ವಾಚಕರಿಂದ ಪ್ರಶ್ನೆಗಳು
1 ಪೇತ್ರ 2:9ರಲ್ಲಿ, “ಕಿಂಗ್ ಜೇಮ್ಸ್ ವರ್ಷನ್,” ಅಭಿಷಿಕ್ತ ಕ್ರೈಸ್ತರನ್ನು “ಆದುಕೊಂಡ ಸಂತತಿ,” ಎಂದು ಕರೆಯುತ್ತದೆ. ಇದು, ಮತ್ತಾಯ 24:34ರಲ್ಲಿ ದಾಖಲೆಯಾದ ಯೇಸುವಿನ “ಸಂತತಿ”ಯ ಉಪಯೋಗದ ನಮ್ಮ ನೋಟವನ್ನು ಪ್ರಭಾವಿಸಬೇಕೋ?
ಎರಡೂ ವಚನಗಳ ನಿರ್ದಿಷ್ಟ ತರ್ಜುಮೆಗಳಲ್ಲಿ “ಸಂತತಿ” ಎಂಬ ಪದವು ತೋರಿಬರುತ್ತದೆ ನಿಜ. ಕಿಂಗ್ ಜೇಮ್ಸ್ ವರ್ಷನ್‌ಗೆ ಅನುಸಾರವಾಗಿ, ಅಪೊಸ್ತಲ ಪೇತ್ರನು ಬರೆದದ್ದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಸುತ್ತಿಗಳನ್ನು ಪ್ರದರ್ಶಿಸುವಂತೆ ಒಂದು ಆದುಕೊಂಡ ಸಂತತಿಯೂ, ರಾಜಯೋಗ್ಯ ಯಾಜಕತ್ವವೂ, ಪವಿತ್ರ ಜನಾಂಗವೂ, ವಿಶಿಷ್ಟವಾದ ಜನವೂ ಆಗಿದ್ದೀರಿ.” ಮತ್ತು ಯೇಸು ಮುಂತಿಳಿಸಿದ್ದು: “ಇದೆಲ್ಲಾ ನೆರವೇರುವ ತನಕ ಈ ಸಂತತಿಯು ಗತಿಸಿಹೋಗುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—1 ಪೇತ್ರ 2:9; ಮತ್ತಾಯ 24:34.
ಮೊದಲನೆಯ ವಚನದಲ್ಲಿ ಅಪೊಸ್ತಲ ಪೇತ್ರನು ಗ್ರೀಕ್ ಪದವಾದ ಜೆನೋಸ್ ಅನ್ನು ಉಪಯೋಗಿಸಿರುವಾಗ, ಯೇಸುವಿನ ಹೇಳಿಕೆಯ ವಚನದಲ್ಲಿ ಜೆನೀಯ ಪದವನ್ನು ನಾವು ಕಾಣುತ್ತೇವೆ. ಈ ಎರಡು ಗ್ರೀಕ್ ಶಬ್ದಗಳು ಸಮಾನರೂಪಿ ಪದಗಳಾಗಿ ತೋರಬಹುದು, ಮತ್ತು ಅವು ಒಂದು ಸಾಮಾನ್ಯ ಮೂಲಪದಕ್ಕೆ ಸಂಬಂಧಿಸಿವೆ; ಆದರೂ, ಅವು ಭಿನ್ನವಾದ ಪದಗಳಾಗಿವೆ, ಮತ್ತು ಅವುಗಳಿಗೆ ಭಿನ್ನವಾದ ಅರ್ಥಗಳಿವೆ. ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್, 1 ಪೇತ್ರ 2:9ಕ್ಕೆ ಕೊಟ್ಟ ಒಂದು ಪಾದಟಿಪ್ಪಣಿಯಲ್ಲಿ ಹೇಳುವುದು: “‘ಕುಲ.’ ಗ್ರೀಕ್, ಜೆನೋಸ್; ಇದು ಮತ್ತಾ 24:34ರಲ್ಲಿರುವ ‘ಸಂತತಿ,’ ಜೆನೀಯಕ್ಕಿಂತ ಭಿನ್ನವಾಗಿದೆ.” ಮತ್ತಾಯ 24:34ಕ್ಕೂ ಒಂದು ಅನುರೂಪದ ಪಾದಟಿಪ್ಪಣಿ ಕೊಡಲಾಗಿದೆ.
