ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 11/15 ಪು. 27
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
  • ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ದೇವರನ್ನು ಅಸಂತೋಷಗೊಳಿಸುವ ಆಚರಣೆಗಳು
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಮೂಢನಂಬಿಕೆಗಳು—ಇಂದಿನ ವರೆಗೂ ಏಕೆ ಅಸ್ತಿತ್ವದಲ್ಲಿವೆ?
    ಎಚ್ಚರ!—1999
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 11/15 ಪು. 27

ವಾಚಕರಿಂದ ಪ್ರಶ್ನೆಗಳು

ರಾಶಿಮಣಿಗಳ ಉಪಯೋಗವನ್ನು ಕ್ರೈಸ್ತರು ಹೇಗೆ ಪರಿಗಣಿಸಬೇಕು?

ಕೆಲವು ಸಂಸ್ಕೃತಿಗಳಲ್ಲಿ, ರಾಶಿಮಣಿಗಳನ್ನು ಒಬ್ಬನ ಜನನದ ತಿಂಗಳೊಂದಿಗೆ ಸಂಬಂಧಿಸಲಾಗುತ್ತದೆ. ಒಬ್ಬ ಕ್ರೈಸ್ತನು ನಿರ್ದಿಷ್ಟ ರೀತಿಯ ರತ್ನಮಣಿಯುಳ್ಳ ಒಂದು ಉಂಗುರವನ್ನು ಹಾಕಿಕೊಳ್ಳಬೇಕೋ ಬೇಡವೋ ಎಂಬುದು ವೈಯಕ್ತಿಕವಾಗಿ ನಿರ್ಣಯಿಸಬೇಕಾದ ವಿಷಯವಾಗಿದೆ. (ಗಲಾತ್ಯ 6:5) ಆ ನಿರ್ಧಾರವನ್ನು ಮಾಡುವಾಗ, ಅನೇಕ ಗಮನಾರ್ಹ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ.

ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕವು ತಿಳಿಸುವುದೇನೆಂದರೆ, ಒಂದು ರಾಶಿಮಣಿಯು “ಒಬ್ಬನ ಜನ್ಮ ದಿನಾಂಕಕ್ಕೆ ಸಂಬಂಧಿಸಿರುವ ಒಂದು ರತ್ನಮಣಿಯಾಗಿದೆ; ಇದನ್ನು ಧರಿಸುವುದು ಒಳ್ಳೇ ಅದೃಷ್ಟವನ್ನು ಅಥವಾ ಆರೋಗ್ಯವನ್ನು ತರುತ್ತದೆ ಎಂಬುದು ಜನಸಾಮಾನ್ಯರ ನಂಬಿಕೆ.” ಇದೇ ಕೃತಿಯು ಕೂಡಿಸುತ್ತಾ ಹೇಳುವುದು: “ಕೆಲವು ರತ್ನಮಣಿಗಳಿಗೆ ಪ್ರಕೃತ್ಯತೀತ ಶಕ್ತಿಗಳಿವೆ ಎಂದು ಜೋಯಿಸರು ಬಹಳ ದೀರ್ಘ ಸಮಯದಿಂದಲೂ ಪರಿಗಣಿಸಿದ್ದಾರೆ.”

ಅದರಲ್ಲೂ ವಿಶೇಷವಾಗಿ ಪುರಾತನ ಸಮಯಗಳಲ್ಲಿ, ರಾಶಿಮಣಿಯನ್ನು ಯಾರು ಧರಿಸುತ್ತಾರೋ ಆ ವ್ಯಕ್ತಿಗೆ ಅದು ಶುಭಸೂಚಕ ಅದೃಷ್ಟವನ್ನು ತರುತ್ತದೆ ಎಂದು ಅನೇಕರು ನಂಬಿದರು. ಒಬ್ಬ ಸತ್ಕ್ರೈಸ್ತನು ಇದನ್ನು ನಂಬುತ್ತಾನೋ? ಇಲ್ಲ, ಏಕೆಂದರೆ ಯಾರು ತನ್ನನ್ನು ತೊರೆದು “ಶುಭದಾಯಕದೇವತೆ”ಯಲ್ಲಿ ಭರವಸೆಯಿಟ್ಟರೋ ಅವರನ್ನು ಯೆಹೋವನು ಖಂಡಿಸಿದನು ಎಂಬುದು ಅವನಿಗೆ ಗೊತ್ತಿದೆ.​—ಯೆಶಾಯ 65:11.

