಆಧಾರವಾಗಿರುತ್ತಾನೆ, ಮತ್ತು ಅವರಿಗೆ ಅದ್ಭುತಕರ ಪುನರುತ್ಥಾನದ ನಿರೀಕ್ಷೆ ಇದೆ.—ಕೀರ್ತನೆ 43:1-3; ಯೋಹಾನ 5:28, 29.
ಅನೇಕ ದುಷ್ಟ ಜನರಿಗೆ ಅವರ ಧಾರಾಳ ಆಹಾರ ಪೂರೈಕೆಯಲ್ಲಿ ಆನಂದಿಸುವುದರಿಂದ ತಡೆಗಟ್ಟಲು ಯಾವುದೇ ಆರೋಗ್ಯ ಸಮಸ್ಯೆಗಳಿರುವುದಿಲ್ಲ. “ಅವರ ಕಾಯವು ಕೊಬ್ಬುಳ್ಳದ್ದಾಗಿದೆ,” ಅವರ ಹೊಟ್ಟೆಗಳು ಹೊರಕ್ಕೆ ಚಾಚಿಕೊಂಡಿವೆ. ಇದಲ್ಲದೆ, ಅವರು ಮಾನವಕುಲದ ಗುಂಪುಗಳಿಗೆ ಅಸದೃಶವಾಗಿ, ತಮ್ಮ ಜೀವನದ ಅವಶ್ಯಕತೆಗಳನ್ನು ಪಡಕೊಳ್ಳಲು ಪ್ರಯಾಸಪಡುವ ಅಗತ್ಯ ಇಲ್ಲದೆ ಇರುವ ಕಾರಣ, “ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವದಿಲ್ಲ. ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವದಿಲ್ಲ,” ಎಂದು ದುಷ್ಟರ ಬಗ್ಗೆ ಆಸಾಫನು ತೀರ್ಮಾನಿಸಿದನು. ವಿಶೇಷವಾಗಿ ಸೈತಾನನ ದುಷ್ಟ ಲೋಕದಲ್ಲಿ ಯೆಹೋವನ ನೀತಿಯ ಮಟ್ಟಗಳಿಗೆ ಮೊದಲಿನವರು ಅಂಟಿಕೊಂಡಿರುವುದರಿಂದ ದೇವಭಕ್ತಿಯ ಜನರ ಶೋಧನೆಗಳಿಂದ ಅವರು ಪಾರಾಗುತ್ತಾರೆ.—1 ಯೋಹಾನ 5:19.
ದುಷ್ಟರು ಸಮೃದ್ಧಿಯನ್ನು ಹೊಂದುವುದರಿಂದ, ಆಸಾಫನು ಅವರ ಬಗ್ಗೆ ಹೀಗನ್ನುವುದನ್ನು ಮುಂದುವರಿಸಿದನು: “ಆದದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ. ಕೊಬ್ಬಿನಿಂದ ಅವರ ಕಣ್ಣುಗಳು ಮೇಲೆ ಅವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ. ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ. ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.”—ಕೀರ್ತನೆ 73:6-9.
ದುಷ್ಟರು ಗರ್ವದ “ಕಂಠಮಾಲೆ”ಯನ್ನು ತೊಡುತ್ತಾರೆ, ಮತ್ತು ಅವರ ಬಲಾತ್ಕಾರ ಕೃತ್ಯಗಳು ಎಷ್ಟು ಬಹುವಾಗಿವೆಯೆಂದರೆ ಅವರು ‘ಉಡುಪಿನಂತೆ ಅವುಗಳನ್ನು ಹೊದ್ದುಕೊಂಡಿರುತ್ತಾರೆ.’ ಸ್ವಂತ ಮಾರ್ಗದಲ್ಲೇ ಹೋಗಲು ನಿರ್ಧರಿಸುವ ಅವರು ಇತರರನ್ನು ಬೆದರಿಸುತ್ತಾರೆ. ದುಷ್ಟರ ಕಣ್ಣುಗಳು ಪೋಷಣೆಯ ಕೊರತೆಯಿಂದಾಗಿ ಕುಳಿಬಿದ್ದಿರುವುದಿಲ್ಲ, ಆದರೆ ಹೊಟ್ಟೆಬಾಕತನದ ಫಲವಾಗಿರುವ ಬೊಜ್ಜಿನ ಕಾರಣ ಎದ್ದು ಕಾಣುತ್ತವೆ, ‘ಕೊಬ್ಬಿನಿಂದ ಉಬ್ಬಿವೆ.’ ಅವರ ಒಳಸಂಚು ಎಷ್ಟು ಯಶಸ್ವಿಯಾಗಿದೆಯೆಂದರೆ ಅವರು ‘ಅವರ ಹೃದಯಗಳ ಆಲೋಚನೆಗಳನ್ನೂ ಮೀರುತ್ತಾರೆ.’ ಅವರು ಅವರ ವಂಚನೆಯನ್ನು, ‘ಮೇಲ್ಮಟ್ಟದ ಶೈಲಿಯಲ್ಲಿ,’ ಗರ್ವದಿಂದ ಹೇಳಿಕೊಳ್ಳುತ್ತಾರೆ. ‘ಅವರು ತಮ್ಮ ಬಾಯಿಯನ್ನು ಸ್ವರ್ಗದಲ್ಲಿ ಹಾಕಿರುತ್ತಾರೆ, ಮತ್ತು ಅವರ ನಾಲಿಗೆಯು ಭೂಲೋಕದಲ್ಲೆಲ್ಲಾ ಸಂಚರಿಸುತ್ತದೆ!’ ಸ್ವರ್ಗದಲ್ಲಿ ಯಾ ಭೂಮಿಯ ಮೇಲೆ ಯಾವನಿಗೂ ಅವರಿಗಿರುವ ಗೌರವದ ಕೊರತೆಯಿಂದಾಗಿ, ಅವರು ದೇವರನ್ನು ದೂಷಿಸುತ್ತಾರೆ ಮತ್ತು ಮಾನವರಿಗೆ ಕೇಡುಮಾಡುತ್ತಾರೆ.
ತಾನೇನನ್ನು ನೋಡಿದನೋ ಅದರ ಮೂಲಕ ಪ್ರತಿಕೂಲವಾಗಿ ಪ್ರಭಾವಿತರಾದವರಲ್ಲಿ ಆಸಾಫನೊಬ್ಬನೆ ಇರಲಿಲ್ಲವೆಂಬುದು ವ್ಯಕ್ತ. ಅವನಂದದ್ದು: “ಆದದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರಿಗೆ ಪಾನವು ಯಥೇಚ್ಛವಾಗಿ ದೊರಕುವದು. ದೇವರು ವಿಚಾರಿಸುವದೆಲ್ಲಿ? ಪರಾತ್ಪರನು ಚಿಂತಿಸುವದುಂಟೋ ಅಂದುಕೊಳ್ಳುತ್ತಾರೆ.” (ಕೀರ್ತನೆ 73:10, 11) ದುಷ್ಟರು ಏಳಿಗೆ ಹೊಂದುವಂತೆ ಕಾಣುವುದರಿಂದ, ದೇವ ಜನರಲ್ಲಿ ಕೆಲವರು ತಪ್ಪಾದ ವೀಕ್ಷಣವನ್ನು ಆಯ್ದುಕೊಂಡು, ‘ಏನು ನಡೆಯುತ್ತದೆಯೆಂದು ದೇವರಿಗೆ ಗೊತ್ತಿಲ್ಲ ಮತ್ತು ಆತನು ನಿಯಮರಾಹಿತ್ಯದ ವಿರುದ್ಧ ಕಾರ್ಯನಡಿಸನು’ ಎನ್ನುವ ನಿಯಮರಾಹಿತ್ಯದ ಸ್ಥಿತಿಗೆ ತರಲ್ಪಡುವರು ಎಂದು ಹೀಬ್ರೂ ಮೂಲಪಾಠವು ಅರ್ಥೈಸಬಹುದು. ಇನ್ನೊಂದು ಕಡೆಯಲ್ಲಿ, ಕೆಟ್ಟ ಜನರು ದಂಡನೆವಿನಾಯಿತಿಯಿಂದಲೋ ಎಂಬಂತೆ ನಿಯಮರಾಹಿತ್ಯವನ್ನು ಆಚರಿಸುವುದನ್ನು ಕಾಣುವುದು, ‘ದೇವರು ಇಂಥ ವಿಷಯಗಳನ್ನು ಹೇಗೆ ಸಹಿಸುತ್ತಾನೆ? ಏನು ನಡೆಯುತ್ತದೆಂದು ಆತನು ನೋಡುವುದಿಲ್ಲವೊ?’ ಎಂದು ನೀತಿವಂತನು ಕೇಳುವಂತೆ ಪ್ರೇರಿಸುವ ಕಹಿಯನ್ನು ಕುಡಿಯಬೇಕಾಗಿರುವಂತಿರುತ್ತದೆ.
