ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 4/1 ಪು. 6
  • ದೇವರಿಗೆ ಹೆಸರಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರಿಗೆ ಹೆಸರಿದೆಯೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಅನುರೂಪ ಮಾಹಿತಿ
  • ದೇವರ ಹೆಸರು
    ಎಚ್ಚರ!—2017
  • ದೇವರ ಹೆಸರೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ದೇವರ ಹೆಸರು ನಿಮಗೆ ಗೊತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 4/1 ಪು. 6

ದೇವರಿಗೆ ಹೆಸರಿದೆಯೇ?

ಸಾಮಾನ್ಯ ಉತ್ತರಗಳು:

▪ “ಕರ್ತನು ಎಂದು ಆತನ ಹೆಸರು.”

▪ “ವೈಯಕ್ತಿಕ ಹೆಸರು ಆತನಿಗಿಲ್ಲ.”

ಯೇಸು ಏನು ಹೇಳಿದನು?

▪ “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು. ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:​9, 10) ದೇವರಿಗೆ ಹೆಸರಿದೆ ಎಂದು ಯೇಸು ನಂಬಿದ್ದನು.

▪ “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ.” (ಯೋಹಾನ 17:26) ದೇವರ ಹೆಸರನ್ನು ಯೇಸು ತಿಳಿಯಪಡಿಸಿದನು.

▪ “[ಯೆಹೋವನ] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವತನಕ ನೀವು ನನ್ನನ್ನು ನೋಡುವದೇ ಇಲ್ಲ.” (ಲೂಕ 13:35; ಕೀರ್ತನೆ 118:26) ದೇವರ ಹೆಸರನ್ನು ಯೇಸು ಉಪಯೋಗಿಸಿದನು.

ದೇವರೇ ತನ್ನ ಹೆಸರನ್ನು ನಮಗೆ ತಿಳಿಸುತ್ತಾನೆ. “ನಾನೇ ಯೆಹೋವನು; ಇದೇ ನನ್ನ ನಾಮವು” ಎಂದು ಆತನು ಹೇಳಿದ್ದಾನೆ.a (ಯೆಶಾಯ 42:⁠8) ಹೀಬ್ರು ಭಾಷೆಯಲ್ಲಿ ದೇವರು ತನಗೆ ಕೊಟ್ಟಿರುವ ಹೆಸರು ಕನ್ನಡದಲ್ಲಿ ಯೆಹೋವ ಎಂದು ಹೆಚ್ಚು ಬಳಕೆಯಲ್ಲಿದೆ. ಪುರಾತನ ಬೈಬಲ್‌ ಹಸ್ತಪ್ರತಿಗಳಲ್ಲಿ ಈ ಅಪೂರ್ವ ಹೀಬ್ರು ಹೆಸರು ಸಾವಿರಾರು ಬಾರಿ ಕಂಡುಬರುತ್ತದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ವಾಸ್ತವದಲ್ಲಿ ಈ ಹೆಸರು ಬೈಬಲಿನಲ್ಲಿರುವ ಬೇರೆ ಯಾವುದೇ ಹೆಸರಿಗಿಂತಲೂ ಹೆಚ್ಚು ಸಾರಿ ಕಾಣಸಿಗುತ್ತದೆ.

“ದೇವರ ಹೆಸರೇನು” ಎಂದು ಕೇಳಿದಾಗ ಕೆಲವರು “ಕರ್ತ” ಎಂದುತ್ತರಿಸಬಹುದು. ಆದರೆ ಇದು “ಚುಣಾವಣೆಯಲ್ಲಿ ಯಾರು ಗೆದ್ದರು” ಎಂಬ ಪ್ರಶ್ನೆಗೆ “ಅಭ್ಯರ್ಥಿ” ಎಂದು ಉತ್ತರಕೊಟ್ಟಂತೆ. ಯಾವ ನಿಷ್ಕೃಷ್ಟ ಮಾಹಿತಿಯೂ ಇದರಲ್ಲಿಲ್ಲ, ಸ್ಪಷ್ಟ ಉತ್ತರವೂ ಇದಲ್ಲ; ಏಕೆಂದರೆ “ಕರ್ತ” ಮತ್ತು “ಅಭ್ಯರ್ಥಿ” ಎಂಬುದು ಹೆಸರುಗಳಲ್ಲ, ಪದವಿಗಳು.

