ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 10/15 ಪು. 8-11
  • ಕಾಯುವುದನ್ನು ಕಲಿಯುವುದರ ಸಮಸ್ಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಾಯುವುದನ್ನು ಕಲಿಯುವುದರ ಸಮಸ್ಯೆ
  • ಕಾವಲಿನಬುರುಜು—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕಾಯುವುದನ್ನು ಕಲಿಯುವುದರ ವಿವೇಕ
  • ಅನೇಕರಿಗೆ, ಒಂದು ಹೊಸ ಪಂಥಾಹ್ವಾನ
  • ಇತರರಿಂದ ಕಲಿಯುವುದು
  • ಶ್ರೇಷ್ಠ ಹೋರಾಟವನ್ನು ಹೋರಾಡುವುದು
  • ಪ್ರತಿಯೊಂದು ವಿಷಯದಲ್ಲಿ ಕಾಯುವುದನ್ನು ಕಲಿಯುವುದು
  • ನೀವು ತಾಳ್ಮೆಯಿಂದ ಕಾಯಲು ಸಿದ್ಧರಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಒಳ್ಳೇ ಆರ್ಥಿಕ ವ್ಯವಸ್ಥೆ ಯಾವತ್ತಾದ್ರೂ ಬರುತ್ತಾ?
    ಇತರ ವಿಷಯಗಳು
  • ಆರ್ಥಿಕ ಸಂಕಷ್ಟದ ಸಮಯಗಳಲ್ಲಿ ಅವಿವಾಹಿತತೆ
    ಕಾವಲಿನಬುರುಜು—1995
  • ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಕಾವಲಿನಬುರುಜು—1993
w93 10/15 ಪು. 8-11

ಕಾಯುವುದನ್ನು ಕಲಿಯುವುದರ ಸಮಸ್ಯೆ

ನಾವು ಬಯಸುವಂಥ ವಿಷಯಗಳಿಗಾಗಿ ಕಾಯುವುದನ್ನು ಕಲಿಯುವುದು ಮಾನವರಾದ ನಾವೆಲ್ಲರೂ ಅಂಗೀಕರಿಸಲು ಅಗತ್ಯವಿರುವ ಅತ್ಯಂತ ಕಠಿನವಾದ ಪಾಠಗಳಲ್ಲಿ ಪ್ರಾಯಶಃ ಒಂದಾಗಿದೆ. ಚಿಕ್ಕ ಮಕ್ಕಳು ಸ್ವಭಾವತಃ ತಾಳ್ಮೆಯಿಲ್ಲದವರಾಗಿದ್ದಾರೆ. ಅವರ ಕಣ್ಣು ಆಕರ್ಷಿಸುವುದೆಲ್ಲಾ ಅವರಿಗೆ ಬೇಕು, ಮತ್ತು ಅದನ್ನು ಆ ಕೂಡಲೇ ಅಪೇಕ್ಷಿಸುತ್ತಾರೆ! ಆದರೆ ಅನುಭವದಿಂದ ನೀವು ತಿಳಿಯಬಹುದಾದಂತೆ, ಅಗತ್ಯಪಡಿಸುವ ಪ್ರತಿಯೊಂದೂ ದೊರಕುವುದಿಲ್ಲವೆಂಬದು ಜೀವಿತದ ವಸ್ತುಸ್ಥಿತಿಯಾಗಿದೆ. ನ್ಯಾಯಸಮ್ಮತವಾದ ಅಪೇಕ್ಷೆಗಳ ಸಂಬಂಧದಲ್ಲಿಯೂ ಸಹ, ಅವುಗಳನ್ನು ತೃಪ್ತಿ ಪಡಿಸಲು ಯೋಗ್ಯ ಸಮಯದ ತನಕ ಕಾಯುವದನ್ನು ನಾವು ಕಲಿಯಬೇಕು. ಅನೇಕರು ಈ ಪಾಠವನ್ನು ಕಲಿಯುತ್ತಾರೆ; ಇತರರು ಎಂದಿಗೂ ಹಾಗೆ ಮಾಡುವುದಿಲ್ಲ.

ದೈವಿಕ ಮೆಚ್ಚಿಗೆಯನ್ನು ಗಳಿಸಲು ಅಪೇಕ್ಷಿಸುವ ಜನರು ಕಾಯುವುದನ್ನು ಕಲಿಯಲು ನಿರ್ದಿಷ್ಟವಾದ ಕಾರಣಗಳನ್ನು ಹೊಂದಿದ್ದಾರೆ. ಕ್ರೈಸ್ತಪೂರ್ವದಲ್ಲಿದ್ದ ಯೆಹೋವನ ಒಬ್ಬ ಸೇವಕನಾದ ಯೆರೆಮೀಯನು ಇದನ್ನು ಒತ್ತಿಹೇಳಿದನು: “ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವದು ಒಳ್ಳೇದು.” ಅನಂತರ ಕ್ರೈಸ್ತ ಶಿಷ್ಯ ಯಾಕೋಬನು ಅಂದದ್ದು: “ಆದುದರಿಂದ, ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿಯಿಂದಿರಿ.”—ಪ್ರಲಾಪಗಳು 3:26; ಯಾಕೋಬ 5:7.