ಅತನ ಪರಿಸ್ಥಿತಿಗಳನ್ನು ದುಷ್ಟರದ್ದಕ್ಕೆ ಹೋಲಿಸಿ ಆಸಾಫನಂದದ್ದು: “ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ. ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ. ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.” (ಕೀರ್ತನೆ 73:12-14) ಒಂದು ನೀತಿಯ ಜೀವಿತವನ್ನು ನಡೆಸುವುದು ಅನುಪಯುಕ್ತವಾಗಿದೆಯೆಂದು ಆಸಾಫನಿಗೆ ಭಾಸವಾಯಿತು. ದುಷ್ಟ ಜನರು ಪ್ರಾಯಶಃ ವಂಚನೆಯ ದಾರಿಗಳಿಂದ ‘ತಮ್ಮ ಜೀವನಾಧಾರಕ್ಕೆ ಬೇಕಾದಷ್ಟು ವಿಷಯಗಳನ್ನು ಹೆಚ್ಚಿಸಿ’ ಏಳಿಗೆ ಹೊಂದಿದರು. ಅವರು ಅತ್ಯಂತ ಕೆಟ್ಟ ತಪ್ಪು ಕೃತ್ಯಕ್ಕೂ ದಂಡನೆಯನ್ನು ತಪ್ಪಿಸುವವರಂತೆ ಕಂಡರು, ಆದರೆ ಆಸಾಫನು “ಯಾವಾಗಲೂ”—ಅವನು ಎಚ್ಚರವಾದಾಗಿನಿಂದ ರಾತ್ರಿ ಮಲಗುವವರೆಗೆ—ವ್ಯಾಧಿಪೀಡಿತನಾಗಿದ್ದನು. ಪ್ರತಿ ಬೆಳಗ್ಗೆ ಯೆಹೋವನು ಅವನನ್ನು ತಿದ್ದುತ್ತಾನೆಂದು ಅವನಿಗೆ ಭಾಸವಾಯಿತು. ಇದು ಸರಿಯಾದದ್ದಲ್ಲವೆಂದು ಕಂಡುಬಂದದರ್ದಿಂದ, ಅದು ಆಸಾಫನ ನಂಬಿಕೆಯನ್ನು ಪರೀಕ್ಷಿಸಿತು.
ಆಲೋಚನೆಯಲ್ಲಿ ಪುನರ್ಹೊಂದಾಣಿಕೆ
ಅಂತಿಮವಾಗಿ ತನ್ನ ಆಲೋಚನೆಯು ತಪ್ಪಾಗಿದೆ ಎಂದು ಅರಿತು, ಆಸಾಫನು ಅಂದದ್ದು: “ನಾನು ಈ ಪ್ರಕಾರ ಬಾಯಿಬಿಡುವದಕ್ಕೆ ಮನಸ್ಸು ಮಾಡಿಕೊಂಡಿದ್ದರೆ ನಿನ್ನ ಭಕ್ತಕುಲಕ್ಕೆ ದ್ರೋಹಿಯಾಗುತ್ತಿದ್ದೆನು. ನಾನು ಇದನ್ನು ಗ್ರಹಿಸಿಕೊಳ್ಳಬೇಕೆಂದು ಎಷ್ಟು ಚಿಂತಿಸಿದರೂ ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು. ಆದರೆ ದೇವಾಲಯಕ್ಕೆ ಹೋಗಿ ಅವರ ಅಂತ್ಯಾವಸ್ಥೆಯನ್ನು ಆಲೋಚಿಸಿದಾಗ ನನಗೆ ಗೊತ್ತಾಯಿತು. ಹೌದು, ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು ಬೀಳಿಸಿ ನಾಶಮಾಡಿಬಿಡುತ್ತೀ. ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ; ಭಯಂಕರರೀತಿಯಿಂದ ಸಂಹಾರವಾಗಿ ನುಗಿದು ಹೋಗುತ್ತಾರೆ. ಎಚ್ಚರವಾದವನು ಕನಸನ್ನು ಹೇಗೋ ಹಾಗೆ ಯೆಹೋವನೇ, ನೀನು ಏಳುವಾಗ ಅವರನ್ನು ಮಾಯಾರೂಪರೆಂದು ಭಾವಿಸುತ್ತೀ.”—ಕೀರ್ತನೆ 73:15-20.
