ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 5/15 ಪು. 27
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅನುರೂಪ ಮಾಹಿತಿ
  • ಯೆಹೋವನ ಮಹಾ ಆತ್ಮಿಕ ದೇವಾಲಯ
    ಕಾವಲಿನಬುರುಜು—1996
  • ಯೆಹೋವನ ಆಧ್ಯಾತ್ಮಿಕ ಆಲಯದಲ್ಲಿ ಆರಾಧಿಸೋದು ದೊಡ್ಡ ಆಶೀರ್ವಾದ !
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • “ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ”
    ಕಾವಲಿನಬುರುಜು—1996
  • ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 5/15 ಪು. 27

ವಾಚಕರಿಂದ ಪ್ರಶ್ನೆಗಳು

ದಾನಿಯೇಲ 9:24ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ, “ಅತಿಪರಿಶುದ್ಧವಾದದ್ದನ್ನು” ಯಾವಾಗ ಅಭಿಷೇಕಿಸಲಾಯಿತು?

ದಾನಿಯೇಲ 9:​24-27, “ಅಭಿಷಿಕ್ತನಾದ ಪ್ರಭು” ಅಂದರೆ ಕ್ರಿಸ್ತನ ಕಾಣಿಸಿಕೊಳ್ಳುವಿಕೆಯ ಕುರಿತಾದ ಒಂದು ಪ್ರವಾದನೆಯಾಗಿದೆ. ಆದುದರಿಂದ, ಮುಂತಿಳಿಸಲ್ಪಟ್ಟಿರುವ ‘ಅತಿಪರಿಶುದ್ಧವಾದದ್ದರ’ ಅಭಿಷೇಕಿಸುವಿಕೆಯು, ಯೆರೂಸಲೇಮಿನ ದೇವಾಲಯದಲ್ಲಿದ್ದ ಅತಿ ಪವಿತ್ರ ಸ್ಥಾನದ ಅಭಿಷೇಕಿಸುವಿಕೆಯ ಕುರಿತಾಗಿ ತಿಳಿಸುವುದಿಲ್ಲ. ಅದರ ಬದಲಿಗೆ, ‘ಅತಿಪರಿಶುದ್ಧವಾದದ್ದು’ ಎಂಬ ವಾಕ್ಸರಣಿಯು, ಸ್ವರ್ಗೀಯ ಪವಿತ್ರಸ್ಥಾನಕ್ಕೆ, ಅಂದರೆ ಯೆಹೋವನ ಮಹಾ ಆತ್ಮಿಕ ದೇವಾಲಯದಲ್ಲಿರುವ ಸ್ವರ್ಗೀಯ ಅತಿ ಪವಿತ್ರಸ್ಥಾನಕ್ಕೆ ಸೂಚಿಸುತ್ತದೆ.a​—ಇಬ್ರಿಯ 8:​1-5; 9:​2-10, 23.

ದೇವರ ಆತ್ಮಿಕ ಆಲಯವು ಯಾವಾಗ ಕಾರ್ಯನಡಿಸಲು ಆರಂಭಿಸಿತು? ಸಾ.ಶ. 29ರಲ್ಲಿ ಯೇಸು ದೀಕ್ಷಾಸ್ನಾನಕ್ಕಾಗಿ ತನ್ನನ್ನು ನೀಡಿಕೊಂಡಾಗ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ತನ್ನ ಜೀವಿತದ ಆ ಹಂತದಿಂದ ಯೇಸು, ಕೀರ್ತನೆ 40:​6-8ರಲ್ಲಿರುವ ಮಾತುಗಳನ್ನು ನೆರವೇರಿಸಿದನು. ಯೇಸು, “[ದೇವರೇ,] ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ” ಎಂದು ಪ್ರಾರ್ಥಿಸಿದನೆಂಬುದನ್ನು ಅಪೊಸ್ತಲ ಪೌಲನು ಅನಂತರ ಸೂಚಿಸಿ ಬರೆದನು. (ಇಬ್ರಿಯ 10:5) ಯೆರೂಸಲೇಮಿನ ದೇವಾಲಯದಲ್ಲಿ ಪ್ರಾಣಿ ಯಜ್ಞಗಳ ಅರ್ಪಣೆಯು ಮುಂದುವರಿಯುವುದನ್ನು ದೇವರು ‘ಇಷ್ಟಪಡಲಿಲ್ಲ’ ಎಂದು ಯೇಸುವಿಗೆ ತಿಳಿದಿತ್ತು. ಆದುದರಿಂದ ದೇವರು, ಯಜ್ಞವಾಗಿ ನೀಡುವಂತೆ ಒಂದು ಪರಿಪೂರ್ಣ ಮಾನವ ದೇಹವನ್ನು ಯೇಸುವಿಗಾಗಿ ಸಿದ್ಧಗೊಳಿಸಿದನು. ತನ್ನ ಮನಃಪೂರ್ವಕ ಆಸೆಯನ್ನು ವ್ಯಕ್ತಪಡಿಸುತ್ತಾ ಯೇಸು ಮುಂದುವರಿಸಿದ್ದು: “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.” (ಇಬ್ರಿಯ 10:7) ಮತ್ತು ಯೆಹೋವನ ಪ್ರತಿಕ್ರಿಯೆ ಏನಾಗಿತ್ತು? ಮತ್ತಾಯನ ಸುವಾರ್ತೆಯು ಹೇಳುವುದು: “ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ⁠—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.”​—ಮತ್ತಾಯ 3:16, 17.