ದೈವಿಕ ಉದ್ದೇಶಗಳನ್ನು ಪೂರ್ಣಗೊಳಿಸಲು ಯೆಹೋವನು ತನ್ನದೇ ಆದ ಕಾಲತಖ್ತೆಯನ್ನು ಹೊಂದಿದ್ದಾನೆ. ನಿರ್ದಿಷ್ಟವಾದ ವಿಚಾರಗಳನ್ನು ಮಾಡುವುದರಲ್ಲಿ ಆತನ ನಿಗದಿತ ಸಮಯದ ತನಕ ಕಾಯಲು ನಾವು ಅಸಮರ್ಥರಾಗಿರುವುದಾದರೆ, ನಾವು ಅಸಮಾಧಾನಿಗಳೂ ಮತ್ತು ಅಸಂತುಷ್ಟರೂ ಆಗುವೆವು, ಇದು ಆನಂದವನ್ನು ನಿಗ್ರಹಿಸುತ್ತದೆ. ಆನಂದದ ಹೊರತು ದೇವರ ಒಬ್ಬ ಸೇವಕನು ಆತ್ಮಿಕವಾಗಿ ಬಲಹೀನನಾಗುತ್ತಾನೆ, ನೆಹೆಮೀಯನು ಆತನ ಸ್ವದೇಶದ ಜನರಿಗೆ ಹೇಳಿದಂತೆ: “ಕರ್ತನಲ್ಲಿ ಆನಂದವೇ ನಿಮ್ಮ ಆಶ್ರಯವಾಗಿದೆ.”—ನೆಹೆಮೀಯ 8:10, ದ ನ್ಯೂ ಇಂಗ್ಲಿಷ್‌ ಬೈಬಲ್‌.

ಕಾಯುವುದನ್ನು ಕಲಿಯುವುದರ ವಿವೇಕ

ಒಂಟಿಗ ವ್ಯಕ್ತಿಗಳು ಮದುವೆಯಾಗಲು ಬಯಸುವುದು ಅಥವಾ ಮಕ್ಕಳಿಲ್ಲದ ದಂಪತಿಗಳು ಒಂದು ಕುಟುಂಬವನ್ನು ಬೆಳೆಸಲು ಬಯಸುವುದು ಒಂದು ಸ್ವಾಭಾವಿಕ ಅಪೇಕ್ಷೆಯಾಗಿದೆ. ಅಲ್ಲದೆ, ಯೋಗ್ಯವಾದ ಪ್ರಾಪಂಚಿಕ ಅಗತ್ಯತೆಗಳು ಅಥವಾ ಅಪೇಕ್ಷೆಗಳನ್ನು ತೃಪ್ತಿಪಡಿಸಲು ನಿಮ್ಮನ್ನು ಕೇಂದ್ರೀಕರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪು ಇರುವುದಿಲ್ಲ. ಆದರೂ, ಅತಿ ಬೇಗನೆ ಈ ವಿಷಯಗಳ ವ್ಯವಸ್ಥೆಯ ಕೊನೆಗೊಳ್ಳುತ್ತದೆಂದು ನಂಬುವುದರಿಂದ ಮತ್ತು ಬರಲಿರುವ ಆ ಹೊಸ ವ್ಯವಸ್ಥೆಯಲ್ಲಿ ದೇವರು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸು’ ವುದರಿಂದ, ಈ ಅಪೇಕ್ಷೆಗಳಲ್ಲಿ ಕೆಲವನ್ನು ಪೂರ್ಣಗೊಳಿಸಲಿಕ್ಕಾಗಿ ಅನೇಕ ಕ್ರೈಸ್ತರು ಹೆಚ್ಚು ಯೋಗ್ಯವಾದ ಒಂದು ಸಮಯದ ತನಕ ಕಾಯಲು ನಿರ್ಧರಿಸಿದ್ದಾರೆ.—ಕೀರ್ತನೆ 145:16.

ಆದರೂ, ಈ ಕ್ರೈಸ್ತ ನಿರೀಕ್ಷೆಯ ಭದ್ರವಾದ ತಳಹದಿಯಿಲ್ಲದ ಜನರು, ಕಾಲವಿಳಂಬಕ್ಕಾಗಿ ಚಿಕ್ಕ ಕಾರಣಗಳನ್ನು ಹುಡುಕುತ್ತಾರೆ. ಯಾರಿಂದ “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಬರುತ್ತವೋ ಆ ಯೆಹೋವನಲ್ಲಿ ನಂಬಿಕೆಯ ಕೊರತೆಯಿಂದಾಗಿ, ಎಂದಾದರೂ ಬರುವುದೆಂದು ಅವರು ಸಂಶಯಿಸುವ ಒಂದು ಭವಿಷ್ಯತ್ತಿಗೆ ವಿಷಯಗಳನ್ನು ಮುಂದೆ ಹಾಕುವ ವಿವೇಕದ ಕುರಿತಾಗಿ ಅವರು ಪ್ರಶ್ನಿಸುತ್ತಾರೆ. “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ,” ಎಂಬ ನಿಶಿತ್ಚಾಭಿಪ್ರಾಯದಿಂದ ಅವರು ಜೀವಿಸುತ್ತಾರೆ.—ಯಾಕೋಬ 1:17; 1 ಕೊರಿಂಥ 15:32; ಯೆಶಾಯ 22:13.

