ದೈವಿಕ ಪರಮಾಧಿಕಾರಕ್ಕಾಗಿರುವ ಕ್ರೈಸ್ತ ಸಾಕ್ಷಿಗಳು
“ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡ” ಬೇಕು.—1 ಪೇತ್ರ 2:9.
1. ಕ್ರೈಸ್ತಪೂರ್ವ ಸಮಯಗಳಲ್ಲಿ ಯೆಹೋವನ ಕುರಿತು ಯಾವ ಪರಿಣಾಮಕಾರಿ ಸಾಕ್ಷಿಯು ಕೊಡಲ್ಪಟ್ಟಿತ್ತು?
ಕ್ರೈಸ್ತಪೂರ್ವ ಸಮಯಗಳಲ್ಲಿ, ಸಾಕ್ಷಿಗಳ ಒಂದು ಉದ್ದವಾದ ಪಟ್ಟಿಯು, ಯೆಹೋವನು ಏಕಮಾತ್ರ ಸತ್ಯ ದೇವರು ಎಂಬುದನ್ನು ಧೈರ್ಯದಿಂದ ಪ್ರಮಾಣೀಕರಿಸಿತು. (ಇಬ್ರಿಯ 11:4–12:1) ತಮ್ಮ ನಂಬಿಕೆಯಲ್ಲಿ ಸ್ಥಿರರಾಗಿದ್ದು, ಅವರು ನಿರ್ಭಯವಾಗಿ ಯೆಹೋವನ ನಿಯಮಗಳಿಗೆ ವಿಧೇಯರಾದರು ಮತ್ತು ಆರಾಧನೆಯ ವಿಷಯಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿದರು. ಯೆಹೋವನ ವಿಶ್ವ ಪರಮಾಧಿಕಾರಕ್ಕೆ ಒಂದು ಪ್ರಬಲವಾದ ಸಾಕ್ಷಿಯನ್ನು ಅವರು ಕೊಟ್ಟರು.—ಕೀರ್ತನೆ 18:21-23; 47:1, 2.
2. (ಎ) ಯೆಹೋವನ ಅತ್ಯಂತ ಮಹಾನ್ ಸಾಕ್ಷಿಯು ಯಾರು? (ಬಿ) ಯೆಹೋವನ ಸಾಕ್ಷಿಯೋಪಾದಿ ಇಸ್ರಾಯೇಲ್ ಜನಾಂಗವನ್ನು ಯಾವುದು ಸ್ಥಾನಪಲ್ಲಟಗೊಳಿಸಿತು? ನಾವು ಹೇಗೆ ತಿಳಿದಿದ್ದೇವೆ?
2 ಕೊನೆಯ ಮತ್ತು ಅತ್ಯಂತ ಪ್ರಖ್ಯಾತ ಕ್ರೈಸ್ತಪೂರ್ವ ಸಾಕ್ಷಿಯು ಸ್ನಾನಿಕನಾದ ಯೋಹಾನನಾಗಿದ್ದನು. (ಮತ್ತಾಯ 11:11) ಆರಿಸಲ್ಪಟವನೊಬ್ಬನ ಬರೋಣವನ್ನು ಪ್ರಕಟಪಡಿಸುವಂತಹ ಸುಯೋಗವು ಅವನಿಗೆ ಕೊಡಲ್ಪಟ್ಟಿತ್ತು, ಮತ್ತು ಅವನು ಯೇಸುವನ್ನು ವಾಗ್ದಾನಿಸಲ್ಪಟ್ಟ ಮೆಸ್ಸೀಯನೋಪಾದಿ ಪರಿಚಯಪಡಿಸಿದನು. (ಯೋಹಾನ 1:29-34) ಯೇಸು ಯೆಹೋವನ ಅತ್ಯಂತ ಮಹಾನ್ ಸಾಕ್ಷಿ, “ನಂಬತಕ್ಕ ಸತ್ಯಸಾಕ್ಷಿ” ಆಗಿದ್ದಾನೆ. (ಪ್ರಕಟನೆ 3:14) ಮಾಂಸಿಕ ಇಸ್ರಾಯೇಲ್ ಯೇಸುವನ್ನು ತಿರಸ್ಕರಿಸಿದ ಕಾರಣದಿಂದ, ಯೆಹೋವನು ಅವರನ್ನು ತಿರಸ್ಕರಿಸಿದನು ಮತ್ತು ಒಂದು ಹೊಸ ಜನಾಂಗವಾದ, ದೇವರ ಆತ್ಮಿಕ ಇಸ್ರಾಯೇಲನ್ನು ತನ್ನ ಸಾಕ್ಷಿಯಾಗಿರಲಿಕ್ಕಾಗಿ ನೇಮಿಸಿದನು. (ಯೆಶಾಯ 42:8-12; ಯೋಹಾನ 1:11, 12; ಗಲಾತ್ಯ 6:16) ಪೇತ್ರನು ಇಸ್ರಾಯೇಲ್ನ ಕುರಿತಾಗಿ ಒಂದು ಪ್ರವಾದನೆಯನ್ನು ಉದ್ಧರಿಸಿದ್ದನು ಮತ್ತು “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ” ಎಂದು ಅವನು ಹೇಳಿದಾಗ, ಅದು “ದೇವರ ಇಸ್ರಾಯೇಲ್ಯ” ರಿಗೆ, ಕ್ರೈಸ್ತ ಸಭೆಗೆ ಅನ್ವಯಿಸಿತೆಂದು ತೋರಿಸಿದನು.—1 ಪೇತ್ರ 2:9; ವಿಮೋಚನಕಾಂಡ 19:5, 6; ಯೆಶಾಯ 43:21; 60:2.
3. ದೇವರ ಇಸ್ರಾಯೇಲ್ ಮತ್ತು “ಮಹಾ ಸಮೂಹ”ದ ಪ್ರಮುಖ ಜವಾಬ್ದಾರಿಯು ಏನಾಗಿದೆ?
3 ದೇವರ ಇಸ್ರಾಯೇಲ್ನ ಪ್ರಮುಖ ಜವಾಬ್ದಾರಿಯು, ಯೆಹೋವನ ಮಹಿಮೆಯ ಕುರಿತಾಗಿ ಒಂದು ಸಾರ್ವಜನಿಕ ಸಾಕ್ಷಿಯನ್ನು ಕೊಡುವುದಾಗಿದೆಯೆಂದು ಪೇತ್ರನ ಮಾತುಗಳು ತೋರಿಸುತ್ತವೆ. ನಮ್ಮ ದಿನದಲ್ಲಿ ಈ ಆತ್ಮಿಕ ಜನಾಂಗವು, ದೇವರನ್ನು ಸಾರ್ವಜನಿಕವಾಗಿ ಮಹಿಮೆಗೇರಿಸುವ ಸಾಕ್ಷಿಗಳ ಒಂದು “ಮಹಾ ಸಮೂಹ” ದಿಂದಲೂ ಜತೆಗೂಡಿಸಲ್ಪಟ್ಟಿದೆ. ಅವರು “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ” ಎಂದು ಎಲ್ಲರೂ ಕೇಳಿಸಿಕೊಳ್ಳುವಂತೆ ದೊಡ್ಡ ಧ್ವನಿಯಿಂದ ಕೂಗುತ್ತಾರೆ. (ಪ್ರಕಟನೆ 7:9, 10; ಯೆಶಾಯ 60:8-10) ದೇವರ ಇಸ್ರಾಯೇಲ್ ಮತ್ತು ಅದರ ಸಂಗಡಿಗರು ತಮ್ಮ ಸಾಕ್ಷಿಯನ್ನು ಹೇಗೆ ನೆರವೇರಿಸಬಲ್ಲರು? ತಮ್ಮ ನಂಬಿಕೆ ಮತ್ತು ವಿಧೇಯತೆಯ ಮೂಲಕವೇ.
