ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 12/1 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಯೆಹೋವನ ಸಾಕ್ಷಿಗಳು ಯಾಕೆ ಹುಟ್ಟು ಹಬ್ಬ ಮಾಡಲ್ಲ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1998
  • ಯಾವ ರೀತಿಯ ಪಾರ್ಟಿ ದೇವರಿಗೆ ಇಷ್ಟ?
    ಮಹಾ ಬೋಧಕನಿಂದ ಕಲಿಯೋಣ
  • ದೇವರನ್ನು ಅಸಂತೋಷಗೊಳಿಸುವ ಆಚರಣೆಗಳು
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಇನ್ನಷ್ಟು
ಕಾವಲಿನಬುರುಜು—1992
w92 12/1 ಪು. 30-31

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳು ಜನ್ಮದಿನಾಚರಣೆಯಿಂದ ದೂರವಿರುವುದು, ಪುರಾತನ ಕಾಲದಲ್ಲಿ ಈ ಆಚಾರಕ್ಕೆ ಯಾವುದೋ ಧಾರ್ಮಿಕ ಅರ್ಥವಿದ್ದುದರಿಂದಲೊ?

ಜನ್ಮದಿನಾಚರಣೆಯು ಮೂಢಭಕ್ತಿ ಮತ್ತು ಮಿಥ್ಯಾಧರ್ಮದಲ್ಲಿ ಬೇರೂರಿರುವುದಾದರೂ, ಯೆಹೋವನ ಸಾಕ್ಷಿಗಳು ಈ ಆಚಾರದಿಂದ ದೂರವಿರುವುದಕ್ಕೆ ಇದು ಒಂದೇ ಅಥವಾ ಮುಖ್ಯ ಕಾರಣವಾಗಿರುವುದಿಲ್ಲ.

ಒಮ್ಮೆ ಧಾರ್ಮಿಕವಾಗಿದ್ದ ಕೆಲವು ಪದ್ಧತಿಗಳು ಇಂದು ಅನೇಕ ಸ್ಥಳಗಳಲ್ಲಿ ಹಾಗಿರುವುದಿಲ್ಲ. ದೃಷ್ಟಾಂತಕ್ಕೆ, ಒಮ್ಮೆ ವಿವಾಹದ ಉಂಗುರಕ್ಕೆ ಧಾರ್ಮಿಕ ಮಹತ್ವವಿತ್ತು, ಆದರೆ ಇಂದು ಅಧಿಕಾಂಶ ಸ್ಥಳಗಳಲ್ಲಿ ಹಾಗಿರುವುದಿಲ್ಲ. ಹೀಗೆ, ಅನೇಕ ಸತ್ಯ ಕ್ರೈಸ್ತರು, ತಾವು ವಿವಾಹಿತರು ಎಂದು ರುಜುಪಡಿಸಲು ವಿವಾಹದುಂಗುರವನ್ನು ಧರಿಸುವ ಸ್ಥಳೀಕ ಪದ್ಧತಿಯನ್ನು ಅಂಗೀಕರಿಸುತ್ತಾರೆ. ಇಂಥ ಸಂಗತಿಗಳಲ್ಲಿ ಸಾಮಾನ್ಯವಾಗಿ ಯಾವುದು ಪ್ರಭಾವಿಸುವ ವಿಷಯವೆಂದರೆ, ಆ ಪದ್ಧತಿಗೆ ಈಗ ಸುಳ್ಳು ಧರ್ಮದೊಂದಿಗೆ ಸಂಬಂಧವಿದೆಯೋ ಇಲ್ಲವೋ ಎಂಬುದೆ.—ದ ವಾಚ್‌ಟವರ್‌, ಜನವರಿ 15, 1972, ಮತ್ತು ಕಾವಲಿನ ಬುರುಜು ಜನವರಿ 15, 1992 ರ “ವಾಚಕರಿಂದ ಪ್ರಶ್ನೆಗಳು” ನೋಡಿ.