ಮುಂಬರಿದ ರಾಷ್ಟ್ರಗಳಲ್ಲಿ ಜಾಹೀರಾತಿನ ವ್ಯವಹಾರವು ತತ್‌ಕ್ಷಣದ ಪ್ರತಿಫಲದ ಕಡೆಗಿರುವ ಸುಸ್ಪಷ್ಟವಾಗಿದ ಪ್ರವೃತ್ತಿಯ ಪ್ರಯೋಜನವನ್ನು ಹೊಂದುತ್ತಿದೆ. ಜನರು ತಮ್ಮನ್ನು ಅತಿಲಾಲಸೆ ಮಾಡುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಆಧುನಿಕ ಅನುಕೂಲತೆಗಳು ಮತ್ತು ಸೌಕರ್ಯಗಳು ಸಮಗ್ರವಾದ ಆವಶ್ಯಕತೆಗಳಾಗಿವೆ ಎಂದು ನಮ್ಮನ್ನು ನಂಬಿಸುವ ಮಾಡುವ ವಾಣಿಜ್ಯ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ವಿಶೇಷವಾಗಿ ಸಾಲದ ಚೀಟಿಗಳು, ಕಂತಿನ ಯೋಜನೆಗಳು, ಮತ್ತು “ಈಗಲೇ ಕೊಳ್ಳಿರಿ—ಅನಂತರ ಹಣ ನೀಡಿರಿ” ಎಂಬ ಏರ್ಪಾಡುಗಳು ವಸ್ತುಗಳೆಲವ್ಲನ್ನು ಹೊಂದಲು ಮತ್ತು ಇಂದೇ ಹೊಂದಲು ಸಾಧ್ಯವಾಗುವಂತೆ ಮಾಡುವುದರಿಂದ, ಇದನ್ನು ಹೊಂದದಿರಲು ಯಾವುದೇ ಕಾರಣವು ಇದೆಯೋ? ಎಂದು ವಾದಿಸಲಾಗಿದೆ. ಅಲ್ಲದೆ, ‘ಅತ್ಯುತ್ತಮವಾದುದನ್ನು ಹೊಂದಲು ನೀವು ಅರ್ಹರಾಗಿದ್ದೀರಿ; ನಿಮಗೆ ದಯೆತೋರಿಸಿಕೊಳ್ಳಿ! ಇಂದೇ ಆನಂದಿಸಿರಿ ಅಥವಾ ಮುಂದೆ ಎಂದಿಗೂ ಸಾಧ್ಯವಾಗದಿರಬಹುದು!’ ಹೀಗೆಂದು ಜನಪ್ರಿಯವಾಗಿ ಗುರಿನುಡಿಗಳು ಘೋಷಿಸುತ್ತವೆ.

ಈ ಮಧ್ಯೆ, ಮುಂಬರಿಯುತ್ತಿರುವ ದೇಶಗಳಲ್ಲಿ ಕೋಟಿಗಟ್ಟಲೆ ಜನರು ಜೀವನೋಪಾಯಕ್ಕೆ ಸಾಕೂಸಾಲದಷ್ಟು—ಅಥವಾ ಅದಕ್ಕಿಂತಲೂ ಕಡಿಮೆ ಪೂರೈಕೆಗಳನ್ನು ಹೊಂದುತ್ತಿದ್ದಾರೆ. ಮಾನವ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ಅಪರಿಪೂರ್ಣತೆ ಮತ್ತು ಅನ್ಯಾಯವನ್ನು ಯಾವುದಾದರೂ ಹೆಚ್ಚು ಸುಸ್ಪಷ್ಟವಾಗಿಗಿ ಒತ್ತಿಹೇಳಬಲ್ಲದೋ?

ಕಾಯಲು ಮನಸ್ಸಿಲ್ಲದ ಲಕ್ಷಾಂತರ ಜನರು—ಅಥವಾ ಹಾಗೆ ಮಾಡಲು ಯಾವ ಕಾರಣವೂ ಇಲ್ಲವೆಂದು ಕಂಡವರು—ತತ್‌ಕ್ಷಣದ ಅಪೇಕ್ಷೆಗಳನ್ನು ತೃಪ್ತಿಪಡಿಸಲು ಆಳವಾದ ಸಾಲದಲ್ಲಿ ಮುಳುಗಿರುವುದರಲ್ಲಿ ಕಾಯಲು ಕಲಿಯುವ ವಿವೇಕವು ತೋರಿಬಂದಿದೆ. ಅಸ್ವಸ್ಥತೆ ಅಥವಾ ನಿರುದ್ಯೋಗದಂತಹ ಮುಂಗಾಣದ ಸಂದರ್ಭಗಳು, ವಿಪತ್ತುಗಳಾಗಿ ಅರ್ಥೈಸಬಹುದು. ಜರ್ಮನಿಯಲ್ಲಿ ವರದಿಮಾಡಲ್ಪಟ್ಟ ಸುಮಾರು 10 ಲಕ್ಷ ವ್ಯಕ್ತಿಗಳು ದಿಕ್ಕಿಲ್ಲದೇ ಇರುವುದಕ್ಕೆ ಕಾರಣವನ್ನು, ಫ್ರಾಂಕ್‌ಫುರ್ಟರ್‌ ಆಲ್‌ಜೆಮಿನ್‌ ಜೆತುಂಗ್‌ ಎಂಬ ಜರ್ಮನಿಯ ವಾರ್ತಾಪತ್ರಿಕೆಯು ವಿವರಿಸಿದ್ದು: “ವಿಶೇಷವಾಗಿ, ದಿಕ್ಕಿಲ್ಲದಿರುವಿಕೆಯು ನಿರುದ್ಯೋಗ ಅಥವಾ ವಿಪರೀತ ಸಾಲಗಳ ಮೂಲಕ ಆಗಿಂದಾಗ್ಗೆ ಪೂರ್ವಗಾಮಿಯಾಗಿ ಆಗುತ್ತದೆ.”

ಅವರ ಬೆಲೆಪಟ್ಟಿಗಳನ್ನು ಪಾವತಿಮಾಡಲು ಅಸಮರ್ಥರಾಗಿ, ಅಂತಹ ಅನೇಕ ನಿರ್ಭಾಗ್ಯ ವ್ಯಕ್ತಿಗಳು ಮನೆ ಮತ್ತು ಸ್ವತ್ತುಗಳ ದುಃಖಕರವಾದ ನಷ್ಟವನ್ನು ಅನುಭವಿಸುತ್ತಾರೆ. ಒಮ್ಮೆಲೇ ಅಧಿಕಗೊಂಡ ಒತ್ತಡವು ಕುಟುಂಬದ ಮೇಲೆ ಬಿಕ್ಕಟ್ಟನ್ನು ತರುತ್ತದೆ. ಭದ್ರವಿಲ್ಲದ ವಿವಾಹಗಳು ಬಿರುಕುಬಿಡಲಾರಂಭಿಸುತ್ತವೆ. ಖಿನ್ನತೆಯ ಸಮಯಾವಧಿಗಳು ಮತ್ತು ಇತರ ಆರೋಗ್ಯದ ಸಮಸ್ಯೆಗಳು ಸರ್ವೇಸಾಮಾನ್ಯವಾಗುತ್ತವೆ. ಕ್ರೈಸ್ತರ ವಿಷಯದಲ್ಲಾದರೋ, ಆತ್ಮಿಕತೆಯು ಅವನತಿಹೊಂದುತ್ತಾ, ಪರಿಣಾಮವಾಗಿ, ಕೆಟ್ಟ ಯೋಚನೆ ಮತ್ತು ಅಯುಕ್ತ ನಡವಳಿಕೆಯ ಕಡೆಗೆ ಅವರನ್ನು ಮುನ್ನಡಿಸಬಹುದು. ಅವಿವೇಕತನದಿಂದ ಎಲ್ಲವನ್ನೂ ಬಯಸುವುದನ್ನು ಆರಂಭಿಸಿದ ಜನರು ಕೊನೆಗೆ ಬಹುಮಟ್ಟಿಗೆ ಏನೂ ಇಲ್ಲದವರಾಗುತ್ತಾರೆ.

