ಜೀವಕ್ಕೆ ನಡಿಸುವ ಹಾದಿಯಲ್ಲಿರುವ ಹೆಸರುಕಂಬಗಳು
ನೀವು ಒಂದು ಅಪರಿಚಿತ ರಸ್ತೆಯಲ್ಲಿ ಅಥವಾ ಹಾದಿಯಲ್ಲಿ ಪ್ರಯಾಣಿಸುತ್ತಿರುವಲ್ಲಿ, ಹೆಸರುಕಂಬಗಳನ್ನು ಒಂದು ಅಡಚಣೆಯೋಪಾದಿ ವೀಕ್ಷಿಸುವಿರೊ? ಖಂಡಿತವಾಗಿಯೂ ಇಲ್ಲ! ನಿಶ್ಚಯವಾಗಿಯೂ ನಿಮ್ಮ ಗಮ್ಯಸ್ಥಾನಕ್ಕೆ ನಡಿಸುವ ಮಾರ್ಗದಿಂದ ದಾರಿತಪ್ಪದಂತೆ ಸಹಾಯ ಮಾಡುವ ಒಂದು ಸಹಾಯಕದೋಪಾದಿ ನೀವು ಅವನ್ನು ವೀಕ್ಷಿಸುವಿರಿ.
ಆದರೂ, ಜೀವಕ್ಕೆ ನಡಿಸುವ ಹಾದಿಯಲ್ಲಿ ಪ್ರಯಾಣಿಸುವುದರ ಕುರಿತಾಗಿ ಏನು? ಹೆಸರುಕಂಬಗಳಿಲ್ಲದೆ ಅದನ್ನು ಯಶಸ್ವಿಕರವಾಗಿ ತಲಪಸಾಧ್ಯವಿದೆಯೊ? ಈ ವಿಷಯದಲ್ಲಿರುವ ಮಾನವಕುಲದ ಪರಿಮಿತಿಗಳನ್ನು ದೇವರ ಪುರಾತನ ಪ್ರವಾದಿಯೊಬ್ಬನು ಒಪ್ಪಿಕೊಂಡನು. ಅವನು ಹೇಳಿದ್ದು: “ಓ ಕರ್ತನೇ, ಮಾನವನ ಮಾರ್ಗಗಳು ತನ್ನ ಸ್ವಂತ ಆಯ್ಕೆಗೆ ಅನುಗುಣವಾಗಿಲ್ಲ; ಅಥವಾ ತನ್ನ ಜೀವನ ಮಾರ್ಗವನ್ನು ನಿರ್ಧರಿಸುವುದು ಮನುಷ್ಯನ ಕೈಯಲ್ಲಿಲ್ಲ.”—ಯೆರೆಮೀಯ 10:23, ದ ನ್ಯೂ ಇಂಗ್ಲಿಷ್ ಬೈಬಲ್.
ಹಾಗಾದರೆ, ಅಗತ್ಯವಿರುವ ಮಾರ್ಗದರ್ಶನವನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಅಂತಹ ಮಾರ್ಗದರ್ಶನದ ವಿಶ್ವಾಸಾರ್ಹ ಮೂಲನು ಮನುಷ್ಯನ ಸೃಷ್ಟಿಕರ್ತನಾಗಿದ್ದಾನೆ, ಮತ್ತು ಸಾಂಕೇತಿಕ ಹೆಸರುಕಂಬಗಳು ಬೈಬಲಿನಲ್ಲಿ ಕಂಡುಬರುತ್ತವೆ. ತನ್ನ ವಾಕ್ಯದ ಮೂಲಕ ಯೆಹೋವನು ಹೇಳುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”—ಯೆಶಾಯ 30:21.
ಹೌದು, ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ, ದೇವರ ವಾಕ್ಯವು ವಿಶ್ವಾಸಾರ್ಹವಾದ ಮಾರ್ಗದರ್ಶನವನ್ನು ಕೊಡುತ್ತದೆ. (ಯೆಶಾಯ 48:17; 2 ತಿಮೊಥೆಯ 3:16, 17) ಆದರೂ, ವಿಷಾದಕರವಾಗಿ, ಮಾನವಕುಲದ ಅಧಿಕಾಂಶ ಮಂದಿ, ದೈವಿಕ ಮಾರ್ಗದರ್ಶನವನ್ನು ಪಡೆದುಕೊಳ್ಳದೆ, ಸ್ವತಂತ್ರವಾಗಿ ಆ ಜೀವಕ್ಕೆ ನಡಿಸುವ ಹಾದಿಯಲ್ಲಿ ಪ್ರಯಾಣಿಸುತ್ತಾರೆ. (ಮತ್ತಾಯ 7:13) ಇಷ್ಟಾದರೂ, ಹೆಸರುಕಂಬಗಳು ದೃಢವಾಗಿ ಸ್ಥಾಪಿಸಲ್ಪಟ್ಟಿವೆ ಮತ್ತು ಅವು ಲಭ್ಯವಿವೆ! ನೀವು ಜೀವಕ್ಕೆ ನಡಿಸುವ ಹಾದಿಯಲ್ಲಿ ನಡೆಯುವಾಗ, ಅವುಗಳ ಕಡೆಗೆ ಲಕ್ಷ್ಯಹರಿಸುವಿರೊ?