ಆದರೆ, ಅನೇಕ ಪ್ರಮಾಣ ಗ್ರಂಥಗಳು ಜನ್ಮದಿನಾಚರಣೆಯ ಮೂಢನಂಬಿಕೆ ಮತ್ತು ಧಾರ್ಮಿಕ ಪೂರ್ವಭಾವಿತ್ವಗಳನ್ನು ತಿಳಿಸುತ್ತವೆಂಬ ನಿಜತ್ವವನ್ನು ಅಲ್ಲಗಳೆಯ ಸಾಧ್ಯವಿಲ್ಲ. ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ (1991 ಮುದ್ರಣ) ಅವಲೋಕಿಸುವುದು: “ಈಜಿಪ್ಟ್‌, ಗ್ರೀಸ್‌, ರೋಮ್‌, ಮತ್ತು ಪರ್ಸಿಯದ ಪುರಾತನ ಲೋಕವು ದೇವರುಗಳ, ರಾಜರುಗಳ ಮತ್ತು ಕುಲೀನರ ಜನ್ಮದಿನಗಳನ್ನಾಚರಿಸಿತು.” ರೋಮನರು ಆರ್ಟಿಮಿಸ್‌ನ ಜನ್ಮದಿನವನ್ನೂ ಅಪೊಲೋವಿನ ದಿನವನ್ನೂ ಆಚರಿಸಿದರೆಂದು ಅದು ಹೇಳುತ್ತದೆ. ಇದಕ್ಕೆ ವೈದೃಶ್ಯವಾಗಿ, “ಪುರಾತನದ ಇಸ್ರಾಯೇಲ್ಯರು ತಮ್ಮ ಗಂಡು ನಾಗರಿಕರ ವಯಸ್ಸಿನ ದಾಖಲೆಗಳನ್ನಿಟ್ಟರೂ, ಜನನದ ವಾರ್ಷಿಕ ದಿನದಲ್ಲಿ ಉತ್ಸವಗಳಿದ್ದವೆಂಬುದಕ್ಕೆ ಯಾವ ರುಜುವಾತೂ ಇಲ್ಲ.”

ಇತರ ಪ್ರಮಾಣ ಗ್ರಂಥಗಳು, ಜನ್ಮದಿನಾಚರಣೆಯ ಮೂಲದ ವಿಷಯದಲ್ಲಿ ಗಣನೀಯ ವಿವರಣೆಗಳನ್ನು ಕೊಡುತ್ತವೆ: ‘ವರ್ಷಗಳಿಗೆ ಹಿಂದೆ ಯೂರೋಪಿನಲ್ಲಿ ಜನ್ಮದಿನದ ಗೋಷ್ಠಿಗಳು ಆರಂಭವಾದವು. ಜನರು, ಕೆಲವು ಬಾರಿ ಸುದೇವತೆ ಮತ್ತು ದುಷ್ಟ ದೇವತೆ ಎಂದು ಕರೆಯಲ್ಪಡುವ ಒಳ್ಳೆಯಾತ್ಮ ಮತ್ತು ದುಷ್ಟಾತ್ಮಗಳಲ್ಲಿ ನಂಬುತ್ತಿದ್ದರು. ಈ ಆತ್ಮಗಳು ಜನ್ಮದಿನವನ್ನಾಚರಿಸುವವನಿಗೆ ಹಾನಿ ಮಾಡುವುವೆಂದು ನೆನಸಿ ಎಲ್ಲರೂ ಈ ಆತ್ಮಗಳಿಗೆ ಭಯಪಡುತ್ತಿದ್ದರು, ಮತ್ತು ಈ ಕಾರಣದಿಂದ, ಅವನನ್ನು ಸುತ್ತುಗಟ್ಟಿರುವ ಮಿತ್ರರ ಮತ್ತು ಸಂಬಂಧಿಗಳ ಶುಭಾಶಯಗಳು ಮತ್ತು ಅವರ ಸಾನ್ನಿಧ್ಯವೇ ಜನ್ಮದಿನದಿಂದ ಬರುವ ಅಜ್ಞಾತ ಅಪಾಯಗಳಿಂದ ಅವನನ್ನು ರಕ್ಷಿಸುವುದೆಂದು ಅವರು ತಿಳಿಯುತ್ತಿದ್ದರು. ಕೊಡುಗೆಗಳ ನೀಡುವಿಕೆ ಇನ್ನೂ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತಿತ್ತು. ಕೂಡಿ ಮಾಡುವ ಊಟ ಮತ್ತೂ ಹೆಚ್ಚಿನ ಭದ್ರತೆಯನ್ನು ಒದಗಿಸಿ ಒಳ್ಳೆಯ ಆತ್ಮಗಳ ಆಶೀರ್ವಾದಗಳನ್ನು ತರಲು ಸಹಾಯ ಮಾಡುತ್ತಿತ್ತು. ಹೀಗೆ, ಜನ್ಮದಿನ ಗೋಷ್ಠಿಯ ಉದ್ದೇಶವು ಮೂಲದಲ್ಲಿ ಒಬ್ಬ ವ್ಯಕ್ತಿಯನ್ನು ಕೆಟ್ಟದ್ದರಿಂದ ರಕ್ಷಿಸಿ ಬರಲಿದ್ದ ಸುವರ್ಷದ ಭರವಸೆ ಕೊಡುವುದೇ ಆಗಿತ್ತು.’—ಬರ್ತ್‌ಡೇ ಪಾರ್ಟೀಸ್‌ ಅರೌಂಡ್‌ ದ ವರ್ಲ್ಡ್‌, 1967.