ಅನೇಕರಿಗೆ, ಒಂದು ಹೊಸ ಪಂಥಾಹ್ವಾನ

“ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆಗಳೂ ಒಳಗೆ ಸೇರಿ ಆ ವಾಕ್ಯವನ್ನು ಅಡಗಿಸಿ” ಬಿಡದಂತೆ ನಾವು ಎಚ್ಚರವಾಗಿರಬೇಕೆಂದು ಯೇಸು ಸರಳವಾಗಿ ತಿಳಿಸಿದನು. (ಮಾರ್ಕ 4:19) ಆರ್ಥಿಕವಾದವುಗಳನ್ನೂ ಒಳಗೊಂಡು, ಯಾವುದರ ಕುರಿತಾಗಿ ಯೇಸು ತಿಳಿಸಿದ್ದನೋ ಆ ಚಿಂತೆಗಳನ್ನು, ತೆಗೆದುಹಾಕುವುದರಲ್ಲಿ ಯಾವುದೇ ರಾಜಕೀಯ ವ್ಯವಸ್ಥೆಯ ಸಫಲವಾಗಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಡಬೇಕು.

ಸಮತಾವಾದವನ್ನು ಈಗ ತಿರಸ್ಕರಿಸಿರುವ ಪೂರ್ವ ಯೂರೋಪಿನ ದೇಶಗಳು, ರಾಜ್ಯಸರಕಾರದಿಂದ ನಿಯಂತ್ರಿಸಲ್ಪಟ್ಟ ಆಡಳಿತದ ಮೂಲಕ ವಿಷಯಗಳನ್ನು ಸಮೀಕರಿಸಲು ಪ್ರಯತ್ನಿಸಿವೆ. ಸ್ವತಂತ್ರ ಉದ್ಯಮಗಳ ವ್ಯವಸ್ಥೆಗೆ ವ್ಯತಿರಿಕ್ತವಾಗಿ, ಹಿಂದಣ ಕಮ್ಯೂನಿಸ್ಟ್‌ ಆಳಿಕೆಯು ಆ ದೇಶಗಳಲ್ಲಿರುವ ವ್ಯಕ್ತಿಗಳಿಗೆ, ಆಗಾಗ್ಗೆ ಬಂಡವಾಳಗಾರರು ಕೊಡಲು ತಪ್ಪುತ್ತಿರುವ ಒಂದು ನಿರ್ದಿಷ್ಟವಾದ ಆರ್ಥಿಕ ಭದ್ರತೆಯನ್ನು ಒದಗಿಸಿದ್ದವು. ಆದರೂ, ಯೇಸು ಯಾವುದರ ಕುರಿತಾಗಿ ಮಾತಾಡಿದ್ದನೋ ಆ ಚಿಂತೆಗಳು, ಗ್ರಾಹಕ ಸರಕುಗಳ ನ್ಯೂನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೊಟಕುಗೊಳಿಸುವ ರೂಪದಲ್ಲಿ ಅಸ್ತಿತ್ವದಲ್ಲಿದ್ದವು.

ಈಗ, ಅಂತಹ ಅನೇಕ ದೇಶಗಳು ಗ್ರಾಹಕರ ಸದವಕಾಶಗಳಿಂದ ಆಳಲ್ಪಡುವ ಸಂಘಗಳನ್ನು ಒಳತರುತ್ತಾ, ಹೀಗೆ ಅವರ ನಾಗರಿಕರಿಗೆ ಒಂದು ಹೊಸ ಪಂಥಾಹ್ವಾನವನ್ನೊಡ್ಡುತ್ತಿದ್ದಾರೆ. ಇತ್ತೀಚಿಗಿನ ವರದಿಯೊಂದು ಹೇಳುವುದು: “ಬಳಕೆಯಲ್ಲಿ ಶೀಘ್ರವಾಗಿ ಪಾಶ್ಚಾತ್ಯ ಮಟ್ಟವನ್ನು ತಲಪಲಿಕ್ಕಾಗಿ ಅಕೃತಿಮತೆಯು ಅಪೇಕ್ಷೆಯೊಂದಿಗೆ ಒಂದುಗೂಡುತ್ತಿದೆ.” ಇದನ್ನು ಸಾಧಿಸಲು “ಪೂರ್ವ ಜರ್ಮನಿಯ, ಹೊಸ ಲೆಂಡರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಂದಿಗೂ ಬಿಡಿಸಿಕೊಳ್ಳಲಾರದಂತಹ ಸಾಲದಲ್ಲಿ ಸಿಕ್ಕಿಕೊಳ್ಳುತ್ತಿದ್ದಾರೆ.” ವರದಿಯು ಕೂಡಿಸಿದ್ದು: “ಹೊಸ ಆರ್ಥಿಕ ಸ್ವಾತಂತ್ರ್ಯಗಳ ಆರಂಭದ ಸಂಭ್ರಮದ ಅನಂತರ ಭಯ ಮತ್ತು ಹತಾಶೆಯು ಇಂದು ವ್ಯಾಪಕವಾಗಿ ಹಬ್ಬುತ್ತಿದೆ.” ಆದರೆ ಈಗ ಆ ವ್ಯವಸ್ಥೆಗಳು ಕಮ್ಯೂನಿಜಮ್‌ನಿಂದ ಬಂಡವಾಳ ಶಾಹಿಯಾಗಿ ಬದಲಾಯಿಸಲ್ಪಟ್ಟಿರುವುದಾದರೂ, ವ್ಯಾಕುಲತೆಗಳು ಹಾಗೇ ಉಳಿದಿವೆ.