ಆ ಪಾದಟಿಪ್ಪಣಿಗಳು ಸೂಚಿಸುವಂತೆ, ಜೆನೋಸ್, ಸಾಮಾನ್ಯವಾಗಿ ಇಂಗ್ಲಿಷ್ ತರ್ಜುಮೆಗಳಲ್ಲಿ ಕಂಡುಬರುವ ಪ್ರಕಾರ, ಇಂಗ್ಲಿಷ್ ಪದವಾದ “race (ಕುಲ)” ಎಂದು ಸೂಕ್ತವಾಗಿ ಭಾಷಾಂತರವಾಗಿದೆ. 1 ಪೇತ್ರ 2:9ರಲ್ಲಿ ಪೇತ್ರನು, ಯೆಶಾಯ 61:6ರಲ್ಲಿ ಕಂಡು ಬರುವ ಪ್ರವಾದನೆಯನ್ನು ಸ್ವರ್ಗೀಯ ನಿರೀಕ್ಷೆಯುಳ್ಳ ಅಭಿಷಿಕ್ತ ಕ್ರೈಸ್ತರಿಗೆ ಅನ್ವಯಿಸಿದನು. ಇವರು ಅನೇಕ ಜನಾಂಗ ಮತ್ತು ಗೋತ್ರಗಳಿಂದ ತೆಗೆಯಲ್ಪಟ್ಟವರು, ಆದರೆ ಅವರು ಆತ್ಮಿಕ ಇಸ್ರಾಯೇಲಿನ ಜನಾಂಗದ ಭಾಗವಾಗುವಾಗ ಅವರ ನೈಸರ್ಗಿಕ ಹಿನ್ನೆಲೆಗಳು ಇನ್ನು ಮುಂದೆ ಅರ್ಥಭರಿತವಲ್ಲ. (ರೋಮಾಪುರ 10:12; ಗಲಾತ್ಯ 3:28, 29; 6:16; ಪ್ರಕಟನೆ 5:9, 10) ಪೇತ್ರನು ಅವರನ್ನು ಒಂದು ಆತ್ಮಿಕ ಅರ್ಥದಲ್ಲಿ, ಒಂದು ವಿಶಿಷ್ಟ ಗುಂಪು—‘ಆದುಕೊಂಡ ಕುಲ, ರಾಜಯೋಗ್ಯ ಯಾಜಕತ್ವ, ಪವಿತ್ರ ಜನಾಂಗ, ವಿಶೇಷ ಒಡೆತನಕ್ಕಾಗಿರುವ ಜನ’ವಾಗಿ ಗುರುತಿಸಿದ್ದಾನೆ.
ಆದರೆ ಮತ್ತಾಯ 24:34ರಲ್ಲಿ ಕಂಡುಬರುವ ಯೇಸುವಿನ ಮಾತುಗಳ ಗ್ರೀಕ್ ಗ್ರಂಥ ಪಾಠದಲ್ಲಿ ನಾವು ಜೆನೀಯ ಪದವನ್ನು ಕಂಡುಕೊಳ್ಳುತ್ತೇವೆ. ಯೇಸುವು ಇಲ್ಲಿ ಯಾವುದೇ ಜನರ “ಕುಲ”ಕ್ಕೆ ನಿರ್ದೇಶಿಸಿರಲಿಲ್ಲ ಬದಲಾಗಿ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಜೀವಿಸುತ್ತಿರುವ ಜನರಿಗೆ ಸೂಚಿಸುತ್ತಿದನ್ದೆಂದು ವ್ಯಾಪಕವಾಗಿ ಅಂಗೀಕರಿಸಲ್ಪಡುತ್ತದೆ.
