ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 9/15 ಪು. 29-31
  • ಪುನಃ ಮಣ್ಣಿಗೆ ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪುನಃ ಮಣ್ಣಿಗೆ ಹೇಗೆ?
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗತಕಾಲದ ಹಾಗೂ ಪ್ರಚಲಿತ ಆಚರಣೆಗಳು
  • ಶಾಸ್ತ್ರೀಯ ನೋಟವು ಏನಾಗಿದೆ?
  • ಸಮಾಧಿಯಿಂದ ಸಂಪೂರ್ಣ ಸ್ವಾತಂತ್ರ್ಯ!
  • ಶವ ಸುಡೋದರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಶವದಹನಕ್ಕೆ ಆಕ್ಷೇಪವಿದೆಯೇ?
    ಎಚ್ಚರ!—2009
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಸತ್ತ ಮೇಲೆ ಏನಾಗುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಕಾವಲಿನಬುರುಜು—1996
w96 9/15 ಪು. 29-31

ಪುನಃ ಮಣ್ಣಿಗೆ ಹೇಗೆ?

“ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದಿ.” ಪ್ರಥಮ ಮಾನವನಾದ ಆದಾಮನು ಆ ಮಾತುಗಳನ್ನು ಕೇಳಿಸಿಕೊಂಡಾಗ, ಏನನ್ನು ನಿರೀಕ್ಷಿಸಬೇಕೆಂದು ಅವನಿಗೆ ಗೊತ್ತಿತ್ತು. ಅವನು ನೆಲದ ಮಣ್ಣಿನಿಂದ ಮಾಡಲ್ಪಟ್ಟಿದ್ದನು ಮತ್ತು ಬರಿಯ ಮಣ್ಣಿಗೇ ಹಿಂದಿರುಗಲಿದ್ದನು. ಅವನು ತನ್ನ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಅವಿಧೇಯನಾಗಿದ್ದ ಕಾರಣ, ಸಾಯಲಿಕ್ಕಿದ್ದನು.—ಆದಿಕಾಂಡ 2:7, 15-17; 3:17-19.

ಮಾನವರು ಮಣ್ಣಿನಿಂದ ಮಾಡಲ್ಪಟ್ಟಿದ್ದಾರೆಂದು ಬೈಬಲು ತೋರಿಸುತ್ತದೆ. “ಪಾಪಮಾಡುತ್ತಿರುವ ಪ್ರಾಣವು—ಅದು ತಾನೇ ಸಾಯುವುದು” ಎಂದು ಸಹ ಅದು ಹೇಳುತ್ತದೆ. (ಯೆಹೆಜ್ಕೇಲ 18:4, NW; ಕೀರ್ತನೆ 103:14) ಮರಣವು ಕೋಟಿಗಟ್ಟಲೆ ಜನರಿಗೆ ದುಃಖವನ್ನು ತಂದಿದೆ ಮತ್ತು ಪದೇಪದೇ ಮಾನವ ಶವಗಳ ತೊಲಗಿಸುವಿಕೆಯ ಕುರಿತಾದ ಪ್ರಶ್ನೆಗಳನ್ನು ಎಬ್ಬಿಸಿದೆ.