ಆರ್ಥಿಕ ಸುಧಾರಣೆಗಾಗಿ, ಮಹತ್ತಾದ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವು ಹೊಸ ಸಾಧ್ಯತೆಗಳನ್ನು ತೆರೆದಿದೆ. ಆದುದರಿಂದಲೇ, ತಮ್ಮ ಸ್ವಂತ ವ್ಯಾಪಾರವನ್ನು ಆರಂಭಿಸುವ ಯೋಜನೆಗೆ ಗಂಭೀರವಾದ ಗಮನವನ್ನು ಕೊಡುವಂತೆ ಅಥವಾ ಉತ್ತಮ ಉದ್ಯೋಗಾವಕಾಶಗಳೊಂದಿಗೆ ಬೇರೊಂದು ದೇಶಕ್ಕೆ ಸ್ಥಳ ಬದಲಾಯಿಸುವಂತೆ ಅನೇಕ ವ್ಯಕ್ತಿಗಳು ಆಕರ್ಷಿಸಲ್ಪಟ್ಟಿದ್ದಾರೆ.

ಇಂತಹ ರೀತಿಯ ನಿರ್ಣಯಗಳು ವೈಯಕ್ತಿಕ ವಿಚಾರಗಳಾಗಿವೆ. ಕ್ರೈಸ್ತನೊಬ್ಬನು ತನ್ನ ಆರ್ಥಿಕ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ಅಪೇಕ್ಷಿಸುವುದು ತಪ್ಪಾಗಿರಲಾರದು. “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ” ಎಂಬದರ ಅರಿಹುಳ್ಳವನಾಗಿ, ಅವನ ಕುಟುಂಬದ ಕುರಿತಾಗಿ ಆಸಕ್ತಿ ವಹಿಸುವ ಒಂದು ಬಯಕೆಯಿಂದ ಬಹುಶಃ ಅವನು ಪ್ರಚೋದಿತನಾಗಿರಬಹುದು.—1 ತಿಮೊಥೆಯ 5:8.

ಆದುದರಿಂದ, ಇತರರು ಮಾಡುವ ನಿರ್ಣಯಗಳನ್ನು ವಿಮರ್ಶಿಸುವುದು ಅಯುಕ್ತವಾಗಿದೆ. ಅದೇ ಸಮಯದಲ್ಲಿ, ಅವರನ್ನು ಬಲೆಯಲ್ಲಿ ಸಿಕ್ಕಿಸಬಹುದಾದ ವಿಪರೀತ ಸಾಲಕ್ಕೆ ಗುರಿಯಾಗುವ ಮೂಲಕ, ಆರ್ಥಿಕ ಸಮಸ್ಯೆಗಳಿಂದ ಬಿಡುಗಡೆಯನ್ನು ಹುಡುಕುವುದು ಅವಿವೇಕತನವಾಗಿದೆ ಎಂಬುದನ್ನು ಕ್ರೈಸ್ತರು ನೆನಪಿನಲ್ಲಡಬೇಕು. ತದ್ರೀತಿಯಲ್ಲಿ, ಆತ್ಮಿಕ ಹೊಣೆಗಾರಿಕೆಗಳನ್ನು ಮತ್ತು ಅಭಿರುಚಿಗಳನ್ನು ಕಡೆಗಣಿಸುವಂತಹ ವಿಧಾನವನ್ನು ಒಳಗೊಂಡಿರುವ ಆರ್ಥಿಕ ಬಿಡುಗಡೆಯನ್ನು ಹುಡುಕುವುದು ಸಹ ತಪ್ಪಾಗಿರುತ್ತದೆ.

ಇತರರಿಂದ ಕಲಿಯುವುದು

ಎರಡನೆಯ ಲೋಕ ಯುದ್ಧವನ್ನು ಹಿಂಬಾಲಿಸಿದ ವರುಷಗಳಲ್ಲಿ, ಸಾವಿರಗಟ್ಟಲೆ ಜರ್ಮನರು ಯುದ್ಧ-ಪೀಡಿತ ಯೂರೋಪ್‌ನಿಂದ ಇತರ ದೇಶಗಳಿಗೆ, ನಿರ್ದಿಷ್ಟವಾಗಿ ಆಸ್ಟ್ರೇಲಿಯ ಮತ್ತು ಕೆನಡಕ್ಕೆ ವಲಸೆಹೋದರು. ಅದರಿಂದ ಅನೇಕರು ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಶಕ್ತರಾದರು, ಆದರೆ ಯಾವುದರ ಕುರಿತಾಗಿ ಯೇಸು ತಿಳಿಸಿದನೋ ಆ ಆರ್ಥಿಕ ವ್ಯಾಕುಲತೆಗಳನ್ನು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಅವರಲ್ಲಿ ಯಾರೂ ಶಕ್ತರಾಗಲಿಲ್ಲ. ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವುದು ಕೆಲವೊಮ್ಮೆ ಹೊಸ ಸಮಸ್ಯೆಗಳನ್ನು ಉತ್ಪತ್ತಿಮಾಡಿತು—ಮನೆಯ ಹಂಬಲ, ಒಂದು ಅಪರಿಚಿತ ಭಾಷೆ, ಹೊಸ ಆಹಾರಕ್ಕೆ ಹೊಂದಿಕೊಳ್ಳುವುದು, ಬೇರೆ ಬೇರೆ ಸಂಪ್ರದಾಯಗಳು, ಹೊಸ ಸ್ನೇಹಿತರೊಂದಿಗೆ ಸಹವರ್ತಿಸುವುದು, ಅಥವಾ ವಿವಿಧ ಮನೋಭಾವಗಳೊಂದಿಗೆ ನಿಭಾಯಿಸುವುದು.