ಸುಳ್ಳು ಸಾಕ್ಷಿಗಳು
4. ಯೇಸುವಿನ ದಿನದ ಯೆಹೂದ್ಯರು ಏಕೆ ಸುಳ್ಳು ಸಾಕ್ಷಿಗಳಾಗಿದ್ದರು?
4 ದೈವಭಕ್ತಿಯ ಮೂಲಸೂತ್ರಗಳಿಗನುಸಾರ ಜೀವಿಸುವುದರಲ್ಲಿ ನಂಬಿಕೆ ಮತ್ತು ವಿಧೇಯತೆಯು ಒಳಗೂಡಿದೆ. ತನ್ನ ದಿನಗಳ ಯೆಹೂದಿ ಧಾರ್ಮಿಕ ಮುಖಂಡರ ಕುರಿತಾಗಿ ಯೇಸು ಹೇಳಿದ ವಿಷಯದಲ್ಲಿ ಇದರ ಪ್ರಮುಖತೆಯನ್ನು ಕಾಣಸಾಧ್ಯವಿದೆ. ನಿಯಮಶಾಸ್ತ್ರದ ಬೋಧಕರೋಪಾದಿ ಇವರು “ಮೋಶೆಯ ಪೀಠದಲ್ಲಿ ಕೂತುಕೊಂಡಿ” ದ್ದರು. ಅವಿಶ್ವಾಸಿಗಳನ್ನು ಮತಾಂತರಿಸಲಿಕ್ಕಾಗಿ ಅವರು ಮಿಷನೆರಿಗಳನ್ನು ಸಹ ಕಳುಹಿಸಿದರು. ಆದರೂ, ಯೇಸು ಅವರಿಗೆ ಹೇಳಿದ್ದು: “ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಸೇರಿದ ಮೇಲೆ ಅವನನ್ನು ನಿಮಗಿಂತ ಎರಡಷಾಗ್ಟಿ ನರಕ [“ಗೆಹೆನ್ನ,” NW] ಪಾತ್ರನಾಗಮಾಡುತ್ತೀರಿ.” ಈ ಮತಶ್ರದ್ಧಾಳುಗಳು ಸುಳ್ಳು ಸಾಕ್ಷಿಗಳೂ, ದುರಹಂಕಾರಿಗಳೂ, ಕಪಟಿಗಳೂ, ಪ್ರೀತಿಸದವರೂ ಆಗಿದ್ದರು. (ಮತ್ತಾಯ 23:1-12, 15) ಒಂದು ಸಂದರ್ಭದಲ್ಲಿ ಯೇಸು ಕೆಲವು ಯೆಹೂದ್ಯರಿಗೆ ಹೇಳಿದ್ದು: “ಸೈತಾನನು [“ಪಿಶಾಚನು,” NW] ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ.” ದೇವರಾದುಕೊಂಡ ಜನಾಂಗದ ಸದಸ್ಯರಿಗೆ ಅಂತಹ ಒಂದು ವಿಷಯವನ್ನು ಆತನು ಏಕೆ ಹೇಳಸಾಧ್ಯವಿತ್ತು? ಅವರು ಯೆಹೋವನ ಅತ್ಯಂತ ಮಹಾನ್ ಸಾಕ್ಷಿಯ ಮಾತುಗಳಿಗೆ ಲಕ್ಷ್ಯಕೊಡದಿರುವ ಕಾರಣದಿಂದಲೇ.—ಯೋಹಾನ 8:41, 44, 47.
5. ಕ್ರೈಸ್ತಪ್ರಪಂಚವು ದೇವರ ಕುರಿತು ಒಂದು ಸುಳ್ಳು ಸಾಕ್ಷಿಯನ್ನು ಕೊಟ್ಟಿದೆಯೆಂದು ನಾವು ಹೇಗೆ ತಿಳಿದಿದ್ದೇವೆ?
5 ಅದೇ ರೀತಿಯಲ್ಲಿ, ಯೇಸುವಿನ ಸಮಯದ ನಂತರದ ಶತಮಾನಗಳಲ್ಲಿ, ಕ್ರೈಸ್ತಪ್ರಪಂಚದಲ್ಲಿರುವ ಕೋಟ್ಯಂತರ ಜನರು ಆತನ ಶಿಷ್ಯರೆಂದು ಹೇಳಿಕೊಂಡಿದ್ದಾರೆ. ಹಾಗಿದ್ದರೂ, ಅವರು ದೇವರ ಚಿತ್ತವನ್ನು ಮಾಡಿಲ್ಲ ಮತ್ತು ಇದರಿಂದಾಗಿ ಅವರು ಯೇಸುವಿನಿಂದ ಅಂಗೀಕರಿಸಲ್ಪಡುವುದಿಲ್ಲ. (ಮತ್ತಾಯ 7:21-23; 1 ಕೊರಿಂಥ 13:1-3) ಕ್ರೈಸ್ತಪ್ರಪಂಚವು, ಯಾರಲ್ಲಿ ಅನೇಕರು ನಿಸ್ಸಂಶಯವಾಗಿ ಪ್ರಾಮಾಣಿಕರಾಗಿದ್ದಾರೊ ಅಂತಹ ಮಿಷನೆರಿಗಳನ್ನು ಕಳುಹಿಸಿದೆ. ಆದರೂ, ಪಾಪಿಗಳನ್ನು ನರಕಾಗ್ನಿಯಲ್ಲಿ ದಹಿಸಿಬಿಡುವ ಒಬ್ಬ ತ್ರಯೈಕ್ಯವಾದಿ ದೇವರನ್ನು ಆರಾಧಿಸುವಂತೆ ಅವರು ಜನರಿಗೆ ಕಲಿಸಿದರು, ಮತ್ತು ಅವರು ಮತಾಂತರ ಮಾಡಿರುವವರಲ್ಲಿ ಬಹುಸಂಖ್ಯಾತರು ಕ್ರೈಸ್ತರಾಗಿರುವ ಪುರಾವೆಯನ್ನು ಕೊಂಚವೇ ತೋರಿಸುತ್ತಾರೆ. ಉದಾಹರಣೆಗಾಗಿ, ಆಫ್ರಿಕದ ರುಆಂಡ ದೇಶವು, ರೋಮನ್ ಕ್ಯಾತೊಲಿಕ್ ಮಿಷನೆರಿಗಳಿಗೆ ಒಂದು ಫಲವತ್ತಾದ ಕ್ಷೇತ್ರವಾಗಿದೆ. ಆದರೂ, ಆ ದೇಶದಲ್ಲಿ ಇತ್ತೀಚೆಗೆ ನಡೆದ ಕುಲ ಸಂಬಂಧವಾದ ಕಾದಾಟದಲ್ಲಿ ರುಆಂಡದ ಕ್ಯಾತೊಲಿಕರು ಮನಃಪೂರ್ವಕವಾಗಿ ಜೊತೆಗೂಡಿದರು. ಅದು ಕ್ರೈಸ್ತಪ್ರಪಂಚದಿಂದ ಒಂದು ನಿಜ ಕ್ರೈಸ್ತ ಸಾಕ್ಷಿಯನ್ನು ಪಡೆದುಕೊಳ್ಳಲಿಲ್ಲವೆಂದು ಆ ಮಿಷನೆರಿ ಕ್ಷೇತ್ರದಲ್ಲಿನ ಫಲವು ತೋರಿಸುತ್ತದೆ.—ಮತ್ತಾಯ 7:15-20.
ದೈವಭಕ್ತಿಯ ಮೂಲಸೂತ್ರಗಳಿಗನುಸಾರ ಜೀವಿಸುವುದು
6. ಯಾವ ವಿಧಗಳಲ್ಲಿ ಸುನಡತೆಯು ಒಂದು ಸಾಕ್ಷಿಯನ್ನು ಕೊಡುವುದರ ಅತ್ಯಾವಶ್ಯಕ ಭಾಗವಾಗಿದೆ?