ಗತಕಾಲದ ಹಾಗೂ ಪ್ರಚಲಿತ ಆಚರಣೆಗಳು

ಪ್ರಾಚೀನ ಸಮಯಗಳ ದೇವರ ಜನರೊಳಗೆ, ಮಾನವ ಶವಗಳು ಹೇಗೆ ತೊಲಗಿಸಲ್ಪಟ್ಟವು? ಅದರ ಪ್ರಥಮ ಭಾಗದಲ್ಲಿ ಬೈಬಲು, ನೆಲದಲ್ಲಿ ಹೂಳುವುದನ್ನು ಸೇರಿಸಿ, ಸತ್ತವರೊಂದಿಗೆ ವ್ಯವಹರಿಸುವ ಹಲವಾರು ವಿಧಗಳನ್ನು ಉಲ್ಲೇಖಿಸುತ್ತದೆ. (ಆದಿಕಾಂಡ 35:8) ಮೂಲಪಿತೃನಾದ ಅಬ್ರಹಾಮ್‌, ಅವನ ಹೆಂಡತಿಯಾದ ಸಾರಳು, ಹಾಗೂ ಅವರ ಪುತ್ರ ಇಸಾಕ್‌ ಮತ್ತು ಮೊಮ್ಮಗ ಯಾಕೋಬರು ಮಕ್ಪೇಲದ ಗವಿಯಲ್ಲಿ ಹೂಳಲ್ಪಟ್ಟರು. (ಆದಿಕಾಂಡ 23:2, 19; 25:9; 49:30, 31; 50:13) ಇಸ್ರಾಯೇಲ್ಯ ನ್ಯಾಯಸ್ಥಾಪಕರಾದ ಗಿದ್ಯೋನ ಮತ್ತು ಸಂಸೋನರು, ‘ತಮ್ಮ ತಂದೆಗಳ ಸಮಾಧಿಗಳಲ್ಲಿ’ ಹೂಳಲ್ಪಟ್ಟರು. (ನ್ಯಾಯಸ್ಥಾಪಕರು 8:32; 16:31) ಇದು, ಕುಟುಂಬ ಸಮಾಧಿ ನಿವೇಶನಗಳನ್ನು ಪಡೆದಿರುವುದನ್ನು ದೇವರ ಪ್ರಾಚೀನ ಜನರು ಇಷ್ಟಪಟ್ಟರೆಂಬುದನ್ನು ಸೂಚಿಸುತ್ತದೆ. ಸಾ.ಶ. ಮೊದಲನೆಯ ಶತಮಾನದಲ್ಲಿ ಯೇಸು ಕ್ರಿಸ್ತನು ಸತ್ತಾಗ, ಅವನ ದೇಹವು ಹೊಸದಾಗಿ ಕೆತ್ತಿದ ಬಂಡೆಯ ಗೋರಿಯಲ್ಲಿ ಇಡಲ್ಪಟ್ಟಿತು. (ಮತ್ತಾಯ 27:57-60) ಹಾಗಾದರೆ, ಸಾಮಾನ್ಯವಾಗಿ ಮಾನವ ಶವಗಳು ಭೂಮಿಯಲ್ಲಿ ಹೂಳಲ್ಪಡುತ್ತಿದ್ದವು ಇಲ್ಲವೆ ಗೋರಿಯಲ್ಲಿಡಲ್ಪಡುತ್ತಿದ್ದವು. ಭೂಮಿಯ ಸುತ್ತಲೂ ಹೆಚ್ಚಿನ ಸ್ಥಳಗಳಲ್ಲಿ ಇದು ಇನ್ನೂ ಒಂದು ಆಚಾರವಾಗಿದೆ.

ಆದರೆ, ಲೋಕದ ಕೆಲವು ಭಾಗಗಳಲ್ಲಿ ಇಂದು, ಸ್ಥಳದ ಗುರುತರವಾದ ಅಭಾವ ಮತ್ತು ಜಮೀನಿನ ಉಚ್ಚ ಬೆಲೆಯು, ಹೂಳುವ ನಿವೇಶನಗಳನ್ನು ಪಡೆದುಕೊಳ್ಳುವುದನ್ನು ಹೆಚ್ಚು ಕಷ್ಟಕರವನ್ನಾಗಿ ಮಾಡುತ್ತಿವೆ. ಆದುದರಿಂದ, ಮಾನವ ಶವಗಳನ್ನು ತೊಲಗಿಸುವ ಇತರ ವಿಧಗಳ ಕುರಿತು ಕೆಲವು ಜನರು ಪರ್ಯಾಲೋಚಿಸುತ್ತಿದ್ದಾರೆ.

