“ನಾನು ಕನಸುಕಾಣುತ್ತಿಲ್ಲ, ಅಲ್ಲವೊ?”
ಮಲಾವಿಯಿಂದ ಬಂದ ಈ ಮುಂದಿನ ವರದಿಯು, 1995ರ ಬೇಸಗೆಯಲ್ಲಿ ಅಲ್ಲಿ ಜರುಗಿದ ಯೆಹೋವನ ಸಾಕ್ಷಿಗಳ ಐತಿಹಾಸಿಕ “ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನಗಳಲ್ಲೊಂದರ ಕುರಿತಾಗಿದೆ.
“ಲೇಕ್ ಮಲಾವಿಯ ಪಶ್ಚಿಮ ತೀರದ ಸುಮಾರು ನಡುನೆಲೆಯಲ್ಲಿರುವ ಒಂದು ಹೆದ್ದಾರಿಯಲ್ಲಿ, 29 ವರ್ಷಗಳಲ್ಲಿ ಪ್ರಥಮ ಬಾರಿ ಒಂದು ಹೆಸರು ಕಂಬವನ್ನು ನಿಲ್ಲಿಸಲಾಗಿದೆ. ಅದು ಓದುವುದು, ‘ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.’
“ಆ ಹೆಸರು ಕಂಬದ ಪಕ್ಕದಲ್ಲಿ ಒಂದು ದೊಡ್ಡ ಟ್ರಕ್ಕನ್ನು ನಿಲ್ಲಿಸಲಾಗಿದೆ, ಮತ್ತು ಅದರ ಬಂಡಿಯಿಂದ ಮಸೂಸೂ ಪಟ್ಟಣದ 200ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು ಹೊರಬರುತ್ತಾರೆ. ಅವರು ಇತರ ಸ್ಥಳಗಳಿಂದ ಬಂದಿರುವ ಸುಮಾರು 3,000 ಸಹೋದರ ಸಹೋದರಿಯರನ್ನು ಜೊತೆಸೇರಲು, ಬಟ್ಟೆಗಳ ಮೂಟೆಗಳನ್ನು, ಕಂಬಳಿಗಳನ್ನು, ಪಾತ್ರೆಗಳನ್ನು, ಬಕೆಟ್ಗಳನ್ನು, ಆಹಾರವನ್ನು, ಸೌದೆಯನ್ನು ಮತ್ತು ಬೈಬಲುಗಳನ್ನು ತಂದಿದ್ದಾರೆ.
“ಟ್ರಕ್ಕಿನಿಂದ ಕೆಳಗಿಳಿಯುತ್ತಿರುವ ಸಹೋದರರನ್ನು ನಾವು ಅಭಿವಂದಿಸುತ್ತಿರುವಾಗ, ಜಾರ್ಜ್ ಚಿಕಾಕೊ, 63, ನಕೊಟಾಕೊಟಾ ಹಳ್ಳಿಯಿಂದ ಎರಡು ದಿನಗಳ ಕಾಲ ಸೈಕಲಿನಲ್ಲಿ ಸವಾರಿಮಾಡಿ, ಅದನ್ನು ಮರಳಿನಲ್ಲಿ ತಳ್ಳುತ್ತಾ ಬಂದು ತಲಪುತ್ತಾರೆ. ಅನೇಕ ವರ್ಷಗಳ ಅವಧಿಯಲ್ಲಿ, ಸಹೋದರ ಚಿಕಾಕೊ ಬೈಬಲ್ ಮೂಲತತ್ವಗಳ ವಿಷಯದಲ್ಲಿ ಒಪ್ಪಂದಮಾಡಿಕೊಳ್ಳಲು ನಿರಾಕರಿಸಿದ ಪರಿಣಾಮವಾಗಿ, ನಾಲ್ಕು ಬಾರಿ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಿದರು. ಅವರ ಸೋದರಸಂಬಂಧಿಯು ಬಂಧನದಲ್ಲಿಡಲ್ಪಟ್ಟಾಗ ತನಗೆ ಕೊಡಲ್ಪಟ್ಟ ಹೊಡೆತಗಳಿಂದ ಮೃತಪಟ್ಟನು. ‘ನಾನು ಕನಸುಕಾಣುತ್ತಿಲ್ಲ, ಅಲ್ಲವೊ?’ ಎಂಬುದಾಗಿ ಸಹೋದರ ಚಿಕಾಕೊ ಕೇಳುತ್ತಾರೆ. ‘ಈ ಅಧಿವೇಶನವನ್ನು ನಡುಹಗಲಿನಲ್ಲಿ ನಡೆಸಲಾಗುತ್ತಿದೆ, ಮತ್ತು ಈ ಜನರು ರಾಜ್ಯ ಸಂಗೀತಗಳನ್ನು ಗಟ್ಟಿಯಾಗಿ ಹಾಡುತ್ತಿದ್ದಾರೆ! ಇಷ್ಟೊಂದು ವರ್ಷಗಳ ವರೆಗೆ, ನಾವು ರಾತ್ರಿಯ ಕತ್ತಲೆಯಲ್ಲಿ ಕೂಡಬೇಕಿತ್ತು, ರಾಜ್ಯ ಸಂಗೀತಗಳನ್ನು ಪಿಸುಗುಟ್ಟಬೇಕಿತ್ತು, ಮತ್ತು ಚಪ್ಪಾಳೆಗಾಗಿ ನಮ್ಮ ಕೈಗಳನ್ನು ಒಟ್ಟಿಗೆ ಉಜ್ಜಿಕೊಳ್ಳಬೇಕಿತ್ತು. ಈಗ ನಾವು ಮುಕ್ತವಾಗಿ ಒಟ್ಟುಸೇರುತ್ತಿದ್ದೇವೆ, ಮತ್ತು ನಾವು ಇಷ್ಟೊಂದು ವ್ಯಕ್ತಿಗಳಿದ್ದೇವೆಂದು—ನಾವು ಕೇವಲ ಕೆಲವೇ ವ್ಯಕ್ತಿಗಳೆಂದು ಅವರು ನೆನಸಿದ್ದರು—ಜನರು ನೋಡುವಾಗ ಅವರು ಆಶ್ಚರ್ಯಚಕಿತರಾಗುತ್ತಾರೆ!’
“ಅಧಿವೇಶನದ ಸ್ಥಾನವು ಹುಲ್ಲಿನಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ನೆರಳನ್ನು ಒದಗಿಸಲು ದಂಟುಗಳಿಂದ ಸಡಿಲವಾಗಿ ಆವರಿಸಲ್ಪಟ್ಟಿದೆ. ಹುಲ್ಲಿನ ಚಿಕ್ಕ ಗುಡಿಸಲುಗಳು ಮತ್ತು ಅನಾವೃತ ವಿಶ್ರಾಂತಿ ಸ್ಥಾನಗಳು ಪ್ರತಿನಿಧಿಗಳಿಗೆ ಸ್ಥಳವನ್ನು ಒದಗಿಸಲು ಕಟ್ಟಲ್ಪಟ್ಟವು. ರಾತ್ರಿಯ ಗಾಳಿಯು, ಇನ್ನು ಮುಂದೆ ಹಿಂಸೆಯ ಭಯದಿಂದ ಮೂಕಗೊಳಿಸಲ್ಪಡದ ಮಧುರವಾದ ಧ್ವನಿಗಳ ಶಬ್ದದಿಂದ ತುಂಬಲ್ಪಟ್ಟಿದೆ.
“ಅಧಿವೇಶನಕ್ಕೆ ‘ಹರ್ಷಭರಿತ ಸ್ತುತಿಗಾರರು’ ಎಂಬ ಮುಖ್ಯವಿಷಯವಿರುವುದು ಎಷ್ಟು ಸೂಕ್ತವಾಗಿದೆ!”
[ಕೃಪೆ]
Mountain High Maps® Copyright © 1995 Digital Wisdom, Inc.