ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 2/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1995
ಕಾವಲಿನಬುರುಜು—1995
w95 2/1 ಪು. 31

ವಾಚಕರಿಂದ ಪ್ರಶ್ನೆಗಳು

ಬೈಬಲಿನಲ್ಲಿ ಉಲ್ಲೇಖಿಸಲಾದ ಫಿಲಿಷ್ಟಿಯರು ಯಾರಾಗಿದ್ದರು?

ದೇವರ ಪ್ರಾಚೀನ ಜನರು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಂಡಾಗ, ಕಾನಾನ್‌ನಲ್ಲಿ ಜೀವಿಸುತ್ತಿದ್ದ, ಫಿಲಿಷ್ಟಿಯರೆಂದು ತಿಳಿಯಲ್ಪಟ್ಟ ಒಂದು ಜನಾಂಗವನ್ನು ಬೈಬಲ್‌ ಅನೇಕ ವೇಳೆ ಸೂಚಿಸುತ್ತದೆ. ದೀರ್ಘ ಸಮಯದ ವರೆಗೆ, ಈ ಪ್ರಾಚೀನ ಫಿಲಿಷ್ಟಿಯರು ದೇವರ ಜನರನ್ನು ವಿರೋಧಿಸಿದರು. ಇದು ಗೊಲ್ಯಾತನೆಂಬ ದೈತ್ಯಾಕಾರದ ಫಿಲಿಷ್ಟಿಯ ಶೂರನೊಂದಿಗೆ ದಾವೀದನ ಹೋರಾಟದ ದಾಖಲೆಯಲ್ಲಿ ಎತ್ತಿತೋರಿಸಿದಂತಿದೆ.—1 ಸಮುವೇಲ 17:1-3, 23-25.

ಪ್ರಾಚೀನ ಫಿಲಿಷ್ಟಿಯರು ಕಫ್ತೋರ್‌ನಿಂದ ಕಾನಾನ್‌ನ ನೈರುತ್ಯ ತೀರಕ್ಕೆ ವಲಸೆಹೋದರೆಂದು ಬೈಬಲ್‌ ಸೂಚಿಸುತ್ತದೆ. (ಯೆರೆಮೀಯ 47:4) ಕಫ್ತೋರ್‌ ಎಲ್ಲಿತ್ತು? ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ (1979) ಗಮನಿಸುವುದು: “ಪ್ರಮಾಣವು ನಿಷ್ಕೃಷ್ಟವಾದ ಉತ್ತರವನ್ನು ಅನುಮತಿಸದಿದ್ದರೂ, ಪ್ರಚಲಿತ ಪಾಂಡಿತ್ಯವು ಕ್ರೇತದ್ವೀಪವನ್ನು (ಅಥವಾ ಬಹುಶಃ ಸಾಂಸ್ಕೃತಿಕವಾಗಿ ಒಟ್ಟಿಗೆ ಸೇರಿರುವ ಕ್ರೇತ್‌ ಮತ್ತು ಇಜೀಯನ್‌ ದ್ವೀಪಗಳು) ಖಂಡಿತವಾಗಿಯೂ ಅತ್ಯಂತ ಸಂಭವನೀಯ ಸ್ಥಳವೆಂದು ಸೂಚಿಸಿ ಹೇಳುತ್ತದೆ.”—ಸಂಪುಟ 1, ಪುಟ 610.

ಇದಕ್ಕೆ ಹೊಂದಿಕೆಯಾಗಿ, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ರಿಪ್‌ಚರ್ಸ್‌ ಆಮೋಸ 9:7 ರಲ್ಲಿ ಓದುವುದು: “ಯೆಹೋವನು ಇಂತೆನ್ನುತ್ತಾನೆ—ಇಸ್ರಾಯೇಲ್ಯರೇ, ನೀವು ನನ್ನ ಗಣನೆಯಲ್ಲಿ ಕೂಷ್ಯರ ಹಾಗಿದ್ದೀರಲ್ಲವೋ; ನಾನು ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ, ಫಿಲಿಷ್ಟಿಯರನ್ನು ಕಫ್ತೋರಿನಿಂದ, ಅರಾಮ್ಯರನ್ನು ಕೀರಿನಿಂದ . . . ಬರಮಾಡಲಿಲ್ಲವೇ?”