6 ಕ್ರೈಸ್ತರಾಗಿದ್ದೇವೆಂದು ಹೇಳಿಕೊಳ್ಳುವವರಿಂದ ತಪ್ಪು ನಡವಳಿಕೆಯು, “ಸತ್ಯಮಾರ್ಗಕ್ಕೆ” ಅಪಕೀರ್ತಿಯನ್ನು ತರುತ್ತದೆ. (2 ಪೇತ್ರ 2:2) ಒಬ್ಬ ಯಥಾರ್ಥ ಕ್ರೈಸ್ತನು ದೈವಭಕ್ತಿಯುಳ್ಳ ಮೂಲಸೂತ್ರಗಳಿಗನುಸಾರ ಜೀವಿಸುತ್ತಾನೆ. ಅವನು ಕದಿಯುವುದಿಲ್ಲ, ಸುಳ್ಳು ಹೇಳುವುದಿಲ್ಲ, ವಂಚಿಸುವುದಿಲ್ಲ, ಅಥವಾ ಅನೈತಿಕತೆಯನ್ನು ನಡಿಸುವುದಿಲ್ಲ. (ರೋಮಾಪುರ 2:22) ಖಂಡಿತವಾಗಿಯೂ ಅವನು ತನ್ನ ನೆರೆಯವನ ಕೊಲೆ ಮಾಡುವುದಿಲ್ಲ. ಕ್ರೈಸ್ತ ಗಂಡಂದಿರು ತಮ್ಮ ಕುಟುಂಬಗಳನ್ನು ಪ್ರೀತಿಯಿಂದ ಮೇಲ್ವಿಚಾರಣೆ ಮಾಡುತ್ತಾರೆ. ಪತ್ನಿಯರು ಆ ಮೇಲ್ವಿಚಾರಣೆಗೆ ಗೌರವಭಾವದಿಂದ ಬೆಂಬಲ ನೀಡುತ್ತಾರೆ. ಮಕ್ಕಳು ತಮ್ಮ ಹೆತ್ತವರಿಂದ ತರಬೇತುಗೊಳಿಸಲ್ಪಡುತ್ತಾರೆ ಮತ್ತು ಹೀಗೆ ಜವಾಬ್ದಾರಿಯುಳ್ಳ ಕ್ರೈಸ್ತ ವಯಸ್ಕರಾಗಲು ಸಿದ್ಧಗೊಳಿಸಲ್ಪಡುತ್ತಾರೆ. (ಎಫೆಸ 5:21–6:4) ನಾವೆಲ್ಲರೂ ಅಪರಿಪೂರ್ಣರಾಗಿದ್ದೇವೆ ಮತ್ತು ತಪ್ಪುಗಳನ್ನು ಮಾಡುತ್ತೇವೆ ನಿಜ. ಆದರೆ ಒಬ್ಬ ಯಥಾರ್ಥ ಕ್ರೈಸ್ತನು ಬೈಬಲಿನ ಮಟ್ಟಗಳನ್ನು ಗೌರವಿಸುತ್ತಾನೆ ಮತ್ತು ಅವುಗಳನ್ನು ಅನ್ವಯಿಸಿಕೊಳ್ಳಲು ಯಥಾರ್ಥವಾದ ಒಂದು ಪ್ರಯತ್ನವನ್ನು ಮಾಡುತ್ತಾನೆ. ಇದು ಇತರರಿಗೆ ಗಮನಾರ್ಹವಾಗಿದೆ ಮತ್ತು ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುತ್ತದೆ. ಕೆಲವೊಮ್ಮೆ, ಈ ಹಿಂದೆ ಸತ್ಯವನ್ನು ವಿರೋಧಿಸಿದ್ದವರು, ಕ್ರೈಸ್ತನೊಬ್ಬನ ಸುನಡತೆಯನ್ನು ಗಮನಿಸಿ, ಸತ್ಯವನ್ನು ಮೆಚ್ಚಿಕೊಂಡಿದ್ದಾರೆ.—1 ಪೇತ್ರ 2:12, 15; 3:1.
7. ಕ್ರೈಸ್ತರು ಒಬ್ಬರನ್ನೊಬ್ಬರು ಪ್ರೀತಿಸುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ?
7 “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಯೇಸು ಹೇಳಿದಾಗ, ಆತನು ಕ್ರೈಸ್ತ ನಡವಳಿಕೆಯ ಅತ್ಯಾವಶ್ಯಕ ಅಂಶವನ್ನು ತೋರಿಸಿದನು. (ಯೋಹಾನ 13:35) “ಅನ್ಯಾಯ ದುರ್ಮಾರ್ಗತನ ಲೋಲುಪ್ತಿ ದುಷ್ಟತ್ವಗಳಿಂದಲೂ ಹೊಟ್ಟೇಕಿಚ್ಚು ಕೊಲೆ ಜಗಳ ಮೋಸ ಹಗೆತನ . . . ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ” ಆಗಿರುವವರಿಂದ ಸೈತಾನನ ಲೋಕವು ಚಿತ್ರಿಸಲ್ಪಡುತ್ತದೆ. (ರೋಮಾಪುರ 1:29, 30) ಅಂತಹ ಒಂದು ಪರಿಸರದಲ್ಲಿ, ಪ್ರೀತಿಯಿಂದ ನಿರ್ದೇಶಿಸಲ್ಪಟ್ಟ ಒಂದು ಲೋಕವ್ಯಾಪಕ ಸಂಸ್ಥೆಯು, ದೇವರ ಆತ್ಮವು ಕಾರ್ಯನಡಿಸುತ್ತಿದೆ ಎಂಬುದಕ್ಕೆ ಪ್ರಬಲವಾದ ಪುರಾವೆ, ಒಂದು ಪರಿಣಾಮಕಾರಿ ಸಾಕ್ಷಿಯಾಗಿರುವುದು. ಯೆಹೋವನ ಸಾಕ್ಷಿಗಳು ಅಂತಹ ಒಂದು ಸಂಸ್ಥೆಯಾಗಿದ್ದಾರೆ.—1 ಪೇತ್ರ 2:17.
ಸಾಕ್ಷಿಗಳು ಬೈಬಲಿನ ವಿದ್ಯಾರ್ಥಿಗಳಾಗಿದ್ದಾರೆ
8, 9. (ಎ) ದೇವರ ನಿಯಮಶಾಸ್ತ್ರದ ತನ್ನ ಅಭ್ಯಾಸದಿಂದ ಮತ್ತು ಅದರ ಕುರಿತಾಗಿ ಧ್ಯಾನಿಸುವುದರಿಂದ ಕೀರ್ತನೆಗಾರನು ಹೇಗೆ ಬಲಗೊಳಿಸಲ್ಪಟ್ಟನು? (ಬಿ) ಒಂದು ಸಾಕ್ಷಿಯನ್ನು ಕೊಡುತ್ತಾ ಇರಲಿಕ್ಕಾಗಿ, ಬೈಬಲ್ ಅಭ್ಯಾಸ ಮತ್ತು ಧ್ಯಾನಿಸುವಿಕೆಯು ನಮ್ಮನ್ನು ಯಾವ ವಿಧಗಳಲ್ಲಿ ಬಲಪಡಿಸುವುದು?
