ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಸತ್ಯ ಕ್ರೈಸ್ತರು ಹಿಂಸಿಸಲ್ಪಡುವರು
ಹೇಬೆಲನ ದಿನಗಳಿಂದಲೂ, ಯೆಹೋವನ ಸೇವಕರಲ್ಲಿ ಅನೇಕರು ಧಾರ್ಮಿಕ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ. (ಲೂಕ 11:49-51) ಮತ್ತು ಇದು ಆಶ್ಚರ್ಯಕರವೇನೂ ಆಗಿರುವುದಿಲ್ಲ, ಏಕೆಂದರೆ ಬೈಬಲ್ ಎಚ್ಚರಿಸುವುದು, “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು”! (2 ತಿಮೊಥೆಯ 3:12) ಅಂತೆಯೇ, ಇಂದು 25 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ನಿಷೇಧದ ಕೆಳಗಿದ್ದಾರೆ ಮತ್ತು ಹಿಂಸೆಯನ್ನು ಸಹಿಸಿಕೊಂಡಿದ್ದಾರೆ.
ಯೆಹೋವನ ಸಾಕ್ಷಿಗಳು ಕೇವಲ ನಿಷೇಧಿಸಲ್ಪಟ್ಟಿರುವುದು ಮಾತ್ರವಲ್ಲ ಧಾರ್ಮಿಕ ಆಸ್ತಿಕರಿಂದ ಸಹ ಹಿಂಸಿಸಲ್ಪಟ್ಟಿರುವ ದೇಶವೊಂದರಲ್ಲಿ, 12,000 ಕ್ಕಿಂತಲೂ ಹೆಚ್ಚಿನ ಸುವಾರ್ತೆಯ ಪ್ರಚಾರಕರು 15,000 ಕ್ಕಿಂತಲೂ ಹೆಚ್ಚಿನ ಜನರೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಾ, ಹುರುಪಿನಿಂದ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ. ನಿಶ್ಚಯವಾಗಿ, ಅವರ ಸಾರುವ ಕಾರ್ಯವು ವಿವೇಚನೆಯೊಂದಿಗೆ ಮಾಡಲ್ಪಡುತ್ತದೆ. ಸಾಮಾನ್ಯವಾಗಿ, ಅವರು ತಮ್ಮ ಕ್ರೈಸ್ತ ಕೂಟಗಳನ್ನು ಖಾಸಗಿ ಮನೆಗಳಲ್ಲಿ ನಡೆಸುತ್ತಾರೆ, ಮತ್ತು ಅಂಥ ಕೂಟಗಳಿಗೆ ಆಸಕ್ತ ಜನರನ್ನು ಆಮಂತ್ರಿಸುವಾಗ ಅವರು ಎಚ್ಚರಿಕೆಯಿಂದಿರುತ್ತಾರೆ.
ಯಾರು ಈಗ ತಮ್ಮ ಕೆಲಸಗಳಲ್ಲಿ ಹೆಚ್ಚಿನದನ್ನು ಯಾವುದೇ ಕೆಣಕುವ ಹಸ್ತಕ್ಷೇಪವಿಲ್ಲದೆ ಮಾಡುತ್ತಾರೋ, ಆ ಸಾಕ್ಷಿಗಳೆಡೆಗೆ ಇತ್ತೀಚೆಗೆ ಸರಕಾರವು ಒಂದು ಹೆಚ್ಚು ದಯಾಪರ ಮನೋಭಾವವನ್ನು ತೆಗೆದುಕೊಂಡಿದೆ. ಹಾಗಿದ್ದರೂ, ಕ್ಲೇಶವನ್ನು ಕೆರಳಿಸಲು ವಿವಿಧ ಧಾರ್ಮಿಕ ಗುಂಪುಗಳು ತಮ್ಮ ಪ್ರಭಾವವನ್ನು ಬಳಸಿವೆ.