ಬಹಳ ಮಟ್ಟಿಗೆ ಒಂದು ನೂರು ವರ್ಷಗಳ ಹಿಂದೆಯೇ, ವಾಚ್ ಟವರ್ ಸೊಸೈಟಿಯ ಮೊದಲನೆ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸಲ್ ಇವರು ಇದನ್ನು ಸ್ಪಷ್ಟಪಡಿಸುತ್ತಾ ಬರೆದದ್ದು: “‘ಸಂತತಿ’ ಮತ್ತು ‘ಕುಲ’ ಎಂಬ ಪದಗಳು ಒಂದು ಸಾಮಾನ್ಯ ಮೂಲದಿಂದ ಅಥವಾ ಹೊರಡು ಬಿಂದುವಿನಿಂದ ಬಂದಿವೆ ಎಂದು ಹೇಳಬಹುದಾದರೂ, ಅವು ಒಂದೇ ಆಗಿಲ್ಲ; ಮತ್ತು ಶಾಸ್ತ್ರೀಯ ಬಳಕೆಯಲ್ಲಿ ಈ ಎರಡು ಪದಗಳು ತೀರ ಭಿನ್ನವಾಗಿವೆ. . . . ಈ ಪ್ರವಾದನೆಯ ಮೂರು ವಿವಿಧ ದಾಖಲೆಗಳಲ್ಲಿ, ಕುಲವೆಂದು ಅರ್ಥವಿಲದ್ಲಿದ್ದರೂ ನಮ್ಮ ಇಂಗ್ಲಿಷ್ ಪದವಾದ ಜನರೇಷನ್ (ಸಂತತಿ)ನಷ್ಟೇ ವೈಶಿಷ್ಟ್ಯವುಳ್ಳ ತೀರ ವಿಭಿನ್ನವಾದ ಗ್ರೀಕ್ ಪದ (ಜೆನೀಯ)ವನ್ನು ಉಪಯೋಗಿಸಿದ ಪ್ರಶಸ್ತಿ ನಮ್ಮ ಕರ್ತನಿಗಿದೆ. ಈ ಗ್ರೀಕ್ ಪದ (ಜೆನೀಯ)ದ ಬೇರೆ ಉಪಯೋಗಗಳು, ಕುಲ ಎಂಬರ್ಥದಲ್ಲಿ ಅಲ್ಲ, ಬದಲಾಗಿ ಒಂದೇ ಕಾಲದಲ್ಲಿ ಜೀವಿಸುವ ಜನರಿಗೆ ನಿರ್ದೇಶನೆಯಲ್ಲಿ ಬಳಸಲ್ಪಟ್ಟಿವೆ ಎಂಬುದನ್ನು ರುಜುಪಡಿಸುತ್ತವೆ.”—ದ ಡೇ ಆಫ್ ವೆಂಜನ್ಸ್, ಪುಟಗಳು 602-3.