ಮಾನವ ಶವಗಳ ದಹನಕ್ರಿಯೆಯ ನಂತರ ಬೂದಿಯನ್ನು ಚೆದರಿಸುವುದು ಅಧಿಕ ಸಾಮಾನ್ಯವಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ಸುಮಾರು 40 ಪ್ರತಿಶತ ಮೃತರು ಈಗ ಈ ವಿಧಾನದಲ್ಲಿ ತೊಲಗಿಸಲ್ಪಡುತ್ತಾರೆ. ನಗರ ಕ್ಷೇತ್ರಗಳಲ್ಲಿ ಮೃತರಾದವರ 80ಕ್ಕಿಂತಲೂ ಹೆಚ್ಚಿನ ಪ್ರತಿಶತದವರು ದಹಿಸಲ್ಪಡುವ ಸ್ವೀಡನ್‌ನಲ್ಲಿ, ಬೂದಿಯನ್ನು ಚೆದರಿಸುವುದಕ್ಕೆ ನಿರ್ದಿಷ್ಟವಾದ ಕಾಡುಗಳು ನಿಶ್ಚಯಿಸಲ್ಪಟ್ಟಿವೆ. ಮತ್ತು ಶಾಂಗೈ ಹಾಗೂ ಕಡಲ ಬಳಿ ಇರುವ ಚೀನಾದ ಕೆಲವು ಇತರ ನಗರಗಳಲ್ಲಿ, ನಗರ ಸರಕಾರಗಳು ವರ್ಷಕ್ಕೆ ಹಲವಾರು ಬಾರಿ ಸಮುದ್ರದಲ್ಲಿ ಗುಂಪು ಚೆದರಿಸುವಿಕೆಗಳನ್ನು ಪ್ರಾಯೋಜಿಸುತ್ತವೆ.

ಬೂದಿಯನ್ನು ಎಲ್ಲಿ ಚೆದರಿಸಸಾಧ್ಯವಿದೆ? ಬೇಕಾದ ಯಾವುದೇ ಸ್ಥಳದಲ್ಲಿ ಚೆದರಿಸಸಾಧ್ಯವಿಲ್ಲ. ಬೂದಿಯನ್ನು ಚೆದರಿಸುವುದು ಪರಿಸರಕ್ಕೆ ಹಾನಿಕರವೆಂದು ಕೆಲವರು ಭಯಪಡಬಹುದು. ಆದರೆ ವಾಸ್ತವವಾಗಿ, ಸಾಂಕ್ರಾಮಿಕ ರೋಗಗಳ ಯಾವುದೇ ಸಂಭವನೀಯ ಗಂಡಾಂತರವು ದಹನಕ್ರಿಯೆಯ ಮೂಲಕ ತೊಡೆದುಹಾಕಲ್ಪಡುತ್ತದೆ. ಇಂಗ್ಲೆಂಡ್‌ನಲ್ಲಿರುವ ಕೆಲವು ಸ್ಮಶಾನಗಳು ಹಾಗೂ ಅಮೆರಿಕದಲ್ಲಿರುವ ಸ್ಮಾರಕ ಉದ್ಯಾನವನಗಳು, ಹುಲ್ಲು ಮೈದಾನಗಳನ್ನು ಅಥವಾ ಹೂದೋಟಗಳನ್ನು ಚೆದರಿಸುವ ಬಯಲುಗಳೋಪಾದಿ ಮೀಸಲಾಗಿಡುತ್ತವೆ. ನಿಶ್ಚಯವಾಗಿಯೂ ಕ್ರೈಸ್ತರು, ದಹನಕ್ರಿಯೆ ಮತ್ತು ಬೂದಿಯ ಚೆದರಿಸುವಿಕೆಯ ಕುರಿತಾದ ಶಾಸ್ತ್ರೀಯ ನೋಟದ ಬಗ್ಗೆ ವಿಶೇಷವಾಗಿ ಚಿಂತಿತರಾಗಿರುತ್ತಾರೆ.

ಶಾಸ್ತ್ರೀಯ ನೋಟವು ಏನಾಗಿದೆ?

