ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 6/15 ಪು. 7
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಅನುರೂಪ ಮಾಹಿತಿ
  • ಶವದಹನಕ್ಕೆ ಆಕ್ಷೇಪವಿದೆಯೇ?
    ಎಚ್ಚರ!—2009
  • ಶವ ಸುಡೋದರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಪುನಃ ಮಣ್ಣಿಗೆ ಹೇಗೆ?
    ಕಾವಲಿನಬುರುಜು—1996
  • ಪುನರುತ್ಥಾನದ ನಿರೀಕ್ಷೆಗೆ ಶಕ್ತಿಯಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 6/15 ಪು. 7
ಪರದೈಸಲ್ಲಿ ಪುನರುತ್ಥಾನಗೊಂಡವರನ್ನು ಸ್ವಾಗತಿಸುವುದು

ವಾಚಕರಿಂದ ಪ್ರಶ್ನೆಗಳು

ಶವದಹನ ಕ್ರೈಸ್ತರಿಗೆ ಯೋಗ್ಯವಾದ ಅಂತ್ಯಕ್ರಿಯೆಯೇ?

ಶವದಹನ ಪದ್ಧತಿಯ ಬಗ್ಗೆ ಬೈಬಲ್‌ ನಿರ್ದಿಷ್ಟವಾಗಿ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ.

ಕೆಲವು ವ್ಯಕ್ತಿಗಳ ಶವಗಳನ್ನು ಮತ್ತು ಮೂಳೆಗಳನ್ನು ಸುಟ್ಟುಹಾಕಲಾದದ್ದರ ಬಗ್ಗೆ ಬೈಬಲ್‌ ವೃತ್ತಾಂತಗಳಲ್ಲಿ ತಿಳಿಸಲಾಗಿದೆ. (ಯೆಹೋ. 7:25; 2 ಪೂರ್ವ. 34:4, 5) ಮೃತರಾದ ಆ ವ್ಯಕ್ತಿಗಳು ಗೌರವಾರ್ಹವಾದ ಶವಸಂಸ್ಕಾರಕ್ಕೆ ಯೋಗ್ಯರಲ್ಲ ಎಂದು ಇದು ಸೂಚಿಸಿರಬಹುದು. ಆದರೆ ಶವದಹನಕ್ಕೆ ಯಾವಾಗಲೂ ಇದೇ ಅರ್ಥ ಇರುತ್ತಿರಲಿಲ್ಲ.

ಇದನ್ನು ನಾವು ರಾಜ ಸೌಲ ಮತ್ತು ಅವನ ಮೂವರು ಪುತ್ರರ ಮರಣವಾದಾಗ ನಡೆದ ಘಟನೆಯಿಂದ ತಿಳಿದುಕೊಳ್ಳಬಹುದು. ಈ ನಾಲ್ವರು ಫಿಲಿಷ್ಟಿಯರ ಜೊತೆ ನಡೆದ ಕದನದಲ್ಲಿ ಪ್ರಾಣ ಕಳೆದುಕೊಂಡರು. ಸೌಲನ ಆ ಪುತ್ರರಲ್ಲಿ ಒಬ್ಬನು ದಾವೀದನ ಆಪ್ತ ಗೆಳೆಯ ಹಾಗೂ ನಿಷ್ಠಾವಂತ ಬೆಂಬಲಿಗ ಯೋನಾತಾನನಾಗಿದ್ದ. ಇವರ ಸಾವಿನ ಬಗ್ಗೆ ಯಾಬೆಷ್‌ಗಿಲ್ಯಾದಿನ ಶೂರ ಇಸ್ರಾಯೇಲ್ಯರಿಗೆ ತಿಳಿದಾಗ ಶತ್ರು ಪಾಳೆಯಕ್ಕೆ ಹೋಗಿ ಆ ನಾಲ್ವರ ಮೃತದೇಹಗಳನ್ನು ಅಲ್ಲಿಂದ ತಂದು ಸುಟ್ಟು, ಮೂಳೆಗಳನ್ನು ಹೂಣಿಟ್ಟರು. ಅವರು ಮಾಡಿದ ಈ ಕೆಲಸವನ್ನು ದಾವೀದ ಶ್ಲಾಘಿಸಿದನು.—1 ಸಮು. 31:2, 8-13; 2 ಸಮು. 2:4-6.

