‘ಓ, ಪ್ರತಿಯೊಬ್ಬರು ಅವರಂತೆಯೇ ಇದ್ದಿರುತ್ತಿದ್ದರೆ!’
ಲಕ್ಸಮ್ಬರ್ಗ್ ವೃತ್ತಪತ್ರಕೆಯಾದ, ಲೆಟ್ಸೆಬ್ಯೂರ್ಗರ್ ಸೂರ್ನಾ ನಲ್ಲಿನ ಒಬ್ಬ ಅಂಕಣಕಾರನ ಮಾತುಗಳು ಇವುಗಳಾಗಿದ್ದವು. ಅವನು ಯಾರ ಕುರಿತಾಗಿ ಮಾತಾಡುತ್ತಿದ್ದನು?
ಆಶ್ವಿಟ್ಸ್ನ ವಿಮೋಚನೆಯ 50ನೇ ವಾರ್ಷಿಕೋತ್ಸವದ ಆಚರಣೆಯೊಂದಕ್ಕೆ ಉಪಸ್ಥಿತನಾಗಲು ಅವನು ಪೋಲೆಂಡ್ಗೆ ಹೋಗಿದ್ದನು ಮತ್ತು ಅಲ್ಲಿ ಅತ್ಯಂತ ಹೆಚ್ಚು ಕಷ್ಟಾನುಭವಿಸಿದ್ದ ಗುಂಪೊಂದರ ವಿಷಯವು ಎಂದೂ ಉಲ್ಲೇಖಿಸಲ್ಪಟ್ಟಿರದ್ದನ್ನು ಅವನು ಗಮನಿಸಿದನು. ಫೆಬ್ರವರಿ 2, 1995ರ ತನ್ನ ಅಂಕಣದಲ್ಲಿ, ಈ ಗುಂಪು ಯೆಹೋವನ ಸಾಕ್ಷಿಗಳೆಂದು ಅವನು ಗುರುತಿಸಿ ಬರೆದುದು: “ಅತಿ ಕಾಠಿನ್ಯದ ಬಂಧನ ಅಥವಾ ಕೂಟಶಿಬಿರವಾಗಲಿ, ಇಲ್ಲವೇ ಉಪವಾಸದ ಬೋಳು ಸಾಲು ಮನೆಗಳಲ್ಲಿ ಅಥವಾ ಕೊಡಲಿ ಯಾ ಶಿರಚ್ಛೇದಕ ಯಂತ್ರದಿಂದ ಸಾಯುವ ಬೆದರಿಕೆಯಾಗಲಿ, ಅವರ ನಂಬಿಕೆಯನ್ನು ತಿರಸ್ಕರಿಸುವಂತೆ ಮಾಡಲಸಾಧ್ಯವಾಯಿತು.” ಅವನು ಮುಂದುವರಿಸಿದ್ದು: “ತಮ್ಮ ಮರಣವನ್ನು ಸ್ವೀಕರಿಸಿದ ಯೆಹೋವನ ಸಾಕ್ಷಿಗಳ ಎದೆಗಾರಿಕೆಗೆ, ನಿರ್ದಯರಾದ ಎಸ್ಎಸ್ ಗಾರ್ಡ್ಗಳು ಕೂಡ ಬೆರಗಾದರು.”
ಯೆಹೋವನ ಸಾಕ್ಷಿಗಳು ಮರಣವನ್ನು ಅರಸಲಿಲ್ಲ. ಆದರೆ, ಪ್ರಥಮ ಶತಮಾನದಲ್ಲಿನ ಕ್ರೈಸ್ತರಂತೆ, ಅವರಲ್ಲಿ ಸಾವಿರಾರು ಮಂದಿ, ಕ್ರೈಸ್ತ ತತ್ತಗ್ವಳನ್ನು ಸಂಧಾನಮಾಡಿಕೊಳ್ಳುವ ಬದಲು, ಮರಣವನ್ನು ಆರಿಸಿಕೊಂಡರು. ಅಂಥ ನಂಬಿಕೆಯು ತೃತಿಯ ಜರ್ಮನ್ ಸರಕಾರದ ಉತ್ಸಾಹಶೂನ್ಯ ದಿನಗಳಲ್ಲಿ ಅವರನ್ನು ಗಮನಾರ್ಹವಾಗಿ ಭಿನ್ನರಾಗಿರುವಂತೆ ಗುರುತಿಸಿತು.
ಅಂಕಣಕಾರನು ಸಮಾಪ್ತಿಗೊಳಿಸಿದ್ದು: “ಓ, ಸಕಲ ಜನರು ಯೆಹೋವನ ಸಾಕ್ಷಿಗಳಂತೆ ಇದ್ದಿರುತ್ತಿದ್ದರೆ!” ಅವರು ಆ ರೀತಿಯಲ್ಲಿ ಇದ್ದಿರುತ್ತಿದ್ದರೆ, ಎರಡನೆಯ ಲೋಕ ಯುದ್ಧವು ಎಂದೂ ಸಂಭವಿಸತ್ತಿರಲಿಲ್ಲ.