ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 5/1 ಪು. 3
  • ಸಮಗ್ರತೆಗೆ ಏನಾಯಿತು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಮಗ್ರತೆಗೆ ಏನಾಯಿತು?
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಗ್ರತೆಯ ಬದಲಾಗುತ್ತಿರುವ ಮಟ್ಟಗಳು
  • ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಸದಾ ಸಮಗ್ರತೆ ಕಾಪಾಡಿಕೊಳ್ಳಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಒಂದು ಅಪರಿಪೂರ್ಣ ಲೋಕದಲ್ಲಿ ಭರವಸೆ
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1997
w97 5/1 ಪು. 3

ಸಮಗ್ರತೆಗೆ ಏನಾಯಿತು?

ನೂರು ವರುಷಗಳಿಗಿಂತಲೂ ತುಸು ಹಿಂದೆ, ಬಾರ್ನೀ ಬಾರ್ನಾಟೊ ಎಂಬ ಒಬ್ಬ ವಜ್ರದ ವ್ಯಾಪಾರಿಯು, ದಕ್ಷಿಣ ಆಫ್ರಿಕದಿಂದ ಇಂಗ್ಲೆಂಡಿಗೆ ಹಿಂದಿರುಗಿದನು. ಅವನು ತಲಪಿದ ಕೂಡಲೆ, ತನ್ನ ಕುರಿತಾಗಿ ಒಂದು ವಾರ್ತಾಪತ್ರಿಕೆಯಲ್ಲಿ ಬರೆದ ಕಥೆಗೆ ಆಕ್ಷೇಪಣೆ ಸೂಚಿಸಿದನು. ಆದಕಾರಣ ಅವನು ಸಂಪಾದಕನಿಗೆ, ಅವನು ಎರಡನೆಯ ಲೇಖನವನ್ನು “ಕೆಲವು ವಿಷಯಗಳನ್ನು ಸರಿಪಡಿಸಿ” ಬರೆಯಲಿಕ್ಕಾಗಿ, ಕೆಲವು ಲಿಖಿತ ಟಿಪ್ಪಣಿಗಳನ್ನು ಒಂದು ದೊಡ್ಡ ಮೊತ್ತದ ಹಣದ ಚೆಕ್ಕಿನೊಂದಿಗೆ ಕೊಟ್ಟನು.

ಸಂಪಾದಕ, ಜೆ. ಕೆ. ಜೆರೋಮ್‌ ಆ ಟಿಪ್ಪಣಿಗಳನ್ನು ಕಸದ ಬುಟ್ಟಿಗೆ ಎಸೆದು, ಚೆಕ್ಕನ್ನು ಹಿಂದಿರುಗಿಸಿದನು. ಆಶ್ಚರ್ಯಚಕಿತನಾಗಿ, ಬರ್ನಾಟೊ ಕೂಡಲೆ ಇಮ್ಮಡಿಯಷ್ಟು ಹಣವನ್ನು ಲಂಚವಾಗಿ ಕೊಟ್ಟನು. ಅದೂ ಹಾಗೆಯೇ ನಿರಾಕರಿಸಲ್ಪಟ್ಟಿತು. “ನಿನಗೆ ಎಷ್ಟು ಹಣ ಬೇಕು?” ಎಂದು ಅವನು ಕೇಳಿದನು. ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಾ, ಜೆರೋಮ್‌ ಹೇಳುವುದು: “ವಾರ್ತಾ ಕಥೆಯನ್ನು ಬದಲಾಯಿಸಲು ಲಂಚವನ್ನು ಸ್ವೀಕರಿಸುವುದು, ಲಂಡನ್‌ನಲ್ಲಿ ಮಾಡಲ್ಪಡುವಂತಹ ವಿಷಯವಲ್ಲ—ಎಂದು ನಾನು ಅವನಿಗೆ ವಿವರಿಸಿದೆ.” ಅವನ ಸಂಪಾದಕೀಯ ಸಮಗ್ರತೆ ಖಂಡಿತವಾಗಿಯೂ ಮಾರಟಕ್ಕಾಗಿ ಇರಲಿಲ್ಲ.

