ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 2/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • ಭಿನ್ನ ಮನೋಭಾವಗಳನ್ನು ಬೆಳೆಸಿಕೊಂಡಂಥ ಸಹೋದರರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಯೆಹೋವನಿಗೆ ಸ್ವೀಕಾರಯೋಗ್ಯವಾಗಿರುವ ಯಜ್ಞಗಳನ್ನು ಅರ್ಪಿಸುವುದು
    ಕಾವಲಿನಬುರುಜು—1999
  • ಭಾಗ 3
    ದೇವರ ಮಾತನ್ನು ಆಲಿಸಿ
  • ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಅದೊಂದು ಕಟ್ಟುಕಥೆನಾ?
    ಕಾವಲಿನಬುರುಜು: ಏದೆನ್‌ ತೋಟ ನಿಜವಾಗ್ಲೂ ಇತ್ತಾ ಅಥವಾ ಕಟ್ಟುಕಥೆನಾ?
ಇನ್ನಷ್ಟು
ಕಾವಲಿನಬುರುಜು—1994
w94 2/1 ಪು. 31

ವಾಚಕರಿಂದ ಪ್ರಶ್ನೆಗಳು

‘ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು’ ಎಂದು ದೇವರು ಕಾಯಿನನಿಗೆ ಎಚ್ಚರಿಸಿದ್ದು, ಒಂದು ಕಾಡು ಮೃಗ ಮತ್ತು ಅದರ ಬೇಟೆಯೊಂದಕ್ಕೆ ಪ್ರಾಸಂಗಿಕವಾಗಿ ಪ್ರಸ್ತಾವಿಸಿದಂತೆ ಭಾಸವಾಗುತ್ತದೆ. (ಆದಿಕಾಂಡ 4:7) ಜಲಪ್ರಲಯದ ಮೊದಲು ಪ್ರಾಣಿಗಳು ಕೇವಲ ಸಸ್ಯಗಳನ್ನು ತಿನ್ನುತ್ತಿದ್ದರೆ, ಆ ಭಾಷೆ ಯಾಕೆ ಬಳಸಲ್ಪಟ್ಟಿತು?

ಮೋಶೆಯಿಂದ ಬರೆಯಲ್ಪಟ್ಟ ಪುಸ್ತಕಗಳಲ್ಲಿ, ಅವುಗಳ ಐತಿಹಾಸಿಕ ಹಿನ್ನೆಲೆಯಲ್ಲಿ ವಿಚಿತ್ರವಾಗಿ ಹೊಂದಾಣಿಕೆಯಿಲ್ಲದ್ದಾಗಿರುವಂತೆ ಭಾಸವಾಗುವ ಕೆಲವೊಂದು ವಾಸ್ತವಾಂಶಗಳು ಯಾ ಐತಿಹಾಸಿಕ ಬೆಳವಣಿಗೆಗಳನ್ನು ಪ್ರತಿಬಿಂಬಿಸುವ ಹಲವಾರು ವಚನಗಳನ್ನು ನಾವು ಕಂಡುಕೊಳ್ಳುತ್ತೇವೆ.

ಉದಾಹರಣೆಗೆ, ಆದಿಕಾಂಡ 2:10-14ರಲ್ಲಿನ ದಾಖಲೆಯು ಏದೆನ್‌ ತೋಟದ ಕುರಿತು ಭೌಗೋಳಿಕ ವಿವರಣೆಯನ್ನು ಕೊಡುತ್ತದೆ. ಒಂದು ನದಿಯು “ಅಶ್ಶೂರ್‌ ದೇಶದ ಮುಂದೆ ಹರಿಯುವದು” ಎಂದು ಮೋಶೆಯು ಬರೆದನು. ಆದರೆ ಜಲಪ್ರಲಯದ ನಂತರ ಜನಿಸಿದ ಶೇಮನ ಮಗ ಅಶ್ಶೂರ್‌ನಿಂದ ಅಶ್ಶೂರ್ಯ ದೇಶವೆಂಬ ಹೆಸರು ಬಂದಿರುತ್ತದೆ. (ಆದಿಕಾಂಡ 10:8-11, 22; ಯೆಹೆಜ್ಕೇಲ 27:23; ಮೀಕ 5:6) ಅವನ ವಾಚಕರಿಗೆ ಪರಿಚಿತವಾಗಿರುವ ಒಂದು ಪ್ರದೇಶವನ್ನು ಸೂಚಿಸಲು ಮೋಶೆಯು ಸರಳವಾಗಿಯೇ “ಅಶ್ಶೂರ್ಯ” ಪದವನ್ನು ಅವನ ನಿಖರವಾದ ಪ್ರೇರಿತ ದಾಖಲೆಯಲ್ಲಿ ಬಳಸಿದನೆಂಬುದು ವ್ಯಕ್ತ.

