ನೀವು ತಪ್ಪಿಸಲೇಬಾರದ ಒಂದು ಘಟನೆ
“ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ನಮ್ಮ ಸ್ವರ್ಗೀಯ ತಂದೆಯಾದ, ದೇವರಿಂದ ಬರುತ್ತವೆ. (ಯಾಕೋಬ 1:17) ಪತಿತ ಮಾನವಕುಲಕ್ಕೆ ದೇವರು ಕೊಟ್ಟಿರುವ ಅತ್ಯಂತ ಮಹಾ ಕೊಡುಗೆಯು, ತನ್ನ ಏಕಜಾತ ಪುತ್ರನಾದ ಯೇಸುಕ್ರಿಸ್ತನ ಮುಖಾಂತರ ಅವರ ಪುನರುದ್ಧಾರಕ್ಕಾಗಿ ಮಾಡಿರುವ ಒದಗಿಸುವಿಕೆಯೇ ಆಗಿದೆ. ನಮ್ಮ ವಿಮೋಚಕನಾಗಿ ಯೇಸುವಿನ ಮರಣವು ಒಂದು ಪ್ರಮೋದವನವಾದ ಭೂಮಿಯ ಮೇಲೆ ನಿತ್ಯಜೀವವನ್ನು ಸಾಧ್ಯವನ್ನಾಗಿ ಮಾಡುತ್ತದೆ. ಲೂಕ 22:19ರಲ್ಲಿ ಆತನ ಮರಣವನ್ನು ಜ್ಞಾಪಿಸಿಕೊಳ್ಳುವಂತೆ ನಾವು ಆಜ್ಞಾಪಿಸಲ್ಪಟ್ಟಿದ್ದೇವೆ.
ಯೇಸುವಿನ ಆಜ್ಞೆಗೆ ಲಕ್ಷ್ಯಕೊಡುವರೆ ಅವರೊಂದಿಗೆ ಪಾಲುತೆಗೆದುಕೊಳ್ಳುವಂತೆ ನಿಮ್ಮನ್ನು ಯೆಹೋವನ ಸಾಕ್ಷಿಗಳು ಹೃದಯೋಲ್ಲಾಸದಿಂದ ಆಮಂತ್ರಿಸುತ್ತಾರೆ. ಈ ವಾರ್ಷಿಕ ಸಂದರ್ಭವು, ಬೈಬಲಿನ ಚಾಂದ್ರಮಾನ ಕ್ಯಾಲೆಂಡರಿನ ನೈಸಾನ್ 14ನ್ನು ಸರಿಹೊಂದುವ, ಮಂಗಳವಾರ ಎಪ್ರಿಲ್ 2, 1996ರ ಸೂರ್ಯಾಸ್ತಮಾನದ ನಂತರವಾಗಿರುವುದು. ಅದನ್ನು ನೀವು ಮರೆಯದಿರುವಂತೆ, ಈ ತಾರೀಖನ್ನು ಗುರುತುಮಾಡಿಟ್ಟುಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸರಿಯಾದ ಕೂಟದ ಸ್ಥಳ ಮತ್ತು ಸಮಯವನ್ನು ತಿಳಿಸುವರು.