“ಯಜಮಾನನಾದ ಕ್ರಿಸ್ತನ ಚಾಕರಿಮಾಡಿರಿ”
ಇತಿಹಾಸದಾದ್ಯಂತವಾಗಿ, ಕೋಟಿಗಟ್ಟಲೆ ಜನರು ದಾಸತ್ವದ ಹೊರೆಯನ್ನು ಸಹಿಸಿಕೊಂಡಿದ್ದಾರೆ. ಉದಾಹರಣೆಗಾಗಿ, ಸಾವಿರಾರು ವರ್ಷಗಳ ಹಿಂದೆ, ಐಗುಪ್ತದ ಮೇಲ್ವಿಚಾರಕರ ಕೈಕೆಳಗೆ ಇಸ್ರಾಯೇಲ್ಯರು ಬಹಳವಾಗಿ ಕಷ್ಟಾನುಭವಿಸಿದರು. ಬೈಬಲ್ ಹೇಳುವಂತೆ, “ಇಸ್ರಾಯೇಲ್ಯರನ್ನು ಬಿಟ್ಟೀಕೆಲಸದಿಂದ ಉಪದ್ರವಪಡಿಸುವದಕ್ಕಾಗಿ” ನಿರ್ದಿಷ್ಟವಾಗಿ ಇಟ್ಟಿಗೆಗಳನ್ನು ಮಾಡುವ ಕಾರ್ಯದಲ್ಲಿ ಅವರು “ಬಿಟ್ಟೀಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇಟ್ಟ”ರು.—ವಿಮೋಚನಕಾಂಡ 1:11.
ಅನೇಕ ದೇಶಗಳಲ್ಲಿ ಇಂದು, ಜನರು ಅಕ್ಷರಾರ್ಥವಾಗಿ ಚಾಕರಿಮಾಡದಿರಬಹುದಾದರೂ, ತಗಾದೆಮಾಡುವಂತಹ—ಕೆಲವೊಮ್ಮೆ ಅನನುಕೂಲಕರವಾದ—ಪರಿಸ್ಥಿತಿಗಳ ಕೆಳಗೆ ಅನೇಕರು ದೀರ್ಘ ತಾಸುಗಳ ವರೆಗೆ ಕೆಲಸಮಾಡಬೇಕಾಗಿದೆ. ಯಾವುದನ್ನು ಹಣಕಾಸಿನ ದಾಸತ್ವವೆಂದು ಕರೆಯಲ್ಪಡಬಹುದೋ ಆ ಭಾರವಾದ ಹೊರೆಯ ಕೆಳಗೆ ಅವರಿದ್ದಾರೆ.
ಹಾಗಿದ್ದರೂ, ಭಾರದಾಯಕವಾಗಿಲ್ಲದಂಥ ರೀತಿಯ ಒಂದು ದಾಸತ್ವವಿದೆ. ಅಪೊಸ್ತಲ ಪೌಲನು ಜೊತೆವಿಶ್ವಾಸಿಗಳಿಗೆ ಪ್ರಚೋದಿಸಿದ್ದು: “ಯಜಮಾನನಾದ ಕ್ರಿಸ್ತನ ಚಾಕರಿಮಾಡಿರಿ.” (ಕೊಲೊಸ್ಸೆ 3:24, NW) ಕ್ರಿಸ್ತನ ದಾಸರಾಗುವ ಆಯ್ಕೆಮಾಡುವವರು, ತಮ್ಮ ಭಾರವಾದ ಹೊರೆಗಳಿಂದ ವಿಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಯೇಸು ತಾನೇ ಹೇಳಿದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ [“ಪ್ರಾಣಗಳಿಗೆ,” NW] ವಿಶ್ರಾಂತಿಸಿಕ್ಕುವದು [“ಚೈತನ್ಯದೊರಕುವುದು,” NW]. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
ಕ್ರಿಸ್ತನ ನೊಗವನ್ನು ಸ್ವೀಕರಿಸುವುದು, ತನ್ನ ಕುಟುಂಬಕ್ಕೆ ಭೌತಿಕವಾಗಿ ಒದಗಿಸುವ ಹಂಗಿನಿಂದ ಒಬ್ಬನನ್ನು ಬಿಡುಗಡೆಗೊಳಿಸುವುದಿಲ್ಲ. (1 ತಿಮೊಥೆಯ 5:8) ಆದರೂ, ಅದು ಪ್ರಾಪಂಚಿಕತೆಯ ಬೆನ್ನಟ್ಟುವಿಕೆಗಳಿಂದಾಗುವ ಅನೇಕ ತೊಂದರೆಗಳಿಂದ ಬಿಡುಗಡೆಯನ್ನು ಒದಗಿಸುತ್ತದೆ. ಪ್ರಾಪಂಚಿಕ ಸೌಕರ್ಯವನ್ನು ಜೀವಿತದಲ್ಲಿನ ತಮ್ಮ ಮುಖ್ಯ ಗುರಿಯನ್ನಾಗಿ ಮಾಡಿಕೊಳ್ಳುವುದರ ಬದಲಿಗೆ, ಕ್ರೈಸ್ತರು ಮೂಲಭೂತ ಆವಶ್ಯಕತೆಗಳಲ್ಲಿಯೇ ಸಂತುಷ್ಟಿಯನ್ನು ಕಂಡುಕೊಳ್ಳುತ್ತಾರೆ.—1 ತಿಮೊಥೆಯ 6:6-10; 1 ಕೊರಿಂಥ 7:31ನ್ನು ಹೋಲಿಸಿರಿ.
ದೇವರ ರಾಜ್ಯದ “ಸುವಾರ್ತೆ”ಯನ್ನು ಸಾರುವ ತಮ್ಮ ಜವಾಬ್ದಾರಿಯನ್ನು ನೆರವೇರಿಸುವುದರಲ್ಲಿಯೂ ಕ್ರೈಸ್ತರು ಚೈತನ್ಯವನ್ನು ಕಂಡುಕೊಳ್ಳುತ್ತಾರೆ. (ಮತ್ತಾಯ 24:14) ಇದು ನಿಜವಾದ ಆನಂದವನ್ನೂ ಸಂತೃಪ್ತಿಯನ್ನೂ ತರುತ್ತದೆ!
ನಾವು ‘ಯಜಮಾನನಾದ ಕ್ರಿಸ್ತನ ಚಾಕರಿಮಾಡ’ಸಾಧ್ಯವಿರುವುದರಿಂದ ನಾವು ಕೃತಜ್ಞರಾಗಿರಬೇಕು!
[ಪುಟ 32 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.