“ಇಂತಹದ್ದೇನನ್ನೂ ನಾನು ಎಂದೂ ಕಂಡಿಲ್ಲ!”
1993 ರಲ್ಲಿ ಆರ್ಜೆಂಟೀನದಲ್ಲಿರುವ ವಾಚ್ ಟವರ್ ಸೊಸೈಟಿಯ ಆಫೀಸು, ಯೆಹೋವನ ಸಾಕ್ಷಿಗಳ ನಾಲ್ಕು ದಿನದ “ದೈವಿಕ ಬೋಧನೆ” ಜಿಲ್ಲಾ ಅಧಿವೇಶನಕ್ಕೆ, ಚಿಲಿಯ ಸ್ಯಾಂಟಿಯಾಗೊವಿಗೆ ಒಂದು ಸಾವಿರ ಪ್ರತಿನಿಧಿಗಳನ್ನು ಕಳುಹಿಸುವಂತೆ ಆಮಂತ್ರಿಸಲ್ಪಟ್ಟಿತು. ಆರ್ಜೆಂಟೀನದ ಸಾಕ್ಷಿಗಳು ಒಂದು ದೊಡ್ಡ ಗುಂಪಿನೋಪಾದಿ ವಿದೇಶೀ ಅಧಿವೇಶನಕ್ಕೆ ಪ್ರಯಾಣಿಸುವಂತೆ ಆಮಂತ್ರಿಸಲ್ಪಟ್ಟದ್ದು ಇದೇ ಮೊದಲ ಬಾರಿ.a ಪ್ರತಿಕ್ರಿಯೆ ಏನಾಗಿತ್ತು? 8,500 ಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದು ತಲಪಿದವು, ಅವುಗಳಿಂದ 1,039 ಪ್ರತಿನಿಧಿಗಳು ಆರಿಸಲ್ಪಟ್ಟರು.
ಬ್ವೇನಸ್ ಆ್ಯರೀಜ್ ನಿಂದ ಸ್ಯಾಂಟಿಯಾಗೊವಿಗೆ ಈ 1,400 ಕಿಲೊಮೀಟರ್ ಪ್ರಯಾಣವನ್ನು ಮಾಡಲು, ಒಟ್ಟು 14 ಬಸ್ಸುಗಳನ್ನು ಬಾಡಿಗೆಗೆ ಗೊತ್ತುಮಾಡಲಾಯಿತು. 26 ಗಂಟೆಯ ಪ್ರಯಾಣವು ನಯನ ಮನೋಹರವಾದ ದೃಶ್ಯದಿಂದ ವರ್ಧಿಸಲ್ಪಟ್ಟಿತ್ತು. ಆ್ಯಂಡೀಸ್ ಪರ್ವತಗಳನ್ನು ದಾಟುತ್ತಾ, 6,960 ಮೀಟರುಗಳ ಎತ್ತರದಲ್ಲಿ, ಪಶ್ಚಿಮಾರ್ಧ ಗೋಳದಲ್ಲಿ ಅತ್ಯಂತ ಎತ್ತರವಾಗಿರುವ ಶಿಖರವಾದ ಆ್ಯಕನ್ಕಾಗದ್ವ ಬಳಿ ಪ್ರತಿನಿಧಿಗಳು ಹಾದುಹೋದರು. ಚಿಲಿಗೆ ನಡೆಸುವ ಕಡಿದಾದ ಸುತ್ತು ಸುತ್ತಾದ ಇಳಿತವು ವಿಶೇಷವಾಗಿ ಸ್ಮರಣೀಯವಾಗಿತ್ತು. ಪಂಥಾಹ್ವಾನವನ್ನೊಡ್ಡುವ ಕ್ಷೇತ್ರವನ್ನು ನಿರ್ವಹಿಸುವುದರಲ್ಲಿ ತಮ್ಮ ಕುಶಲತೆಗಾಗಿ ಬಸ್ ಚಾಲಕರು ಉದಾರವಾದ ಸುದೀರ್ಘ ಚಪ್ಪಾಳೆ ಸಮ್ಮತಿಯನ್ನು ಪಡೆದರು!
ಹಾಗಿದ್ದರೂ, ಅತ್ಯಂತ ಸುಂದರವಾದ ನೋಟವು ಅಧಿವೇಶನದಲ್ಲಿಯೇ ಕಂಡುಕೊಳ್ಳಲ್ಪಡಲಿಕ್ಕಿತ್ತು. ರಾಷ್ಟ್ರೀಯ ಕಲಹ ಮತ್ತು ಕುಲಸಂಬಂಧವಾದ ಬಿಗುಪುಳ್ಳ ಲೋಕದಲ್ಲಿ, 24 ದೇಶಗಳಿಂದ 80,000 ಜನರ ಐಕ್ಯ ಗುಂಪನ್ನು ಹಾಜರಿಯಲ್ಲಿ ನೋಡುವುದು ಎಷ್ಟು ಉತ್ಸಾಹದಾಯಕವಾಗಿತ್ತು—ನಿಜವಾಗಿಯೂ ಒಂದು ಅಂತಾರಾಷ್ಟ್ರೀಯ ಸಹೋದರತ್ವ! ಅಧಿವೇಶನ ಸದಸ್ಯರಲ್ಲಿರುವ ಐಕ್ಯವನ್ನು ಪ್ರತ್ಯಕ್ಷವಾಗಿ ಕಂಡು, ಬಸ್ ಚಾಲಕರಲ್ಲಿ ಕೆಲವರು ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು. “ಇಂತಹದ್ದೇನನ್ನೂ ನಾನು ಎಂದೂ ಕಂಡಿಲ್ಲ!” ಎಂದು ಅವರಲ್ಲಿ ಒಬ್ಬನು ಉದ್ಗರಿಸಿದನು.
[ಅಧ್ಯಯನ ಪ್ರಶ್ನೆಗಳು]
a 1949 ರಿಂದ 1982ರ ವರೆಗೆ ಆರ್ಜೆಂಟೀನದಲ್ಲಿನ ಸರಕಾರದ ತಡೆಗಳು ಅಂತಹ ಒಂದು ಕಾರ್ಯವನ್ನು ಅಸಾಧ್ಯಗೊಳಿಸಿದ್ದವು.