ವಲಸೆ ಹೋದವರಲ್ಲಿ ಕೆಲವರು ಯೆಹೋವನ ಸಾಕ್ಷಿಗಳಾಗಿದ್ದರು. ಪ್ರಶಂಸನೀಯವಾಗಿ, ಅವರಲ್ಲಿ ಅಧಿಕಾಂಶ ಮಂದಿ ವಲಸೆ ಹೋಗುವಿಕೆಗೆ ಸಂಬಂಧಪಟ್ಟ ಸಮಸ್ಯೆಗಳು ಅವರ ಆತ್ಮಿಕತೆಯನ್ನು ತಡೆಯದಂತೆ ನಿರಾಕರಿಸಿದರು. ಆದರೆ ವಿನಾಯಿತಿಗಳು ಅಲ್ಲಿದ್ದವು. ಕೆಲವರು ಐಶ್ವರ್ಯದಿಂದುಂಟಾಗುವ ವಂಚನೆಯ ಪ್ರಭಾವಕ್ಕೆ ಬಲಿಪಶುಗಳಾದರು. ಅವರ ಆರ್ಥಿಕ ಕ್ಷೇಮದೊಂದಿಗೆ ಅವರ ದೇವಪ್ರಭುತ್ವ ಪ್ರಗತಿಯನ್ನು ಸಮತೂಕವಾಗಿ ಕಾಪಾಡಿಕೊಳ್ಳಲು ಸೋತುಹೋದರು.

ನಿಸ್ಸಂದೇಹವಾಗಿ, ಅವಿವೇಕತನದಿಂದ ಮಾಡಬಹುದಾದ ನಿರ್ಣಯಗಳನ್ನು ಮಾಡುವ ಮೊದಲು ನಮ್ಮ ಪರಿಸ್ಥಿತಿಯನ್ನು ಜಾಗ್ರತೆಯಿಂದ ವಿಶೇಷ್ಲಿಸುವುದರ ವಿವೇಕವನ್ನು ಇದು ದೃಷ್ಟಾಂತಿಸುತ್ತದೆ. ಕ್ರೈಸ್ತರು ಮಾಡಲು ನೇಮಿಸಲ್ಪಟ್ಟ ಎಂದಿಗೂ ಪುನರಾವರ್ತಿಸಲ್ಪಡದ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕಡಿಮೆಯಾದದ್ದನ್ನು ಮಾಡುವಂತೆ ಪ್ರಾಪಂಚಿಕ ಪ್ರವೃತ್ತಿಗಳು ನಮ್ಮನ್ನು ಆರ್ಥಿಕ ವ್ಯಾಕುಲತೆಗಳಿಂದ ಸ್ವತಂತ್ರರಾದ ನಾಗರಿಕರಿರುವ ಯಾವುದೇ ದೇಶವು ಇಲ್ಲದೇ ಇರುವುದರಿಂದ, ನಾವೆಲ್ಲಿಯೇ ಜೀವಿಸುತ್ತಿರಲಿ, ಇದು ಸತ್ಯವಾಗಿದೆ.

ಶ್ರೇಷ್ಠ ಹೋರಾಟವನ್ನು ಹೋರಾಡುವುದು

ಪೌಲನು ತಿಮೊಥೆಯನಿಗೆ ಎಚ್ಚರಿಸಿದ್ದು: “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು. ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು.” ಕೊರಿಂಥದ ಕ್ರೈಸ್ತರಿಗೆ ಆತನಂದದ್ದು: “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ಯಾವಾಗಲೂ ಕರ್ತನ ಕೆಲಸವನ್ನು ಅತ್ಯಾಸಕಿಯ್ತಿಂದ ಮಾಡುವವರಾಗಿರಿ.”—1 ತಿಮೊಥೆಯ 6:11, 12; 1 ಕೊರಿಂಥ 15:58.

ಈ ಉತ್ತಮ ಸಲಹೆಯನ್ನು ಅನುಸರಿಸುವುದು ಪ್ರಾಪಂಚಿಕತೆಯನ್ನು ಪರಿಣಾಮಕಾರಿಯಾಗಿ ಎದುರಿಸಲಿಕ್ಕಾಗಿರುವ ಅತ್ಯುತ್ತಮ ಮಾರ್ಗವಾಗಿದೆ, ಮತ್ತು ಖಂಡಿತವಾಗಿಯೂ ಕ್ರೈಸ್ತನೊಬ್ಬನಿಗೆ ಅಧಿಕವಾದದ್ದನ್ನು ಮಾಡಲಿಕ್ಕಿದೆ! ಹೆಚ್ಚು ಸಂಖ್ಯೆಯಲ್ಲಿ ರಾಜ್ಯ ಘೋಷಕರಿಲ್ಲದ ಕೆಲವು ದೇಶಗಳಲ್ಲಿ, ಸಹಸ್ರಾರು ಜನರು ಸತ್ಯದ ಕಡೆಗೆ ಕೇವಲ ಮಿತವಾದ ಅವಕಾಶಗಳನ್ನು ಹೊಂದಿದ್ದಾರೆ. ಯೇಸು ನಿಖರವಾಗಿ ಮುಂತಿಳಿಸಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ.”—ಮತ್ತಾಯ 9:37.

