ಕಳ್ಳತನವು ಯಾಕೆ ಹೆಚ್ಚುತ್ತಾ ಇದೆ?
ರಿಯೋಡಿಜನೈರೋ—ಆದಿತ್ಯವಾರ, ಅಕ್ಟೋಬರ 18, 1992. ಕೊಪಕಬಾನ ಮತ್ತು ಇಪನೆಮ ಎಂಬ ಪ್ರಸಿದ್ಧ ಸಮುದ್ರ-ತೀರಗಳು ಜನರಿಂದ ಕಿಕ್ಕಿರಿದು ತುಂಬಿವೆ. ಹಠಾತ್ತನೆ, ಸಮುದ್ರ-ತೀರದಲ್ಲಿರುವ ಜನರಿಂದ ಬೆಲೆಬಾಳುವ ಏನನ್ನಾದರೂ ಕದಿಯುತ್ತಾ ಮತ್ತು ತಮ್ಮಲ್ಲೇ ಜಗಳವಾಡುತ್ತಾ ಇದ್ದ ಯೌವನಸ್ಥರ ಗುಂಪುಗಳು ಸಮುದ್ರ-ತೀರಗಳನ್ನು ಅತಿಕ್ರಮಿಸುತ್ತವೆ. ಹತ್ತಿರದಲ್ಲಿ ನಿಂತಿದ್ದ ಅಧಿಕಾಂಶ ಪೊಲೀಸರು—ನಿಸ್ಸಹಾಯಕರಾಗಿದ್ದರು. ರಿಯೋಡಿಜನೈರೋದಲ್ಲಿನ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆ, ಅದು ಹಗಲು ಹೊತ್ತಿನ ಒಂದು ಘೋರ ಸ್ವಪ್ನವಾಗಿದೆ.
ನಿಜವಾಗಿಯೂ, ಸೊತ್ತುಗಳನ್ನು ಒಳಗೊಂಡಿರುವ ದುಷ್ಕೃತ್ಯವು ಈಗ ಸಾಮಾನ್ಯವಾಗಿದೆ. ದೊಡ್ಡ ಪಟ್ಟಣಗಳಲ್ಲಿ, ಕಳ್ಳರು ಯೌವನಸ್ಥರಿಂದ ಕದಿಯುವುದಕ್ಕೆ—ಅವರ ಸದ್ದುಮಾಡದ ಜೋಡುಗಳನ್ನು ಸಹ—ಪ್ರಸಿದ್ಧರಾಗಿದ್ದಾರೆ, ಕೆಲವೊಮ್ಮೆ ಅವರನ್ನು ಕೊಲ್ಲುತ್ತಾರೆ ಕೂಡ. ಜನರು ಮನೆಯಲ್ಲಿರಲಿ ಅಥವಾ ಇಲ್ಲದಿರಲಿ ಕಳ್ಳರು ಮನೆಗಳಿಗೆ ನುಗ್ಗುತ್ತಾರೆ. ಅಪ್ರಾಮಾಣಿಕರಾದ ಮನೆಗೆಲಸಗಿತ್ತಿಯರು, ಮನೆಯಲ್ಲಿ ಎಲ್ಲಿ ವಸ್ತುಗಳು ಇಡಲ್ಪಟ್ಟಿವೆ ಎಂದು ತಿಳಿದುಕೊಂಡ ಅನಂತರ, ಆಭರಣಗಳನ್ನು ಮತ್ತು ಹಣವನ್ನು ಕದ್ದು, ಅನಂತರ ಕಾಣೆಯಾಗುತ್ತಾರೆ. ಗುಂಪುಗಳು ಅಂಗಡಿಗಳನ್ನು ಲೂಟಿಮಾಡುತ್ತವೆ. ಬ್ರಜಿಲ್‌ನಲ್ಲಿ ಅಧಿಕ ಸಂಖ್ಯೆಯ ಅಪಹರಣಗಳಲ್ಲಿ (ಕಿಡ್‌ನ್ಯಾಪ್) ನೋಡುವಂತೆ, ಸುಸಂಸ್ಥಾಪಿತ ಗುಂಪುಗಳು ಜನರನ್ನು ಸಹ ಅಪಹರಿಸುತ್ತವೆ. ಮತ್ತು ನಿಮ್ಮ ಸ್ವಂತ ಅನುಭವದಿಂದ ಮತ್ತು ನಿಮ್ಮ ಸಮಾಜದಲ್ಲಿ ಏನು ಸಂಭವಿಸಿದೆಯೋ ಅದರಿಂದ ಇನ್ನಿತರ ಉದಾಹರಣೆಗಳನ್ನು ನೀವು ಪ್ರಾಯಶಃ ಕೊಡಸಾಧ್ಯವಿದೆ. ಆದರೆ ಇಷ್ಟೊಂದು ಕಳ್ಳತನವು ಏಕೆ?