“ಸಮಗ್ರತೆ”ಯು, “ನೈತಿಕ ಯಥಾರ್ಥತೆ, ಪ್ರಾಮಾಣಿಕತೆ” ಎಂಬುದಾಗಿ ವಿಶದೀಕರಿಸಲ್ಪಟ್ಟಿದೆ. ಸಮಗ್ರತೆಯುಳ್ಳ ವ್ಯಕ್ತಿಯು ಭರವಸೆಗೆ ಯೋಗ್ಯನಾಗಿದ್ದಾನೆ. ಆದರೆ ಇಂದು, ಅಪ್ರಾಮಾಣಿಕತೆ—ಸಮಗ್ರತೆಯ ಕೊರತೆ—ಯು ಎಲ್ಲಾ ವೃತ್ತಿಯ ಜನರನ್ನು ಬಾಧಿಸುತ್ತಿದೆ.

ಬ್ರಿಟನ್‌ನಲ್ಲಿ ನೈತಿಕ ಸಮಗ್ರತೆಯ ಕೊರತೆಯನ್ನು ವಿವರಿಸಲು, ಮಾಧ್ಯಮವು “ಕಳಪೆ” ಎಂಬ ಪದವನ್ನು ಜನಪ್ರಿಯಗೊಳಿಸಿದೆ. ದಿ ಇಂಡಿಪೆನ್ಡೆಂಟ್‌ ವಾರ್ತಾಪತ್ರಿಕೆಯು ತಿಳಿಸಿದಂತೆ, ಕಳಪೆಯು “ಪ್ರಣಯ ವ್ಯವಹಾರ ಹಾಗೂ ಸ್ಥಳೀಯ ಸರಕಾರದ ಮೋಸದ ಕೈವಾಡದಿಂದ ಹಿಡಿದು ದೊಡ್ಡ ರಫ್ತು ಆರ್ಡರ್‌ಗಳಲ್ಲಿ ಕಿಕ್‌ಬ್ಯಾಕ್‌ ತನಕ ಸಕಲವನ್ನೂ” ಬಾಧಿಸುತ್ತದೆ. ಜೀವಿತದ ಯಾವ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.

ಸಮಗ್ರತೆಯ ಬದಲಾಗುತ್ತಿರುವ ಮಟ್ಟಗಳು

ನಿಶ್ಚಯವಾಗಿಯೂ ಸಮಗ್ರತೆಯು ಪರಿಪೂರ್ಣತೆಯನ್ನು ಅರ್ಥೈಸುವುದಿಲ್ಲ, ಆದರೆ ಅದು ಖಂಡಿತವಾಗಿಯೂ ಒಬ್ಬ ವ್ಯಕ್ತಿಯಲ್ಲಿರುವ ಒಂದು ಮೂಲಭೂತ ಗುಣವನ್ನು ಪ್ರತಿಬಿಂಬಿಸುತ್ತದೆ. ಒಡನೆ ಐಶ್ವರ್ಯವಂತರಾಗಿ ಎಂಬ ಮನೋಭಾವವಿರುವ ನಮ್ಮ ಈ ಲೋಕದಲ್ಲಿ, ಸಮಗ್ರತೆಯು ಒಂದು ಸದ್ಗುಣಕ್ಕೆ ಬದಲಾಗಿ ಅಡಚಣೆಯಾಗಿ ಕಾಣಬಹುದು. ಉದಾಹರಣೆಗೆ, ಪರೀಕ್ಷೆಗಳಲ್ಲಿ ಮೋಸಮಾಡಲು ವಿದ್ಯಾರ್ಥಿಗಳಿಂದ ನವನಾಜೂಕಾದ ಸಲಕರಣೆಗಳ ಉಪಯೋಗವು ವೃದ್ಧಿಯಾಗುತ್ತಿದೆ ಮತ್ತು ಈ ಹೊಸ ತಂತ್ರಗಳನ್ನು ಪತ್ತೆಹಚ್ಚುವುದು ಹೆಚ್ಚುಕಡಮೆ ಅಸಾಧ್ಯ. ಬ್ರಿಟಿಷ್‌ ವಿಶ್ವವಿದ್ಯಾನಿಲಯದ ಒಬ್ಬ ಉಪಾಧ್ಯಾಯರು ವಾದಿಸುವುದೇನಂದರೆ, ಅರ್ಧಕ್ಕಿಂತಲೂ ಹೆಚ್ಚು ಬ್ರಿಟಿಷ್‌ ವಿದ್ಯಾರ್ಥಿಗಳು ಮೋಸಮಾಡಿದ್ದಾರೆ ಮತ್ತು ಈ ವಿಷಯದಲ್ಲಿ ಬ್ರಿಟನ್‌ ನಿಶ್ಚಯವಾಗಿಯೂ ಒಂಟಿಯಾಗಿಲ್ಲ.