ಈ ದೇಶಗಳಲ್ಲಿ ಆರ್ಥಿಕ ಚಿಂತೆಗಳು ಅವರನ್ನು ಅವರ ಆತ್ಮಿಕ ಕೆಲಸದಿಂದ ಅಡದ್ಡಾರಿ ಹಿಡಿಯುವಂತೆ ಬಿಡುವ ಬದಲಾಗಿ, ಪೂರ್ಣವಾಗಿ ಚಾಲ್ತಿಯಲ್ಲಿರುವ ಸಂದರ್ಭಗಳಿಗೆ ಹೊಂದಿಕೊಳ್ಳುವ ಮೂಲಕ ಯೆಹೋವನ ಸಾಕ್ಷಿಗಳು ಪರಿಸ್ಥಿತಿಯ ಸದುಪಯೋಗವನ್ನು ಪಡೆದುಕೊಳ್ಳುತ್ತಾರೆ. ತಾತ್ಕಾಲಿಕವಾಗಿ ನಿರುದ್ಯೋಗಿಗಳಾಗಿರುವಾಗ, ಅವರಲ್ಲಿ ಅನೇಕರು ಅವರ ಸಾರುವ ಚಟುವಟಿಕೆಯನ್ನು ವಿಸ್ತರಿಸುತ್ತಾರೆ. ಯೆಹೋವನಿಗೆ ಸ್ತೋತ್ರದ ಆರ್ಭಟದ ವೃದ್ಧಿ ಮಾತ್ರವಲ್ಲದೆ, ಅವರ ಸೇವೆಯು, ಅವರ ಸ್ವಂತ ಆರ್ಥಿಕ ಸಮಸ್ಯೆಗಳೊಂದಿಗೆ ನಿಭಾಯಿಸಲು ಅಗತ್ಯವಿರುವ ಆನಂದವನ್ನು ಅವರಿಗೆ ಕೊಡುತ್ತದೆ.

ಈ ಸಾಕ್ಷಿಗಳು ಸಾರುವ ಕೆಲಸಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಮತ್ತು ಆರ್ಥಿಕ ಕಷ್ಟದೆಸೆಗಳನ್ನು ಎರಡನೇ ಸ್ಥಾನಕ್ಕೆ ವರ್ಗಾಯಿಸುತ್ತಾರೆ, ಅವರನ್ನು ಕಾಪಾಡುವಂತೆ ಸಂಪೂರ್ಣವಾಗಿ ಯೆಹೋವನಲ್ಲಿ ಅವರು ಭರವಸೆಯನ್ನಿಡುತ್ತಾರೆ ಎಂಬುದನ್ನು ಇದು ಲೋಕ ವ್ಯಾಪಕ ಸಹೋದರತ್ವಕ್ಕೆ ಪ್ರದರ್ಶಿಸುತ್ತದೆ. ಆತನ ವಾಗ್ದಾನವೇನಂದರೆ: “ಹೀಗಿರುವದರಿಂದ—ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ ಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:33.

ಸತ್ಯ ಆರಾಧನೆಯು 1919 ರಲ್ಲಿ ಪುನಃ ಸ್ಥಾಪನೆಗೊಂಡಂದಿನಿಂದ, ಆತನ ಜನರು ಧೈರ್ಯಗುಂದುವಂತೆ ಯೆಹೋವನು ಅನುಮತಿಸಿಲ್ಲ. ಕಠಿನ ಹಿಂಸೆಗಳಿಂದ ಮತ್ತು ಕೆಲವು ಸ್ಥಳಗಳಲ್ಲಿ ದಶಕಗಳಿಂದ ನಡಿಸಲ್ಪಡುತ್ತಿದ್ದ ಭೂಗತ ಚಟುವಟಿಕೆಯಿಂದ ಅವರನ್ನು ರಕ್ಷಿಸಿದ್ದಾನೆ. ಪಿಶಾಚನು ಏನನ್ನು ಹಿಂಸೆಯಿಂದ ಸಾಧಿಸಲು ಸೋತನೋ, ಅದನ್ನು ಅತ್ಯಂತ ಸೂಕ್ಷ್ಮವಾದ ಪ್ರಾಪಂಚಿಕತೆಯ ಪಾಶದ ಮೂಲಕ ಪೂರೈಸಲಾರನೆಂದು ಯೆಹೋವನ ಸಾಕ್ಷಿಗಳು ದೃಢನಿಶ್ಚಯಮಾಡಿದ್ದಾರೆ!

ಪ್ರತಿಯೊಂದು ವಿಷಯದಲ್ಲಿ ಕಾಯುವುದನ್ನು ಕಲಿಯುವುದು

ವಿಶಾಲವಾದ ರಾಜ್ಯ ಸಭಾಗೃಹಗಳು, ಅಧಿಕ ವೆಚ್ಚದ ಧ್ವನಿವರ್ಧಕ ಸಲಕರಣೆಗಳು, ಅಸೆಂಬ್ಲಿ ಹಾಲ್‌ಗಳು, ಮತ್ತು ಆಕರ್ಷಕ ಬೆತೆಲ್‌ ಮನೆಗಳು ದೇವರಿಗೆ ಗೌರವವನ್ನು ತರುತ್ತವೆ ಮತ್ತು ಆತನು ತನ್ನ ಜನರನ್ನು ಆಶೀರ್ವದಿಸುತ್ತಿದ್ದಾನೆ ಎಂಬುದಕ್ಕೆ ಒಂದು ಮೌನ ಸಾಕ್ಷಿಯನ್ನು ನೀಡುತ್ತವೆ. ಯೆಹೋವನ ಸಾಕ್ಷಿಗಳ ಕೆಲಸವು ದೀರ್ಘ ಸಮಯದಿಂದ ನಿರ್ಬಂಧಿಸಲ್ಪಟ್ಟಿರುವ ದೇಶಗಳಲ್ಲಿ, ಈ ವಿಚಾರದಲ್ಲಿ ಇತರ ದೇಶಗಳಂತೆಯೇ ಅಭಿವೃದ್ಧಿಯ ಮಟ್ಟವನ್ನು ತಲಪಲು ಅಧಿಕವಾದುದನ್ನು ಮಾಡುವಂತೆ ಅವರು ಬಯಸಬಹುದು. ಆದರೆ ಅತ್ಯಂತ ಹೆಚ್ಚು ಪ್ರಾಮುಖ್ಯತೆಯ ವಿಚಾರವೇನಂದರೆ ಅವರು ಆತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಇರುವುದು. ಒಂದು ಭೌತಿಕ ರೀತಿಯಲ್ಲಿ ದೇವರ ಆಶೀರ್ವಾದದ ಬಾಹ್ಯ ನಿರ್ದೇಶಕಗಳು ಸಕಾಲದಲ್ಲಿ ಹಿಂಬಾಲಿಸಲಿರುವುವು.