ಆಸಾಫನು ದೂರನ್ನು ಧ್ವನಿಸದೇ ಇದ್ದದ್ದು ಉತ್ತಮವಾಗಿತ್ತು, ಯಾಕಂದರೆ ಯೆಹೋವನನ್ನು ಸೇವಿಸುವುದು ಅನುಪಯುಕ್ತವೆಂದು ಬಹಿರಂಗವಾಗಿ ಹೇಳುವುದು, ಆರಾಧಕರಾಗಿರುವ ತನ್ನ ಕುಟುಂಬದ ಸದಸ್ಯರನ್ನು ನಿರುತ್ತೇಜನಗೊಳಿಸಬಹುದಾಗಿತ್ತು ಯಾ ಅವರ ನಂಬಿಕೆಯನ್ನು ಕೆಡಿಸಬಹುದಾಗಿತ್ತು. ಸುಮ್ಮಗಿರುವುದು ಮತ್ತು ಆಸಾಫನು ಮಾಡಿದಂತೆ ಮಾಡುವುದು ಎಷ್ಟೊಂದು ಉತ್ತಮ! ನೀತಿವಂತರು ಕಷ್ಟಾನುಭವಿಸುವಾಗ ದುಷ್ಟರು ಅವರ ತಪ್ಪುಗಳಿಂದ ತಪ್ಪಿಸಿಕೊಳ್ಳುತ್ತಾರೆಂದು ಕಂಡುಬರುವುದು ಯಾಕೆ ಎಂದು ನೋಡಲು ಅವನು ದೇವಾಲಯಕ್ಕೆ ಹೋದನು. ಆ ಪರಿಸರವು ಆಸಾಫನನ್ನು ಯೆಹೋವನ ಆರಾಧಕರ ಮಧ್ಯೆ ಶಾಂತವಾಗಿ ಮನನ ಮಾಡಲು ಅನುಮತಿಸಿತು ಮತ್ತು ಅವನ ಆಲೋಚನೆಯು ಪುನರ್ಹೊಂದಾಣಿಕೆಗೆ ಬಂತು. ಆದುದರಿಂದ ಇಂದು, ನಾವೇನನ್ನು ನೋಡುತ್ತೇವೊ ಅದರಿಂದ ಕಂಗೆಡುವಲ್ಲಿ, ಹಾಗೆಯೆ ನಾವು ಕೂಡ ನಮ್ಮನ್ನು ಇತರರಿಂದ ದೂರ ಇಡುವುದರ ಬದಲಿಗೆ ದೇವರ ಜನರೊಂದಿಗೆ ಸಹವಸಿಸುವುದರ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕೋಣ.—ಜ್ಞಾನೋಕ್ತಿ 18:1.
ದೇವರು ದುಷ್ಟನನ್ನು “ಅಪಾಯಕರ ಸ್ಥಳದಲ್ಲಿ” ಇಟ್ಟಿರುತ್ತಾನೆಂದು ಆಸಾಫನು ಅರಿಯಲು ತೊಡಗಿದನು. ಅವರ ಜೀವಿತಗಳು ಪ್ರಾಪಂಚಿಕ ವಸ್ತುಗಳ ಸುತ್ತ ತಿರುಗುವ ಕಾರಣ, ಆಕಸ್ಮಿಕ ಅಘಾತವನ್ನು ಅನುಭವಿಸುವ ಅಪಾಯದಲ್ಲಿ ಅವರು ಇದ್ದಾರೆ. ಕೊನೆಯದಾಗಿ ಮುದಿ ಪ್ರಾಯದಲ್ಲಿ ಮರಣವು ಅವರನ್ನು ಹಿಂದಕ್ಕೆ ಹಾಕುವುದು, ಮತ್ತು ಅವರ ಅನ್ಯಾಯದಿಂದ ಗಳಿಸಿದ ಸಂಪತ್ತು ಅವರಿಗೆ ಉದ್ದ ಆಯುಷ್ಯದ ಭದ್ರತೆಯನ್ನು ಒದಗಿಸಲಾರದು. (ಕೀರ್ತನೆ 49:6-12) ಅವರ ಸಮೃದ್ಧಿಯು ಬೇಗನೆ ದಾಟಿಹೋಗುವ ಕನಸಿನಂತಿರುವುದು. ಅವರು ಏನನ್ನು ಬಿತ್ತುತ್ತಾರೊ ಅದನ್ನೇ ಕೊಯ್ಯುವಾಗ ಅವರು ಮುದಿ ಪ್ರಾಯವನ್ನು ತಲಪುವ ಮುಂಚೆಯೆ ನ್ಯಾಯವು ಅವರನ್ನು ಬೆನ್ನಟ್ಟಿ ಹಿಡಿಯುವುದು. (ಗಲಾತ್ಯ 6:7) ಅವರಿಗೆ ಸಹಾಯಮಾಡಶಕ್ತನಾದ ಒಬ್ಬನೇ ಒಬ್ಬಾತನನ್ನು ಅವರು ಉದ್ದೇಶಪೂರ್ವಕವಾಗಿ ಅಲಕ್ಷಮಾಡಿದ್ದರಿಂದ, ನಿರೀಕ್ಷೆ ಇಲ್ಲದೆ, ಸಹಾಯ ಶೂನ್ಯರಾಗಿ ಬಿಡಲ್ಪಡುತ್ತಾರೆ. ಯೆಹೋವನು ಅವರ ವಿರುದ್ಧವಾಗಿ ಕಾರ್ಯವೆಸಗುವಾಗ, ಆತನು ಅವರ “ಮಾಯಾರೂಪವನ್ನು”—ಅವರ ವೈಭವ ಮತ್ತು ಅಂತಸ್ತನ್ನು—ತಿರಸ್ಕಾರದಿಂದ ವೀಕ್ಷಿಸುವನು.