ದೇವರು ತನ್ನ ಹೆಸರನ್ನು ನಮಗೆ ತಿಳಿಯಪಡಿಸಿದ್ದೇಕೆ? ಏಕೆಂದರೆ ನಾವು ಆತನನ್ನು ಚೆನ್ನಾಗಿ ತಿಳಿಯಬೇಕೆಂದೇ. ಉದಾಹರಣೆಗೆ, ಸನ್ನಿವೇಶಕ್ಕನುಗುಣವಾಗಿ ಒಬ್ಬ ವ್ಯಕ್ತಿಯನ್ನು ಸರ್‌, ಬಾಸ್‌, ಅಪ್ಪ, ತಾತ ಎಂದು ಕರೆಯಬಹುದು. ಈ ಬಿರುದುಗಳು ಒಬ್ಬನ ಕುರಿತು ಸ್ವಲ್ಪವನ್ನೇ ತಿಳಿಸುತ್ತವೆ. ಆದರೆ ವ್ಯಕ್ತಿಯ ಹೆಸರು ಆತನ ಕುರಿತು ನಮಗೆ ತಿಳಿದಿರುವ ಎಲ್ಲವನ್ನೂ ಮನಸ್ಸಿಗೆ ತರುತ್ತದೆ. ಅದೇರೀತಿಯಲ್ಲಿ ಕರ್ತ, ಸರ್ವಶಕ್ತ, ತಂದೆ, ಸೃಷ್ಟಿಕರ್ತ ಎಂಬ ಬಿರುದುಗಳು ದೇವರ ವಿವಿಧ ಕಾರ್ಯವೈಖರಿಗಳ ಕಡೆಗೆ ಗಮನ ಸೆಳೆಯುತ್ತವಷ್ಟೇ. ಯೆಹೋವ ಎಂಬ ದೇವರ ವೈಯಕ್ತಿಕ ಹೆಸರು ಮಾತ್ರ ಆತನ ಬಗ್ಗೆ ನಮಗೆ ತಿಳಿದಿರುವ ಎಲ್ಲವನ್ನೂ ಮನಸ್ಸಿಗೆ ತರುತ್ತದೆ. ಹೀಗಿರುವುದರಿಂದ ದೇವರ ಹೆಸರನ್ನು ತಿಳಿಯದ ಹೊರತು ಆತನನ್ನು ನಿಜವಾಗಿ ಅರಿಯಸಾಧ್ಯವಿಲ್ಲ.

ದೇವರ ಆ ಹೆಸರನ್ನು ತಿಳಿಯುವುದು ಮಾತ್ರವಲ್ಲ ಅದನ್ನು ಉಪಯೋಗಿಸುವುದು ಸಹ ಪ್ರಾಮುಖ್ಯ. ಏಕೆ? ಏಕೆಂದರೆ ಬೈಬಲ್‌ ಹೇಳುವುದು: ‘[ಯೆಹೋವನ] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.’​—⁠ರೋಮಾಪುರ 10:13; ಯೋವೇಲ 2:32. (w09 2/1)

[ಪಾದಟಿಪ್ಪಣಿ]

a ದೇವರ ಹೆಸರಿನ ಅರ್ಥ ಏನು ಮತ್ತು ಕೆಲವು ಬೈಬಲ್‌ ಭಾಷಾಂತರಗಳಲ್ಲಿ ದೇವರ ಹೆಸರು ಏಕೆ ಇಲ್ಲ ಎಂಬದನ್ನು ತಿಳಿಯಲು, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 195-197 ನೋಡಿ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸನ್ನಿವೇಶಕ್ಕನುಗುಣವಾಗಿ ಒಬ್ಬ ವ್ಯಕ್ತಿಯನ್ನು ಸರ್‌, ಬಾಸ್‌, ಅಪ್ಪ, ತಾತ ಎಂದು ಕರೆಯುತ್ತೇವಾದರೂ ಆ ವ್ಯಕ್ತಿಯ ಹೆಸರು ಮಾತ್ರ ಆತನ ಕುರಿತು ನಮಗೆ ತಿಳಿದಿರುವ ಎಲ್ಲವನ್ನೂ ಮನಸ್ಸಿಗೆ ತರುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