‘ಅವನ ಕೃತ್ಯಗಳು ಅವನನ್ನು ಹಿಂಬಾಲಿಸುವವು’
ಗುರುವಾರ, ಜುಲೈ 28, 1994 ರಂದು ಬೆಳಿಗ್ಗೆ 8:50 ಕ್ಕೆ, ಜಾರ್ಜ್ ಡಿ. ಗ್ಯಾಂಗಸ್ ತಮ್ಮ ಐಹಿಕ ಜೀವನಗತಿಯನ್ನು ಮುಗಿಸಿದರು. ಅವರು 98 ವರ್ಷ ಪ್ರಾಯದವರಾಗಿದ್ದರು. ಅಭಿಷಿಕ್ತರಲ್ಲಿ ಒಬ್ಬರಾಗಿ, ಜಾರ್ಜ್ ಗ್ಯಾಂಗಸ್ ಅಕ್ಟೋಬರ್ 15, 1971 ರಿಂದ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿದ್ದರು.
ಸಹೋದರ ಗ್ಯಾಂಗಸ್ರೊಂದಿಗೆ ವೈಯಕ್ತಿಕವಾಗಿ ಪರಿಚಯವಿದ್ದವರೆಲ್ಲರಿಗೆ, ನೀತಿಗಾಗಿ ಅವರ ಪ್ರೀತಿ ಮತ್ತು ದುಷ್ಟತನದ ಅವರ ದ್ವೇಷ ತಿಳಿದಿದೆ. ಅವರು ಪದೇಪದೇ ಸೈತಾನನನ್ನು ಒಬ್ಬ ಕೀಳೆರ್ತದ, ಘೋರ, ದುಷ್ಟ, ನೀಚ ಮತ್ತು ಒಬ್ಬ ತುಚ್ಛ ಸುಳ್ಳುಗಾರನಾಗಿ ವರ್ಣಿಸಿದ ವಿಧವನ್ನು ಅವರು ಚೆನ್ನಾಗಿ ನೆನಪಿಸುತ್ತಾರೆ. ವ್ಯತಿರಿಕ್ತವಾಗಿ, ಅವರು ಯೆಹೋವನನ್ನು ಒಬ್ಬ ಪ್ರೀತಿಯುಳ್ಳ, ದಯೆಯ, ಕೋಮಲ ಮತ್ತು ಪರಾಮರಿಸುವ ತಂದೆಯೆಂದು ಅವನ ಕುರಿತಾಗಿ ಮಾತಾಡಿದರು. ಬೈಬಲ್ ಪ್ರಶ್ನೆಗಳನ್ನು ಕೇಳುವ ಅವರ ಪ್ರೀತಿಯನ್ನೂ ಅನೇಕರು ನೆನಪಿಸಿಕೊಳ್ಳುತ್ತಾರೆ. ಯಾವದೇ ಸಂಭಾಷಣೆಯಲ್ಲಿ ಅವರು ತಪ್ಪದೆ ಪ್ರಶ್ನೆಗಳನ್ನು ಹಾಕುತ್ತಿದ್ದರು—ಅವುಗಳಲ್ಲಿ ಕೆಲವು ಸರಳ, ಕೆಲವು ಹೆಚ್ಚು ಕಷ್ಟವಾದವುಗಳು. ನಿಜವಾಗಿಯೂ, ಅವರು ಬೈಬಲ್ ಸತ್ಯವನ್ನು ಪ್ರೀತಿಸುತ್ತಿದ್ದರು.