ಮೃತಜನರ ಬಗ್ಗೆ ಬೈಬಲ್‌ ಕೊಡುವ ನಿರೀಕ್ಷೆ ಪುನರುತ್ಥಾನ. ದೇವರು ಪುನಃ ಜೀವಕ್ಕೆ ತರುವುದು ಅದೇ ವ್ಯಕ್ತಿಯನ್ನು, ಹಳೇ ದೇಹವನ್ನಲ್ಲ. ಮೃತವ್ಯಕ್ತಿಯ ದೇಹವನ್ನು ಸುಡಲಿ ಸುಡದಿರಲಿ ಆ ವ್ಯಕ್ತಿಗೆ ಹೊಸ ದೇಹ ಕೊಟ್ಟು ಜೀವಕ್ಕೆ ತರುವ ಶಕ್ತಿ ಯೆಹೋವನಿಗಿದೆ. ಹಾಗಾಗಿಯೇ ರಾಜ ನೆಬೂಕದ್ನೆಚ್ಚರ ಆವಿಗೆಯೊಳಗೆ ಹಾಕಿಸಿದ ಮೂವರು ಇಬ್ರಿಯ ಯುವಕರಿಗೆ ತಾವು ಸುಟ್ಟು ಹೋದರೆ ದೇವರು ತಮ್ಮನ್ನು ಪುನರುತ್ಥಾನ ಮಾಡಸಾಧ್ಯವಿಲ್ಲ ಎಂಬ ಭಯ ಇರಲಿಲ್ಲ. (ದಾನಿ. 3:16-18) ನಾಜಿ ಸೆರೆಶಿಬಿರಗಳಲ್ಲಿ ಕೊಲ್ಲಲ್ಪಟ್ಟು ಸುಡಲ್ಪಟ್ಟ ಯೆಹೋವನ ನಂಬಿಗಸ್ತ ಸೇವಕರಿಗೂ ಆ ಭಯ ಇರಲಿಲ್ಲ. ಸ್ಫೋಟಗಳಿಂದಾಗಿ ಅಥವಾ ಬೇರಾವುದೇ ರೀತಿಯಲ್ಲಿ ಮೃತಪಟ್ಟ ಎಷ್ಟೋ ನಿಷ್ಠಾವಂತ ದೇವಜನರ ಅವಶೇಷಗಳೇ ಸಿಕ್ಕಿಲ್ಲ. ಹಾಗಿದ್ದರೂ ಅವರನ್ನು ಪುನರುತ್ಥಾನ ಮಾಡಲು ದೇವರು ಶಕ್ತನು.—ಪ್ರಕ. 20:13.

ಪುನರುತ್ಥಾನ ಮಾಡಲು ದೇವರಿಗೆ ಮೃತನ ಹಳೇ ದೇಹ ಬೇಕಾಗಿಲ್ಲ. ಇದು ಅಭಿಷಿಕ್ತ ಕ್ರೈಸ್ತರನ್ನು ದೇವರು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನ ಮಾಡುವ ಸಂಗತಿಯಿಂದ ಗೊತ್ತಾಗುತ್ತದೆ. ಇವರ ಪುನರುತ್ಥಾನವಾದಾಗ ಹಿಂದೆ ಇದ್ದ ವ್ಯಕ್ತಿಗಳೇ ಆಗಿರುತ್ತಾರೆ. ಆದರೆ ದೇವರು ಅವರಿಗೆ “ಆತ್ಮಜೀವಿಯಾಗಿ ಬದುಕುವಂತೆ ಮಾಡಲ್ಪಟ್ಟ” ಯೇಸುವಿನಂತೆ ಆತ್ಮಿಕ ದೇಹ ಕೊಟ್ಟು ಪುನರುತ್ಥಾನ ಮಾಡುತ್ತಾನೆ. ಇವರ ಭೌತಿಕ ದೇಹದ ಯಾವ ಭಾಗವೂ ಸ್ವರ್ಗಕ್ಕೆ ಹೋಗುವುದಿಲ್ಲ.—1 ಪೇತ್ರ 3:18; 1 ಕೊರಿಂ. 15:42-53; 1 ಯೋಹಾ. 3:2.

ಮೃತ ವ್ಯಕ್ತಿಯ ಪುನರುತ್ಥಾನ ಅವನ ಅಂತ್ಯಕ್ರಿಯೆ ನಡೆದಿರುವ ವಿಧದ ಮೇಲೆ ಅಲ್ಲ ಬದಲಿಗೆ ಅವನನ್ನು ಪುನರುತ್ಥಾನ ಮಾಡಲು ದೇವರಿಗಿರುವ ಶಕ್ತಿ ಮತ್ತು ಮನಸ್ಸಿನ ಮೇಲೆ ಹೊಂದಿಕೊಂಡಿದೆ ಎಂದು ನಂಬುತ್ತೇವೆ. (ಅ. ಕಾ. 24:15) ದೇವರು ಗತಕಾಲದಲ್ಲಿ ಹೇಗೆ ಪುನರುತ್ಥಾನಗಳನ್ನು ಮಾಡಿದನು ಮತ್ತು ಮುಂದೆ ಹೇಗೆ ಮಾಡುವನು ಎಂಬದನ್ನು ಪೂರ್ತಿಯಾಗಿ ಗ್ರಹಿಸಲು ನಮ್ಮಿಂದ ಆಗದಿರಬಹುದು. ಆದರೂ ಯೆಹೋವನ ಮೇಲೆ ನಾವು ನಂಬಿಕೆ ಇಡುತ್ತೇವೆ. ಏಕೆಂದರೆ ಆತನು ಯೇಸುವನ್ನು ಪುನರುತ್ಥಾನ ಮಾಡಿದ್ದಾನೆ. ಇದೇ ನಮಗೆ “ಖಾತ್ರಿ.”—ಅ. ಕಾ. 17:31; ಲೂಕ 24:2, 3.

ಅಂತ್ಯಕ್ರಿಯೆಯ ಬಗ್ಗೆ ಇರುವ ಸಾಮಾಜಿಕ ಪದ್ಧತಿಗಳು, ಜನರ ಭಾವನೆಗಳು ಮತ್ತು ಕಾನೂನಿನ ನಿಯಮಗಳನ್ನು ಕ್ರೈಸ್ತರಾದ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. (2 ಕೊರಿಂ. 6:3, 4) ಆದರೆ ಮೃತದೇಹವನ್ನು ದಹನ ಮಾಡಬೇಕಾ ಬೇಡವಾ ಎನ್ನುವುದು ವೈಯಕ್ತಿಕ ಅಥವಾ ಕುಟುಂಬದ ತೀರ್ಮಾನ ಆಗಿರಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