ನಿಮ್ಮ ಪ್ರತಿಕ್ರಿಯೆಯನ್ನು ಕಾಪಾಡಿರಿ
ತಾನೇನನ್ನು ಕಂಡನೊ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ತೋರಿಸದ ಕಾರಣ, ಆಸಾಫನು ಒಪ್ಪಿದ್ದು: “ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲಗು ನೆಟ್ಟಂತಿತ್ತು. ನಾನು ವಿವೇಕಹೀನಪಾಮರನಾಗಿ ನಿನ್ನ ದೃಷ್ಟಿಯಲ್ಲಿ ಕೇವಲ ಪಶುವೇ ಆಗಿದ್ದೆನು. ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.”—ಕೀರ್ತನೆ 73:21-24.
ದುಷ್ಟನ ಪ್ರಾಪಂಚಿಕ ಸಮೃದ್ಧಿಯ ಮೇಲೆ ಮತ್ತು ನೀತಿವಂತನ ಕಷ್ಟಾನುಭವದ ಮೇಲೆ ಆಲೋಚಿಸುತ್ತಿರುವುದು ಒಬ್ಬ ವ್ಯಕ್ತಿಯ ಹೃದಯವನ್ನು ಹುಳಿಗೊಳಿಸಬಹುದು ಯಾ ಅವನನ್ನು ಕಟುಮಾಡಬಹುದು. ಆಂತರ್ಯದಲ್ಲಿ—ಅವನ ಮೂತ್ರಜನಕಾಂಗಗಳಲ್ಲಿ—ಈ ಪರಿಸ್ಥಿತಿಯ ಮೇಲೆ ಆಸಾಫನ ಸಂಕ್ಷೋಭೆಯು ಅವನಿಗೆ ಮಹಾ ನೋವನ್ನುಂಟುಮಾಡಿತು. ಯೆಹೋವನ ದೃಷ್ಟಿಕೋನದಲ್ಲಿ, ಅವನು ತೀರಾ ಸಂವೇದನೆಯ ಆಧಾರದ ಮೇಲೆ ಪ್ರತಿಕ್ರಿಯಿಸುವ ವಿವೇಚನೆ ಮಾಡದ ಪಶುವಿನಂತಾದನು. ಆದರೂ, ಆಸಾಫನು ಸದಾ ‘ಅವನ ಬಲಗೈಯನ್ನು ಹಿಡಿದ ದೇವರೊಂದಿಗೆ’ ಇದ್ದನು. ಹೀಗಿರುವುದರಿಂದ, ನಾವು ನಮ್ಮ ಆಲೋಚನೆಯಲ್ಲಿ ತಪ್ಪು ಮಾಡಿರುವುದಾದರೆ, ಆಸಾಫನು ಮಾಡಿದಂತೆ ಯೆಹೋವನ ಸಲಹೆಯನ್ನು ಹುಡುಕುವಲ್ಲಿ, ದೇವರು ನಮ್ಮನ್ನು ಬೆಂಬಲಿಸಲು ಮತ್ತು ನಡೆಸಲು ಕೈಗಳಲ್ಲಿ ತಕ್ಕೊಳ್ಳುವನು. (ಹೋಲಿಸಿ ಯೆರೆಮೀಯ 10:23) ಆತನ ಸಲಹೆಯನ್ನು ಅನ್ವಯಿಸುವುದರ ಮೂಲಕ ಮಾತ್ರವೆ ನಾವು ಸಂತೋಷದ ಭವಿಷ್ಯದೊಳಗೆ ನಡಿಸಲ್ಪಡಸಾಧ್ಯವಿದೆ. ಸ್ವಲ್ಪ ಸಮಯಕ್ಕಾಗಿ ನಾವು ಅಪಮಾನವನ್ನನುಭವಿಸಬಹುದು, ಆದರೆ ಯೆಹೋವನು ‘ನಮ್ಮನ್ನು ಮಹಿಮೆಗೆ’ ಯಾ ಗೌರವಕ್ಕೆ ಸೇರಿಸುವ ಮೂಲಕ ವಿಪರ್ಯಸ್ತವನ್ನು ತರುವನು.