ಇತ್ತೀಚೆಗೆ, ಬೈಬಲ್ ಭಾಷಾಂತರರಿಗಾಗಿ ರಚಿಸಲ್ಪಟ್ಟ, ಏ ಹ್ಯಾಂಡ್‌ಬುಕ್ ಆನ್ ದ ಗಾಸ್ಪೆಲ್ ಆಫ್ ಮ್ಯಾಥ್ಯೂ (1988) ಹೇಳಿದ್ದು: “[ನ್ಯೂ ಇಂಟರ್‌ನ್ಯಾಷ್‌ನಲ್ ವರ್ಷನ್] ಈ ಸಂತತಿಯನ್ನು ಅಕ್ಷರಾರ್ಥಕವಾಗಿ ಭಾಷಾಂತರಿಸುತ್ತದಾದರೂ, ಹಿಂಬಾಲಿಸುವ ಪಾದಟಿಪ್ಪಣಿಯಲ್ಲಿ, ‘ಅಥವಾ ಕುಲ’ ಎಂದು ಹೇಳುತ್ತದೆ. ಮತ್ತು ಹೊಸ ಒಡಂಬಡಿಕೆಯ ಒಬ್ಬ ವಿದ್ವಾಂಸನು ನಂಬುವುದೇನಂದರೆ, ‘ಮತ್ತಾಯನು ಅರ್ಥೈಸುವುದು, ಅದು ಯೇಸುವಿನ ಅನಂತರದ ಕೇವಲ ಮೊದಲನೆಯ ಸಂತತಿ ಎಂದು ಮಾತ್ರವಲ್ಲ, ಆತನನ್ನು ತಿರಸ್ಕರಿಸುವ ಯೆಹೂದ್ಯ ಮತದ ಎಲ್ಲ ಸಂತತಿಗಳು ಎಂಬದಾಗಿ.’ ಆದರೂ, ಈ ತೀರ್ಮಾನಗಳಲ್ಲಿ ಎರಡನ್ನೂ ಬೆಂಬಲಿಸಲು ಯಾವುದೇ ಭಾಷಾ ಸಂಬಂಧವಾದ ಪುರಾವೆ ಇಲ್ಲ, ಮತ್ತು ಸ್ಪಷ್ಟವಾಗಿದ ಅರ್ಥವನ್ನು ವರ್ಜಿಸುವ ಪ್ರಯತ್ನಗಳಾಗಿ ಅವನ್ನು ಉಪೇಕ್ಷಿಸಬೇಕು. ಅದರ ಮೂಲ ಹಿನ್ನೆಲೆಯಲ್ಲಿ ನಿರ್ದೇಶನೆಯು ಯೇಸುವಿನ ಸ್ವಂತ ಸಮಕಾಲೀನರಿಗೆ ಮಾತ್ರವಾಗಿತ್ತು.”
10-15ನೆಯ ಪುಟಗಳಲ್ಲಿ ಚರ್ಚಿಸಿದ ಪ್ರಕಾರ, ಯೇಸು ತನ್ನ ಕಾಲದ ಯೆಹೂದ್ಯರ ಸಂತತಿಯನ್ನು, ಆತನನ್ನು ತಿರಸ್ಕರಿಸಿದ ಆತನ ಸಮಕಾಲೀನರನ್ನು ಖಂಡಿಸಿದನು. (ಲೂಕ 9:41; 11:32; 17:25) ಆ ಸಂತತಿಯನ್ನು ವರ್ಣಿಸುವಲ್ಲಿ ಆತನು ಆಗಿಂದಾಗ್ಗೆ “ವ್ಯಭಿಚಾರಿಣಿಯಂತಿರುವ ಕೆಟ್ಟ ಸಂತತಿ,” “ನಂಬಿಕೆಯಿಲ್ಲದಂಥ ಮೂರ್ಖ ಸಂತಾನ,” “ವ್ಯಭಿಚಾರಿಣಿಯಂತಿರುವ ಪಾಷ್ಠಿ ಸಂತತಿ” ಎಂಬ ವಿಶೇಷಣಗಳನ್ನು ಉಪಯೋಗಿಸಿದನು. (ಮತ್ತಾಯ 12:39; 17:17; ಮಾರ್ಕ 8:38) ಯೇಸು ಕೊನೆಯ ಬಾರಿ “ಸಂತತಿ” ಎಂಬ ಪರಿಭಾಷೆಯನ್ನು ಉಪಯೋಗಿಸಿದಾಗ, ಅವನು ನಾಲ್ವರು ಅಪೊಸ್ತಲರೊಂದಿಗೆ ಆಲಿವ್ಸ್ (ಎಣ್ಣೇಮರಗಳ) ಗುಡ್ಡದ ಮೇಲಿದ್ದನು. (ಮಾರ್ಕ 13:3) ಇನ್ನೂ ಆತ್ಮದಿಂದ ಅಭಿಷಿಕ್ತರಾಗಿರದ ಹಾಗೂ ಕ್ರೈಸ್ತ ಸಭೆಯ ಭಾಗವಾಗಿರದ ಆ ಪುರುಷರು, ನಿಶ್ಚಯವಾಗಿಯೂ ಒಂದು “ಸಂತತಿ”ಯಲ್ಲಿ ಇಲ್ಲವೇ ಜನರ ಒಂದು “ಕುಲ”ದಲ್ಲಿ ಸಂಯೋಜಿತರಾಗಿರಲಿಲ್ಲ. ಆದರೂ, ಯೇಸು “ಸಂತತಿ” ಎಂಬ ಪರಿಭಾಷೆಯನ್ನು ತನ್ನ ಸಮಕಾಲೀನರಾದ ಜನರಿಗೆ ಬಳಸಿದ ವಿಷಯವು ಅವರಿಗೆ ಚೆನ್ನಾಗಿ ಪರಿಚಯವಿತ್ತು. ಆದುದರಿಂದ “ಈ ಸಂತತಿ”ಯನ್ನು ಅವನು ಕೊನೆಯ ಬಾರಿ ತಿಳಿಸಿದಾಗ ಅವನ ಅಭಿಪ್ರಾಯವೇನಾಗಿತ್ತೆಂದು ಅವರು ತರ್ಕಬದ್ಧವಾಗಿ ತಿಳಿದಿದ್ದರು.a ಉಪಸ್ಥಿತನಿದ್ದ ಅಪೊಸ್ತಲ ಪೇತ್ರನು, ಅನಂತರ ಯೆಹೂದ್ಯರನ್ನು ಪ್ರೇರಿಸಿದ್ದು: “ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ.”—ಅ. ಕೃತ್ಯಗಳು 2:40.
ಯೇಸು ಇದೇ ಉಪನ್ಯಾಸದಲ್ಲಿ ಮುಂತಿಳಿಸಿದ ಅನೇಕ ವಿಷಯಗಳು (ಯುದ್ಧಗಳು, ಭೂಕಂಪಗಳು ಮತ್ತು ಬರಗಳು ಮೊದಲಾದವು) ಅವನು ಪ್ರವಾದನೆಯನ್ನು ನುಡಿದ ಮತ್ತು ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನದ ಕಾಲಾವಧಿಯ ನಡುವೆ ನೆರವೇರಿದ್ದವೆಂಬುದಕ್ಕೆ ಪುರಾವೆಯನ್ನು ನಾವು ಅನೇಕ ಸಲ ಪ್ರಕಟಿಸಿದ್ದೇವೆ. ಅನೇಕ ವಿಷಯಗಳು ನೆರವೇರಿದವು, ಆದರೆ ಎಲ್ಲ ನೆರವೇರಲಿಲ್ಲ. ದೃಷ್ಟಾಂತಕ್ಕಾಗಿ, ರೋಮನರು ಯೆರೂಸಲೇಮನ್ನು ಆಕ್ರಮಿಸಿದ (ಸಾ.ಶ. 66-70) ಅನಂತರ, “ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳು”ವಂತೆ ಮಾಡಿಸುವ “ಮನುಷ್ಯಕುಮಾರನನ್ನು ಸೂಚಿಸುವ ಗುರುತು” ತೋರಿಬಂತೆಂಬುದಕ್ಕೆ ಯಾವ ಪುರಾವೆಯೂ ಇಲ್ಲ. (ಮತ್ತಾಯ 24:30) ಆದಕಾರಣ, ಸಾ.ಶ. 33 ಮತ್ತು ಸಾ.ಶ. 70ರ ನಡುವಣ ಆ ನೆರವೇರಿಕೆಯು ಕೇವಲ ಒಂದು ಆರಂಭಿಕ ನೆರವೇರಿಕೆಯಾಗಿದ್ದಿರಬೇಕು, ಅದು ಯೇಸು ಸೂಚಿಸುತ್ತಲೂ ಇದ್ದ ಸಂಪೂರ್ಣ ಅಥವಾ ದೊಡ್ಡ ಪ್ರಮಾಣದ ನೆರವೇರಿಕೆಯಲ್ಲ.