ಆದಿಕಾಂಡದ ಆರಂಭದ ಅಧ್ಯಾಯಗಳಿಂದ ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಆದಾಮ, ಹವ್ವರು ಪಾಪಗೈದು, ಉದ್ಯಾನವನದಿಂದ ಹೊರಗಟ್ಟಲ್ಪಟ್ಟ ನಂತರ, ಹಿಂತೆರಳಿ ಬಾರದಂತೆ ಯೆಹೋವನು ಅವರನ್ನು ತಡೆದನು. ಹೇಗೆ? ಆದಿಕಾಂಡ 3:24 ಹೇಳುವುದು: “ಅದಲ್ಲದೆ ಜೀವನವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಆತನು ಏದೆನ್‌ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.” ಇಲ್ಲಿ “ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿ” ಗಮನಿಸಿರಿ. ದೇವರು ಕತ್ತಿಗಳನ್ನು ಕಂಡುಹಿಡಿದನೋ?

ನಾವು ಯಾವುದನ್ನು ಕತ್ತಿಗಳೆಂದು ತಿಳಿದುಕೊಂಡಿದ್ದೇವೊ ಅದನ್ನು ಮಾಡುವುದರಲ್ಲಿ ನಮ್ಮ ಪ್ರೀತಿಯ ನಿರ್ಮಾಣಿಕನು ಪ್ರಥಮನು ಎಂದು ನಾವು ತೀರ್ಮಾನಿಸುವ ಜರೂರಿ ನಮಗಿಲ್ಲ. ದೇವದೂತರುಗಳ ಮುಂದುಗಡೆಯಲ್ಲಿ ಧಗಧಗನೆ ಪ್ರಜ್ವಲಿಸುವ ಏನೋ ಒಂದು ತಿರುಗುತ್ತಿರುವದನ್ನು ಆದಾಮ, ಹವ್ವರು ನೋಡಿದರು. ಅದು ನಿಖರವಾಗಿ ಏನಾಗಿತ್ತು? ಮೋಶೆಯು ಆದಿಕಾಂಡ ಪುಸ್ತಕ ಬರೆಯುವ ಸಮಯದೊಳಗಾಗಿ, ಕತ್ತಿಗಳು ಬಹಳ ಸುಪ್ರಸಿದ್ಧವಾಗಿದ್ದವು ಮತ್ತು ಯುದ್ಧೋದ್ಯಮದಲ್ಲಿ ಬಳಸಲ್ಪಡುತ್ತಿದ್ದವು. (ಆದಿಕಾಂಡ 31:26; 34:26; 48:22; ವಿಮೋಚನಕಾಂಡ 5:21; 17:13) ಹೀಗೆ “ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿ” ಎಂಬ ಮೋಶೆಯ ಮಾತುಗಳು ಏದೆನಿನ ಪ್ರವೇಶದ್ವಾರದಲ್ಲಿ ಅಸ್ತಿತ್ವದಲ್ಲಿದ್ದ ಸಂಗತಿಯನ್ನು ಕೆಲವೊಂದು ಮಟ್ಟಿಗೆ ಚಿತ್ರಿಸಿಕೊಳ್ಳಲು ಅವನ ವಾಚಕರಿಗೆ ಸಾಧ್ಯಮಾಡಿತು. ಮೋಶೆಯ ದಿವಸಗಳಲ್ಲಿ ಜ್ಞಾತವಾಗಿದ್ದ ಸಮಾಚಾರವು ಅಂತಹ ವಿಷಯಗಳ ತಿಳಿವಳಿಕೆಗೆ ನೆರವನ್ನಿತಿತ್ತು. ಮತ್ತು ಮೋಶೆಯು ಬಳಸಿದ ಭಾಷೆಯು ನಿಷ್ಕೃಷ್ಟವಾಗಿದ್ದಿರಬೇಕು ಯಾಕಂದರೆ ಅದನ್ನು ಬೈಬಲಿನಲ್ಲಿ ಯೆಹೋವನು ಸೇರಿಸಿದ್ದಾನೆ.—2 ತಿಮೊಥೆಯ 3:16.