ಯೆಹೋವನ ಮೇಲೆ ಆತುಕೊಳ್ಳುವಿಕೆಯ ಅಗತ್ಯವನ್ನು ಗಣ್ಯಮಾಡುತ್ತಾ ಆಸಾಫನು ಕೂಡಿಸಿದ್ದು: “ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವದಿಲ್ಲ. ತನುಮನಗಳು ಕ್ಷಯಿಸಿದರೂ ನನ್ನ ಅತ್ಮಕ್ಕೆ ಶರಣನೂ ನನ್ನ ಶಾಶ್ವತವಾದ ಪಾಲೂ ದೇವರೇ. ಇಗೋ ನಿನ್ನನ್ನು ಬಿಟ್ಟವರು ನಾಶವಾಗುವರು; ನಿನಗೆ ದ್ರೋಹಮಾಡಿದವರೆಲ್ಲರನ್ನು ನಿರ್ಮೂಲ ಮಾಡುತ್ತೀ. ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.”—ಕೀರ್ತನೆ 73:25-28.
ಆಸಾಫನಂತೆ, ನಿಜ ಭದ್ರತೆ ಮತ್ತು ಆದರಣೆಗಾಗಿ ಆತುಕೊಳ್ಳಲು ಯೆಹೋವನನ್ನು ಬಿಟ್ಟು ನಮಗೆ ಯಾರೂ ಇಲ್ಲ. (2 ಕೊರಿಂಥ 1:3, 4) ಯಾರದ್ದೆ ಭೌತಿಕ ಐಶ್ವರ್ಯವನ್ನು ಆಶಿಸುವುದರ ಬದಲಿಗೆ, ನಾವು ದೇವರನ್ನು ಸೇವಿಸೋಣ ಮತ್ತು ಸ್ವರ್ಗದಲ್ಲಿ ನಿಧಿಯನ್ನು ಕೂಡಿಸಿಡೋಣ. (ಮತ್ತಾಯ 6:19, 20) ಯೆಹೋವನೊಂದಿಗೆ ಒಂದು ಮೆಚ್ಚಿಕೆಯ ನಿಲುವನ್ನು ಪಡೆದಿರುವುದು ನಮ್ಮ ಮಹತ್ತಾದ ಆನಂದವಾಗಿದೆ. ನಮ್ಮ ಅಂಗಾಂಗಗಳು ಮತ್ತು ಹೃದಯವು ಕುಸಿದರೂ, ವಿಪತ್ಕಾಲಗಳ ನಡುವೆ ನಾವು ನಿರೀಕ್ಷೆಯನ್ನು ಮತ್ತು ಧೈರ್ಯವನ್ನು ಕಳೆದುಕೊಳ್ಳದಂತೆ, ಆತನು ನಮ್ಮನ್ನು ಬಲಪಡಿಸುವನು ಮತ್ತು ನಮ್ಮ ಹೃದಯಕ್ಕೆ ದೃಢತೆಯನ್ನು ಕೊಡುವನು. ಯೆಹೋವನೊಂದಿಗೆ ಆಪತ್ತೆಯು ಅಮೌಲ್ಯ ಆಸ್ತಿಯಾಗಿರುತ್ತದೆ. ಅದನ್ನು ಕಳೆದುಕೊಳ್ಳುವುದು, ಯಾರು ಆತನನ್ನು ತೊರೆಯುತ್ತಾರೊ ಅವರೊಂದಿಗೆ, ನಮಗೂ ಆಪತ್ತಾಗಿ ಪರಿಣಮಿಸುವುದು. ಆದುದರ್ದಿಂದ, ಆಸಾಫನಂತೆ, ದೇವರ ಹತ್ತಿರಕ್ಕೆ ನಾವು ಬರೋಣ ಮತ್ತು ನಮ್ಮೆಲ್ಲಾ ಚಿಂತಾಭಾರವನ್ನು ಆತನ ಮೇಲೆ ಬಿಸಾಡೋಣ. (1 ಪೇತ್ರ 5:6, 7) ಇದು ನಮ್ಮ ಆತ್ಮಿಕ ಒಳಿತನ್ನು ಪ್ರವರ್ಧಿಸುತ್ತದೆ ಮತ್ತು ಯೆಹೋವನ ಅದ್ಭುತ ಕಾರ್ಯಗಳ ಕುರಿತು ಇತರರಿಗೆ ಹೇಳಲು ನಮ್ಮನ್ನು ಪ್ರೇರಿಸುತ್ತದೆ.