ಮಧ್ಯಯುಗಗಳ ಸಮಯದಲ್ಲಿ, ಭವಿಷ್ಯ ನುಡಿಯುವವರು ವರ್ಷದ ಪ್ರತಿ ತಿಂಗಳಿಗಾಗಿ ಒಂದು ರತ್ನವನ್ನು ಆಯ್ಕೆಮಾಡಿದರು. ತಾವು ಜನಿಸಿದ ತಿಂಗಳಿಗೆ ಸೂಚಿತವಾಗಿದ್ದ ರತ್ನವನ್ನು ಧರಿಸುವಂತೆ ಅವರು ಜನರನ್ನು ಉತ್ತೇಜಿಸಿದರು. ಯಾರು ಅದನ್ನು ಹಾಕಿಕೊಳ್ಳುತ್ತಾರೋ ಅವರನ್ನು ಅದು ವಿಘ್ನದಿಂದ ಕಾಪಾಡುತ್ತದೆ ಎಂಬುದು ಜನಸಾಮಾನ್ಯರ ನಂಬಿಕೆಯಾಗಿತ್ತು. ಆದರೆ ಕ್ರೈಸ್ತರು ವೃತ್ತಿಪರ ಭವಿಷ್ಯ ನುಡಿಯುವವರ ಮಾರ್ಗದರ್ಶನವನ್ನು ಅನುಸರಿಸುವುದು ಶಾಸ್ತ್ರೀಯವಾಗಿ ತಪ್ಪಾಗಿದೆ, ಏಕೆಂದರೆ ಬೈಬಲು ಅಂಥವರನ್ನು ಖಂಡಿಸುತ್ತದೆ.​—ಧರ್ಮೋಪದೇಶಕಾಂಡ 18:​9-12.

ಒಂದು ಉಂಗುರದಲ್ಲಿ ರಾಶಿಮಣಿಯಿದೆ ಎಂಬ ಕಾರಣಕ್ಕೆ ಅದನ್ನು ವಿಶೇಷಾರ್ಥವುಳ್ಳದ್ದಾಗಿ ಪರಿಗಣಿಸುವುದು ಸಹ ಕ್ರೈಸ್ತರಿಗೆ ಸಂಪೂರ್ಣವಾಗಿ ಅನುಚಿತವಾಗಿರುವುದು. ಯೆಹೋವನ ಸಾಕ್ಷಿಗಳು ಜನ್ಮದಿನಗಳನ್ನು ಆಚರಿಸುವುದಿಲ್ಲ. ಏಕೆಂದರೆ ಅಂಥ ಆಚರಣೆಗಳು ಒಬ್ಬ ವ್ಯಕ್ತಿಯ ಮೇಲೇ ಅತ್ಯಧಿಕ ಗಮನವನ್ನು ಕೇಂದ್ರೀಕರಿಸುತ್ತವೆ ಮತ್ತು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಜನ್ಮದಿನಾಚರಣೆಗಳು, ಯಾರು ದೇವರನ್ನು ಸೇವಿಸಲಿಲ್ಲವೋ ಆ ರಾಜರುಗಳದ್ದಾಗಿವೆ.​—ಆದಿಕಾಂಡ 40:20; ಮತ್ತಾಯ 14:6-10.