ಅನೇಕ ಜನ್ಮದಿನ ಪದ್ಧತಿಗಳ ಮೂಲವನ್ನೂ ಈ ಪುಸ್ತಕ ವಿವರಿಸುತ್ತದೆ. ಉದಾಹರಣೆಗೆ: “[ಮೋಂಬತಿಯ್ತ ಉಪಯೋಗಕ್ಕೆ] ಕಾರಣರು ಮೋಂಬತ್ತಿ ಯಾ ಮೇಣದ ಬತ್ತಿಯಲ್ಲಿ ಮಾಂತ್ರಿಕ ಗುಣಗಳಿದ್ದವು ಎಂದು ಯೋಚಿಸುತ್ತಿದ್ದ ಆದಿ ಗ್ರೀಕರು ಮತ್ತು ರೋಮನರು. ಅವರು ಪ್ರಾರ್ಥನೆಗಳನ್ನು ಅರ್ಪಿಸಿ ಮೋಂಬತಿಯ್ತ ಜ್ವಾಲೆಯ ಮೂಲಕ ದೇವತೆಗಳ ಬಳಿಗೆ ಒಯ್ಯಲ್ಪಡುವಂತೆ ಶುಭಗಳನ್ನು ಕೋರುತ್ತಿದ್ದರು. ಆಗ ದೇವತೆಗಳು ತಮ್ಮ ಆಶೀರ್ವಾದಗಳನ್ನು ಕೆಳಗೆ ಕಳುಹಿಸಿ ಪ್ರಾಯಶಃ ಅವರ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಿದ್ದರು.” ಇಂಥ ಇತರ ಹಿನ್ನೆಲೆಯ ಮಾಹಿತಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿಸಿರುವ ರೀಸನಿಂಗ್‌ ಫ್ರಾಮ್‌ ದ ಸ್ಕ್ರಿಪ್ಚರ್ಸ್‌ ಪುಸ್ತಕದ 69 ಮತ್ತು 70 ನೆಯ ಪುಟಗಳಲ್ಲಿ ಸಂಗ್ರಹಿಸಲ್ಪಟ್ಟಿದೆ.

ಆದರೆ ಈ ಹಿಂದೆ ಹೇಳಿರುವಂತೆ, ಜನ್ಮದಿನಾಚರಣೆ ಹಿಂದೆ ಮತ್ತು ಈಗಲೂ ಧಾರ್ಮಿಕವೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಿನದ್ದು ಈ ಪ್ರಶ್ನೆಯಲ್ಲಿ ಸೇರಿಕೊಂಡಿದೆ. ಬೈಬಲು ಜನ್ಮದಿನಗಳ ಸಂಗತಿಯನ್ನು ಎತ್ತುತ್ತದೆ ಮತ್ತು ಪಕ್ವತೆಯುಳ್ಳ ಕ್ರೈಸ್ತರು ಅದು ಕೊಡುವ ಯಾವುದೇ ಸೂಚನೆಗಳಿಗೆ ವಿವೇಕದಿಂದ ಸಂವೇದನಶೀಲರಾಗುತ್ತಾರೆ.

ದೇವರ ಪುರಾತನಕಾಲದ ಸೇವಕರು ಜನನಗಳ ದಾಖಲೆಗಳನ್ನು ಮಾಡುತ್ತಿದ್ದರು, ಮತ್ತು ಇದು ಅವರ ವಯಸ್ಸನ್ನು ಎಣಿಸಲು ಅವಕಾಶ ಕೊಟ್ಟಿತು. ನಾವು ಓದುವುದು: “ನೋಹನು ಐನೂರು ವರುಷದವನಾದಾಗ ಶೇಮ್‌, ಹಾಮ್‌, ಯೆಫೆತ್‌ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.” “ನೋಹನ ಜೀವಮಾನದ ಆರುನೂರನೆಯ ವರುಷದಲ್ಲಿ . . . ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು.”—ಆದಿಕಾಂಡ 5:32; 7:11; 11:10-26.

