ವಿಶ್ವಾಸದ ಪರವಾಗಿ ವ್ಯಕ್ತಪಡಿಸಲ್ಪಟ್ಟ ಅಭಿಪ್ರಾಯಗಳು
ಕಳೆದ ಶತಮಾನವು ಅಂತ್ಯಗೊಂಡಂತೆ, ವಿಜ್ಞಾನ, ತತ್ವಜ್ಞಾನ ಮತ್ತು ಐಹಿಕನೀತಿಯನ್ನು ಬೆಂಬಲಿಸುವ ಧ್ವನಿಗಳು, ದೇವರಲ್ಲಿ ವಿಶ್ವಾಸ ಮತ್ತು ಬೈಬಲಿನ ಪ್ರೇರಣೆಯ ಮೇಲೆ ಒಂದು ಹಾನಿಕರ ಪ್ರಭಾವವನ್ನು ಬೀರುತ್ತಿದ್ದವು.
ಆದರೆ, ಅವು ವ್ಯಕ್ತಪಡಿಸಲ್ಪಟ್ಟ ಏಕಮಾತ್ರ ಅಭಿಪ್ರಾಯಗಳಾಗಿರಲಿಲ್ಲ. ನಾಸ್ತಿಕತೆಯ ಬದಲಿಗೆ ದೇವರಲ್ಲಿ ವಿಶ್ವಾಸವನ್ನು ಬೆಂಬಲಿಸಿ ಹೆಚ್ಚನ್ನು ಹೇಳಬಹುದು ಎಂದು ಅನೇಕ ಸಂಶೋಧನೆಗಾರರು ಕಂಡುಹಿಡಿದರು. ಅವರ ಅಧ್ಯಯನಗಳು ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆಯೆಂದು ಹೇರಳವಾದ ರುಜುವಾತುಗಳನ್ನು ಪ್ರಕಟಪಡಿಸಿದವು.
ಈ ವಿಷಯದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಒಬ್ಬ ಪ್ರಧಾನ ವ್ಯಕ್ತಿ, ಸಿ. ಟಿ. ರಸಲ್ ಆಗಿದ್ದರು. ದ ಡಿವೈನ್ ಪ್ಲ್ಯಾನ್ ಆಫ್ ದಿ ಏಜಸ್ ನ ಅವರ 1886 ರ ಸಂಪುಟವನ್ನು ಲಕ್ಷಗಟ್ಟಲೆ ಜನರು ಓದಿದರು. ಅದರಲ್ಲಿ “ದಿ ಎಕ್ಸಿಸ್ಟೆನ್ಸ್ ಆಫ್ ಎ ಸುಪ್ರೀಮ್ ಇಂಟೆಲಿಜೆಂಟ್ ಕ್ರಿಯೇಟರ್ ಎಸ್ಟ್ಯಾಬ್ಲಿಷ್ಡ್” (ಒಬ್ಬ ಪರಮ ಪ್ರಧಾನ ಬುದ್ಧಿವಂತ ಸೃಷ್ಟಿಕರ್ತನ ಅಸ್ತಿತ್ವವು ಸ್ಥಾಪಿಸಲ್ಪಡುತ್ತದೆ) ಒಂದು ಬಲವತ್ತಾದ ಅಧ್ಯಾಯವಾಗಿತ್ತು.
ಹಿಂಬಾಲಿಸಿದ ದಶಕಗಳಲ್ಲಿ, ದೇವರಲ್ಲಿ ಮತ್ತು ಬೈಬಲಿನಲ್ಲಿ ವಿಶ್ವಾಸಕ್ಕಾಗಿ ಸಮಂಜಸವಾದ ಕಾರಣಗಳನ್ನು ಒದಗಿಸಿದ ಲೇಖನಗಳನ್ನು, ಕಿರುಹೊತ್ತಗೆಗಳನ್ನು, ಮತ್ತು ಪುಸ್ತಕಗಳನ್ನು ರಸಲ್ ಬರೆದರು. ಇವು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟವು. ಅದರ ಎರಡನೆಯ ಅಧ್ಯಕ್ಷರಾದ, ಜೆ. ಎಫ್. ರಥರ್ಫರ್ಡ್ ವಿಶ್ವಾಸವನ್ನು ಇನ್ನೂ ಹೆಚ್ಚು ಬೆಂಬಲಿಸುವ ಕ್ರಿಯೇಷನ್ [ಸೃಷ್ಟಿ] (1927) ಮತ್ತು ಇತರ ಕೃತಿಗಳನ್ನು ಬರೆದರು.
ಆ ಸಂಸ್ಥೆಯು ಇತ್ತೀಚೆಗೆ ಈ ವಿಷಯಗಳ ಮೇಲೆ ಸದ್ಯೋಚಿತ ಮಾಹಿತಿಯನ್ನು ತಯಾರಿಸಿದೆ. ನಿಮ್ಮ ವಿಚಾರಪೂರ್ವಕ ಪರಿಗಣನೆಗಾಗಿ ಯೆಹೋವನ ಸಾಕ್ಷಿಗಳು ಇವುಗಳನ್ನು ನಿಮಗೆ ಒದಗಿಸಬಲ್ಲರು.
ಅಧಿಕ ಮಾಹಿತಿಯನ್ನು ನೀವು ಸ್ವಾಗತಿಸುವುದಾದರೆ ಅಥವಾ ನಿಮ್ಮೊಂದಿಗೆ ಒಂದು ಉಚಿತ ಬೈಬಲಧ್ಯಯನವನ್ನು ನಡಿಸಲು ಯಾರಾದರೂ ಸಂದರ್ಶಿಸುವಂತೆ ನೀವು ಬಯಸುವುದಾದರೆ ದಯವಿಟ್ಟು, Watch Tower, H-58 Old Khandala Road, Lonavla 410 401, Mah., India. ಇವರಿಗೆ ಅಥವಾ 2 ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.