ಯಜ್ಞಕ್ಕಾಗಿ ಯೇಸುವಿನ ದೇಹದ ಅರ್ಪಣೆಯನ್ನು ಯೆಹೋವ ದೇವರು ಅಂಗೀಕರಿಸಿದ್ದನೆಂಬ ಸಂಗತಿಯು, ಯೆರೂಸಲೇಮಿನ ದೇವಾಲಯದಲ್ಲಿದ್ದ ಅಕ್ಷರಾರ್ಥ ಯಜ್ಞವೇದಿಗಿಂತಲೂ ಶ್ರೇಷ್ಠವಾದ ಯಜ್ಞವೇದಿಯು ಅಸ್ತಿತ್ವಕ್ಕೆ ಬಂದಿತ್ತೆಂಬುದನ್ನು ಅರ್ಥೈಸಿತ್ತು. ಇದು ದೇವರ “ಚಿತ್ತ” ಎಂಬ ಯಜ್ಞವೇದಿಯಾಗಿತ್ತು ಅಥವಾ ಯೇಸುವಿನ ಮಾನವ ಜೀವವನ್ನು ಯಜ್ಞವಾಗಿ ಸ್ವೀಕರಿಸುವ ಏರ್ಪಾಡಾಗಿತ್ತು. (ಇಬ್ರಿಯ 10:10) ಯೇಸುವನ್ನು ಪವಿತ್ರಾತ್ಮದಿಂದ ಅಭಿಷೇಕಿಸುವುದು, ದೇವರು ತನ್ನ ಇಡೀ ಆತ್ಮಿಕ ದೇವಾಲಯದ ಏರ್ಪಾಡನ್ನು ಅಸ್ತಿತ್ವಕ್ಕೆ ತಂದಿದ್ದನೆಂಬುದನ್ನು ಅರ್ಥೈಸಿತು.b ಆದುದರಿಂದ ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, ದೇವರ ಸ್ವರ್ಗೀಯ ನಿವಾಸಸ್ಥಾನವು ಮಹಾ ಆತ್ಮಿಕ ದೇವಾಲಯದ ಏರ್ಪಾಡಿನಲ್ಲಿ “ಅತಿಪರಿಶುದ್ಧವಾದದ್ದು” ಆಗಿ ಅಭಿಷೇಕಿಸಲ್ಪಟ್ಟಿತು ಅಥವಾ ಮೀಸಲಾಗಿರಿಸಲ್ಪಟ್ಟಿತು.

[ಪಾದಟಿಪ್ಪಣಿಗಳು]

a ದೇವರ ಸ್ವರ್ಗೀಯ ಆಲಯದ ವಿಭಿನ್ನ ವೈಶಿಷ್ಟ್ಯಗಳ ಚರ್ಚೆಗಾಗಿ, 1996, ಜುಲೈ 1ರ ಕಾವಲಿನಬುರುಜು ಪತ್ರಿಕೆಯ 14-19ನೆಯ ಪುಟಗಳನ್ನು ನೋಡಿರಿ.

b ಇದರ ಕುರಿತು ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 195ನೆಯ ಪುಟದಲ್ಲಿ ಸೂಚಿಸಲಾಗಿತ್ತು.

[ಪುಟ 27ರಲ್ಲಿರುವ ಚಿತ್ರ]

ಯೇಸುವಿನ ದೀಕ್ಷಾಸ್ನಾನವಾದಾಗ “ಅತಿಪರಿಶುದ್ಧವಾದದ್ದು” ಅಭಿಷೇಕಿಸಲ್ಪಟ್ಟಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