ರಾಶಿಮಣಿಯು ಕೂರಿಸಲ್ಪಟ್ಟಿರುವ ಒಂದು ಉಂಗುರವನ್ನು ಹಾಕಿಕೊಳ್ಳುವುದು, ಅದನ್ನು ಹಾಕಿಕೊಂಡಂಥ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಎಂದು ಕೆಲವರು ನೆನಸುತ್ತಾರೆ. ಆದರೆ, ಸತ್ಯ ಕ್ರೈಸ್ತರು ಇದನ್ನು ನಂಬುವುದಿಲ್ಲ, ಏಕೆಂದರೆ ದೇವರ ಪವಿತ್ರಾತ್ಮದ ಪ್ರಭಾವದ ಕೆಳಗೆ ಮತ್ತು ಶಾಸ್ತ್ರೀಯ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ “ನೂತನಸ್ವಭಾವ”ವು ಧರಿಸಲ್ಪಡುತ್ತದೆ ಎಂಬುದನ್ನು ಅವರು ಗ್ರಹಿಸುತ್ತಾರೆ.​—ಎಫೆಸ 4:​22-24.

ಅದರ ಹಿಂದಿರುವ ಹೇತುವೇ ಅತಿ ಪ್ರಾಮುಖ್ಯವಾದ ಒಂದು ಅಂಶವಾಗಿದೆ. ಒಂದು ರಾಶಿಮಣಿಯಿರುವ ಉಂಗುರವನ್ನು ಹಾಕಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವಾಗ, ಒಬ್ಬ ಕ್ರೈಸ್ತನು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ಈ ರತ್ನವು ನನ್ನ ಜನ್ಮದಿನಕ್ಕೆ ಸಂಬಂಧಿಸಿರುವುದಾದರೂ, ಇದು ನನಗೆ ತುಂಬ ಹಿಡಿಸಿದೆ ಎಂಬ ಕಾರಣಕ್ಕಾಗಿಯೇ ನಾನು ಈ ಉಂಗುರವನ್ನು ಹಾಕಿಕೊಳ್ಳಲು ಇಷ್ಟಪಡುತ್ತೇನೋ? ಅಥವಾ ಈ ರತ್ನಗಳ ವಿಷಯದಲ್ಲಿ ಕೆಲವು ಜನರಿಗಿರುವ ಮೂಢನಂಬಿಕೆಯಿಂದ ಕೂಡಿದ ಕಲ್ಪನೆಗಳಿಂದ ನಾನು ಸ್ವಲ್ಪಮಟ್ಟಿಗೆ ಪ್ರಭಾವಿತನಾಗಿದ್ದೇನೋ?’

ಒಬ್ಬ ಕ್ರೈಸ್ತನು ತನ್ನ ಹೇತುವನ್ನು ಕಂಡುಕೊಳ್ಳಲಿಕ್ಕಾಗಿ ತನ್ನ ಹೃದಯವನ್ನು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು” ಎಂದು ಶಾಸ್ತ್ರವಚನವು ಹೇಳುತ್ತದೆ. (ಜ್ಞಾನೋಕ್ತಿ 4:23) ರಾಶಿಮಣಿಗಳ ಕುರಿತು ನಿರ್ಣಯವನ್ನು ಮಾಡುವಾಗ, ಪ್ರತಿಯೊಬ್ಬ ಕ್ರೈಸ್ತನು ತನ್ನ ಹೇತುವನ್ನು ಹಾಗೂ ಅವನು ಮಾಡುವ ಆಯ್ಕೆಯು ಸ್ವತಃ ಅವನ ಮೇಲೆ ಮತ್ತು ಇತರರ ಮೇಲೆ ಬೀರಸಾಧ್ಯವಿರುವ ಪರಿಣಾಮಗಳನ್ನು ಪರಿಗಣಿಸುವುದು ಒಳ್ಳೇದು.​—ರೋಮಾಪುರ 14:13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