ಜನರು ಕದಿಯುತ್ತಾರೆ ಏಕೆ?
ಹೆಚ್ಚುತ್ತಿರುವ ಬಡತನ ಮತ್ತು ಅಮಲೌಷಧಗಳ ಉಪಯೋಗವು ಎರಡು ಪ್ರಾಮುಖ್ಯ ಕಾರಣಗಳಾಗಿದ್ದಾಗ್ಯೂ, ಇದಕ್ಕೆ ಉತ್ತರವು ಅಷ್ಟೊಂದು ಸಮಗ್ರವಾಗಿ ಸ್ಪಷ್ಟವಾಗಿಗಿಲ್ಲ. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕಾ ಗಮನಿಸುವುದು: “ದುಷ್ಕೃತ್ಯಕ್ಕಾಗಿ ಏಕ ಕಾರಣದ ಹುಡುಕಾಟವು ಹೆಚ್ಚಾಗಿ ನಿಷ್ಫಲವೆಂದು ತೊರೆಯಲಾಗಿದೆ.” ಹಾಗಿರುವುದಾದರೂ, ಕಳ್ಳತನದಂತಹ ಸಮಸ್ಯೆಗಳು “ಸಾಮಾನ್ಯ ಜೀವಿತದ ಪ್ರಾಪಂಚಿಕ ಪ್ರತಿಫಲಗಳಿಂದ ಮತ್ತು ಸಾಧನೆಗಳಿಂದ ಹೊರಹಾಕಲ್ಪಟ್ಟಿದ್ದೇವೆಂಬ, ಯುವಕರ ಅಯೋಗ್ಯ ಮತ್ತು ಅಸಮಾಧಾನದ ಭಾವನೆಗಳಿಗೆ ನೇರವಾಗಿ ಕಾರಣ” ಎಂಬದಾಗಿ ಅದೇ ಕೃತಿಯು ಸೂಚಿಸುತ್ತದೆ. ಹೌದು, ಬಳಕೆದಾರರ ಪ್ರಚಂಡವಾದ ಒತ್ತಡದ ಕಾರಣದಿಂದಾಗಿ, ಅನೇಕರು ಅವರು ಅಪೇಕ್ಷಿಸುವ ವಸ್ತುಗಳನ್ನು, ಕದಿಯುವಿಕೆಯ ಹೊರತಾಗಿ, ಬೇರೆ ರೀತಿಯಲ್ಲಿ ಹೊಂದುವ ದಾರಿಗಾಣದವರಾಗಿದ್ದಾರೆ.
ಆದರೂ, ಆಸಕ್ತಿಭರಿತವಾಗಿಯೇ, ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯ ನಿರ್ದೇಶಿಸುವುದು: “ಅವರ ಜೀವಿತದ ಮಾರ್ಗವು ಮುಂದುವರಿಯುವುದು ಎಂದು ನಂಬುವ ಜನರ ಸಾಂಪ್ರದಾಯಿಕ ಸಮಾಜಗಳಲ್ಲಿ ದುಷ್ಕೃತ್ಯದ ಪ್ರಮಾಣವು ತುಲನಾತ್ಮಕವಾಗಿ ಸಮಸ್ಥಿತಿಯಲ್ಲಿ ಉಳಿಯುತ್ತದೆ. ಜನರು ಎಲ್ಲಿ ವಾಸಿಸಬೇಕು ಮತ್ತು ಸಂಪಾದನೆಗಾಗಿ ಏನು ಮಾಡಬೇಕು ಎಂಬುದರ ಕುರಿತು ಎಲ್ಲಿ ತ್ವರಿತವಾದ ಬದಲಾವಣೆಗಳು ಸಂಭವಿಸುತ್ತಿವೆಯೋ ಆ ಸಮಾಜಗಳಲ್ಲಿ ದುಷ್ಕೃತ್ಯದ ಪ್ರಮಾಣಗಳು ಹೆಚ್ಚಾಗುವ ಪ್ರವೃತ್ತಿಯುಳ್ಳದ್ದಾಗಿವೆ—ಮತ್ತು ಅವರ ಭವಿಷ್ಯತ್ತಿನ ಕ್ಷೇಮದ ಕುರಿತಾದ ಅವರ ನಿರೀಕ್ಷೆಗಳಲಿಯ್ಲೂ.” ಎನ್‌ಸೈಕ್ಲೊಪೀಡಿಯ ಕೂಡಿಸಿದ್ದು: “ಯುವಜನರು ಕೆಲವೇ ಉದ್ಯೋಗ ಸದವಕಾಶಗಳನ್ನು ಹೊಂದಿದ್ದಾರೆ. ಕಳ್ಳತನದಿಂದ ಬರುವ ಶೀಘ್ರ ಮತ್ತು ರೋಮಾಂಚಕಾರಿ ಲಾಭಗಳಿಗೆ ಹೋಲಿಸುವಾಗ, ದೊರಕುವಂತಹ ನೈಪುಣ್ಯತೆಗಳಿಲ್ಲದ ಉದ್ಯೋಗಗಳು ಜಡವಾಗಿ ಕಾಣುತ್ತವೆ. ತೀರ ಕೊಂಚವನ್ನೇ ಕಳಕೊಳ್ಳುವಂಥಾ ಜೀವನವು ಅವರದ್ದಾಗಿರುವ ಕಾರಣ ಯುವಜನರು ಬಂಧನವನ್ನು ಎದುರಿಸಲು ಕೂಡ ಸಿದ್ಧರಾಗಿರುತ್ತಾರೆ.”