ಈ ಪ್ರಾಚೀನ ಸಮುದ್ರ ಜನರು ಕ್ರೇತದಿಂದ, ಯೊಪ್ಪ ಮತ್ತು ಗಾಜದ ನಡುವೆ ಇರುವ ನೈರುತ್ಯ ಕಡಲತೀರದ ಫಿಲಿಷ್ಟಿಯ ಎಂದು ಕರೆಯಲ್ಪಟ್ಟ ಕಾನಾನ್‌ನ ಆ ಭಾಗಕ್ಕೆ ಯಾವಾಗ ವಲಸೆಹೋದರೆಂದು ಗೊತ್ತಿಲ್ಲ. ಅವರು ಅಬ್ರಹಾಮ ಮತ್ತು ಇಸಾಕರ ದಿನಗಳಲ್ಲಿಯೇ ತಗ್ಗಾದ ಕರಾವಳಿ ಬಯಲಿನ ಈ ಪ್ರಾಂತದಲ್ಲಿ ಆಗಲೇ ಇದ್ದರೆಂದು ತೋರುತ್ತದೆ.—ಆದಿಕಾಂಡ 20:1, 2; 21:32-34; 26:1-18.

ದೇವರು ಇಸ್ರಾಯೇಲ್ಯರಿಗೆ ವಾಗ್ದಾನಿಸಿದ್ದ ದೇಶವನ್ನು ಅವರು ಪ್ರವೇಶಿಸಿದ ತರುವಾಯ ದೀರ್ಘ ಸಮಯದ ವರೆಗೆ ಫಿಲಿಷ್ಟಿಯರು ಶಕ್ತಿಶಾಲಿ ಪ್ರಭಾವವಾಗಿರುತ್ತ ಮುಂದುವರಿದರು. (ವಿಮೋಚನಕಾಂಡ 13:17; ಯೆಹೋಶುವ 13:2; ನ್ಯಾಯಸ್ಥಾಪಕರು 1:18, 19; 3:3, 4; 15:9, 10; 1 ಸಮುವೇಲ 4:1-11; 7:7-14; 13:19-23; 1 ಅರಸು 16:15) ಯೆಹೂದ್ಯ ಅರಸನಾದ ಉಜ್ಜೀಯನ ಆಳಿಕೆಯ ಸಮಯದ ವರೆಗೆ, ಫಿಲಿಷ್ಟಿಯರು ತಮ್ಮ ಪಟ್ಟಣಗಳಾದ ಗತ್‌, ಯಬ್ನೆ, ಮತ್ತು ಅಷ್ಡೋದ್‌ನಲ್ಲಿ ಉಳಿದರು. (2 ಪೂರ್ವಕಾಲವೃತ್ತಾಂತ 26:6) ಬೈಬಲಿನ ದಾಖಲೆಗಳಲ್ಲಿ ಪ್ರಧಾನವಾಗಿರುವ ಅವರ ಪಟ್ಟಣಗಳಲ್ಲಿ ಬೇರೆ ಕೆಲವು ಪಟ್ಟಣಗಳು, ಎಕ್ರೋನ್‌, ಅಶ್‌ಕೆಲೊನ್‌, ಮತ್ತು ಗಾಜ ಆಗಿದ್ದವು.