8 ಒಂದು ಒಳ್ಳೆಯ ಸಾಕ್ಷಿಯನ್ನು ಕೊಡುವುದರಲ್ಲಿ ಯಶಸ್ವಿಯಾಗಲು, ಒಬ್ಬ ಕ್ರೈಸ್ತನು ಯೆಹೋವನ ನೀತಿಯ ಮೂಲಸೂತ್ರಗಳನ್ನು ತಿಳಿದುಕೊಂಡು, ಅವುಗಳನ್ನು ಪ್ರೀತಿಸಬೇಕು ಮತ್ತು ಲೋಕದ ಭ್ರಷ್ಟತೆಯನ್ನು ನಿಜವಾಗಿಯೂ ದ್ವೇಷಿಸಬೇಕು. (ಕೀರ್ತನೆ 97:10) ತನ್ನ ಸ್ವಂತ ಆಲೋಚನೆಯನ್ನು ಪ್ರವರ್ಧಿಸುವುದರಲ್ಲಿ ಈ ಲೋಕವು ಪ್ರೇರಕವಾಗಿದೆ, ಮತ್ತು ಅದರ ಆತ್ಮವನ್ನು ಪ್ರತಿರೋಧಿಸುವುದು ಕಷ್ಟಕರವಾಗಿರಸಾಧ್ಯವಿದೆ. (ಎಫೆಸ 2:1-3; 1 ಯೋಹಾನ 2:15, 16) ಸೂಕ್ತವಾದ ಮನೋಭಾವವನ್ನು ಕಾಪಾಡಿಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು? ಬೈಬಲಿನ ಕ್ರಮವಾದ ಮತ್ತು ಅರ್ಥಭರಿತ ಅಭ್ಯಾಸವೇ. 119 ನೆಯ ಕೀರ್ತನೆಯ ಬರಹಗಾರನು, ಯೆಹೋವನ ನಿಯಮಶಾಸ್ತ್ರಕ್ಕಾಗಿರುವ ತನ್ನ ಪ್ರೀತಿಯನ್ನು ಅನೇಕಬಾರಿ ಪುನರಾವರ್ತಿಸಿದ್ದಾನೆ. ಅವನು ಅದನ್ನು ಓದಿದನು ಮತ್ತು ಅದರ ಕುರಿತು ಸತತವಾಗಿ, “ದಿನವೆಲ್ಲಾ” ಧ್ಯಾನಿಸಿದನು. (ಕೀರ್ತನೆ 119:92, 93, 97-105) ಫಲಿತಾಂಶವಾಗಿ ಅವನು ಬರೆಯಸಾಧ್ಯವಾದದ್ದು: “ಮಿಥ್ಯವಾದದ್ದನ್ನು ಹಗೆಮಾಡುತ್ತೇನೆ, ಅದು ನನಗೆ ಅಸಹ್ಯವಾಗಿದೆ; ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.” ಅದಲ್ಲದೆ, ಅವನ ಗಾಢವಾದ ಪ್ರೀತಿಯು ಅವನನ್ನು ಕ್ರಿಯೆಗೈಯುವಂತೆ ಪ್ರಚೋದಿಸಿತು. ಅವನು ಹೇಳುವುದು: “ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ.”—ಕೀರ್ತನೆ 119:163, 164.
9 ತದ್ರೀತಿಯಲ್ಲಿ, ದೇವರ ವಾಕ್ಯದ ನಮ್ಮ ಕ್ರಮವಾದ ಅಭ್ಯಾಸ ಮತ್ತು ಅದರ ಕುರಿತಾದ ಧ್ಯಾನಿಸುವಿಕೆಯು, ನಮ್ಮ ಹೃದಯವನ್ನು ಸ್ಪರ್ಶಿಸುವುದು ಹಾಗೂ ನಾವು ಅನೇಕಾವರ್ತಿ, “ದಿನಕ್ಕೆ ಏಳು ಸಾರಿ” ‘ಆತನನ್ನು ಸುತ್ತಿ’ ಸಲು, ಯೆಹೋವನ ಕುರಿತು ಸಾಕ್ಷಿನೀಡಲು ನಮ್ಮನ್ನು ಪ್ರಚೋದಿಸುವುದು. (ರೋಮಾಪುರ 10:10) ಇದಕ್ಕೆ ಹೊಂದಿಕೆಯಲ್ಲಿ, ಯೆಹೋವನ ವಾಕ್ಯದ ಕುರಿತು ಕ್ರಮವಾಗಿ ಧ್ಯಾನಿಸುವವನೊಬ್ಬನು “ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂದು ಮೊದಲನೆಯ ಕೀರ್ತನೆಯ ಬರಹಗಾರನು ಹೇಳುತ್ತಾನೆ. (ಕೀರ್ತನೆ 1:3) ಅಪೊಸ್ತಲ ಪೌಲನು ಸಹ ದೇವರ ವಾಕ್ಯದ ಶಕ್ತಿಯನ್ನು ತೋರಿಸಿಕೊಟ್ಟನು. ಅವನು ಬರೆದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17.
10. ಈ ಕಡೇ ದಿವಸಗಳಲ್ಲಿ ಯೆಹೋವನ ಜನರ ಕುರಿತಾಗಿ ಯಾವ ವಿಷಯವು ಸುವ್ಯಕ್ತವಾಗಿದೆ?
10 ಈ 20 ನೆಯ ಶತಮಾನದಲ್ಲಿ ಸತ್ಯಾರಾಧಕರ ಸಂಖ್ಯೆಯಲ್ಲಿ ತೀವ್ರವಾದ ವೃದ್ಧಿಯು, ಯೆಹೋವನ ಆಶೀರ್ವಾದವನ್ನು ಸೂಚಿಸುತ್ತದೆ. ನಿಸ್ಸಂದೇಹವಾಗಿ, ಒಂದು ಗುಂಪಿನೋಪಾದಿ ದೈವಿಕ ಪರಮಾಧಿಕಾರಕ್ಕಾಗಿರುವ ಈ ಆಧುನಿಕ ದಿನದ ಸಾಕ್ಷಿಗಳು, ತಮ್ಮ ಹೃದಯಗಳಲ್ಲಿ ಯೆಹೋವನ ನಿಯಮದ ಪ್ರೀತಿಯನ್ನು ಬೆಳೆಸಿಕೊಂಡಿದ್ದಾರೆ. ಕೀರ್ತನೆಗಾರನಂತೆ, ಅವರು ಆತನ ನಿಯಮಕ್ಕೆ ವಿಧೇಯರಾಗುವಂತೆ ಮತ್ತು ಯೆಹೋವನ ಮಹಿಮೆಯ ಕುರಿತು “ಹಗಲಿರುಳು” ನಂಬಿಗಸ್ತಿಕೆಯಿಂದ ಸಾಕ್ಷಿನೀಡುವಂತೆ ಪ್ರಚೋದಿಸಲ್ಪಡುತ್ತಾರೆ.—ಪ್ರಕಟನೆ 7:15.
ಯೆಹೋವನ ಅದ್ಭುತ ಕಾರ್ಯಗಳು
11, 12. ಯೇಸು ಮತ್ತು ಆತನ ಶಿಷ್ಯರಿಂದ ನಡೆಸಲ್ಪಟ್ಟ ಅದ್ಭುತಗಳಿಂದ ಏನು ಪೂರೈಸಲ್ಪಟ್ಟಿತು?
