ಸೃಜನಶೀಲತೆ—ದೇವರಿಂದ ಬಂದ ಒಂದು ಉದಾರ ಕೊಡುಗೆ
ಯೆಹೋವನು ತನ್ನ ಸೃಜನಾತ್ಮಕ ಕೆಲಸಗಳಲ್ಲಿ ಹರ್ಷಿಸುತ್ತಾನೆ. (ಕೀರ್ತನೆ 104:31) ಸೃಷ್ಟಿಸುವ ಕ್ರಿಯೆಯಿಂದ ಆತನು ಪಡೆಯುವ ಆಳವಾದ ತೃಪ್ತಿಯು ಆದಿಕಾಂಡ 1:31 ರಲ್ಲಿ ವ್ಯಕ್ತಪಡಿಸಲಾಗಿದೆ: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”
ಈ ಆನಂದವನ್ನು ಯೆಹೋವನು ತನ್ನಲ್ಲಿಯೇ ಇಟ್ಟುಕೊಳ್ಳಲಿಲ್ಲ. ಯಾರ ಮುಖಾಂತರ ಇತರ ಇಲ್ಲ ವಿಷಯಗಳು ಸೃಷ್ಟಿಸಲ್ಪಟ್ಟವೊ, ಆ ಯೇಸುವಿಗೆ ನಿಯೋಗಿಯಾಗುವ ಅಥವಾ ಸಾಧನವಾಗುವ ಸುಯೋಗವನ್ನು ಆತನು ನೀಡಿದನು. (ಯೋಹಾನ 1:3; ಕೊಲೊಸ್ಸೆ 1:16, 17) “ಕುಶಲ ಶಿಲ್ಪಿ” ಯೋಪಾದಿ, ಯೇಸು ಸಹ “ಯಾವಾಗಲೂ [ಯೆಹೋವನ] ಮುಂದೆ ಆನಂದಿತನಾಗಿದ್ದನು.”—ಜ್ಞಾನೋಕ್ತಿ 8:30, 31, NW.
ಆದರೆ ಸೃಜನಾತ್ಮಕ ಸಾಮರ್ಥ್ಯವು ಕೇವಲ ಪರಲೋಕದಲ್ಲಿ ಮಾತ್ರ ಇರುವುದಿಲ್ಲ. “ಅದು ಮಾನವಜಾತಿಯ ಒಂದು ಸ್ವಾಭಾವಿಕ ಭಾಗದೋಪಾದಿ ರಚಿಸಲ್ಪಟ್ಟಿದೆ,” ಎಂದು ಯೂಜೀನ್ ರೌಡ್ಸೆಪ್, ನೀವು ಎಷ್ಟು ಸೃಜನಾತ್ಮಕರಾಗಿದ್ದೀರಿ? (ಇಂಗ್ಲಿಷ್ನಲ್ಲಿ) ಎಂಬ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. ಇದೊಂದು ಆಕಸ್ಮಿಕ ಸಂಗತಿಯಾಗಿರುವುದಿಲ್ಲ ಯಾಕೆಂದರೆ ಮನುಷ್ಯನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟನು. (ಆದಿಕಾಂಡ 1:28) ಹೀಗೆ ಯೆಹೋವನು ಮನುಷ್ಯಜಾತಿಗೆ ತೃಪ್ತಿದಾಯಕವಾದ ಸೃಜನಾತ್ಮಕ ಸಾಮರ್ಥ್ಯಗಳನ್ನು ನೀಡಿದ್ದಾನೆ.—ಯಾಕೋಬ 1:17.
