‘ಕಬ್ಬಿಣವು ಕಬ್ಬಿಣವನ್ನು ಹರಿತ ಮಾಡುವ ಹಾಗೆ’
ಸಾ.ಶ. ಮೂರನೆಯ ಶತಮಾನದ ಅಂತ್ಯದ ಸುಮಾರಿಗೆ, “ಕಾಪ್ಟಿಕ್ ಕ್ರೈಸ್ತ”ನೆಂದು ವರ್ಣಿಸಲ್ಪಟ್ಟ ಒಬ್ಬ ಶ್ರದ್ಧಾಯುಕ್ತ ತರುಣನಾದ ಆ್ಯಂಟನಿ ಎಂಬವನು ಈ ಲೋಕದಿಂದ ನಿವೃತ್ತಿಯನ್ನು ಪಡೆದು, ಮರುಭೂಮಿಯಲ್ಲಿ 20 ವರ್ಷಗಳನ್ನು ಏಕಾಂತವಾಸದಲ್ಲಿ ಕಳೆದನು. ಯಾಕೆ? ತನಗೆ ದೇವರನ್ನು ಸೇವಿಸಲು ಇದು ಅತ್ಯುತ್ತಮ ವಿಧಾನವಾಗಿತ್ತೆಂದು ಅವನಿಗೆ ಅನಿಸಿತು. ಅವನು ಕ್ರೈಸ್ತಪ್ರಪಂಚದ ಮೊದಲನೆಯ ಪ್ರಭಾವಶಾಲಿ ವಿರಕ್ತ ಅಥವಾ ವಿರಾಗಿಯಾಗಿದ್ದನು.
ಇಂದು ಕ್ರೈಸ್ತಪ್ರಪಂಚದಲ್ಲಿ ಕೊಂಚವೇ ವಿರಕ್ತರಿದ್ದಾರೆ. ಆದರೆ ಅಧಿಕಾಧಿಕ ಜನರು ಇನ್ನೊಂದು ರೀತಿಯಲ್ಲಿ ಏಕಾಂತವಾಸವನ್ನು ಹುಡುಕುತ್ತಾರೆ. ಧರ್ಮದ ಕುರಿತು ಇತರರೊಂದಿಗೆ ಮಾತಾಡಲು ಅವರು ನಿರಾಕರಿಸುತ್ತಾರೆ, ಅಂತಹ ಮಾತು ಭಿನ್ನಾಭಿಪ್ರಾಯಗಳಿಗೆ ಮತ್ತು ಜಗಳಗಳಿಗೆ ನಡಿಸುತ್ತದೆಂಬುದು ಅವರ ಭಾವನೆ. ಅವರ ಆರಾಧನೆಯಲ್ಲಿ ಮುಖ್ಯವಾಗಿ ತಮ್ಮ ನೆರೆಯವರಿಗೆ ಯಾವ ಹಾನಿಯನ್ನೂ ಮಾಡದಿರುವುದು ಒಳಗೂಡಿರುತ್ತದೆ.
ನಿಜ, ಒಬ್ಬನ ನೆರೆಯವನಿಗೆ ಯಾವ ಹಾನಿಯನ್ನೂ ಮಾಡದಿರುವುದು ಸತ್ಯ ಧರ್ಮದ ಒಂದು ಭಾಗ, ಆದರೆ ಹೆಚ್ಚಿನದ್ದು ಬೇಕಾಗಿದೆ. ಒಂದು ಪ್ರಾಚೀನ ಜ್ಞಾನೋಕ್ತಿ ಹೇಳುವುದು: “ಕಬ್ಬಿಣದಿಂದ ಕಬ್ಬಿಣವು ತಾನೇ ಹರಿತಗೊಳ್ಳುತ್ತದೆ. ಹಾಗೆಯೇ ಒಬ್ಬನು ಇನ್ನೊಬ್ಬನ ಮುಖವನ್ನು ಹರಿತಮಾಡುವನು.” (ಜ್ಞಾನೋಕ್ತಿ 27:17, NW) ನಿಜ ಸಂಗತಿಯೇನಂದರೆ, ಒಟ್ಟಾಗಿ ಕೂಡಿಬರುವಂತೆ ಬೈಬಲು ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ, ತಮ್ಮನ್ನು ಸಂಪೂರ್ಣವಾಗಿ ಲೋಕದಿಂದ ಅಥವಾ ಇತರ ಕ್ರೈಸ್ತರಿಂದ ಏಕಾಂತವಾಸದಲ್ಲಿಡುವಂತೆ ಅಲ್ಲ. (ಯೋಹಾನ 17:14, 15) ಅದನ್ನುವುದು: “ನಾವು ಪ್ರೀತಿ ಮತ್ತು ಸತ್ಕಾರ್ಯಗಳಿಗಾಗಿ ಒಬ್ಬರನ್ನೊಬ್ಬರು ಪ್ರೇರೇಪಿಸಿಕೊಂಡು ಸಭೆಯಾಗಿ ಕೂಡುವುದನ್ನು ಬಿಟ್ಟುಬಿಡದಿರೋಣ.” (ಇಬ್ರಿಯ 10:24, 25, NW) ಯೆಹೋವನ ಸಾಕ್ಷಿಗಳು ಆ ಬುದ್ಧಿವಾದವನ್ನು ಪಾಲಿಸುತ್ತಾರೆ. ‘ಒಬ್ಬರು ಇನ್ನೊಬ್ಬರ ಮುಖವನ್ನು ಹರಿತಮಾಡು’ವುದಕ್ಕಾಗಿ ಅವರು ವಾರದಲ್ಲಿ ಹಲವಾರು ಬಾರಿ ಒಟ್ಟಾಗಿ ಕೂಡಿಬಂದು, ಜೊತೆ ವಿಶ್ವಾಸಿಗಳ ನಂಬಿಕೆಯನ್ನು ಬಲಪಡಿಸುತ್ತಾರೆ. ಬೈಬಲನ್ನು ಪ್ರಾಮಾಣಿಕತೆಯಿಂದ ಚರ್ಚಿಸುವುದು ಜಗಳಗಳಿಗೆ ನಡಿಸುವುದಿಲ್ಲವೆಂದು ಅವರು ಕಂಡುಕೊಳ್ಳುತ್ತಾರೆ. ಬದಲಾಗಿ, ಅದು ಸಾಮರಸ್ಯ ಮತ್ತು ಸಮಾಧಾನಕ್ಕೆ ನಡಿಸುತ್ತದೆ. ಅದು ಸತ್ಯಾರಾಧನೆಯ ಒಂದು ಪ್ರಾಮುಖ್ಯ ಭಾಗ.