11 ಪ್ರಥಮ ಶತಮಾನದಲ್ಲಿ, ನಂಬಿಗಸ್ತ ಕ್ರೈಸ್ತ ಸಾಕ್ಷಿಗಳ ಸಾಕ್ಷಿಯು ಸತ್ಯವಾಗಿತ್ತು ಎಂಬುದಕ್ಕೆ ಬಲವಾದ ರುಜುವಾತನ್ನು ಕೊಟ್ಟಂತಹ ಅದ್ಭುತಗಳನ್ನು ನಡಿಸಲಿಕ್ಕಾಗಿ, ಪವಿತ್ರಾತ್ಮವು ಅವರಿಗೆ ಶಕ್ತಿಯನ್ನು ಕೊಟ್ಟಿತು. ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದಾಗ, ಅವನು ಯೇಸುವನ್ನು ಹೀಗೆ ಕೇಳಲು ಶಿಷ್ಯರನ್ನು ಕಳುಹಿಸಿದನು: “ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ.” ಹೌದು ಅಥವಾ ಇಲ್ಲ ಎಂದು ಯೇಸು ಉತ್ತರಿಸಲಿಲ್ಲ. ಬದಲಾಗಿ ಆತನು ಹೇಳಿದ್ದು: “ಕುರುಡರಿಗೆ ಕಣ್ಣು ಬರುತ್ತವೆ; ಕುಂಟರಿಗೆ ಕಾಲು ಬರುತ್ತವೆ; ಕುಷ್ಠರೋಗಿಗಳು ಶುದ್ಧರಾಗುತ್ತಾರೆ; ಕಿವುಡರಿಗೆ ಕಿವಿ ಬರುತ್ತವೆ; ಸತ್ತವರು ಜೀವವನ್ನು ಹೊಂದುತ್ತಾರೆ; ಬಡವರಿಗೆ ಸುವಾರ್ತೆಸಾರಲ್ಪಡುತ್ತದೆ; ನೀವು ಹೋಗಿ ಕಂಡುಕೇಳುವವುಗಳನ್ನು ಯೋಹಾನನಿಗೆ ತಿಳಿಸಿರಿ. ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು.” (ಮತ್ತಾಯ 11:3-6) ವಾಸ್ತವವಾಗಿ ಯೇಸುವು “ಬರಬೇಕಾದವನು” ಆಗಿದ್ದನೆಂಬುದಕ್ಕೆ, ಪ್ರಬಲವಾದ ಈ ಕಾರ್ಯಗಳು ಯೋಹಾನನಿಗೆ ಒಂದು ಸಾಕ್ಷಿಯೋಪಾದಿ ಕಾರ್ಯನಡಿಸಿದವು.—ಅ. ಕೃತ್ಯಗಳು 2:22.
12 ತದ್ರೀತಿಯಲ್ಲಿ, ಯೇಸುವಿನ ಹಿಂಬಾಲಕರಲ್ಲಿ ಕೆಲವರು ಅಸ್ವಸ್ಥರನ್ನು ವಾಸಿಮಾಡಿದರು ಮತ್ತು ಸತ್ತವರನ್ನು ಕೂಡ ಎಬ್ಬಿಸಿದರು. (ಅ. ಕೃತ್ಯಗಳು 5:15, 16; 20:9-12) ಅವರ ಪರವಾಗಿ ಈ ಅದ್ಭುತಗಳು ಸ್ವತಃ ದೇವರಿಂದ ಬಂದ ಒಂದು ಸಾಕ್ಷಿಯೋಪಾದಿ ಇದ್ದವು. (ಇಬ್ರಿಯ 2:4) ಮತ್ತು ಅಂತಹ ಕಾರ್ಯಗಳು ಯೆಹೋವನ ಸರ್ವಶಕ್ತ ಅಧಿಕಾರವನ್ನು ಪ್ರದರ್ಶಿಸಿದವು. ಉದಾಹರಣೆಗಾಗಿ, “ಇಹಲೋಕಾಧಿಪತಿ” ಯಾದ ಸೈತಾನನಲ್ಲಿ ಮರಣವನ್ನು ಉಂಟುಮಾಡುವ ಸಾಧನವಿದೆಯೆಂಬುದು ಸತ್ಯ. (ಯೋಹಾನ 14:30; ಇಬ್ರಿಯ 2:14) ಆದರೆ ಪೇತ್ರನು ನಂಬಿಗಸ್ತ ಸ್ತ್ರೀಯಾದ ದೊರ್ಕಳನ್ನು ಸತ್ತವರೊಳಗಿಂದ ಎಬ್ಬಿಸಿದಾಗ, ಯೆಹೋವನು ಮಾತ್ರವೇ ಜೀವವನ್ನು ಪುನಸ್ಸಾಧ್ವೀನಪಡಿಸಬಲ್ಲವನಾದ ಕಾರಣದಿಂದ, ಅವನು ಆತನ ಶಕ್ತಿಯ ಮೂಲಕವಾಗಿ ಮಾತ್ರವೇ ಅದನ್ನು ಮಾಡಿದಿರ್ದಸಾಧ್ಯವಿದೆ.—ಕೀರ್ತನೆ 16:10; 36:9; ಅ. ಕೃತ್ಯಗಳು 2:25-27; 9:36-43.
13. (ಎ) ಯಾವ ವಿಧಗಳಲ್ಲಿ ಬೈಬಲಿನ ಅದ್ಭುತಗಳು ಯೆಹೋವನ ಶಕ್ತಿಗೆ ಇನ್ನೂ ಪ್ರಮಾಣವನ್ನು ಒದಗಿಸುತ್ತವೆ? (ಬಿ) ಯೆಹೋವನ ದೇವತ್ವವನ್ನು ರುಜುಪಡಿಸುವುದರಲ್ಲಿ ಪ್ರವಾದನೆಯ ನೆರವೇರಿಕೆಯು ಹೇಗೆ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ?
13 ಇಂದು, ಅದ್ಭುತಕರವಾದ ಆ ಕಾರ್ಯಗಳು ಇನ್ನುಮುಂದೆ ಸಂಭವಿಸುವುದಿಲ್ಲ. ಅವುಗಳ ಉದ್ದೇಶವು ಪೂರೈಸಲ್ಪಟ್ಟಿದೆ. (1 ಕೊರಿಂಥ 13:8) ಆದರೂ, ಅನೇಕ ಪ್ರೇಕ್ಷಕರಿಂದ ಪ್ರಮಾಣೀಕರಿಸಲ್ಪಟ್ಟಿರುವ ಅವುಗಳ ದಾಖಲೆಯು ನಮಗೆ ಬೈಬಲಿನಲ್ಲಿ ಇನ್ನೂ ಇದೆ. ಇಂದು ಕ್ರೈಸ್ತರು ಈ ಐತಿಹಾಸಿಕ ವೃತ್ತಾಂತಗಳಿಗೆ ಗಮನವನ್ನು ಕೊಡುವಾಗ, ಆ ಕಾರ್ಯಗಳು ಯೆಹೋವನ ಶಕ್ತಿಗೆ ಇನ್ನೂ ಒಂದು ಪರಿಣಾಮಕಾರಿ ಸಾಕ್ಷಿಯನ್ನು ಕೊಡುತ್ತಿವೆ. (1 ಕೊರಿಂಥ 15:3-6) ಇದಕ್ಕೆ ಕೂಡಿಸಿ, ಹಿಂದೆ ಯೆಶಾಯನ ದಿನದಲ್ಲಿ, ತಾನು ಸತ್ಯ ದೇವರಾಗಿದ್ದೇನೆಂಬುದಕ್ಕೆ ಒಂದು ಪ್ರಮುಖ ರುಜುವಾತಾಗಿ ಯೆಹೋವನು ನಿಷ್ಕೃಷ್ಟವಾದ ಪ್ರವಾದನೆಯ ಕಡೆಗೆ ನಿರ್ದೇಶಿಸಿದನು. (ಯೆಶಾಯ 46:8-11) ದೈವಿಕವಾಗಿ ಪ್ರೇರಿತವಾದ ಅನೇಕ ಬೈಬಲ್ ಪ್ರವಾದನೆಗಳು ಇಂದು ನೆರವೇರಿಸಲ್ಪಡುತ್ತಿವೆ—ಅವುಗಳಲ್ಲಿ ಹೆಚ್ಚಿನವು ಕ್ರೈಸ್ತ ಸಭೆಯ ಕುರಿತಾಗಿ. (ಯೆಶಾಯ 60:8-10; ದಾನಿಯೇಲ 12:6-12; ಮಲಾಕಿಯ 3:17, 18; ಮತ್ತಾಯ 24:9; ಪ್ರಕಟನೆ 11:1-13) ಹಾಗೂ ನಾವು “ಕಡೇ ದಿವಸಗಳ”ಲ್ಲಿ ಜೀವಿಸುತ್ತಿದ್ದೇವೆಂಬುದನ್ನು ಸೂಚಿಸುತ್ತಾ, ಈ ಪ್ರವಾದನೆಗಳ ನೆರವೇರಿಕೆಯು ಯೆಹೋವನನ್ನು ಏಕಮಾತ್ರ ಸತ್ಯದೇವರೋಪಾದಿ ಸಮರ್ಥಿಸುತ್ತದೆ.—2 ತಿಮೊಥೆಯ 3:1.
