ಒಂದು “ಅಸಾಮಾನ್ಯ” ಅಧಿವೇಶನವು ಶ್ಲಾಘಿಸಲ್ಪಡುತ್ತದೆ
ಪೆರೂವಿನ ಲೀಮದಲ್ಲಿನ ಒಬ್ಬ ರೇಡಿಯೊ ಅನೌನ್ಸರ್ನಿಗೆ, ಯೆಹೋವನ ಸಾಕ್ಷಿಗಳ ಕುರಿತಾಗಿ ಗಂಭೀರವಾದ ಸಂದೇಹಗಳಿದ್ದವು. ಆದರೆ ಅವರ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದ ಬಳಿಕ, ಅವನ ಮನೋಭಾವವು ಗಮನಾರ್ಹವಾಗಿ ಬದಲಾಯಿತು. ವಾಸ್ತವದಲ್ಲಿ, ಅವನು ಎಷ್ಟೊಂದು ಪ್ರಭಾವಿತನಾದನೆಂದರೆ, ತನ್ನ ರೇಡಿಯೊ ಶ್ರೋತೃವೃಂದಕ್ಕೆ ಕೆಲವೊಂದು ಅನುಮೋದಕ ಹೇಳಿಕೆಗಳನ್ನು ಅವನು ಮಾಡಿದನು. ಈ ಮುಂದಿನ ವಿಷಯವು, ಅವನು ಏನು ಹೇಳಿದನೊ ಅದರಿಂದ ಉದ್ಧರಿಸಿದ ಭಾಗಗಳಾಗಿವೆ:
“ಆ ಅಧಿವೇಶನವು ನಿಜವಾಗಿಯೂ ಅಸಾಮಾನ್ಯವಾಗಿತ್ತು. ನೆಲದ ಮೇಲೆ ಕಾಗದದ ಒಂದು ಚೂರಾಗಲಿ, ಸುತ್ತಮುತ್ತ ಒಬ್ಬ ಮಾರಾಟಗಾರನಾಗಲಿ ಇರಲಿಲ್ಲ. ಟ್ರ್ಯಾಫಿಕ್ ಜಾಮ್ಗಳಿರಲಿಲ್ಲ. ಐದು ಸಾವಿರದ ಇನ್ನೂರು ಜನರು, ತಮ್ಮ ಸ್ವಂತ ಖರ್ಚಿನಲ್ಲಿ ಕ್ರೀಡಾಂಗಣಕ್ಕೆ ಹೋದರು. ಪ್ರತಿಯೊಬ್ಬರು ಒಂದು ಬಕೆಟ್ಟು, ಚಿಂದಿಬಟ್ಟೆ, ಧೂಳೊರೆಸುವ ಬಟ್ಟೆ, ಕಸದ ಮೊರ, ಪೊರಕೆ, ಬ್ರಷ್, ಕೈಚೀಲಗಳು, ಮತ್ತು ಆ ಜಾಗವನ್ನು ತೊಳೆದು ಉಜ್ಜಲಿಕ್ಕಾಗಿ ಸಾಬೂನನ್ನು ತಂದಿದ್ದರು. ಪೆಯಿಂಟ್ ಮಾಡುವ ಅಗತ್ಯವಿದ್ದ ಕಡೆಗಳಲ್ಲಿ, ಅವರು ಮುಂದೆ ಹೋಗಿ ಪೆಯಿಂಟ್ ಮಾಡಿದರು. ಮತ್ತು ಹಣವು ಎಲ್ಲಿಂದ ಬಂತು? ಅವರೇ ಸ್ವತಃ ಹಣವನ್ನು ದಾನಮಾಡಿದರು! ಯಾವುದೋ ವಿಷಯವನ್ನು ಮಾಡುವ ಅಗತ್ಯವಿದೆಯೆಂದು ಅವರಿಗೆ ತಿಳಿಸಲ್ಪಟ್ಟಾಗ, ಅವರೆಲ್ಲರೂ ಸಿದ್ಧಮನಸ್ಸಿನಿಂದ ಹಣವನ್ನು ಕೊಡುತ್ತಾರೆ. ಈ ವಿಷಯಗಳ ಸಂಬಂಧದಲ್ಲಿ ಕ್ಯಾಥೊಲಿಕ್ ಚರ್ಚು ನಿದ್ರಿಸುತ್ತಿದೆಯೆಂಬುದು ಖಂಡಿತ. ನಾನು ಯೆಹೋವನ ಸಾಕ್ಷಿಗಳನ್ನು ಮತ್ತು ಈ ಘಟನೆಯನ್ನು ಸಂಯೋಜಿಸಿದವರನ್ನು ಅಭಿನಂದಿಸಲು ಬಯಸುತ್ತೇನೆ. ಮತ್ತು ದೇವರು ನಿಮಗೆ ಸಹಾಯಮಾಡಿ ಆಶೀರ್ವದಿಸಲಿ ಎಂದು ನಾನು ಅವರಿಗೆ ನನ್ನ ಹೃದಯದಾಳದಿಂದ ಹೇಳಬಯಸುತ್ತೇನೆ.”
ಲೋಕದ ಸುತ್ತಲಿರುವ ನಗರಗಳಲ್ಲಿ ಈ ವರ್ಷ, ಯೆಹೋವನ ಸಾಕ್ಷಿಗಳು “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಅಧಿವೇಶನದಲ್ಲಿ ಆನಂದಿಸುವರು. ನೀವು ಉಪಸ್ಥಿತರಿರುವಿರೊ?
[ಪುಟ 32 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ನೆಲದ ಮೇಲೆ ಕಾಗದದ ಒಂದು ಚೂರೂ ಇರಲಿಲ್ಲ’