ಭರವಸೆಗೆ ಯೋಗ್ಯರಲ್ಲದ ವ್ಯಕ್ತಿಗಳು ಸುಳ್ಳು ಹೇಳಿ ವಂಚಿಸುವಾಗ, ಮುಗ್ಧ ಜನರು ತೆರುವ ಬೆಲೆಯನ್ನು ಕಡೆಗಣಿಸುವಂತಿಲ್ಲ. 1984ರಲ್ಲಿ ವಿಷಕಾರಿ ಗ್ಯಾಸ್‌ 2,500ಕ್ಕಿಂತಲೂ ಹೆಚ್ಚು ಮಂದಿ ಗಂಡಸರು, ಹೆಂಗಸರು, ಹಾಗೂ ಮಕ್ಕಳನ್ನು ಕೊಂದು, ಲಕ್ಷಾಂತರ ಜನರನ್ನು ಹಾನಿಗೊಳಿಸಿದ, ಭಾರತದ ಭೋಪಾಲ್‌ ಪಟ್ಟಣದ ಘಟನೆಯನ್ನು ತೆಗೆದುಕೊಳ್ಳಿರಿ. ದ ಸಂಡೆ ಟೈಮ್ಸ್‌ ವರದಿಮಾಡಿದ್ದು: “ಬಲಿಗಳಿಗೆ ಸಹಾಯಮಾಡಲಿಕ್ಕಾಗಿರುವ ಪರಿಹಾರ ಯೋಜನೆಗಳು, ಭ್ರಷ್ಟಾಚಾರದಲ್ಲಿ ಹೂತುಹೋಗಿವೆ. . . . ಸಾವಿರಾರು ಖೋಟಾ ವಾದಗಳು, ಸುಳ್ಳು ದಸ್ತೈವಜುಗಳು, ಹಾಗೂ ಕಲ್ಪನೆಯ ರುಜುವಾತುಗಳಿಂದಾಗಿ, ನ್ಯಾಯ ಸಮ್ಮತವಾದ ವಾದಗಳನ್ನು ಪ್ರತ್ಯೇಕಿಸುವ ಕೆಲಸವು ಜಟಿಲವಾಗಿದೆ.” ಆ ಕಾರಣದಿಂದ, ಹತ್ತು ವರುಷಗಳ ನಂತರ, 47,00,00,000 ಡಾಲರುಗಳಲ್ಲಿ ಕೇವಲ 35,00,000 ಡಾಲರುಗಳ ಪರಿಹಾರವನ್ನು, ಅಗತ್ಯದಲ್ಲಿದ್ದವರಿಗೆ ವಿತರಿಸಲಾಗಿತ್ತು.

