ನಮ್ಮ ಭೂಮಿಯ ಭವಿಷ್ಯವೇನು?
“ಅಸಂಸ್ಕೃತವಾದ ನಾಗರಿಕ ಹಿಂಸಾಚಾರದಲ್ಲಿ, ಹೋರಾಡಲ್ಪಟ್ಟಿರುವ ಸಂಘರ್ಷಣೆಗಳ ಸಂಖ್ಯೆಯಲ್ಲಿ, ಉಂಟುಮಾಡಲ್ಪಟ್ಟಿರುವ ನಿರಾಶ್ರಿತರ ತಂಡಗಳಲ್ಲಿ, ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿರುವ ಕೋಟಿಗಟ್ಟಲೆ ಜನರಲ್ಲಿ, ಮತ್ತು ‘ರಕ್ಷಣೆ’ಗಾಗಿರುವ ಭಾರಿ ವೆಚ್ಚದ ವಿಷಯದಲ್ಲಿ 20ನೆಯ ಶತಮಾನದ ದಾಖಲೆಗೆ ಬೇರೆ ಯಾವುದೇ ಶತಮಾನದ ದಾಖಲೆಯು ಸರಿಸಾಟಿಯಾಗುವುದಿಲ್ಲ” ಎಂದು ವರ್ಲ್ಡ್ ಮಿಲಿಟರಿ ಆ್ಯಂಡ್ ಸೊಷ್ಯಲ್ ಎಕ್ಸ್‌ಪೆಂಡಿಚರ್ಸ್ 1996 ತಿಳಿಸುತ್ತದೆ. ಈ ಸ್ಥಿತಿಯು ಎಂದಾದರೂ ಬದಲಾಗುವುದೊ?
ಶತಮಾನಗಳ ಹಿಂದೆ ದೇವರಿಂದ ಮಾಡಲ್ಪಟ್ಟ ಒಂದು ವಾಗ್ದಾನವನ್ನು ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಜ್ಞಾಪಕಹುಟ್ಟಿಸಿದನು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಅಂತಹ ಮಾತುಗಳು ಮೂಲತಃ ಯೆಶಾಯನ ಪ್ರವಾದನೆಯ ಭಾಗವಾಗಿದ್ದವು. (ಯೆಶಾಯ 65:17; 66:22) ಪುರಾತನ ಇಸ್ರಾಯೇಲ್ ಬಾಬೆಲಿನಲ್ಲಿ 70 ವರ್ಷಗಳ ವರೆಗೆ ಬಂಧಿವಾಸದಲ್ಲಿದ್ದ ಬಳಿಕ, ಆ ಜನಾಂಗವು ವಾಗ್ದತ್ತ ದೇಶಕ್ಕೆ ಪುನಸ್ಸ್ಥಾಪಿಸಲ್ಪಟ್ಟಾಗ, ಒಂದು ಆರಂಭಿಕ ನೆರವೇರಿಕೆಯನ್ನು ಅನುಭವಿಸಿತು. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದ ವಾಗ್ದಾನವನ್ನು ಪುನಃ ತಿಳಿಸುವ ಮೂಲಕ, ಆ ಪ್ರವಾದನೆಯು ಇನ್ನೂ ಹೆಚ್ಚು ಭವ್ಯವಾದ ಪ್ರಮಾಣದಲ್ಲಿ—ಲೋಕವ್ಯಾಪಕವಾಗಿ—ನೆರವೇರಿಸಲ್ಪಡಲಿದೆಯೆಂದು ಪೇತ್ರನು ತೋರಿಸಿದನು!
ಇಡೀ ಭೂಮಿಯಲ್ಲಿ ನೀತಿಭರಿತ ಪರಿಸ್ಥಿತಿಗಳ ಸ್ಥಾಪನೆಯು ದೇವರ ಚಿತ್ತವಾಗಿದೆ, ಮತ್ತು ಅದು ಕ್ರಿಸ್ತನು ರಾಜನಾಗಿರುವ ದೇವರ ಸ್ವರ್ಗೀಯ ರಾಜ್ಯದ ಮೂಲಕ ನೆರವೇರಿಸಲ್ಪಡುವುದು. “ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:4) ಭೂಮಿಯ ಮೇಲೆ ಅಂತಹ ಸಂಪೂರ್ಣ ಶಾಂತಿ ಮತ್ತು ಭದ್ರತೆಯನ್ನು ನಿರೀಕ್ಷಿಸಲಿಕ್ಕಾಗಿ ಮತ್ತು ನಮ್ಮ ತಂದೆಯೇ ಅಥವಾ ಕರ್ತನ ಪ್ರಾರ್ಥನೆಯೆಂದು ಸಾಮಾನ್ಯವಾಗಿ ಕರೆಯಲಾಗುವ ಪ್ರಾರ್ಥನೆಯನ್ನು ಮಾಡುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅವರು ಹೀಗೆ ಪ್ರಾರ್ಥಿಸಬೇಕಿತ್ತು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೇರವೇರುವ ಪ್ರಕಾರ ಭೂಮಿಯಲ್ಲಿ ನೆರವೇರಲಿ.”—ಮತ್ತಾಯ 6:9, 10.
ಸ್ವರ್ಗದಷ್ಟು ನೀತಿಭರಿತವಾಗಿರುವ ಒಂದು ಲೋಕದಲ್ಲಿ ಜೀವಿಸಲು ನೀವು ಆನಂದಿಸುವಿರೊ? ದೇವರನ್ನು ತಿಳಿದುಕೊಂಡು ಆತನ ನೀತಿಭರಿತ ಮಾರ್ಗಗಳಿಗನುಸಾರ ಜೀವಿಸಲು ಪೂರ್ಣಹೃದಯದಿಂದ ಪ್ರಯತ್ನಿಸುವವರೆಲ್ಲರಿಗೆ ಬೈಬಲ್ ಆ ನಿರೀಕ್ಷೆಯನ್ನು ನೀಡುತ್ತದೆ.