ನಿರುದ್ಯೋಗಿಗಳಾದ ಅನೇಕರು ಅಥವಾ ಕಡಿಮೆ ವೇತನದ ಉದ್ಯೋಗಗಳಲ್ಲಿರುವವರು ಕಳ್ಳತನವನ್ನು ಮಾಡುವುದಿಲ್ಲವಾದರೂ, ಉನ್ನತ ಹುದ್ದೆಗಳಲ್ಲಿರುವವರು ಮತ್ತು ಕಾರ್ಮಿಕರಲ್ಲಿ ಅಧಿಕ ಸಂಖ್ಯಾತರು, ಅದು ಅವರ ವೇತನದ ಭಾಗವೋ ಎಂಬಂತೆ ಕೆಲಸಗಳಲ್ಲಿ ಕೊಂಚ ಕೊಂಚವಾಗಿ ಎಗುರಿಸುತ್ತಾರೆ. ವಾಸ್ತವದಲ್ಲಿ, ಕೆಲವು ವಂಚನೆಯಿಂದ ಕೂಡಿದ ಪದ್ಧತಿಗಳಿಗಾಗಿ, ನಿರ್ದಿಷ್ಟವಾದ ಒಂದು ಸಾಮಾಜಿಕ ಅಂತಸ್ತು ಆವಶ್ಯಕವಾಗಿದೆ. ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಮತ್ತು ವ್ಯಾಪಾರಸ್ಥರು, ದೋಷಾರೋಪಣೆಗೆ ಒಳಗಾಗಿರುವವರಲ್ಲಿ, ಭಾರಿ ಮೊತ್ತಗಳ ಹಣವು ಒಳಗೊಂಡಿರುವ ಹಗರಣಗಳ ಕುರಿತಾಗಿ ನೀವು ಕೇಳಿಲ್ಲವೋ? ಕಳ್ಳತನವು ಕೇವಲ ಬಡವರಿಗೆ ಮಾತ್ರ ಸೀಮಿತವಾಗಿಲ್ಲ ಎಂಬದರ ಕುರಿತು ಯಾವುದೇ ಪ್ರಶ್ನೆಯಿಲ್ಲ.
ಕಳ್ಳತನವನ್ನು ಹೆಚ್ಚು ಸ್ವೀಕಾರಯೋಗ್ಯವಾಗಿ ಮಾಡುವ ಪ್ರವೃತ್ತಿಯುಳ್ಳ, ಚಲನಚಿತ್ರಗಳು ಮತ್ತು ಟಿವೀ ಕಾರ್ಯಕ್ರಮಗಳು ಆಗಿಂದಾಗ್ಗೆ ಕಳ್ಳತನದ ಕುರಿತಾದ ಒಂದು ಹಾಸ್ಯವನ್ನು (ಕಳ್ಳನು ತಾನೇ ನಾಯಕನಾಗಿರಲೂಬಹುದಾದ) ಮಾಡುತ್ತವೆಂಬದನ್ನು ಜ್ಞಾಪಿಸಿಕೊಳ್ಳಿರಿ. ಅಂತಹವುಗಳನ್ನು ವೀಕ್ಷಿಸುವುದು ಬಹುಶಃ ಮನೋರಂಜನೆಯೆಂದು ಹೆಸರಿಸಿ ಅಂಗೀಕರಿಸಬಹುದು, ಆದರೆ ಅದೇ ಸಮಯದಲ್ಲಿ, ಕದಿಯುವುದು ಹೇಗೆಂಬುದನ್ನು ಪ್ರೇಕ್ಷಕರಿಗೆ ತೋರಿಸಲಾಗುತ್ತದೆ. ದುಷ್ಕೃತ್ಯವು ಬಹುಶಃ ಪ್ರಯೋಜನಕರವಾಗಿದೆ ಎಂದು ಕೌಶಲ್ಯದಿಂದ ತಿಳಿಸುವ ಒಂದು ಉಪಾಯವು ಇದಲ್ಲವೋ? ನಿಸ್ಸಂದೇಹವಾಗಿ, ಅತ್ಯಾಸೆ, ಸೋಮಾರಿತನ, ಮತ್ತು ಪ್ರತಿಯೊಬ್ಬರೂ ಕಳ್ಳತನವನ್ನು ನಿರ್ಭೀತಿಯೊಂದಿಗೆ ಮಾಡುತ್ತಾರೆ ಎಂಬ ವಿಚಾರವು ಕಳ್ಳತನದ ಅಭಿವೃದ್ಧಿಗೆ ನೆರವಾಗಿದೆ. ಸ್ಪಷ್ಟವಾಗಿಗಿಯೇ, ಸ್ವಾರ್ಥಚಿಂತನೆ ಮತ್ತು ಹಣದಾಸೆಯು ಪ್ರಬಲವಾಗಿರುವ, ಮುಂತಿಳಿಸಲ್ಪಟ್ಟ “ಕಠಿನ ಸಮಯಗಳಲ್ಲಿ” ನಾವು ಜೀವಿಸುತ್ತಿದ್ದೇವೆ.—2 ತಿಮೊಥೆಯ 3:1-5.