ಈಗ ಆದಿಕಾಂಡ 4:7ರ ಕುರಿತಾಗಿ ಏನು? ಅಲ್ಲಿ ದೇವರು ಕಾಯಿನನಿಗೆ ಎಚ್ಚರಿಸಿದ್ದು: “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.” ಗಮನಿಸಲ್ಪಟ್ಟಂತೆ, ಹಸಿದಿರುವ ಒಂದು ಕಾಡುಮೃಗವು ಥಟ್ಟನೆ ಮೇಲೆರಗಲು ಮತ್ತು ಬೇಟೆಯನ್ನು ನುಂಗಲು ಹೊಂಚಿಹಾಕುವ ಚಿತ್ರಣವನ್ನು ಆ ಭಾಷೆಯು ವರ್ಣಿಸುತ್ತಿರುವಂತೆ ಭಾಸವಾಗುತ್ತದೆ.

ಆದಾಗ್ಯೂ, ಆದಾಮ, ಹವ್ವರು ಎಲ್ಲಾ ಪ್ರಾಣಿಗಳೊಂದಿಗೆ ಸಮಾಧಾನದಿಂದ ಇದ್ದರು ಎನ್ನುವುದಕ್ಕೆ ಬೈಬಲಿನ ಪುರಾವೆಯು ನಿರ್ದೇಶಿಸುತ್ತದೆ. ಕೆಲವೊಂದು ಜೀವಿಗಳು ಮಾನವರ ಸುತ್ತಮುತ್ತಲೂ ನೆಮ್ಮದಿಯಿಂದ ಇದ್ದಿರಬಹುದು, ಸಾಮೀಪ್ಯತೆಯಲ್ಲಿ ಪ್ರಯೋಚಿತರಾಗುತ್ತಿದ್ದಿರಲೂಬಹುದು. ಬೇರೆಯವುಗಳು ಕಾಡು ಮೃಗಗಳಾಗಿದ್ದು, ಮಾನವರಿಂದ ದೂರದಲ್ಲಿ ತಮ್ಮ ಇರು ನೆಲೆಯನ್ನು ಸ್ವಾಭಾವಿಕವಾಗಿ ಹುಡುಕಿದವು. (ಆದಿಕಾಂಡ 1:25, 30; 2:19) ಆದರೂ, ಯಾವುದೇ ಪ್ರಾಣಿಯು ಇತರ ಪ್ರಾಣಿಗಳನ್ನಾಗಲಿ ಯಾ ಮನುಷ್ಯರ ಮೇಲಾಗಲಿ ಹೊಂಚುಹಾಕಿದ್ದನ್ನು ಬೈಬಲು ಸೂಚಿಸುವುದಿಲ್ಲ. ಮೂಲದಲ್ಲಿ, ಪ್ರಾಣಿಗಳಿಗೆ ಮತ್ತು ಮಾನವರಿಗೆ ಹೀಗೆ ಇಬ್ಬರಿಗೂ ಸಸ್ಯಗಳನ್ನು ಆಹಾರದೋಪಾದಿ ದೇವರು ವಿಶಿಷ್ಠವಾಗಿ ನೇಮಕಾತಿ ಮಾಡಿದ್ದನು. (ಆದಿಕಾಂಡ 1:29, 30; 7:14-16) ಆದಿಕಾಂಡ 9:2-5 ಸೂಚಿಸುವಂತೆ, ಜಲಪ್ರಲಯದ ಅನಂತರದ ತನಕ ಇದು ಬದಲಾಗಲಿಲ್ಲ.

