ದೇವರು ಲೋಕವನ್ನು ಆಳುತ್ತಾನೊ?
ಭಾನುವಾರ ಬೆಳಗ್ಗೆ. ಅನೇಕ ಜನರು ಹಾಸಿಗೆಯಿಂದ ಎದ್ದು, ಉಡುಪನ್ನು ತೊಟ್ಟು, ಫಲಾಹಾರಮಾಡಿ, ಅವಸರದಿಂದ ಚರ್ಚಿಗೆ ಹೋಗುತ್ತಾರೆ. ಅಲ್ಲಿ, ದೇವರು ಅಪ್ರತಿಮ ಅಧಿಕಾರದಿಂದ, ಭೂಮಿಯ ಮೇಲೆ ಸರ್ವ ಶ್ರೇಷ್ಠನಾಗಿ ಆಳುವ ವಿಧಾನದ ಕುರಿತ ಒಂದು ಪ್ರಸಂಗವನ್ನು ಅವರು ಕೇಳುತ್ತಾರೆ. ಜನರ ಕುರಿತು ಆತನು ಆಳವಾಗಿ ಚಿಂತಿಸುತ್ತಾನೆಂದು ಅವರಿಗೆ ಹೇಳಲಾಗುತ್ತದೆ. ಯೇಸು ಕ್ರಿಸ್ತನ ಕುರಿತೂ ನಿರ್ದೇಶಿಸಲಾಗುತ್ತದೆ. ಯಾರಿಗೆ ಪ್ರತಿಯೊಬ್ಬನು ವಿಧೇಯತೆಯಲ್ಲಿ ಅಡ್ಡಬೀಳುವನೊ ಆ ರಾಜರ ರಾಜನು ಆತನೆಂಬುದನ್ನು ಅವರು ಕೇಳಬಹುದು.
ಚರ್ಚಿನಿಂದ ಮನೆಗೆ ಬಂದ ಮೇಲೆ, ಈ ಜನರು ಟೆಲಿವಿಷನ್ ಆನ್ ಮಾಡಿ ವಾರ್ತೆಯನ್ನು ವೀಕ್ಷಿಸಬಹುದು. ಕ್ಷಾಮ, ಪಾತಕ, ಮಾದಕ ದ್ರವ್ಯದ ಅಪಪ್ರಯೋಗ, ಬಡತನದ ಕುರಿತು ಅವರೀಗ ಕೇಳುತ್ತಾರೆ. ಮತ್ತು ರೋಗ ಮತ್ತು ಮರಣದ ವ್ಯಸನಕರ ದೃಶ್ಯಗಳನ್ನು ಅವರು ನೋಡುತ್ತಾರೆ.
ಚರ್ಚಿನಲ್ಲಿ ಅವರು ಕೇಳಿದ ವಿಷಯಗಳ ಕುರಿತು, ವಿಶೇಷವಾಗಿ ಅಲ್ಲಿ ಎಂದೂ ವಿವರಿಸಲ್ಪಡದ ವಿಷಯಗಳ ಕುರಿತು ಅಂತಹ ವ್ಯಕ್ತಿಗಳು ಯೋಚಿಸಲಾರಂಭಿಸಬಹುದು. ದೇವರು ಪ್ರೀತಿಯುಳ್ಳವನು ಮತ್ತು ಸರ್ವಶಕ್ತನು—ಇವೆರಡೂ ಆಗಿದ್ದಲ್ಲಿ, ಭೀಕರ ಸಂಗತಿಗಳು ಸಂಭವಿಸುವುದೇಕೆ? ಮತ್ತು ಯೇಸು ಕ್ರಿಸ್ತನ ಕುರಿತೇನು? ಆತನಿಗೆ ವಿಧೇಯತೆಯಲ್ಲಿ ಅಡ್ಡಬೀಳದ ಅನೇಕರಿದ್ದಾರೆಂಬುದು ಸ್ವತಸ್ಸಿದ್ಧ.
[ಪುಟ 3 ರಲ್ಲಿರುವ ಚಿತ್ರ]
ದೇವರು ಲೋಕವನ್ನು ಆಳುತ್ತಿರುವಲ್ಲಿ, ಇಂತಹ ನರಳಾಟ ಮತ್ತು ಸಂಕ್ಷೋಭೆಯಿದೆ ಏಕೆ?
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: NASA photo