ಯೆಹೋವನಿಗೆ ನಿಷ್ಠೆಯುಳ್ಳವರಾಗಿರ್ರಿ
ತನ್ನ ಸ್ವದೇಶವಾದ ಇಸ್ರಾಯೇಲಿನಲ್ಲಿ ದುಷ್ಟರು ಸಮೃದ್ಧಿ ಹೊಂದುವುದನ್ನು ನೋಡಿ ಆಸಾಫನು ಕಳವಳಗೊಂಡಿದ್ದನು. ಯೆಹೋವನ ನಿಷ್ಠಾವಂತ ಸೇವಕರ ಮಧ್ಯದಲ್ಲಿ, ಸೊಕ್ಕು, ಗರ್ವ, ಬಲಾತ್ಕಾರ, ಹಾಸ್ಯ, ಮತ್ತು ಮೋಸದ ಅಪರಾಧಿಗಳಾದ “ದುಷ್ಟ ಜನರೂ” ಮತ್ತು ಅವರೇನನ್ನು ಮಾಡುತ್ತಾರೊ ಅದು ದೇವರಿಗೆ ತಿಳಿದಿದೆ ಎಂಬುದನ್ನು ಅಲ್ಲಗಳೆಯುವಂಥವರೂ ಇದ್ದರು. (ಕೀರ್ತನೆ 73:1-11) ಎಂಥ ಒಂದು ಎಚ್ಚರಿಕೆ! ಯೆಹೋವನನ್ನು ಮೆಚ್ಚಿಸಲು, ನಾವು ಗರ್ವ, ಬಲಾತ್ಕಾರ, ಅಪಹಾಸ್ಯ, ಮತ್ತು ಅಪ್ರಾಮಾಣಿಕತೆಯಂಥ ಗುಣಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸಬೇಕು. ಆಸಾಫನಂತೆ, ಯೆಹೋವನ ಎಲ್ಲ ಸೇವಕರು ಆತನ ನಿಷ್ಠೆಯ ಆರಾಧಕರೊಂದಿಗೆ ಕ್ರಮವಾಗಿ ಜತೆಗೂಡುವುದರ ಮೂಲಕ ‘ದೇವರ ಮಹಾ ಆಲಯದೊಳಕ್ಕೆ ಬರಲಿ.’ ನಿಜಕ್ಕೂ, ಯೆಹೋವನನ್ನು ಪ್ರೀತಿಸುವವರೆಲ್ಲರು ಇತರರು ಏನೇ ಅನ್ನಲಿ ಯಾ ಮಾಡಲಿ, ಕಷ್ಟಾನುಭವದ ನಡುವೆಯೂ ಅವರನ್ನು ಸಂರಕ್ಷಿಸಲು ಆತನ ಮೇಲೆ ಆತುಕೊಳ್ಳುತ್ತಾ, ‘ದೇವರ ಹತ್ತರಕ್ಕೆ ಬರಲಿ.’—ಕೀರ್ತನೆ 73:12-28; 3 ಯೋಹಾನ 1-10.
