“ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ”
“ಪ್ರಚಲಿತ ಪ್ರಮಾಣಗಳಲ್ಲಿ, ಅಮೆರಿಕದ 40% ಮಕ್ಕಳು, ಅವರು 18ಕ್ಕೆ ತಲುಪುವುದರ ಮೊದಲು ತಮ್ಮ ಹೆತ್ತವರ ವಿವಾಹಗಳು ಕೊನೆಗೊಳ್ಳುವದನ್ನು ನೋಡಲಿದ್ದಾರೆ.” (ಸೈಎನ್ಸ್, ಜೂನ್ 7, 1991) ಭೀತಿಗೊಳಿಸುವ ಎಂತಹ ಅಂಕಿ ಅಂಶ! ಇದು ಯಾಕೆ ಸಂಭವಿಸುತ್ತದೆ?
ಪರಿವಾರದ ಮತ್ತು ಅಂತಿಮ ಇಷ್ಟಪತ್ರ ನ್ಯಾಯಸ್ಥಾನದ ನ್ಯಾಯಾಧೀಶ ಎಡರ್ಡ್ವ್ ಎಮ್. ಜಿನ್ಜ್ಬರ್ಗ್, ದ ಬಾಸ್ಟನ್ ಗ್ಲೋಬ್ ನೊಂದಿಗಿನ ಸಂದರ್ಶನವೊಂದರಲ್ಲಿ ತನ್ನ ದೃಷ್ಟಿಕೋನವನ್ನು ನೀಡಿದರು. ಅವರಂದದ್ದು: “ನಾವೊಂದು ಸ್ವಾರ್ಥಿ ಸಮಾಜ. ‘ನನಗೆ’ ನಾವು ಬಯಸುತ್ತೇವೆ. ನಾವು ಕೇಳುವುದು, ‘ಇದರಲ್ಲಿ ಈಗ ನನಗೆ ಏನಿದೆ?’ ನಾವು ತತ್ಕ್ಷಣದ ಸುಖಾನುಭವ ಬಯಸುತ್ತೇವೆ.”
ಅಂತಹ ಅಪ್ರೌಢ ಸ್ವಾರ್ಥವು ವಿವಾಹದಲ್ಲಿ ಕಹಿ ಮನೋಭಾವಕ್ಕೆ ಮತ್ತು ಸಂಘರ್ಷಣೆಗೆ ನಡಿಸುತ್ತದೆ. ವಿಚ್ಛೇದದ ನ್ಯಾಯಸ್ಥಾನಕ್ಕೆ ಕಟ್ಟಕಡೆಗೆ ದಂಪತಿಗಳು ತಲುಪುವಾಗ ಪತಿ ಮತ್ತು ಪತ್ನಿಯು ಸಮರ್ಥನೆಯನ್ನು ಬಯಸುತ್ತಾರೆ ಎಂದು ನ್ಯಾಯಾಧೀಶ ಜಿನ್ಜ್ಬರ್ಗ್ ಹೇಳುತ್ತಾರೆ. ಅವರು ಸರಿಯೆಂದೂ, ಅವರ ಸಹಭಾಗಿಯು ತಪ್ಪೆಂದೂ ಯಾರಾದರೊಬ್ಬರು ಅವರಿಗೆ ಹೇಳಲು ಅವರು ಬಯಸುತ್ತಾರೆ. “ನೀನು ಹೋರಾಟದಲ್ಲಿ ವಿಜಯಿಯಾಗಿದ್ದೀ” ಎಂದು ಯಾರಾದರೊಬ್ಬರು ಹೇಳಲು ಅವರು ಆಶಿಸುತ್ತಾರೆ.
ಅವರ ಮಾತುಗಳು ಪ್ರೇರಿತ ಜ್ಞಾನೋಕ್ತಿಯನ್ನು ನಮಗೆ ನೆನಪಿಸುತ್ತವೆ: “ಅನ್ಯಾಯಹೊಂದಿದ ಸಹೋದರನು ಬಲವಾದ ಪಟ್ಟಣಕ್ಕಿಂತಲೂ ಅಸಾಧ್ಯ.” (ಜ್ಞಾನೋಕ್ತಿ 18:19) ಹೌದು, ವಿವಾಹವೊಂದರಲ್ಲಿ ಘರ್ಷಣೆಯು ಸ್ಫೋಟಿಸಿದಾಗ, ಹೋರಾಡುವ ಪಕ್ಷಗಳು ಅತಾರ್ಕಿಕವೂ, ಕಠೋರವೂ ಆಗಿರಸಾಧ್ಯವಿದೆ. ಕೆಲವೊಮ್ಮೆ, ಆಕ್ರಮಣಕ್ಕೊಳಪಟ್ಟ “ಬಲವಾದ ಪಟ್ಟಣ” ದೋಪಾದಿ ಅವರು ವಿನಾಯಿತಿಗಳನ್ನು ಮಾಡಲು ಕಠಿಣವಾಗಿ ನಿರಾಕರಿಸುವರು.
ವಿಷಯಗಳು ಈ ರೀತಿಯಲ್ಲಿ ಇರಬೇಕಾಗಿವೆಯೋ? ಇಲ್ಲ, ಅಲ್ಲೊಂದು ಬದಲಿ ಇದೆ. ಆರಂಭದಿಂದಲೇ ಎರಡೂ ಪಕ್ಷಗಳು ಅಪೊಸ್ತಲ ಪೌಲನ ಮಾತುಗಳನ್ನು ಆಲಿಸುವಾಗ, ವಿವಾಹಗಳು ಭದ್ರವೂ, ಬಾಳುವಂತಹವುಗಳೂ ಆಗಿರುತ್ತವೆ: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.” (ಎಫೆಸ 4:32) ಇಂಥ ಗುಣಗಳನ್ನು ಬೆಳೆಸುವುದು ಸುಲಭವೇ? ಯಾವಾಗಲೂ ಅಲ್ಲ. ಆದರೆ ವಿಚ್ಛೇದವು ಎಷ್ಟೊಂದು ಸುಲಭ? ಭಗ್ನಗೊಂಡ ವಿವಾಹವೊಂದರ ಭಾವನಾತ್ಮಕ ಮತ್ತು ಆರ್ಥಿಕ ಹೊರೆಗಳು ಎಷ್ಟೊಂದು ವೇದನಾಮಯವಾಗಿವೆ? ಮತ್ತು ತಮ್ಮ ವಯಸ್ಕ ಜೀವಿತದೊಳಗೆ ಕೆಲವೊಮ್ಮೆ ಅವರ ಹೆತ್ತವರ ವಿಚ್ಛೇದದ ಗಾಯದ ಕಲೆಗಳನ್ನು ಕೊಂಡೊಯ್ಯುವ ಮಕ್ಕಳ ಕುರಿತಾಗಿ ಏನು?
ವಿವಾಹವೊಂದನ್ನು ಸುರಕ್ಷಿತವಾಗಿಡಲು ಮತ್ತು “ಬಲವಾದ ಪಟ್ಟಣ” ದಂತೆ ಒಬ್ಬರು ಇನ್ನೊಬ್ಬರೆಡೆಗೆ ಹಠವಾದಿಗಳಾಗಿರದಂತೆ ಇರಲು ಜೊತೆಗಾರರಿಬ್ಬರೂ ಕೆಲಸಮಾಡುವದು ಎಷ್ಟೋ ಉತ್ತಮವಾಗಿದೆ. ಪೌಲನ ಹಿತೋಕ್ತಿಯು ಕ್ರೈಸ್ತರಿಗೆ, ವಿಶೇಷವಾಗಿ ವಿವಾಹಿತ ದಂಪತಿಗಳಿಗೆ ಅನ್ವಯಿಸುತ್ತದೆ: “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:14.
[ಪುಟ 32 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/J. G. Heck