ಜೊಸೀಫಸನ ಕೃತಿಯಾದ ದ ಜ್ಯೂವಿಷ್ ವಾರ್ ಎಂಬ ಪುಸ್ತಕದ ತನ್ನ ಭಾಷಾಂತರದ ಪೀಠಿಕೆಯಲ್ಲಿ ಜಿ. ಏ. ವಿಲ್ಯಮ್‌ಸನ್ ಬರೆಯುವುದು: “ಶಿಷ್ಯರು ಯೇಸುವಿಗೆ ಒಂದು ಇಬ್ಬಗೆಯ ಪ್ರಶ್ನೆಯನ್ನು ಹಾಕಿದ್ದರು ಎಂದು ಮತ್ತಾಯನು ನಮಗೆ ಹೇಳುತ್ತಾನೆ—ಯೆರೂಸಲೇಮಿನ ದೇವಾಲಯದ ನಾಶನದ ಕುರಿತು ಮತ್ತು ಅವನ ಸ್ವಂತ ಅಂತಿಮ ಆಗಮನದ ಕುರಿತು—ಮತ್ತು ಅವನು ಅವರಿಗೆ ಒಂದು ಇಬ್ಬಗೆಯ ಉತ್ತರವನ್ನು ಕೊಟ್ಟನು. ಅತಿ ಸ್ಪಷ್ಟವಾಗಿಗಿ ಮುಂತಿಳಿಸಲ್ಪಟ್ಟ ಸಂಭವಿಸಬೇಕಾದ ಆ ಸಂಗತಿಗಳ ಆರಂಭಿಕ ಭಾಗವು ಜೊಸೀಫಸನಿಂದ ಬಹು ಸಮಗ್ರವಾಗಿ ವರ್ಣಿಸಲ್ಪಟ್ಟಿದೆ.”
ಹೌದು, ಆರಂಭಿಕ ನೆರವೇರಿಕೆಯಲ್ಲಿ, “ಈ ಸಂತತಿಯು” ಸ್ಫುಟವಾಗಿ ಅದು ಬೇರೆ ಸಮಯದಲ್ಲಿ ಅರ್ಥೈಸಿದ ರೀತಿಯಲ್ಲೀ ಇತ್ತು—ಅಂದರೆ ನಂಬಿಕೆಯಿಲ್ಲದಂಥ ಯೆಹೂದ್ಯರ ಸಮಕಾಲೀನ ಸಂತತಿ. ಆ “ಸಂತತಿ”ಯು ಯೇಸು ಏನನ್ನು ಮುಂತಿಳಿಸಿದನೋ ಅದನ್ನು ಅನುಭವಿಸಿದ ಹೊರತು ಅಳಿದುಹೋಗುತ್ತಿರಲಿಲ್ಲ. ವಿಲ್ಯಮ್‌ಸನ್ ಹೇಳಿಕೆಯಿತ್ತಂತೆ, ಈ ಪ್ರವಾದನೆಯು, ಯೆರೂಸಲೇಮಿನ ನಾಶನಕ್ಕೆ ನಡಿಸಿದ ದಶಮಾನಗಳಲ್ಲಿ, ಪ್ರತ್ಯಕ್ಷ ಸಾಕ್ಷಿಯಾದ ಜೊಸೀಫಸನು ವರ್ಣಿಸಿದ ಪ್ರಕಾರ, ಸತ್ಯವಾಗಿ ಪರಿಣಮಿಸಿತು.