ದುಷ್ಟರ ಪ್ರಾಪಂಚಿಕ ಸಮೃದ್ಧಿಯು, ಆಸಾಫನಿಗೆ ಮಾಡಿದಂತೆ, ನಮ್ಮ ನಂಬಿಕೆಯನ್ನು ಪರೀಕ್ಷಿಸಬಹುದು ನಿಜ. ಆದರೂ, ಯೆಹೋವನ ಸೇವೆಯ ಮೇಲೆ ನಮ್ಮ ಜೀವಿತವನ್ನು ಕೇಂದ್ರೀಕರಿಸುವಲ್ಲಿ ನಾವು ಈ ಪರೀಕ್ಷೆಯನ್ನು ಸಹಿಸಿಕೊಳ್ಳಬಲ್ಲೆವು. ಇದನ್ನು ಮಾಡಿದ್ದಕ್ಕೆ ನಮಗೆ ಬಹುಮಾನವು ದೊರಕುವುದು ಯಾಕಂದರೆ ‘ನಮ್ಮ ಕೆಲಸವನ್ನು ಮತ್ತು ಆತನ ನಾಮಕ್ಕೆ ನಾವು ತೋರಿಸುವ ಪ್ರೀತಿಯನ್ನು ದೇವರು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.’ (ಇಬ್ರಿಯ 6:10) ನಮ್ಮ ಬಹುಮಾನದ ಹೋಲಿಕೆಯಲ್ಲಿ ನಮ್ಮ ಪರೀಕ್ಷೆಗಳು “ಕ್ಷಣಮಾತ್ರ”ದವು ಮತ್ತು “ಹಗುರವಾದ”ದವು ಆಗಿರುವವು. (2 ಕೊರಿಂಥ 4:17) ತನ್ನ ನಿಷ್ಠೆಯ ಸೇವಕರಿಗೆ ಯೆಹೋವನು ವಾಗ್ದಾನಿಸುವ ನಿತ್ಯ ಸಂತೋಷದ ಜೀವಿತದೊಂದಿಗೆ ಹೋಲಿಸುವಾಗ ಕೇವಲ 70 ಯಾ 80 ವರ್ಷಗಳ ಕಷ್ಟಾನುಭವವು ನಮ್ಮ ತುಟಿಗಳಿಂದ ಹೊರಡುವ ಕೇವಲ ಪಿಸುಮಾತಾಗಿ ಇರುತ್ತದೆ.—ಕೀರ್ತನೆ 90:9, 10.
ನೀತಿಗಾಗಿ ನಾವು ಪಡುವ ಕಷ್ಟಾನುಭವಕ್ಕೆ ವೈದೃಶ್ಯವಾಗಿ ದುಷ್ಟರಿಗೆ ದೊರೆಯುವ ಪ್ರಾಪಂಚಿಕ ಸಮೃದ್ಧಿಯು ದೇವರ ಪವಿತ್ರಾತ್ಮದ ಒಂದು ಫಲವಾದ ನಂಬಿಕೆಯನ್ನು ನಾವು ಪ್ರದರ್ಶಿಸುವುದರಿಂದ ತಡೆಯುವಂತೆ ನಾವೆಂದಿಗೂ ಬಿಟ್ಟು ಕೊಡದಿರೋಣ. (ಗಲಾತ್ಯ 5:22, 23; 1 ಪೇತ್ರ 3:13, 14) ನೀತಿನಿಷ್ಠೆಗಳಿಲ್ಲದವರಾಗಿರುವ ಕಾರಣ ಅನೇಕ ಬಾರಿ ಸಮೃದ್ಧರಾಗುವ ದುಷ್ಟರನ್ನು ನಾವು ನಕಲು ಮಾಡುವದಾದರೆ ಸೈತಾನನು ಮೆಚ್ಚುವನು. ಅದರ ಬದಲಿಗೆ, ಯೆಹೋವನ ನೀತಿಯ ಮಟ್ಟಗಳನ್ನು ತ್ಯಜಿಸಲು ಬರುವ ಶೋಧನೆಗಳನ್ನು ತಡೆಗಟ್ಟುವುದರ ಮೂಲಕ ಆತನ ಹೆಸರನ್ನು ನಾವು ಗೌರವಿಸೋಣ. (ಚೆಫನ್ಯ 2:3) ಹೆಚ್ಚೆಂದರೆ ಅವರು ಪ್ರಾಪಂಚಿಕ ಸಮೃದ್ಧಿಯನ್ನು ಮಾತ್ರ ಗಳಿಸಿಕೊಳ್ಳಬಹುದಾದ ಕಾರಣದಿಂದ, ದುಷ್ಟರ ಯಶಸ್ಸಿನ ಮೇಲೆ ನಾವು ಖಿನ್ನರಾಗುವುದು ಬೇಡ. ಮತ್ತು ಅದು ಯಾವ ಬೆಲೆಯದ್ದಾಗಿರುವುದು? ಅದನ್ನು ಸಾರ್ವಭೌಮ ಕರ್ತನಾದ ಯೆಹೋವನಲ್ಲಿ ನಂಬಿಕೆಯನ್ನು ಪ್ರದರ್ಶಿಸುವವರ ಮೂಲಕ ಅನುಭವಿಸಲಾಗುವ ಆತ್ಮಿಕ ಸಮೃದ್ಧಿಗೆ ಹೋಲಿಸತೊಡಗಲೂ ಆಗುವುದಿಲ್ಲ.