ಮಹಾ ಆ್ಯಲೆಗ್‌ಜಾಂಡರನು ಫಿಲಿಸ್ಟೀನ್‌ ಪಟ್ಟಣವಾದ ಗಾಜವನ್ನು ಜಯಿಸಿಕೊಂಡನು, ಆದರೆ ಸಕಾಲದಲ್ಲಿ, ಫಿಲಿಷ್ಟಿಯರು ವ್ಯಕ್ತವಾಗಿ ಒಂದು ಪ್ರತ್ಯೇಕವಾದ ಜನಾಂಗದೋಪಾದಿ ಅಸ್ತಿತ್ವದಲ್ಲಿರುವುದು ನಿಂತುಹೋಯಿತು. ಪ್ರೊಫೆಸರ್‌ ಲಾರೆನ್ಸ್‌ ಈ. ಸ್ಟ್ಯಾಜರ್‌, ಬಿಬ್ಲಿಕಲ್‌ ಆರ್ಕಿಯಾಲೊಜಿ ರಿವ್ಯೂ (ಮೆ ⁄ ಜೂನ್‌ 1991) ನಲ್ಲಿ ಬರೆದದ್ದು: “ಫಿಲಿಷ್ಟಿಯರು ಸಹ ಬಬಿಲೋನಿಗೆ ಗಡೀಪಾರು ಮಾಡಲ್ಪಟ್ಟಿದ್ದರು. . . . ಆದರೆ, ಗಡೀಪಾರು ಮಾಡಲ್ಪಟ್ಟ ಫಿಲಿಷ್ಟಿಯರಿಗೆ ಏನು ಸಂಭವಿಸಿತು ಎಂಬ ವಿಷಯದ ಕುರಿತು ಯಾವ ದಾಖಲೆಗಳೂ ಅಸ್ತಿತ್ವದಲ್ಲಿಲ್ಲ. ನೆಬೂಕದ್ನೆಚ್ಚರನ ವಿಜಯದ ಬಳಿಕ ಯಾರು ಅಶ್‌ಕೆಲೊನ್‌ನಲ್ಲಿ ಉಳಿದರೊ, ಅವರು ತಮ್ಮ ಕುಲಸಂಬಂಧವಾದ ಗುರುತನ್ನು ಕಳೆದುಕೊಂಡರೆಂಬುದು ವ್ಯಕ್ತ. ಫಿಲಿಷ್ಟಿಯರ ಕುರಿತು ಹೆಚ್ಚಿನ ಐತಿಹಾಸಿಕ ದಾಖಲೆ ಇರುವುದಿಲ್ಲ.”

ಪ್ಯಾಲೆಸ್ಟೀನ್‌ ಎಂಬ ಆಧುನಿಕ ಹೆಸರು ಲ್ಯಾಟಿನ್‌ ಮತ್ತು ಗ್ರೀಕ್‌ ಪದಗಳಿಂದ ತೆಗೆಯಲ್ಪಟ್ಟಿದೆ. ಇದು ಬಹಳ ಹಿಂದಿನ ಸಮಯದ “ಫಿಲಿಷ್ಟಿಯ” ಕ್ಕಾಗಿರುವ ಹೀಬ್ರೂ ಪದಕ್ಕೆ ನಡೆಸುತ್ತದೆ. ಅರೇಬಿಕ್‌ ಭಾಷೆಯಲ್ಲಿನ ಕೆಲವು ಬೈಬಲ್‌ ಭಾಷಾಂತರಗಳು, “ಫಿಲಿಷ್ಟಿಯರು” ಎಂಬ ಪದಕ್ಕೆ ಒಂದು ಶಬ್ದವನ್ನು ಬಳಸುತ್ತವೆ, ಅದು ಆಧುನಿಕ ಪ್ಯಾಲೆಸ್ಟೀನ್‌ನವರಿಗೆ ಇರುವ ಪದದೊಂದಿಗೆ ಸುಲಭವಾಗಿ ಗಲಿಬಿಲಿಗೊಳ್ಳುವಂತಹ ಪದವಾಗಿದೆ. ಹಾಗಿದ್ದರೂ, ಟುಡೇಸ್‌ ಆ್ಯರಬಿಕ್‌ ವರ್ಷನ್‌ ಭಿನ್ನವಾದೊಂದು ಆ್ಯರಬಿಕ್‌ ಪದವನ್ನು ಬಳಸುತ್ತದೆ, ಹೀಗೆ ಪ್ರಾಚೀನ ಫಿಲಿಷ್ಟಿಯರ ಮತ್ತು ಆಧುನಿಕ ಪ್ಯಾಲೆಸ್ಟೀನ್‌ನವರ ನಡುವೆ ವ್ಯತ್ಯಾಸವನ್ನುಂಟುಮಾಡುತ್ತದೆ.

[ಪುಟ 31 ರಲ್ಲಿರುವ ಚಿತ್ರ]

ಅಶ್‌ಕೆಲೋನ್‌ನಲ್ಲಿನ ಕೆಲವು ಭಗ್ನಾವಶೇಷಗಳು

[ಕೃಪೆ]

Pictorial Archive (Near Eastern History) Est.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