14. ಯೆಹೋವನು ಪರಮಾಧಿಕಾರಿ ಕರ್ತನಾಗಿದ್ದಾನೆ ಎಂಬುದಕ್ಕೆ, ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸವು ಯಾವ ವಿಧಗಳಲ್ಲಿ ಒಂದು ಪ್ರಬಲವಾದ ಸಾಕ್ಷಿಯಾಗಿದೆ?
14 ಕೊನೆಯದಾಗಿ, ತನ್ನ ಜನರಿಗಾಗಿ ಯೆಹೋವನು ಇನ್ನೂ ಮಹತ್ತರವಾದ ಸಂಗತಿಗಳನ್ನು, ಅದ್ಭುತಕರವಾದ ವಿಷಯಗಳನ್ನು ಮಾಡುತ್ತಾನೆ. ಬೈಬಲ್ ಸತ್ಯದ ಮೇಲೆ ಅಧಿಕಗೊಳ್ಳುತ್ತಿರುವ ಬೆಳಕು, ಯೆಹೋವನ ಆತ್ಮದಿಂದ ನಿರ್ದೇಶಿಸಲ್ಪಡುತ್ತಿದೆ. (ಕೀರ್ತನೆ 86:10; ಪ್ರಕಟನೆ 4:5, 6) ಲೋಕವ್ಯಾಪಕವಾಗಿ ವರದಿಸಲ್ಪಟ್ಟ ಪ್ರಮುಖ ಅಭಿವೃದ್ಧಿಗಳು, ಯೆಹೋವನು ‘ಕ್ಲುಪ್ತಕಾಲದಲ್ಲಿ ಇದನ್ನು ತರ್ವೆಗೊಳಿಸುತ್ತಿದ್ದಾನೆ’ ಎಂಬುದಕ್ಕೆ ಪುರಾವೆಗಳಾಗಿವೆ. (ಯೆಶಾಯ 60:22) ಕಡೇ ದಿವಸಗಳಲ್ಲೆಲ್ಲಾ ಒಂದಾದನಂತರ ಇನ್ನೊಂದು ದೇಶದಲ್ಲಿ ತೀವ್ರವಾದ ಹಿಂಸೆಯು ತಲೆದೋರಿರುವಾಗ, ಪವಿತ್ರಾತ್ಮದ ಬಲಪಡಿಸುವಂತಹ ಬೆಂಬಲದ ಕಾರಣದಿಂದ ಯೆಹೋವನ ಜನರ ಧೈರ್ಯಶಾಲಿ ತಾಳ್ಮೆಯು ಸಾಧ್ಯವಾಗಿದೆ. (ಕೀರ್ತನೆ 18:1, 2, 17, 18; 2 ಕೊರಿಂಥ 1:8-10) ಹೌದು, ಯೆಹೋವನು ಪರಮಾಧಿಕಾರಿ ಕರ್ತನಾಗಿದ್ದಾನೆ ಎಂಬುದಕ್ಕೆ ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸವು ವಸ್ತುತಃ ಒಂದು ಪ್ರಬಲವಾದ ಸಾಕ್ಷಿಯಾಗಿದೆ.—ಜೆಕರ್ಯ 4:6.
ಸಾರಲ್ಪಡಲಿರುವ ಸುವಾರ್ತೆ
15. ಕ್ರೈಸ್ತ ಸಭೆಯಿಂದ ಯಾವ ವಿಸ್ತೃತ ಸಾಕ್ಷಿಯು ಕೊಡಲ್ಪಡಲಿಕ್ಕಿತ್ತು?
15 ಯೆಹೋವನು ಇಸ್ರಾಯೇಲನ್ನು ಜನಾಂಗಗಳಿಗೆ ತನ್ನ ಸಾಕ್ಷಿಯೋಪಾದಿ ನೇಮಿಸಿದ್ದನು. (ಯೆಶಾಯ 43:10) ಹಾಗಿದ್ದರೂ, ಇಸ್ರಾಯೇಲ್ಯೇತರರ ಬಳಿಗೆ ಹೋಗಿ ಸಾರುವಂತೆ ಕೇವಲ ಕೆಲವು ಇಸ್ರಾಯೇಲ್ಯರಿಗೆ ದೈವಿಕವಾಗಿ ಆಜ್ಞೆಯು ಕೊಡಲ್ಪಟ್ಟಿತ್ತು, ಮತ್ತು ಇದು ಸಾಮಾನ್ಯವಾಗಿ ಯೆಹೋವನ ನ್ಯಾಯತೀರ್ಪುಗಳನ್ನು ಪ್ರಕಟಿಸಲಿಕ್ಕಾಗಿತ್ತು. (ಯೆರೆಮೀಯ 1:5; ಯೋನ 1:1, 2) ಆದರೂ, ಯೆಹೋವನು ಒಂದು ದಿನ ವಿಸ್ತಾರವಾದ ರೀತಿಯಲ್ಲಿ ತನ್ನ ಗಮನವನ್ನು ಜನಾಂಗಗಳ ಕಡೆಗೆ ತಿರುಗಿಸಲಿದನ್ದೆಂದು ಹೀಬ್ರು ಶಾಸ್ತ್ರವಚನಗಳಲ್ಲಿರುವ ಪ್ರವಾದನೆಗಳು ಸೂಚಿಸುತ್ತವೆ, ಮತ್ತು ದೇವರ ಆತ್ಮಿಕ ಇಸ್ರಾಯೇಲಿನ ಮೂಲಕ ಆತನು ಇದನ್ನು ಮಾಡಿದ್ದಾನೆ. (ಯೆಶಾಯ 2:2-4; 62:2) ಸ್ವರ್ಗಾರೋಹಣಕ್ಕೆ ಮೊದಲು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾಯ 28:19) “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದ” ಮೇಲೆ ಯೇಸು ಗಮನವನ್ನು ಕೇಂದ್ರೀಕರಿಸಿದರ್ದಿಂದ, ಆತನ ಹಿಂಬಾಲಕರು “ಎಲ್ಲಾ ಜನಾಂಗಗಳ” ಬಳಿಗೆ, “ಭೂಲೋಕದ ಕಟ್ಟಕಡೆಯ” ವರೆಗೂ ಕಳುಹಿಸಲ್ಪಟ್ಟರು. (ಮತ್ತಾಯ 15:24; ಅ. ಕೃತ್ಯಗಳು 1:8) ಕ್ರೈಸ್ತ ಸಾಕ್ಷಿಯು ಎಲ್ಲಾ ಮಾನವ ಕುಲದಿಂದ ಆಲಿಸಲ್ಪಡಬೇಕಾಗಿತ್ತು.
16. ಪ್ರಥಮ ಶತಮಾನದ ಕ್ರೈಸ್ತ ಸಭೆಯು ಯಾವ ನಿಯೋಗವನ್ನು ಪೂರೈಸಿತು, ಮತ್ತು ಎಷ್ಟು ವಿಸ್ತಾರವಾಗಿ?