ಒಂದು ಪಟ್ಟಣದಲ್ಲಿ, ಸುಮಾರು 50 ಯೆಹೋವನ ಸಾಕ್ಷಿಗಳು ಸಭಾ ಕೂಟವೊಂದನ್ನು ನಡೆಸುತ್ತಿದ್ದ ಒಂದು ಮನೆಯ ಕಡೆಗೆ, ಸುಮಾರು 200 ಧಾರ್ಮಿಕ ಮತಭ್ರಾಂತರ ಒಂದು ಕುಪಿತ ಗಲಭೆಗ್ರಸ್ತ ಗುಂಪು ಹೋಯಿತು. ಗಲಭೆಗ್ರಸ್ತ ಜನರಲ್ಲಿ ಕೆಲವರು ಕಲ್ಲುಗಳನ್ನು ಕೊಂಡೊಯ್ಯುತ್ತಿದ್ದರು ಮತ್ತು ಧಾರ್ಮಿಕ ಗುಂಪುಕೂಗುಗಳನ್ನು ಉದ್ಘೋಷಿಸುತ್ತಿದ್ದರು. ಅವರ ಸ್ಫುಟವಾದ ಉದ್ದೇಶವು ಸಾಕ್ಷಿಗಳನ್ನು ಆಕ್ರಮಿಸುವುದು ಮತ್ತು ಮನೆಯನ್ನು ಧ್ವಂಸಗೊಳಿಸುವುದೇ ಆಗಿತ್ತು. ಧಾರ್ಮಿಕ ಮುಖಂಡರು ಕೂಟ ಚಟುವಟಿಕೆಗಳನ್ನು ಕೆಲವು ಸಮಯದಿಂದ ಗಮನಿಸುತ್ತಿದ್ದು ಆಕ್ರಮಣ ಮಾಡಲು ಸರಿಯಾದ ಕ್ಷಣಕ್ಕಾಗಿ ಕಾದಿದ್ದರು ಎಂಬುದು ಸ್ಪಷ್ಟ. ಗಲಭೆಗ್ರಸ್ತ ಜನರು ಇನ್ನೇನು ಮನೆಯೊಳಗೆ ಪ್ರವೇಶಿಸಲಿದ್ದಾಗ, 15 ಪೊಲೀಸರು ಬಂದು ಗುಂಪು ಚದರಿಹೋಗುವಂತೆ ಆದೇಶಿಸಿದರು. ಸಾಕ್ಷಿಗಳಲ್ಲಿ ಯಾರೊಬ್ಬರಿಗೂ ಪೊಲೀಸರಿಗೆ ತಿಳಿಯಪಡಿಸಲೂ ಸಮಯವಿಲ್ಲದ್ದಿದ ಕಾರಣ, ಇದು ಸಾಕ್ಷಿಗಳಿಗೆ ಒಂದು ಅನಿರೀಕ್ಷಿತ ವಿಷಯವಾಗಿತ್ತು.
ಆದರೂ, ಇತರ ಸಂದರ್ಭಗಳಲ್ಲಿ, ವಿರೋಧಿಗಳು ಹೆಚ್ಚು ಸಫಲರಾಗಿದ್ದಾರೆ. ಹಲವಾರು ಸಾಕ್ಷಿಗಳು ನ್ಯಾಯವಿಚಾರಣೆಗೊಳಪಟ್ಟು ಸೆರೆಮನೆಗೆ ಹಾಕಲ್ಪಟ್ಟಿದ್ದಾರೆ. ಒಂದು ಕೋರ್ಟ್ ಮೊಕದ್ದಮೆಯು ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಇತ್ತು, ಮತ್ತು ಸ್ಪಷ್ಟವಾಗಿಗಿಯೇ, ವಾದಿಗಳು ಅದರಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ಹಾಗಿದ್ದರೂ, ಸ್ಥಳಿಕ ವೈದಿಕನ ಚಿತಾವಣೆಯಿಂದ, ವಿಷಯವು ಪುನಃ ಕೋರ್ಟಿಗೆ ತರಲ್ಪಟ್ಟಿತು, ಮತ್ತು ಸಾಕ್ಷಿಗೆ ಸೆರೆಮನೆ ಶಿಕ್ಷೆಯು ನೀಡಲ್ಪಟ್ಟಿತು.