ಎರಡನೆಯ ಅಥವಾ ದೊಡ್ಡ ನೆರವೇರಿಕೆಯಲ್ಲಿ, “ಈ ಸಂತತಿ”ಯು ಸಹ ನ್ಯಾಯಸಮ್ಮತವಾಗಿ ಸಮಕಾಲೀನ ಜನರ ಸಂತತಿಯಾಗಿರುವುದು. 16ನೆಯ ಪುಟದಲ್ಲಿ ಆರಂಭವಾಗುವ ಲೇಖನವು ಸಮರ್ಥಿಸುವ ಪ್ರಕಾರ, ಒಂದು “ಸಂತತಿ”ಯನ್ನು ಸಂಯೋಜಿಸುವ ವರ್ಷಗಳ ಸಂಖ್ಯೆಗೆ ಯೇಸು ನಿರ್ದೇಶಿಸುತ್ತಿದ್ದನೆಂದು ನಾವು ತೀರ್ಮಾನಿಸುವ ಅಗತ್ಯವಿಲ್ಲ.
ಅದಕ್ಕೆ ಪ್ರತಿಯಾಗಿ, “ಸಂತತಿ”ಯಿಂದ ಸೂಚಿತವಾದ ಯಾವುದೇ ಕಾಲಾವಧಿಯ ಕುರಿತು ಎರಡು ಮುಖ್ಯ ವಿಷಯಗಳನ್ನು ಹೇಳಸಾಧ್ಯವಿದೆ. (1) ಜನರ ಒಂದು ಸಂತತಿಯನ್ನು, ಒಂದು ಗೊತ್ತುಮಾಡಿದ ವರ್ಷಗಳ ಸಂಖ್ಯೆಯಿರುವ (ದಶಕ ಅಥವಾ ಶತಮಾನ) ಕಾಲ ನಿರ್ದೇಶನಗಳನ್ನು ನಾವು ವೀಕ್ಷಿಸುವಂತೆ, ಒಂದು ಪರಿಮಿತಿಯ ವರ್ಷಗಳ ಕಾಲಾವಧಿಯಾಗಿ ವೀಕ್ಷಿಸಸಾಧ್ಯವಿಲ್ಲ. (2) ಒಂದು ಸಂತತಿಯ ಜನರು ತುಲನಾತ್ಮಕವಾಗಿ ಒಂದು ಸಂಕ್ಷಿಪ್ತ ಕಾಲಾವಧಿಯ ತನಕ ಜೀವಿಸುತ್ತಾರೆ, ಒಂದು ದೀರ್ಘ ಕಾಲಾವಧಿಯ ತನಕವಲ್ಲ.
ಪರಿಣಾಮವಾಗಿ, ಯೇಸು “ಈ ಸಂತತಿ”ಗೆ ನಿರ್ದೇಶಿಸಿದುದನ್ನು ಅಪೊಸ್ತಲರು ಕೇಳಿದಾಗ, ಅವರೇನು ನೆನಸಿದರು? ನಾವೋ, ಹಿನ್ನೋಟದ ಪ್ರಯೋಜನದಿಂದ, “ಮಹಾ ಸಂಕಟ”ದಲ್ಲಿ ಯೆರೂಸಲೇಮಿನ ನಾಶನವು 37 ವರ್ಷಗಳ ಅನಂತರ ಬಂತೆಂದು ತಿಳಿಯುತ್ತೇವಾದರೂ, ಯೇಸುವಿಗೆ ಕಿವಿಗೊಡುತ್ತಿದ್ದ ಅಪೊಸ್ತಲರಿಗೆ ಅದು ತಿಳಿಯಸಾಧ್ಯವಿರಲಿಲ್ಲ. ಬದಲಾಗಿ, ಆತನು ತಿಳಿಸಿದ “ಸಂತತಿ”ಯು ಒಂದು ಮಹಾ ದೀರ್ಘ ಕಾಲಾವಧಿಯ ವಿಚಾರವನ್ನಲ್ಲ, ತುಲನಾತ್ಮಕವಾಗಿ ಒಂದು ಪರಿಮಿತ ಕಾಲಾವಧಿಯ ತನಕ ಜೀವಿಸುವ ಜನರ ವಿಚಾರವನ್ನು ಅವರಿಗೆ ಕೊಟ್ಟಿರಬೇಕು. ನಮ್ಮ ವಿಷಯದಲ್ಲೂ ಇದೇ ಸತ್ಯವಾಗಿದೆ. ಆದುದರಿಂದ, ಅದನ್ನು ಹಿಂಬಾಲಿಸಿ ನುಡಿದ ಯೇಸುವಿನ ಮಾತುಗಳು ಎಷ್ಟು ಕಾಲೋಚಿತವಾಗಿವೆ: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು. ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾಯ 24:36, 44.