16 ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡನೆಂದು ಪೌಲನು ತೋರಿಸಿದನು. ಸಾ.ಶ. 61ರ ವರ್ಷದಷ್ಟಕ್ಕೆ, ಸುವಾರ್ತೆಯು “ಲೋಕದಲ್ಲೆಲ್ಲಾ ಹಬ್ಬಿ ಫಲಕೊಟ್ಟು ವೃದ್ಧಿಯಾಗುತ್ತಾ” ಬರುತ್ತಿತ್ತೆಂದು ಅವನು ಹೇಳಶಕ್ತನಾಗಿದ್ದನು. ಆ ಸುವಾರ್ತೆಯು ಕೇವಲ ಒಂದು ಜನಾಂಗಕ್ಕೆ ಅಥವಾ “ದೇವದೂತರ ಪೂಜೆ” ಯಲ್ಲಿ ತೊಡಗಿಸಿಕೊಂಡಿದ್ದಂತಹ ಒಂದು ಪಂಥಕ್ಕೆ ಪರಿಮಿತಗೊಳಿಸಲ್ಪಟ್ಟಿರಲ್ಲಿಲ. ಬದಲಾಗಿ, ಅದು ಬಹಿರಂಗವಾಗಿ “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪ” ಟ್ಟಿತು. (ಕೊಲೊಸ್ಸೆ 1:6, 23; 2:13, 14, 16-18) ಹೀಗೆ, ಪ್ರಥಮ ಶತಮಾನದಲ್ಲಿನ ದೇವರ ಇಸ್ರಾಯೇಲ್, “[ಅವರನ್ನು] ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡು”ವ ತನ್ನ ನಿಯೋಗವನ್ನು ಪೂರೈಸಿತು.
17. ಮತ್ತಾಯ 24:14 ವ್ಯಾಪಕವಾದ ರೀತಿಯಲ್ಲಿ ಹೇಗೆ ನೆರವೇರುತ್ತಾ ಮುಂದುವರಿಯುತ್ತಿದೆ?
17 ಆದರೂ, ಆ ಪ್ರಥಮ ಶತಮಾನದ ಸಾರುವ ಕೆಲಸವು, ಕಡೇ ದಿವಸಗಳಲ್ಲಿ ಸಾಧಿಸಲ್ಪಡಲಿರುವ ಕೆಲಸದ ಕೇವಲ ಒಂದು ಮುನ್ಸೂಚನೆಯಾಗಿತ್ತು. ವಿಶೇಷವಾಗಿ ನಮ್ಮ ಸಮಯಕ್ಕಾಗಿ ಎದುರುನೋಡುತ್ತಾ ಯೇಸು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14; ಮಾರ್ಕ 13:10) ಈ ಪ್ರವಾದನೆಯು ನೆರವೇರಿಸಲ್ಪಟ್ಟಿದೆಯೊ? ನಿಜವಾಗಿಯೂ ಅದು ನೆರವೇರಿಸಲ್ಪಟ್ಟಿದೆ. 1919 ರಲ್ಲಿ ಚಿಕ್ಕದಾಗಿ ಆರಂಭವಾಗಿ, ಸುವಾರ್ತೆಯ ಸಾರುವಿಕೆಯು ಈಗ 230 ಕ್ಕಿಂತಲೂ ಹೆಚ್ಚಿನ ದೇಶಗಳಿಗೆ ವಿಸ್ತೃತಗೊಳಿಸಲ್ಪಟ್ಟಿದೆ. ಉತ್ತರದ ಶೀತ ವಲಯದಲ್ಲಿಯೂ ಉಷ್ಣವಲಯದ ದೇಶಗಳಲ್ಲಿಯೂ ಸಾಕ್ಷಿಯು ಆಲಿಸಲ್ಪಡುತ್ತಿದೆ. ದೊಡ್ಡ ಭೂಖಂಡಗಳು ಆವರಿಸಲ್ಪಡುತ್ತಿವೆ, ಮತ್ತು ಅವುಗಳ ನಿವಾಸಿಗಳು ಒಂದು ಸಾಕ್ಷಿಯನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಬಹುದೂರದ ದ್ವೀಪಗಳನ್ನು ಕಂಡುಹಿಡಿಯಲಾಗುತ್ತಿದೆ. ಬಾಸ್ನಿಯ ಮತ್ತು ಹರ್ಸೆಗೋವಿನದಲ್ಲಿನ ಯುದ್ಧದಂತಹ ಭಾರಿ ಉತ್ಪವ್ಲನದ ಮಧ್ಯೆಯೂ, ಸುವಾರ್ತೆಯು ಸಾರಲ್ಪಡುತ್ತಾ ಮುಂದುವರಿಯುತ್ತಿದೆ. ಪ್ರಥಮ ಶತಮಾನದಲ್ಲಿದ್ದಂತೆ, ಸಾಕ್ಷಿಯು “ಸರ್ವಲೋಕದಲ್ಲಿ” ಫಲವನ್ನು ಕೊಡುತ್ತಿದೆ. “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸುವಾರ್ತೆಯು ಬಹಿರಂಗವಾಗಿ ಪ್ರಕಟಿಸಲ್ಪಡುತ್ತಿದೆ. ಫಲಿತಾಂಶವೇನು? ಮೊದಲಾಗಿ, “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ದೇವರ ಇಸ್ರಾಯೇಲ್ಯರಲ್ಲಿ ಉಳಿಕೆಯವರು ಒಟ್ಟುಗೂಡಿಸಲ್ಪಟ್ಟಿದ್ದಾರೆ. ಎರಡನೆಯದಾಗಿ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿ” ರುವವರೊಳಗಿಂದ “ಮಹಾ ಸಮೂಹ”ದ ಲಕ್ಷಾಂತರ ಜನರನ್ನು ಒಳತರುವ ಕೆಲಸವು ಆರಂಭವಾಯಿತು. (ಪ್ರಕಟನೆ 5:9; 7:9) ಮತ್ತಾಯ 24:14, ಒಂದು ವ್ಯಾಪಕವಾದ ರೀತಿಯಲ್ಲಿ ನೆರವೇರುತ್ತಾ ಮುಂದುವರಿಯುತ್ತದೆ.
18. ಸುವಾರ್ತೆಯ ಲೋಕವ್ಯಾಪಕವಾದ ಸಾರುವಿಕೆಯಿಂದ ಪೂರೈಸಲ್ಪಡುತ್ತಿರುವ ಕೆಲವು ಸಂಗತಿಗಳಾವುವು?