ಕದಿಯ ಬಾರದು
ಲೋಕದಲ್ಲಿ ವಿಕೃತ ಮೌಲ್ಯಗಳು ಇದ್ದಾಗ್ಯೂ, ಆಜೆಗ್ಞೆ ವಿಧೇಯರಾಗುವುದು ಅತ್ಯಾವಶ್ಯಕವಾಗಿದೆ: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದಿರಲಿ.” (ಎಫೆಸ 4:28) ಸಂಪತ್ತು ಅಥವಾ ಸುಖಾನುಭವಗಳಿಗೆ ಹೆಚ್ಚು ಬೆಲೆಕೊಡುವ ಒಬ್ಬ ವ್ಯಕ್ತಿಯು, ಶ್ರಮಪಡುವುದಕ್ಕಿಂತ ಕಳ್ಳತನವು ಲಾಭಕರವೆಂದು ನಂಬುವುದರ ಮೂಲಕ ತನ್ನನ್ನು ಮೋಸಗೊಳಿಸಿಕೊಳ್ಳಬಹುದು. ಆದರೆ ಕಳ್ಳತನವು ದೇವರ ದೃಷ್ಟಿಯಲ್ಲಿ ಗಂಭೀರವಾದುದಾಗಿದೆ ಮತ್ತು ಒಬ್ಬನ ಜೊತೆಮಾನವನ ಕಡೆಗೆ ಪ್ರೀತಿಯ ಕೊರತೆಯನ್ನು ಬಹಿರಂಗಪಡಿಸುತ್ತದೆ. ಇನ್ನೂ, ಕ್ಷುಲ್ಲಕವಾದ ಕಳ್ಳತನವೂ ಸಹ ಒಬ್ಬನ ಹೃದಯವನ್ನು ಕಠಿನಪಡಿಸುವುದಕ್ಕೆ ಮುನ್ನಡಿಸಬಹುದು. ಮತ್ತು ಅಪ್ರಾಮಾಣಿಕನಾಗಿ ಗುರುತಿಸಲ್ಪಡುವುದರ ಕುರಿತೇನು? ಒಬ್ಬ ಕಳ್ಳನನ್ನು ನಂಬುವವರು ಯಾರು? ವಿವೇಕದಿಂದಲೇ, ದೇವರ ವಾಕ್ಯವು ಹೇಳುವುದು: “ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.”—1 ಪೇತ್ರ 4:15.
ನಿಶ್ಚಯವಾಗಿಯೂ ಕಳ್ಳತನದ ಅಭಿವೃದ್ಧಿಯನ್ನು ನೀವು ವಿಷಾದಿಸುತ್ತೀರಿ, ಆದರೆ ದುಷ್ಕೃತ್ಯವು ಹೆಚ್ಚು ಬಳಕೆಯಲ್ಲಿರುವ ಕ್ಷೇತ್ರಗಳಲ್ಲಿರುವ ಜನರು ಅದನ್ನು ಹೇಗೆ ನಿಭಾಯಿಸುತ್ತಾರೆ? ಹಿಂದೆ ಕಳ್ಳರಾಗಿದ್ದಂಥ ಕೆಲವರು ಅವರ ಜೀವನ ಶೈಲಿಯನ್ನು ಬದಲಾಯಿಸಿದ್ದಾರೆ ಹೇಗೆ? ಲೋಕವ್ಯಾಪಕವಾಗಿ ಕಳ್ಳತನವು ಎಂದಾದರೂ ಕೊನೆಗೊಳ್ಳುವುದೋ? “ಕಳ್ಳರಿಲ್ಲದ ಒಂದು ಲೋಕ,” ಎಂಬ ಹಿಂಬಾಲಿಸುವ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.