ಯೆಹೋವನ ಸೇವಕರು ಜಾಗರೂಕರಾಗಿರುವ ಅಗತ್ಯವಿದೆ, ಇಲ್ಲವಾದರೆ ವೈಯಕ್ತಿಕ ಅಪೇಕ್ಷೆಗಳನ್ನು ಬೆನ್ನಟ್ಟುವುದರಲ್ಲಿ, ನಿರ್ದಿಷ್ಟವಾದ ಭೌತಿಕ ವಸ್ತುಗಳಿಂದ ಇನ್ನೆಂದೂ ವಂಚಿತರಾಗಿರಲು ಬಯಸದ ಭಾವನೆ ಅವರಲ್ಲಿ ಹುಟ್ಟಬಹುದು. ಆರ್ಥಿಕ ಮತ್ತು ಸಾಮಾಜಿಕ ಅಸಮತೆಗಳಿಂದ ಬಿಡುಗಡೆಗಾಗಿ ಹಂಬಲಿಸುವುದು ತಿಳಿವಳಿಕೆಯುಳ್ಳದ್ದಾಗಿದೆ, ಕುರುಡರು ಪುನಃ ದೃಷ್ಟಿಸಲು, ದೀರ್ಘಕಾಲದಿಂದ ಅಸ್ವಸ್ಥರಾಗಿರುವವರು ಪುನರಾರೋಗ್ಯಕ್ಕಾಗಿ, ಖಿನ್ನರಾದವರು ಒಂದು ಉಜ್ವಲ ಭವಿಷ್ಯಕ್ಕಾಗಿ, ಮತ್ತು ಮರಣದಲ್ಲಿ ಪ್ರಿಯರಾದವರನ್ನು ಕಳೆದುಕೊಂಡವರು ಅವರನ್ನು ಪುನಃ ನೋಡಲು ಹಂಬಲಿಸುತ್ತಾರೆ.

ಪರಿಸ್ಥಿತಿಗಳ ಕಾರಣದಿಂದ, ಪ್ರತಿಯೊಬ್ಬ ಕ್ರೈಸ್ತನೂ ಕೆಲವೊಂದು ವಿಷಯಗಳಲ್ಲಿ ಅವನ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಯೆಹೋವನ ಹೊಸ ಲೋಕಕ್ಕಾಗಿ ಕಾಯುವಂತೆ ಒತ್ತಾಯಿಸಲ್ಪಟ್ಟಿದ್ದಾನೆ. ಇದು ನಮ್ಮನ್ನು ಹೀಗೆ ಕೇಳಿಕೊಳ್ಳುವಂತೆ ಮಾಡುತ್ತದೆ, ‘ನನಗೆ ಅನ್ನವಸ್ತ್ರಗಳಿರುವುದಾದರೆ, ಈ ವಿಚಾರಗಳಿಂದ ನಾನು ತೃಪ್ತನಾಗಿರಲು ಮತ್ತು ಆರ್ಥಿಕ ಸಮಸ್ಯೆಗಳಿಂದ ಬಿಡುಗಡೆಗಾಗಿ ಕಾಯುವ ಅಪೇಕ್ಷೆಯುಳ್ಳವನಾಗಿರಬಾರದೋ?’—1 ತಿಮೊಥೆಯ 6:8.

ಯೆಹೋವನಲ್ಲಿ ಸಂಪೂರ್ಣವಾಗಿ ವಿಶ್ವಾಸವನ್ನಿಡುವ ಕ್ರೈಸ್ತರು ಅವರು ಕಾಯಲು ಸಿದ್ಧರಾಗಿರುವುದಾದರೆ, ಅವರ ಯೋಗ್ಯವಾದ ಎಲ್ಲಾ ಆಕಾಂಕ್ಷೆಗಳು ಮತ್ತು ಆವಶ್ಯಕತೆಗಳು ಅತಿ ಬೇಗನೆ ಈಡೇರಿಸಲ್ಪಡುತ್ತವೆ ಎಂದು ಭರವಸೆಯಿಂದಿರಸಾಧ್ಯವಿದೆ. ಯಾರೊಬ್ಬನಿಗೂ ವ್ಯರ್ಥವಾಗಿ ಕಾಯಲಿಕ್ಕಿರುವುದಿಲ್ಲ. ಪೌಲನ ಮಾತುಗಳನ್ನು ನಾವು ಪುನರಾವರ್ತಿಸುತ್ತೇವೆ: “ಸ್ಥಿರ ಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕಿಯ್ತಿಂದ ಮಾಡುವವರಾಗಿರಿ.”—1 ಕೊರಿಂಥ 15:58.

ಆದುದರಿಂದ ಕಾಯುವುದನ್ನು ಕಲಿಯುವುದು ನಿಜವಾಗಿಯೂ ಅಂತಹ ಒಂದು ದೊಡ್ಡ ಸಮಸ್ಯೆಯಾಗಿದೆಯೋ?

[ಪುಟ 10 ರಲ್ಲಿರುವ ಚಿತ್ರ]

ಕಾಯುವುದನ್ನು ಕಲಿಯುವುದು ನಿಮ್ಮ ಜೀವಿತವನ್ನು ರಕ್ಷಿಸಬಲ್ಲದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