ರಾಜ್ಯ ಘೋಷಕರು ವರದಿ ಮಾಡುತ್ತಾರೆ
ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅವನು ಅನುಸರಿಸಿದನು
“ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು,” ಎಂಬುದಾಗಿ ಹೇಳಿದಾಗ, ಇಸ್ರಾಯೇಲಿನ ಅರಸನಾದ ದಾವೀದನು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿದನು. (ಕೀರ್ತನೆ 26:11) ತನ್ನ ಸಮಗ್ರತೆಯನ್ನು ಕಾಪಾಡಿಕೊಂಡದ್ದಕ್ಕಾಗಿ ದೇವರು ಅವನಿಗೆ ಅನುಗ್ರಹ ತೋರಿಸಿದನು. ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡಿದ್ದಕ್ಕಾಗಿ ಯೆಹೋವನು ಯೇಸುವನ್ನೂ ಆಶೀರ್ವದಿಸಿದನು, ಮತ್ತು ಕೊಲಂಬಿಯದಲ್ಲಿ, ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸಿದ ಮತ್ತು ದೇವರ ಚಿತ್ತವನ್ನು ಮಾಡಲು ನಿಶ್ಚಯಿಸಿದ ಒಬ್ಬ ಯುವಕನನ್ನು ಆತನು ಆಶೀರ್ವದಿಸಿದನು. ಈ ಯೌವನಸ್ಥನು ವರದಿಸುವುದು:
“ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ನಾನು ತೊಡಗಿದಾಗ, ಕ್ಯಾತೊಲಿಕ್ ಶಾಲೆಯೊಂದರಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿದ್ದೆ. ಹಾಗಿದ್ದರೂ, ನಾನು ಮ್ಯಾಸ್ ವ್ರತಾಚರಣೆಯನ್ನು ಹಾಜರಾದಾಗ, ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸಿತು, ಆದುದರಿಂದ ನಾನು (ಒಬ್ಬ ಪಾದ್ರಿಯಾಗಿದ್ದ) ಶಾಲಾಧ್ಯಕ್ಷ, ಮಾರ್ಗದರ್ಶನಾ ಸಲಹೆಗಾರ, ಮತ್ತು ನನ್ನ ಗುಂಪಿನ ಹಿರೇ ಮಾನಿಟರ್ ಬಳಿಗೆ ಹೋಗಿ, ವ್ರತಾಚರಣೆಗೆ ಹಾಜರಾಗುವುದರಿಂದ ನನಗೆ ವಿನಾಯಿತಿ ಕೊಡುವಂತೆ ಕೇಳಿಕೊಂಡೆ. ನನಗೆ ವಿನಾಯಿತಿ ದೊರೆತರೂ, ಹಾಜರಾಗುವಂತೆ ಕೆಲವರು ನನ್ನನ್ನು ಬಲವಂತಪಡಿಸಲು ಪ್ರಯತ್ನಿಸಿದರು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ನನ್ನ ದೀಕ್ಷಾಸ್ನಾನದ ಬಳಿಕ ಒಡನೆ ಒತ್ತಡವು ಹೆಚ್ಚಾಯಿತು. ನನ್ನನ್ನು ಶಾಲೆಯಿಂದ ಹೊರಗೆ ಹಾಕಿದರೆ, ಮನೆಯಿಂದ ಕಳುಹಿಸಿಬಿಡುವ ಬೆದರಿಕೆಯನ್ನು ನನ್ನ ತಂದೆಯು ಹಾಕಿದರು. ನನಗಾಗಿ ವಿಶ್ವವಿದ್ಯಾನಿಲಯದ ಶಿಕ್ಷಣ ಮತ್ತು ವೃತ್ತಿಪರ ಜೀವನೋಪಾಯ ಅವರ ಮನಸ್ಸಿನಲ್ಲಿತ್ತು.