[ಅಧ್ಯಯನ ಪ್ರಶ್ನೆಗಳು]
a “ಈ ಸಂತತಿ” ಎಂಬ ಅಭಿವ್ಯಕ್ತಿಯಲ್ಲಿ, ನಿರ್ದೇಶಕ ಸರ್ವನಾಮ ಹೌಟಸ್‌ನ ಒಂದು ಪದರೂಪವು ಇಂಗ್ಲಿಷ್ ಪದ “ದಿಸ್ (ಈ)” ಎಂಬುದನ್ನು ಸರಿಯಾಗಿ ಹೋಲುತ್ತದೆ. ಸದ್ಯ ಮುಂದಿರುವ ಅಥವಾ ಮಾತಾಡುವವನ ಎದುರಿರುವ ಒಂದು ವಿಷಯಕ್ಕೆ ಅದು ಸೂಚಿಸಬಲ್ಲದು. ಎಕ್ಸಿಜೇಟಿಕಲ್ ಡಿಕ್‌ಷನರಿ ಆಫ್ ದ ನ್ಯೂ ಟೆಸ್ಟಮೆಂಟ್ (1991) ಗಮನಿಸುವುದು: “[ಹೌಟಸ್] ಎಂಬ ಪದವು ಒಂದು ಮುಂದಿರುವ ನಿಜತ್ವವನ್ನು ಸೂಚಿಸುತ್ತದೆ. ಹೀಗೆ [ಎಯೊನ್ ಹೌಟಸ್] ‘ಸದ್ಯ ಅಸ್ತಿತ್ವದಲ್ಲಿರುವ ಲೋಕ’ ಅಗಿದೆ. . . . ಮತ್ತು [ಜೆನೀಯ ಹೌಟೆ] ‘ಸದ್ಯ ಜೀವಿಸುತ್ತಿರುವ ಸಂತತಿ’ ಆಗಿದೆ. (ಉದಾ. ಮತ್ತಾ. 12:41f., 45; 24:34).” ಡಾ. ಜಾರ್ಜ್ ಬಿ. ವೈನರ್ ಬರೆಯುವುದು: “ಸರ್ವನಾಮ [ಹೌಟಸ್] ಕೆಲವೊಮ್ಮೆ ಸ್ಥಳೀಕವಾಗಿ ಸಮೀಪದ ನಾಮಪದಕ್ಕಲ್ಲ, ಹೆಚ್ಚು ದೂರದ ನಾಮಪದಕ್ಕೆ, ಯಾವುದು ಮುಖ್ಯ ವಿಷಯದಂತೆ, ಲೇಖಕನ ವಿಚಾರಗಳಿಗೆ ಮಾನಸಿಕವಾಗಿ ಅತಿ ಹತ್ತಿರವಾಗಿ, ಅತಿ ಸದ್ಯದ ವಿಷಯವಾಗಿದೆಯೇ ಅದಕ್ಕೆ ಸೂಚಿಸುತ್ತದೆ.”—ಏ ಗ್ರ್ಯಾಮರ್ ಆಫ್ ದಿ ಇಡಿಯಮ್ ಆಫ್ ದ ನ್ಯೂ ಟೆಸ್ಟಮೆಂಟ್, 7ನೆಯ ಆವೃತ್ತಿ, 1897.