ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 12/15 ಪು. 10
  • ನಿಮಗೆ ತಿಳಿದಿತ್ತೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ತಿಳಿದಿತ್ತೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಅನುರೂಪ ಮಾಹಿತಿ
  • ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ವಿವಿಧ ಸಾಮರ್ಥ್ಯಗಳ ಆಲಿವ್‌ ಎಣ್ಣೆ
    ಎಚ್ಚರ!—1993
  • ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 12/15 ಪು. 10

ನಿಮಗೆ ತಿಳಿದಿತ್ತೋ?

ಯೆರೂಸಲೇಮಿನ ದೇವಾಲಯದಲ್ಲಿ ಹಣವಿನಿಮಯಗಾರರು ಇದ್ದದ್ದೇಕೆ?

▪ ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ದೇವಾಲಯದಲ್ಲಿ ನಡೆಯುತ್ತಿದ್ದ ಅತಿಯಾದ ಅನ್ಯಾಯದ ವಿರುದ್ಧ ಕ್ರಮ ಕೈಗೊಂಡನು. ಅದರ ಕುರಿತು ಬೈಬಲ್‌ ಹೀಗನ್ನುತ್ತದೆ: “ಯೇಸು ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು. ಮತ್ತು ಅವನು ಅವರಿಗೆ, ‘“ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು” ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದೀರಿ’ ಎಂದು ಹೇಳಿದನು.”—ಮತ್ತಾ. 21:12, 13.

ಯೆಹೂದ್ಯರು ಹಾಗೂ ಯೆಹೂದಿ ಮತಾವಲಂಬಿಗಳು ಬೇರೆ ಬೇರೆ ದೇಶಗಳಿಂದ ನಗರಗಳಿಂದ ಯೆರೂಸಲೇಮಿನಲ್ಲಿರುವ ಆಲಯಕ್ಕೆ ಬರುವಾಗ ತಮ್ಮ ಪ್ರದೇಶದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳನ್ನು ತರುತ್ತಿದ್ದರು. ಆದರೆ ದೇವಾಲಯದ ವಾರ್ಷಿಕ ತೆರಿಗೆಯನ್ನು ಕಟ್ಟಲು, ಯಜ್ಞಗಳಿಗಾಗಿ ಪ್ರಾಣಿಗಳನ್ನು ಖರೀದಿಸಲು, ಇತರ ಕಾಣಿಕೆಗಳನ್ನು ಕೊಡಲು ಅವರು ಯೆರೂಸಲೇಮಿನಲ್ಲಿ ಚಾಲ್ತಿಯಲ್ಲಿರುವ ನಾಣ್ಯಗಳನ್ನೇ ಬಳಸಬೇಕಿತ್ತು. ಹಾಗಾಗಿ ಹಣವಿನಿಮಯಗಾರರು ಇಂಥವರ ನಾಣ್ಯಗಳನ್ನು ತೆಗೆದುಕೊಂಡು ಬದಲಿ ನಾಣ್ಯಗಳನ್ನು ಕೊಡುತ್ತಿದ್ದರು. ಅದಕ್ಕಾಗಿ ಅವರಿಂದ ಶುಲ್ಕವನ್ನು ಪಡೆಯುತ್ತಿದ್ದರು. ಯೆಹೂದಿ ಹಬ್ಬಗಳು ಬಂತೆಂದರೆ ಹಣವಿನಿಮಯಗಾರರು ದೇವಾಲಯದ ಅನ್ಯಜನಾಂಗಗಳ ಅಂಗಳದಲ್ಲಿ ಮೇಜುಗಳನ್ನು ಹಾಕಿ ಕೂತುಬಿಡುತ್ತಿದ್ದರು.

ಆ ಹಣವಿನಿಮಯಗಾರರು ದೇವಾಲಯವನ್ನು “ಕಳ್ಳರ ಗವಿ” ಮಾಡಿದ್ದಾರೆಂದು ಯೇಸು ಖಂಡಿಸಿದ ವಿಷಯ ಅವರು ತಮ್ಮ ಕೆಲಸಕ್ಕಾಗಿ ಜನರಿಂದ ತುಂಬ ಹಣವನ್ನು ಸುಲುಕೊಳ್ಳುತ್ತಿದ್ದರು ಎಂದು ಸೂಚಿಸುತ್ತದೆ. (w11-E 10/01)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