“ಕ್ಯಾತೊಲಿಕ್ ಕರ್ತವ್ಯಗಳನ್ನು ಪಾಲಿಸಲು ತಪ್ಪುವವರ ಕುರಿತು ಸತತ ಎಚ್ಚರಿಕೆಗಳನ್ನು ಶಾಲಾಧ್ಯಕ್ಷರು ನೀಡಿದರು. ವರ್ಷದ ಮೊದಲ ಪೂಜೆಗಾಗಿ ಸಮಯವಾದಾಗ, ಅದು ಕೊನೆಗೊಳ್ಳುವ ತನಕ ನಾನು ಅಡಗಿಕೊಂಡೆ. ಆಮೇಲೆ ನಾನು ಶಿಕ್ಷಕನಿಗೆ (ಒಬ್ಬ ಪಾದ್ರಿ) ಶಾಲೆ ಮತ್ತು ಯೆಹೋವನ ಸಾಕ್ಷಿಗಳು (ಇಂಗ್ಲಿಷ್ನಲ್ಲಿ ಲಭ್ಯವಿದೆ) ಎಂಬ ಬ್ರೋಷರನ್ನು ನೀಡಿದೆ ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವುದರಿಂದ, ವ್ರತಾಚರಣೆಯನ್ನು ಹಾಜರಾಗಲು ನನಗೆ ಸಾಧ್ಯವಿಲ್ಲ ಎಂದು ಅವನಿಗೆ ಹೇಳಿದೆ. ಅವನಂದದ್ದು: ‘ಇನ್ನೊಂದು ಶಾಲೆಗಾಗಿ ಹುಡುಕುವುದನ್ನು ನೀನು ಆರಂಭಿಸುವುದು ಒಳ್ಳೆಯದು.’ ಶಾಲೆಯಿಂದ ಹೊರಹಾಕಲ್ಪಡುವುದು ನನ್ನ ತಂದೆಯಿಂದ ನನ್ನ ಮನೆಯಿಂದ ಹೊರಗೆ ಹಾಕಲ್ಪಡುವುದನ್ನು ಅರ್ಥೈಸುವುದೆಂದು ನನಗೆ ಗೊತ್ತಿತ್ತು. ಆದರೂ, ನಾನು ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ನನ್ನ ಶಾಲಾಸಂಗಾತಿಗಳಿಗೆ ಪೂರ್ತ ಸಾಕ್ಷಿ ನೀಡುವುದನ್ನು ಮುಂದುವರಿಸಿದೆ.
“ರಜಾ ಕಾಲವು ಬಂದಿತು. ಆಮೇಲೆ, ರಜೆಯ ಬಳಿಕ ಶಾಲೆಯಲ್ಲಿ, ಮತ್ತೆ ವ್ರತಾಚರಣೆಯ ಸಮಯವು ಅದಾಗಿತ್ತು. ಶಾಲಾಧ್ಯಕ್ಷನು ಮತ್ತು ಇತರ ಪಾದ್ರಿಗಳು ಪ್ರಾರ್ಥನಾ ಮಂದಿರದ ಹೊರಗೆ, ಪಾಪ ನಿವೇದನೆಗಳನ್ನು ಕೇಳಲು ಸಿದ್ಧರಾಗಿದ್ದರು. ನಾನು ಬಹುಮಟ್ಟಿಗೆ ಭಯದಿಂದ ಸ್ಥೈರ್ಯಗೆಟ್ಟಿದ್ದೆ. ನಾನು ಒಳಗೆ ಹೋಗಿ ಕುಳಿತುಕೊಂಡೆ, ಆದರೆ ನನ್ನ ಮನಸ್ಸಾಕ್ಷಿಯು ನನ್ನನ್ನು ಪೀಡಿಸಿತು. ಹಾಡುವುದು ಆರಂಭವಾದಾಗ, ‘ನಾನಿಲ್ಲಿ ಏನು ಮಾಡುತ್ತಿದ್ದೇನೆ? ಯೆಹೋವನು ನನ್ನ ದೇವರಾಗಿದ್ದಾನೆ. ನಾನು ಹೇಡಿಯಾಗಿದ್ದು ಆತನಿಗೆ ದ್ರೋಹ ಬಗೆಯಲು ಸಾಧ್ಯವಿಲ್ಲ. ಆತನನ್ನು ಆಶಾಭಂಗಪಡಿಸಲು ನನಗೆ ಸಾಧ್ಯವಿಲ್ಲ. ಆತನು ನನ್ನನ್ನು ತೊರೆದುಬಿಡಲಾರನು,’ ಎಂದು ನಾನು ಯೋಚಿಸಿದೆ. ನಾನು ಧೈರ್ಯಕ್ಕಾಗಿ ಪ್ರಾರ್ಥಿಸಿದೆ. ಆಮೇಲೆ, ನಾನು ಪ್ರಾರ್ಥನಾ ಮಂದಿರದ ಹೊರಗೆ ಹೋಗಿ ಪಾಪ ನಿವೇದನಾ ಸಾಲಿನಲ್ಲಿ ನಿಂತುಕೊಂಡೆ. ಶಾಲಾಧ್ಯಕ್ಷರ ಬಳಿಗೆ ನಾನು ಹೋದಾಗ, ‘ಟೀಚರ್, ನಾನು ಪಾಪ ನಿವೇದನೆ ಮಾಡಲು ಬರುವುದಿಲ್ಲ’ ಎಂದು ಅವನಿಗೆ ಹೇಳಿದೆ. ‘ನಾನು ಹಾಗೆ ನೆನಸಿದೆ,’ ಎಂದು ಅವನು ಹೇಳಿದನು. ಪರಿಣಾಮಗಳನ್ನು ಅನುಭವಿಸಲು ನಾನು ಸಿದ್ಧನಾಗಿದ್ದೇನೆ ಆದರೆ ನನ್ನ ಮನಸ್ಸಾಕ್ಷಿಯು ವ್ರತಾಚರಣೆಯಲ್ಲಿ ಭಾಗವಹಿಸಲು ನನ್ನನ್ನು ಬಿಡದು ಎಂದು ಅವನಿಗೆ ಹೇಳಿದೆ. ಬೈಬಲಿನಿಂದ ನಾನು ಕಲಿತಿದ್ದ ವಿಷಯಗಳ ವಿರುದ್ಧ ಹೋಗಲು ನನಗೆ ಸಾಧ್ಯವಿರಲಿಲ್ಲ.