ಧರ್ಮದ ಕುರಿತಾಗಿ ಏನು? ಸಮಗ್ರತೆಯ ವಿಷಯದಲ್ಲಿ ಅದು ಯಾವ ಮಟ್ಟದಲ್ಲಿದೆ? ದುಖಃಕರವಾಗಿ, ಅನೇಕ ವೇಳೆ ಐಹಿಕ ಲೋಕದಲ್ಲಿರುವ ಮಟ್ಟಗಳಿಗಿಂತ ಉನ್ನತವಾಗಿರುವುದಿಲ್ಲ. ರೋಮನ್‌ ಕ್ಯಾಥೊಲಿಕ್‌ ಪಾದ್ರಿಯಾದ ಏಮನ್‌ ಕೇಸೀಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿರಿ. ಈಗ ಹದಿವಯಸ್ಕನಾಗಿರುವ ಜಾರಜ ಮಗನನ್ನು ಹುಟ್ಟಿಸಿದ ವಿಷಯವನ್ನು ಅವನು ಒಪ್ಪಿಕೊಂಡನು. ಬ್ರಿಟನ್‌ನ ಗಾರ್ಡಿಯನ್‌ ವಾರ್ತಾಪತ್ರಿಕೆಯು ವರದಿಸಿದಂತೆ, ಕೇಸೀಯ ಸನ್ನಿವೇಶವು “ಅಸಾಮಾನ್ಯವಾಗಿರಲಿಲ್ಲ.” ಅದೇ ರೀತಿಯಲ್ಲಿ, ದ ಟೈಮ್ಸ್‌ ವರದಿಸಿದ್ದು: “ಪಾದ್ರಿ ಕೇಸೀಯ ಅವಮಾನದ ಕುರಿತಾದ ಸತ್ಯವು, ಅವನ ತಪ್ಪು ಕೃತ್ಯ ಅಸಾಧಾರಣವಾಗಿತ್ತು ಎಂದಲ್ಲ, ಬದಲಿಗೆ ಕುಮಾರವ್ರತದ ವಿಷಯವಾಗಿ ಮೋಸಮಾಡುವುದು ಹೊಸದೂ ಅಲ್ಲ ವಿರಳವೂ ಅಲ್ಲ ಎಂಬುದೇ.” ಈ ವಾದವನ್ನು ಬೆಂಬಲಿಸುತ್ತಾ, ಸ್ಕಾಟ್ಲೆಂಡಿನ ದ ಗ್ಲಾಸ್‌ಗೋ ಹೆರಾಲ್ಡ್‌ ಹೇಳುವುದು, ಅಮೆರಿಕದಲ್ಲಿನ ರೋಮನ್‌ ಕ್ಯಾಥೊಲಿಕ್‌ ವೈದಿಕರಲ್ಲಿ ಕೇವಲ 2 ಪ್ರತಿಶತ ವೈದಿಕರು, ವಿರುದ್ಧಲಿಂಗಕಾಮ ಹಾಗೂ ಸಲಿಂಗೀಕಾಮ ಸಂಬಂಧಗಳನ್ನು ನಿರಾಕರಿಸಿದ್ದಾರೆ. ಈ ಸಂಖ್ಯೆಯು ನಿಷ್ಕೃಷ್ಟವಾಗಿದೆಯೋ ಇಲ್ಲವೋ, ಇದು ನೈತಿಕತೆಯ ವಿಷಯದಲ್ಲಿ ಕ್ಯಾಥೊಲಿಕ್‌ ವೈದಿಕರಿಗಿರುವ ಅಪಕೀರ್ತಿಯನ್ನು ಸೂಚಿಸುತ್ತದೆ.

ಇಂತಹ ಉದಾಹರಣೆಗಳು ಮುಂದಿರುವಾಗ, ಒಬ್ಬ ವ್ಯಕ್ತಿಗೆ ನೈತಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಸಾಧ್ಯವೇ? ಹಾಗೆ ಮಾಡುವುದು ಸಾರ್ಥಕವೋ? ಅದು ಏನನ್ನು ಕೇಳಿಕೊಳ್ಳುತ್ತದೆ, ಮತ್ತು ಹಾಗೆ ಮಾಡುವುದರಿಂದ ಬರುವ ಪ್ರತಿಫಲಗಳೇನು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