ಯೇಸು ಸಹ ಹೇಳಿದಂತೆ, ದೇವಜನರ ಮಧ್ಯೆ ಶಿಶುಜನನವು ಶುಭಕರವಾದ, ಸಂತೋಷದ ಸಂಭವವಾಗಿತ್ತು. (ಲೂಕ 1:57, 58; 2:9-14; ಯೋಹಾನ 16:21) ಹೀಗಿದ್ದರೂ, ಯೆಹೋವನ ಜನರು ಜನ್ಮದಿನವನ್ನು ಜ್ಞಾಪಿಸಿಕೊಳ್ಳಲಿಲ್ಲ; ಅವರು ಇತರ ವಾರ್ಷಿಕಾಚರಣೆಗಳನ್ನು ಮಾಡಿದರಾದರೂ ಜನ್ಮದಿನಗಳನ್ನು ಆಚರಿಸಲಿಲ್ಲ. (ಯೋಹಾನ 10:22, 23) ಎನ್‌ಸೈಕ್ಲೊಪೀಡಿಯ ಜೂಡೈಕ ಹೇಳುವುದು: “ಜನ್ಮದಿನಾಚರಣೆಗಳು ಸಾಂಪ್ರದಾಯಿಕ ಯೆಹೂದಿ ಮತಾಚರಣೆಯಲ್ಲಿ ಅಜ್ಞಾತವಾಗಿತ್ತು.” ಕಸ್ಟಮ್ಸ್‌ ಆ್ಯಂಡ್‌ ಟ್ರೆಡಿಷನ್ಸ್‌ ಆಫ್‌ ಇಸ್ರಾಯೆಲ್‌ ಅವಲೋಕಿಸುವುದು: “ಬೈಬಲಲ್ಲಿ, ಟಾಲ್ಮುಡಿನಲ್ಲಿ ಯಾ ಜ್ಞಾನಿಗಳ ಬರಹಗಳಲ್ಲಿ ಜನ್ಮದಿನಗಳ ಆಚರಣೆಯು ಯೆಹೂದ್ಯರ ಮಧ್ಯೆ ಇತ್ತೆಂಬುದರ ಯಾವ ಹೇಳಿಕೆಯೂ ಇಲ್ಲದಿರುವುದರಿಂದ ಈ ಪದ್ಧತಿಯನ್ನು ಇತರ ಜನಾಂಗಗಳ ಪದ್ಧತಿಗಳಿಂದ ಎರವು ತೆಗೆದುಕೊಳ್ಳಲಾಗಿದೆ. ವಾಸ್ತವವಾಗಿ, ಇದು ಪ್ರಾಚೀನ ಈಜಿಪ್ಶಿಯನ್‌ ಪದ್ಧತಿಯಾಗಿತ್ತು.”

ಈ ಈಜಿಪ್ಶಿಯನ್‌ ಸಂಬಂಧವು ಬೈಬಲಿನಲ್ಲಿ ಹೇಳಲ್ಪಟ್ಟಿರುವ ಮತ್ತು ಸತ್ಯಾರಾಧಕರು ಆಚರಿಸದೆ ಇದ್ದ ಒಂದು ಜನ್ಮದಿನಾಚರಣೆಯಿಂದ ವ್ಯಕ್ತವಾಗುತ್ತದೆ. ಯೋಸೇಫನು ಈಜಿಪ್ಟಿನ ಸೆರೆಮನೆಯಲ್ಲಿದ್ದಾಗ ಆಳುತ್ತಿದ್ದ ಫರೋಹನ ಜನ್ಮೋತ್ಸವ ಅದಾಗಿತ್ತು. ಅಲ್ಲಿಯ ಕೆಲವು ವಿಧರ್ಮಿಗಳು ಆ ಉತ್ಸವದಲ್ಲಿ ಆನಂದಪಟಿದ್ಟಿರ್ದಬಹುದಾದರೂ ಆ ಜನ್ಮದಿನವು ಫರೋಹನ ರೊಟ್ಟಿಗಾರರ ಮುಖ್ಯಸ್ಥನ ಶಿರಚ್ಛೇದನದೊಂದಿಗೆ ಜೊತೆಗೊಂಡಿತ್ತು.—ಆದಿಕಾಂಡ 40:1-22