“ಅವನು ನನ್ನನ್ನು ದಿಟ್ಟಿಸು ನೋಡಿ, ಮುಗುಳ್ನಕ್ಕು ಹೇಳಿದ್ದು: ‘ನಾನು ನಿನ್ನನ್ನು ಮೆಚ್ಚುತ್ತೇನೆ. ನೀವೆಲ್ಲಾ ಸಾಕ್ಷಿಗಳು ಮೆಚ್ಚಿಕೆಗೆ ಅರ್ಹರಾಗಿದ್ದೀರಿ. ನಿಮಗೆ, ದೇವರು ಆದ್ಯನಾಗಿದ್ದಾನೆ, ಮತ್ತು ಏನೇ ಸಂಭವಿಸಲಿ ಆತನ ನಿಯಮಗಳಿಗೆ ವಿಧೇಯರಾಗಲು ನೀವು ಸಿದ್ಧರಾಗಿದ್ದೀರಿ. ಇದನ್ನು ಮಾಡುತ್ತಾ ಮುಂದುವರಿ. ನೀನು ಬಹಳ ಉತ್ತಮವಾಗಿ ಕಾರ್ಯಮಾಡುತ್ತಿದ್ದಿ. ಎಲ್ಲಾ ಕ್ಯಾತೊಲಿಕರು ನಿನ್ನಂತೆ ಇಂತಹ ಹುರುಪನ್ನು, ದೇವರಿಗಾಗಿ ಇಂತಹ ಪ್ರೀತಿಯನ್ನು ಪ್ರದರ್ಶಿಸುತ್ತಿರಬೇಕೆಂದು ನಾನು ಬಯಸುತ್ತೇನೆ. ಈಗಿನಿಂದ ನೀನು, ನಮ್ಮ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುವುದರಿಂದ ವಿಮುಕ್ತನಾಗಿದ್ದಿ.’ ನಾನೆಷ್ಟು ಆನಂದಭರಿತನಾದೆ! ನನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ವಿಧೇಯನಾಗಿರುವ ನನ್ನ ದೃಢ ಸಂಕಲ್ಪವನ್ನು ಯೆಹೋವನು ಆಶೀರ್ವದಿಸಿದ್ದನು.
“ಮರುದಿನ ಶಾಲಾಧ್ಯಕ್ಷರು ವಿದ್ಯಾರ್ಥಿಗಳಿಗೆ ಹೇಳಿದ್ದು: ‘ಇತರ ಧರ್ಮಗಳು ನಮಗಿಂತ ಮುಂದಿವೆ. ನಾವು ಯಾಕೆ ಅವರಂತೆ ಹುರುಪುಳ್ಳವರೂ, ದೇವರಿಗಾಗಿ ಆಳವಾದ ಪ್ರೀತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆತನನ್ನು ಸೇವಿಸುವ ಬಯಕೆಯುಳ್ಳವರೂ ಆಗಿಲ್ಲ? ಇದು ನಮ್ಮ ಹೃದಯಗಳಲ್ಲಿ ಇರಬೇಕಾದ ವಿಷಯವಾಗಿದೆ.’
“ಅಂತಿಮವಾಗಿ ಶಾಲಧ್ಯಕ್ಷನನ್ನು ರೋಮಿಗೆ ವರ್ಗಾವಣೆ ಮಾಡಲಾಯಿತು, ಮತ್ತು ಹೊಸ ಶಾಲಾಧ್ಯಕ್ಷನು ನನ್ನ ಭಾಗವಹಿಸದಿರುವಿಕೆಯನ್ನು ಅಲಕ್ಷಿಸಿದನು. ಪದವೀಧರ ಶಿಕ್ಷಣದ ತರುವಾಯ ಪೂರ್ಣ ಸಮಯದ ಶುಶ್ರೂಷೆಯ ನನ್ನ ಗುರಿಯನ್ನು ಸಾಧಿಸಲು ನನ್ನನ್ನು ಸ್ವತಂತ್ರವಾಗಿ ಬಿಡುತ್ತಾ, ತಂದೆಯು ಮನೆಯನ್ನು ಬಿಟ್ಟು ಹೋದರು.”
ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸಿದ ಈ ಯೌವನಸ್ಥನನ್ನು ಯೆಹೋವನು ಆಶೀರ್ವದಿಸಿದನು. ಆತನ ಚಿತ್ತವನ್ನು ಮಾಡಲು ಪ್ರಯತ್ನಿಸುವವರೆಲ್ಲರನ್ನು ಆತನು ಅದೇ ರೀತಿಯಲ್ಲಿ ಆಶೀರ್ವದಿಸುವನು.—ಜ್ಞಾನೋಕ್ತಿ 3:5, 6.