ಸಹೋದರ ಗ್ಯಾಂಗಸ್ ಜುಲೈ 15, 1921 ರಂದು ದೀಕ್ಷಾಸ್ನಾನಪಡೆದರು. ಅವರು ಪೂರ್ಣಸಮಯದ ಸಾರುವ ಶುಶ್ರೂಷೆಯಲ್ಲಿ (ಪಯನಿಯರಿಂಗ್) ತಮ್ಮ ಜೀವನೋದ್ಯೋಗವನ್ನು ಮಾರ್ಚ್ 1928 ರಲ್ಲಿ ಆರಂಭಿಸಿದರು. ಹೀಗೆ, ಅವರು ಮೊತ್ತದಲ್ಲಿ 66 ವರ್ಷ ಪೂರ್ಣಸಮಯದ ಸೇವೆಯಲ್ಲಿ ಇದ್ದರು. ಅಕ್ಟೋಬರ್ 31, 1928 ರಂದು ಅವರು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಬ್ರೂಕ್ಲಿನ್ ಮುಖ್ಯಕಾರ್ಯಲಯದ ಸಿಬ್ಬಂದಿಯ ಸದಸ್ಯರಾದರು.
ಅವರ ಜೀವನ ಕಥೆಯು ದ ವಾಚ್ಟವರ್ನ ಅಕ್ಟೋಬರ್ 15, 1966 ರ ಸಂಚಿಕೆಯಲ್ಲಿ ತೋರಿಬಂತು. ಅದು ದೇವರ ಒಬ್ಬ ನಿಜ ಆತ್ಮಿಕ ಮನುಷ್ಯನನ್ನು ವರ್ಣಿಸುತ್ತದೆ. ಆ ಲೇಖನದಲ್ಲಿ, ಅವರು ಈ ಮುಂದಿನ ಹೃದಯೋಲ್ಲಾಸಗೊಳಿಸುವ ಅಭಿವ್ಯಕ್ತಿಯನ್ನು ಮಾಡಿದರು: “ನಾನು ಜೀವವನ್ನು ಪ್ರೀತಿಸುತ್ತೇನೆ ಮತ್ತು ನನ್ನ ಸಹೋದರರು ಜೀವವನ್ನು ಗಳಿಸಬೇಕೆಂದು ನಾನು ಬಯಸುತ್ತೇನೆ. ಅಪೊಸ್ತಲ ಪೌಲನೊಂದಿಗೆ, ನಾನು, ಇತರ ಎಲ್ಲಾ ವಿಷಯಗಳನ್ನು ‘ಕ್ರಿಸ್ತ ಯೇಸುವಿನ ಜ್ಞಾನದ ಶ್ರೇಷ್ಠವಾದ ಮೌಲ್ಯದ ನಿಮಿತ್ತ ನಷ್ಟವೆಂದೆಣಿಸುತ್ತೇನೆ.’”—ಫಿಲಿಪ್ಪಿ 3:8.
ಸಹೋದರ ಗ್ಯಾಂಗಸ್ ತಾವು ನಿಜವಾಗಿಯೂ ಜೀವವನ್ನು ಪ್ರೀತಿಸಿದರೆಂದು ತಮ್ಮ ಕಾರ್ಯಗಳಿಂದ ತೋರಿಸಿದರು, ಮತ್ತು “ಕ್ರಿಸ್ತ ಯೇಸುವಿನ ಜ್ಞಾನವನ್ನು” ಇತರರೊಂದಿಗೆ ಆತುರತೆಯಿಂದ ಹಂಚಿದರು. ಅವರ ಲೋಪದ ಅನಿಸಿಕೆ ನಮಗಾಗುವುದು ನಿಜವಾದರೂ, ಅವರು ಈಗ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದಿದ್ದಾರೆಂಬದಕ್ಕೆ ನಾವೆಷ್ಟು ಹರ್ಷಿಸುತ್ತೇವೆ! ಈಗ, ‘ಅವರು ತಮ್ಮ ಪರಿಶ್ರಮದಿಂದ ವಿಶ್ರಮಿಸುವರು, ಏಕೆಂದರೆ ಅವನ ಕೃತ್ಯಗಳು ಅವನನ್ನು ಹಿಂಬಾಲಿಸುವವು.’—ಪ್ರಕಟನೆ 14:13, ನ್ಯೂ ಇಂಟರ್ನ್ಯಾಷನಲ್ ವರ್ಷನ್.