ಆದುದರಿಂದ ಬೈಬಲು ಹಾಡುವಿಕೆ, ನೃತ್ಯ, ಬಟ್ಟೆ ನೇಯುವಿಕೆ, ಅಡಿಗೆ ಮಾಡುವಿಕೆ, ಕಲೆಗಾರಿಕೆ, ಮತ್ತು ಇತರ ಸೃಜನಾತ್ಮಕ ಪ್ರಯತ್ನಗಳ ಕುರಿತು ಅತಿಶಯವಾಗಿ ಮಾತಾಡುವುದು ಆಶ್ಚರ್ಯಕರವೇನೂ ಅಲ್ಲ. (ವಿಮೋಚನಕಾಂಡ 35:25, 26; 1 ಸಮುವೇಲ 8:13; 18:6, 7; 2 ಪೂರ್ವಕಾಲವೃತ್ತಾಂತ 2:13, 14) ಒಬ್ಬ ಕುಶಲಕರ್ಮಿಯಾದ ಬೆಚಲೇಲನು, ಸಾಕ್ಷಿಗುಡಾರವನ್ನು ನಿರ್ಮಿಸುವುದರಲ್ಲಿ ಸಹಾಯ ಮಾಡಲು, ‘ಸಾಧನಗಳನ್ನು ಕಲ್ಪಿಸುವುದರಲ್ಲಿ’ ತನ್ನ ಹುಟ್ಟು ಸಾಮರ್ಥ್ಯವನ್ನು ಉಪಯೋಗಿಸಿದನು. (ವಿಮೋಚನಕಾಂಡ 31:3, 4) ಅಲೆಮಾರಿ ಜೀವನಕ್ಕೆ ಒಂದು ಸೃಜನಾತ್ಮಕ ಅನುಕೂಲವಾದ ಗುಡಾರದ ನಿರ್ಮಾಪಕನು, ಕುರುಬನಾದ ಯಾಬಾಲನಾಗಿದ್ದಿರಬಹುದು. (ಆದಿಕಾಂಡ 4:20) ದಾವೀದನು ಒಬ್ಬ ಸಂಗೀತಗಾರ ಮತ್ತು ಒಬ್ಬ ಸಂಗೀತ ರಚನಕಾರನಾಗಿದ್ದನು ಮಾತ್ರವಲ್ಲ, ಹೊಸ ಸಂಗೀತ ಸಾಧನಗಳ ಅಭಿವರ್ಧಕನೂ ಆಗಿದ್ದನು. (2 ಪೂರ್ವಕಾಲವೃತ್ತಾಂತ 7:6; ಕೀರ್ತನೆ 7:17; ಆಮೋಸ 6:5) ಕೆಂಪು ಸಮುದ್ರದಿಂದ ಇಸ್ರಾಯೇಲ್ಯರ ಅದ್ಭುತಕರವಾದ ಬಿಡುಗಡೆಯನ್ನು ಆಚರಿಸಿದ ಆನಂದಭರಿತ ನೃತ್ಯವನ್ನು ಮಿರ್ಯಾಮಳು ರಚಿಸಿದಿರ್ದಬಹುದು.—ವಿಮೋಚನಕಾಂಡ 15:20.
ಸತ್ಯಾರಾಧನೆಯನ್ನು ಪ್ರವರ್ಧಿಸುವುದರಲ್ಲಿ ಸೃಜನಶೀಲತೆಯು ಅನೇಕ ವೇಳೆ ಒಂದು ಸ್ವತಾಗ್ತಿದೆ. ಯೇಸು ತನ್ನ ಸಂದೇಶವನ್ನು ನಿವೇದಿಸಲು ಸೃಜನಾತ್ಮಕವಾಗಿ ದೃಷ್ಟಾಂತಗಳನ್ನು ಮತ್ತು ವಸ್ತುಪಾಠಗಳನ್ನು ಬಳಸಿದನು. ಅವನ ಹಿಂಬಾಲಕರು ತದ್ರೀತಿಯಲ್ಲಿ “ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡು” ವಂತೆ ಪ್ರೇರೇಪಿಸಲ್ಪಡುತ್ತಾರೆ. (1 ತಿಮೊಥೆಯ 5:17) ಹೌದು, ಅವರ ಸಾರುವ ಕೆಲಸವು ಬರಿಯ ನಿಯತಕ್ರಮವಾಗಿರುವುದಿಲ್ಲ. ಅದು ಸೃಜನಾತ್ಮಕ ಬೋಧನಾ ವಿಧಾನಗಳನ್ನು ಅವಶ್ಯಪಡಿಸುವ ಒಂದು ಕಲೆಯಾಗಿದೆ. (ಕೊಲೊಸ್ಸೆ 4:6) ಒಬ್ಬರ ಮಕ್ಕಳಿಗೆ ಕಲಿಸುವಾಗ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ.—ಧರ್ಮೋಪದೇಶಕಾಂಡ 6:6, 7; ಎಫೆಸ 6:4.
ಹೀಗೆ, ಸೃಷ್ಟಿಕ್ರಿಯೆಯು ಯೆಹೋವನಿಗೆ ಕೊಡುವ ಆನಂದವನ್ನು ಆತನು ಇತರರೊಂದಿಗೆ ಹಂಚಿಕೊಳ್ಳುತ್ತಾನೆ. ಎಂತಹ ಒಂದು ಉದಾರ ಕೊಡುಗೆ!