18 ಯೇಸುವಿನ ರಾಜಯೋಗ್ಯ ಸಾನ್ನಿಧ್ಯವು ಆರಂಭಗೊಂಡಿದೆ ಎಂಬುದನ್ನು ರುಜುಪಡಿಸಲು, ಸುವಾರ್ತೆಯ ಲೋಕವ್ಯಾಪಕ ಸಾರುವಿಕೆಯು ಸಹಾಯ ಮಾಡುತ್ತದೆ. (ಮತ್ತಾಯ 24:3) ಇನ್ನೂ ಹೆಚ್ಚಾಗಿ, ಮಾನವ ಕುಲಕ್ಕಾಗಿರುವ ಏಕಮಾತ್ರ ನಿರೀಕ್ಷೆಯಾದ ಯೆಹೋವನ ರಾಜ್ಯದ ಕಡೆಗೆ ಅದು ಜನರನ್ನು ನಿರ್ದೇಶಿಸುವಾಗ, ಅದು “ಭೂಮಿಯ ಪೈರು” ಕೊಯ್ಯಲ್ಪಡುತ್ತಿರುವ ಮುಖ್ಯ ಸಾಧನವಾಗಿದೆ. (ಪ್ರಕಟನೆ 14:15, 16) ಸುವಾರ್ತೆಯ ಸಾರುವಿಕೆಯಲ್ಲಿ ಯಥಾರ್ಥ ಕ್ರೈಸ್ತರು ಮಾತ್ರವೇ ಭಾಗವಹಿಸುತ್ತಿರುವುದರಿಂದ, ಸುಳ್ಳು ಕ್ರೈಸ್ತರಿಂದ ಸತ್ಯ ಕ್ರೈಸ್ತರನ್ನು ವಿಂಗಡಿಸಲು ಈ ಪ್ರಮುಖವಾದ ಕಾರ್ಯವು ಸಹಾಯ ಮಾಡುತ್ತದೆ. (ಮಲಾಕಿಯ 3:18) ಈ ರೀತಿಯಲ್ಲಿ, ಸಾರುವವರ ಹಾಗೂ ಪ್ರತಿಕ್ರಿಯೆ ತೋರಿಸುವವರ ರಕ್ಷಣೆಗಾಗಿ ಇದು ಕಾರ್ಯನಡಿಸುತ್ತದೆ. (1 ತಿಮೊಥೆಯ 4:16) ಅತಿ ಪ್ರಾಮುಖ್ಯವಾಗಿ, ಸುವಾರ್ತೆಯನ್ನು ಸಾರುವುದು, ಅದು ಸಾರಲ್ಪಡಬೇಕೆಂದು ಆಜ್ಞಾಪಿಸಿದ, ಅದನ್ನು ಸಾರುವವರಿಗೆ ಬೆಂಬಲ ಕೊಡುವ, ಮತ್ತು ಅದನ್ನು ಫಲಭರಿತವಾಗಿ ಮಾಡುವ ಯೆಹೋವ ದೇವರಿಗೆ ಸುತ್ತಿ ಮತ್ತು ಮಹಿಮೆಯನ್ನು ತರುತ್ತದೆ.—2 ಕೊರಿಂಥ 4:7.
19. ಅವರು ಹೊಸ ಸೇವಾ ವರ್ಷವನ್ನು ಪ್ರವೇಶಿಸುವಾಗ, ಎಲ್ಲಾ ಕ್ರೈಸ್ತರು ಯಾವ ದೃಢನಿಶ್ಚಯವನ್ನು ಮಾಡುವಂತೆ ಉತ್ತೇಜಿಸಲ್ಪಡುತ್ತಾರೆ?
19 ಅಪೊಸ್ತಲ ಪೌಲನು “ನಾನು ಸುವಾರ್ತೆಯನ್ನು . . . ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ” ಎಂದು ಹೇಳುವಂತೆ ಪ್ರಚೋದಿಸಲ್ಪಟ್ಟದ್ದರಲ್ಲಿ ಆಶ್ಚರ್ಯವಿಲ್ಲ! (1 ಕೊರಿಂಥ 9:16) ಇಂದು ಕ್ರೈಸ್ತರು ಅದೇ ರೀತಿ ಭಾವಿಸುತ್ತಾರೆ. ಈ ಅಂಧಕಾರಭರಿತ ಲೋಕದಲ್ಲಿ ಸತ್ಯದ ಬೆಳಕನ್ನು ಬೀರುತ್ತಾ, “ದೇವರ ಜೊತೆಕೆಲಸದವ” ರಾಗಿರುವುದು ಒಂದು ಭವ್ಯವಾದ ಸುಯೋಗವೂ ಮಹಾನ್ ಜವಾಬ್ದಾರಿಯೂ ಆಗಿದೆ. (1 ಕೊರಿಂಥ 3:9; ಯೆಶಾಯ 60:2, 3) 1919 ರಲ್ಲಿ ಸಣ್ಣದಾಗಿ ಆರಂಭಗೊಂಡಿದ್ದ ಕಾರ್ಯವು ಈಗ ದಿಗ್ಭಮ್ರೆಗೊಳಿಸುವ ಪ್ರಮಾಣಗಳನ್ನು ತಲಪಿದೆ. ಇತರರಿಗೆ ರಕ್ಷಣೆಯ ಸಂದೇಶವನ್ನು ಕೊಂಡೊಯ್ಯಲು ಒಂದು ವರ್ಷಕ್ಕೆ ಶತಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಅವರು ವ್ಯಯಿಸಿದಂತೆ, ಬಹುಮಟ್ಟಿಗೆ 50 ಲಕ್ಷ ಕ್ರೈಸ್ತರು ದೈವಿಕ ಪರಮಾಧಿಕಾರಕ್ಕಾಗಿ ಸಾಕ್ಷಿನೀಡುತ್ತಿದ್ದಾರೆ. ಯೆಹೋವನ ಹೆಸರನ್ನು ಪವಿತ್ರೀಕರಿಸುವ ಈ ಕಾರ್ಯದಲ್ಲಿ ಒಂದು ಭಾಗವನ್ನು ಹೊಂದಿರುವುದು ಎಂತಹ ಒಂದು ಹರ್ಷವಾಗಿದೆ! ನಾವು 1996ರ ಸೇವಾ ವರ್ಷವನ್ನು ಪ್ರವೇಶಿಸುವಾಗ, ನಿಧಾನಗೊಳ್ಳದಿರಲು ನಾವು ದೃಢನಿಶ್ಚಯ ಮಾಡೋಣ. ಬದಲಾಗಿ, ತಿಮೊಥೆಯನಿಗೆ ಬರೆದ ಪೌಲನ ಮಾತುಗಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ಲಕ್ಷ್ಯಕೊಡುವೆವು: “ದೇವರ ವಾಕ್ಯವನ್ನು ಸಾರು, . . . ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ನಾವು ಹಾಗೆ ಮಾಡುವಾಗ, ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಾ ಮುಂದುವರಿಯುವಂತೆ ನಾವು ನಮ್ಮ ಸಂಪೂರ್ಣ ಹೃದಯಗಳಿಂದ ಪ್ರಾರ್ಥಿಸುತ್ತೇವೆ.
ನಿಮಗೆ ನೆನಪಿದೆಯೆ?
◻ ಜನಾಂಗಗಳಿಗೆ ಯೆಹೋವನ “ಸಾಕ್ಷಿ” ಯೋಪಾದಿ ಇಸ್ರಾಯೇಲನ್ನು ಯಾರು ಸ್ಥಾನಪಲ್ಲಟಗೊಳಿಸಿದರು?
◻ ಒಂದು ಸಾಕ್ಷಿಯನ್ನು ಕೊಡುವುದರಲ್ಲಿ ಕ್ರೈಸ್ತ ನಡವಳಿಕೆಯು ಹೇಗೆ ನೆರವನ್ನೀಯುತ್ತದೆ?
◻ ಬೈಬಲಿನ ಅಭ್ಯಾಸ ಮತ್ತು ಅದರ ಕುರಿತಾಗಿ ಧ್ಯಾನಿಸುವುದು, ಕ್ರೈಸ್ತ ಸಾಕ್ಷಿಗಾಗಿ ಏಕೆ ಅತ್ಯಾವಶ್ಯಕವಾಗಿದೆ?
◻ ಯೆಹೋವನು ಪರಮಾಧಿಕಾರಿ ಕರ್ತನಾಗಿದ್ದಾನೆ ಎಂಬುದಕ್ಕೆ, ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಇತಿಹಾಸವು ಯಾವ ವಿಧದಲ್ಲಿ ಒಂದು ಪುರಾವೆಯೋಪಾದಿ ಕಾರ್ಯನಡಿಸುತ್ತದೆ?
◻ ಸುವಾರ್ತೆಯ ಸಾರುವಿಕೆಯಿಂದ ಏನು ಪೂರೈಸಲ್ಪಡುತ್ತಿದೆ?
[ಪುಟ 15 ರಲ್ಲಿರುವ ಚಿತ್ರಗಳು]
ನಿರ್ಬಂಧಿಸಲ್ಪಡುವುದಕ್ಕೆ ಬದಲಾಗಿ, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಿಹೇಳಲ್ಪಡುತ್ತಿದೆ