ಮತ್ತೊಂದು ಸ್ಥಳದಲ್ಲಿ, ಕರ್ತನ ಸಂಧ್ಯಾ ಭೋಜನವನ್ನು ಆಚರಿಸಲು ಸಾಕ್ಷಿಗಳ ಒಂದು ಗುಂಪು ಖಾಸಗಿ ಮನೆಯೊಂದರಲ್ಲಿ ಕೂಡಿಬಂತು. ಆ ಸಂಜೆಯ ಅನಂತರ ಹಲವಾರು ಪೊಲೀಸರು, ಆ ಮನೆಯವನನ್ನು ಮತ್ತು ಕೂಟವನ್ನು ನಡೆಸಿದ ಹಿರಿಯನನ್ನು ಬಂಧಿಸಿದರು. ಪೊಲೀಸ್ ಠಾಣೆಯಲ್ಲಿ, ಅವರು ನಿರ್ದಾಕ್ಷಿಣ್ಯವಾಗಿ ಹೊಡೆಯಲ್ಪಟ್ಟರು. ಹಲವಾರು ತಾಸುಗಳ ವರೆಗೆ ಕ್ರೂರವಾದೊಂದು ಪ್ರಶ್ನಿಸುವಿಕೆಯು ನಡೆಯಿತು. ಒಂದು ತಣ್ಣಗಿನ ಬಾವಿಯಲ್ಲಿ ಮುಳುಗಿಸಲ್ಪಟ್ಟ ಕ್ರೂರ ಯಾತನೆಯನ್ನು ಸಹ ಸಾಕ್ಷಿಗಳಲ್ಲಿ ಒಬ್ಬನು ಸಹಿಸಿಕೊಂಡನು.
ಪೊಲೀಸರು ಅಂಥ ಒಂದು ಆಕ್ರಮಣವನ್ನು ಏಕೆ ನಡೆಸುತ್ತಿದ್ದರು? ಪುನಃ, ಸ್ಥಳಿಕ ವೈದಿಕನ ಸಹಾಯದೊಂದಿಗೆ ಧಾರ್ಮಿಕ ಮತಭ್ರಾಂತರ ಒಂದು ಗುಂಪು ಪೊಲೀಸ್ ಕಾರ್ಯದ ಹಿಂದೆಯಿತ್ತು. ಬಂಧನಗಳು ತನ್ನ ಅನುಮತಿಯಿಲ್ಲದೆ ಮಾಡಲ್ಪಟ್ಟಿದ್ದವೆಂದು ಅನಂತರ ಪೊಲೀಸ್ ಮುಖ್ಯಾಧಿಕಾರಿಯು ತಿಳಿಯಪಡಿಸಿದನು. ಕ್ಷಮಾಯಾಚನೆಯೊಂದು ನೀಡಲ್ಪಟ್ಟಿತು, ಮತ್ತು ಹೊಡೆಯುವಿಕೆಗಳಿಗೆ ಜವಾಬ್ದಾರರಾದ ವ್ಯಕ್ತಿಗಳು ಶಿಕ್ಷೆಗೊಳಪಟ್ಟರು.
ಹಿಂಸಾತ್ಮಕ ವಿರೋಧದ ಎದುರಿನಲ್ಲಿಯೂ, ಲೋಕದಾದ್ಯಂತ, ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸಿದ್ದಾರೆ. ಯೇಸುವಿನ ಬುದ್ಧಿವಾದವನ್ನು ಅವರು ಅನುಸರಿಸುತ್ತಾರೆ: “ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ.”—ಮತ್ತಾಯ 10:16.
[ಪುಟ 31 ರಲ್ಲಿರುವ ಚಿತ್ರ]
ಹಿಂಸಿಸಲ್ಪಟ್ಟವರಲ್ಲಿ ಹೇಬೆಲನು ಮೊದಲಿಗನಾಗಿದ್ದನು