ಇದೇ ರೀತಿಯ ಅಹಿತಕರ ಬೆಳಕನ್ನು ಶಾಸ್ತ್ರಗಳು ವರ್ಣಿಸಿರುವ ಇನ್ನೊಂದು ಜನ್ಮದಿನ—ಮಹಾ ಹೆರೋದನ ಪುತ್ರ ಹೆರೋದ ಅಂತಿಪನದ್ದು—ದ ಮೇಲೆ ಬೀರಲಾಗಿದೆ. ಈ ಜನ್ಮದಿನಾಚರಣೆಯನ್ನು ಒಂದು ನಿರ್ದೋಷದ ಉತ್ಸವವಾಗಿ ಬೈಬಲಿನಲ್ಲಿ ನಿಶ್ಚಯವಾಗಿಯೂ ನೀಡಲ್ಪಟ್ಟಿಲ್ಲ. ಬದಲಿಗೆ, ಅಲ್ಲಿ ಸ್ನಾನಿಕ ಯೋಹಾನನ ಶಿರಚ್ಛೇದನ ನಡೆಯಿತು. ಬಳಿಕ, “ಯೋಹಾನನ ಶಿಷ್ಯರು ಬಂದು ಅವನ ಶವವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟು ಯೇಸುವಿನ ಬಳಿಗೆ ಬಂದು ತಿಳಿಸಿದರು.” ಯೇಸು ‘ಆ ಸ್ಥಳವನ್ನು ಬಿಟ್ಟು ವಿಂಗಡವಾಗಿ ಅಡವಿಗೆ ಹೋದನು.’ (ಮತ್ತಾಯ 14:6-13) ಆ ಶಿಷ್ಯರು ಯಾ ಯೇಸು, ಆ ಜನ್ಮದಿನಾಚರಣೆಯ ಪದ್ಧತಿಗೆ ಆಕರ್ಷಿಸಲ್ಪಟ್ಟರೆಂದು ನೀವು ಭಾವಿಸುತ್ತೀರೊ?

ಜನ್ಮದಿನಗಳ ಆಚರಣೆಯ ಜ್ಞಾತ ಮೂಲದ ಈ ವೀಕ್ಷಣದಲ್ಲಿ, ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಬೈಬಲಿನಲ್ಲಿ ಅವುಗಳನ್ನು ನೀಡಿರುವ ಅಹಿತಕರ ಬೆಳಕಿನಲ್ಲಿ, ಯೆಹೋವನ ಸಾಕ್ಷಿಗಳಿಗೆ ಈ ಆಚಾರವನ್ನು ತ್ಯಜಿಸಲು ಯಥೇಷ್ಟ ಕಾರಣವಿದೆ. ಈ ಲೌಕಿಕ ಪದ್ಧತಿಯನ್ನು ಅನುಸರಿಸುವ ಆವಶ್ಯಕತೆ ಅವರಿಗಿರುವುದಿಲ್ಲ, ಏಕೆಂದರೆ, ವರ್ಷದ ಯಾವ ಸಮಯದಲ್ಲಿಯೂ ಅವರು ಸಂತೋಷದೂಟವನ್ನು ಮಾಡಬಲ್ಲರು ಮತ್ತು ಮಾಡುತ್ತಾರೆ. ಅವರ ಕೊಡುಗೆ ಬಂಧಕವಲ್ಲ, ಸಮಾಜ ಗೋಷ್ಟಿಯ ಒತ್ತಡದಿಂದಲೂ ಅವರು ಕೊಡುವುದಿಲ್ಲ; ಯಾವುದೇ ಸಮಯದಲ್ಲಿ ಉದಾರ ಭಾವ ಮತ್ತು ನಿಜ ಮಮತೆಯಿಂದಾಗಿ ಅವರು ಸ್ವಪ್ರೇರಣೆಯಿಂದ ಕೊಡುಗೆಗಳಲ್ಲಿ ಪಾಲಿಗರಾಗುತ್ತಾರೆ.—ಜ್ಞಾನೋಕ್ತಿ 17:8; ಪ್ರಸಂಗಿ 2:24; ಲೂಕ 6:38; ಅ. ಕೃತ್ಯಗಳು 9:36, 39; 1 ಕೊರಿಂಥ 16:2, 3.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