ಹಾಗಾದರೆ, ಆದಿಕಾಂಡ 4:7 ರಲ್ಲಿ ನಾವು ಓದುವಂತೆ, ಕಾಯಿನನಿಗೆ ದೇವರ ಎಚ್ಚರಿಕೆಯ ಕುರಿತಾಗಿ ಏನು? ಬೇಟೆಯಾಡುವ ಮೃಗವೊಂದು ಹೊಂಚುಹಾಕಿದ್ದ ಮತ್ತು ತನ್ನ ಬೇಟೆಯ ಮೇಲೆ ಎರಗಲು ಸಿದ್ಧವಾಗಿದ್ದ ಚಿತ್ರಣವು ನಿಶ್ಚಯವಾಗಿಯೂ ಮೋಶೆಯ ದಿನಗಳಲ್ಲಿ ಸುಲಭವಾಗಿ ಅರ್ಥವಾಗುತಿದ್ತಿರ್ದಬಹುದು, ಮತ್ತು ನಾವು ಕೂಡ ಅದನ್ನು ಅರ್ಥಮಾಡಿಕೊಳ್ಳುತ್ತೇವೆ. ಆದುದರಿಂದ ಪುನಃ, ಜಲಪ್ರಲಯಾನಂತರದ ಲೋಕದೊಂದಿಗೆ ಪರಿಚಿತರಾಗಿರುವ ವಾಚಕರಿಗೆ ಹೊಂದಿಕೆಯಾದ ಭಾಷೆಯನ್ನು ಮೋಶೆಯು ಬಳಸುತ್ತಿದ್ದಿರಬಹುದು. ಮತ್ತು ಅಂಥ ಜೀವಿಯೊಂದನ್ನು ಕಾಯಿನನು ಎಂದಿಗೂ ನೋಡದೆ ಇದ್ದರೂ ಕೂಡ, ಆತನಲ್ಲಿದ್ದ ಪಾಪಭರಿತ ಆಶೆಯನ್ನು ಒಂದು ಹಸಿದಿರುವ, ಅತ್ಯಾಶೆಯ ಪ್ರಾಣಿಯೊಂದಕ್ಕೆ ಸರಿದೂಗಿಸಿದ್ದರಿಂದ ಒಂದು ಎಚ್ಚರಿಕೆಯ ಅಂಶವನ್ನು ಮುಂತರಲು ಅವನು ಶಕ್ತನಾಗಿದ್ದಿರಬಹುದು.

ಖಂಡಿತವಾಗಿಯೂ, ನಮ್ಮ ಮೇಲೆ ಪ್ರಭಾವಬೀರಬೇಕಾದ ಪ್ರಧಾನ ಅಂಶಗಳು ಇವುಗಳಾಗಿರತಕ್ಕದ್ದು: ಕಾಯಿನನಿಗೆ ಎಚ್ಚರಿಸುವುದರಲ್ಲಿ ದೇವರ ದಯೆ, ನಮ್ರತೆಯಿಂದ ಬುದ್ಧಿವಾದವನ್ನು ಸ್ವೀಕರಿಸುವುದರ ಮೂಲ್ಯತೆ, ಮತ್ಸರವು ಹೇಗೆ ಸುಲಭವಾಗಿ ಒಬ್ಬನನ್ನು ಭೃಷ್ಟಗೊಳಿಸಬಲ್ಲದು, ಮತ್ತು ನಮಗಾಗಿ ಶಾಸ್ತ್ರವಚನಗಳಲ್ಲಿ ದೇವರು ಇಟ್ಟಿರುವ ಇನ್ನಿತರ ದೈವಿಕ ಎಚ್ಚರಿಕೆಗಳನ್ನು ಎಷ್ಟೊಂದು ಗಂಭೀರವಾಗಿ ನಾವು ತೆಗೆದುಕೊಳ್ಳತಕ್ಕದ್ದು.—ವಿಮೋಚನಕಾಂಡ 18:20; ಪ್ರಸಂಗಿ 12:12; ಯೆಹೆಜ್ಕೇಲ 3:17-21; 1 ಕೊರಿಂಥ 10:11; ಇಬ್ರಿಯ 12:11; ಯಾಕೋಬ 1:14, 15; ಯೂದ 7, 11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