“ಬಾಬೆಲಿನ ರಾಜ”ನ ವಿರುದ್ಧವಾದ ಒಂದು ಪ್ರಕಟನೆಯಲ್ಲಿ, ಪ್ರವಾದಿಯಾದ ಯೆಶಾಯನು ಹೇಳಿದ್ದು: “ನೀನಾದರೋ . . . ಗೋರಿಗೆ ದೂರವಾಗಿ . . . ಬಿಸಾಡಲ್ಪಟ್ಟಿದ್ದೀ.” (ಯೆಶಾಯ 14:4, 19) ಬೂದಿಯ ಚೆದರಿಸುವಿಕೆಯು, ಅಪಮಾನದ ಇಂತಹ ಒಂದು ವಿದ್ಯಮಾನಕ್ಕೆ ಹೋಲಿಸಲ್ಪಡಬೇಕೊ? ಇಲ್ಲ, ಏಕೆಂದರೆ ದಹನಕ್ರಿಯೆ ಮತ್ತು ಪರಿಣಮಿಸುವ ಬೂದಿಯ ಸಂರಕ್ಷಣೆ ಇಲ್ಲವೆ ಚೆದರಿಸುವಿಕೆಗೆ ಯಾವ ಸೂಚನೆಯೂ ಇರುವುದಿಲ್ಲ.

“ಸಮಾಧಿಗಳಲ್ಲಿರುವವರೆಲ್ಲರು [ನನ್ನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರು”ವರು, ಎಂದು ಯೇಸು ಕ್ರಿಸ್ತನು ಹೇಳಿದಾಗ, ತನ್ನ ಸಹಸ್ರ ವರ್ಷದ ಆಳಿಕೆಯ ಸಮಯದಲ್ಲಿ ಸಂಭವಿಸಲಿಕ್ಕಿರುವ ಮೃತರ ಭೂಪುನರುತ್ಥಾನದ ಕುರಿತು ಅವನು ಮಾತಾಡಿದನು. (ಯೋಹಾನ 5:28, 29) ಹಾಗಿದ್ದರೂ, ವ್ಯಕ್ತಿಯೊಬ್ಬನನ್ನು ಪುನರುತ್ಥಾನಗೊಳಿಸಲು ನಿರ್ದಿಷ್ಟವಾದೊಂದು ಸಮಾಧಿಯು ಆವಶ್ಯಕವಾಗಿ ಬೇಕಾಗಿರುವುದಿಲ್ಲ ಎಂಬ ವಿಷಯವು, ಪುನರುತ್ಥಾನದ ಮತ್ತೊಂದು ಪ್ರವಾದನಾತ್ಮಕ ವಿವರಣೆಯಿಂದ ದೃಢಗೊಳಿಸಲ್ಪಡುತ್ತದೆ. ಪ್ರಕಟನೆ 20:13 ಹೇಳುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” ಆದುದರಿಂದ ವ್ಯಕ್ತಿಯೊಬ್ಬನು ಎಲ್ಲಿ ಅಥವಾ ಹೇಗೆ ‘ಮಣ್ಣಿಗೆ ಹಿಂದಿರುಗುತ್ತಾನೆ’ ಎಂಬುದು ಪ್ರಾಮುಖ್ಯವಾದ ವಿಷಯವಾಗಿರುವುದಿಲ್ಲ. ಬದಲಿಗೆ, ಅವನು ದೇವರ ಜ್ಞಾಪಕದಲ್ಲಿದ್ದು, ಪುನರುತ್ಥಾನಗೊಳಿಸಲ್ಪಡುತ್ತಾನೊ ಎಂಬುದು ಪ್ರಾಮುಖ್ಯವಾದ ವಿಷಯವಾಗಿದೆ. (ಯೋಬ 14:13-15; ಹೋಲಿಸಿ ಲೂಕ 23:42, 43.) ಜನರನ್ನು ಜ್ಞಾಪಕದಲ್ಲಿಡುವಂತೆ ಆತನಿಗೆ ಸಹಾಯ ಮಾಡಲು, ಯೆಹೋವನಿಗೆ ಖಂಡಿತವಾಗಿಯೂ ಪ್ರಭಾವೋತ್ಪಾದಕ ಗೋರಿಗಳ ಅಗತ್ಯ ಇರುವುದಿಲ್ಲ. ದಹನಕ್ರಿಯೆಯು ವ್ಯಕ್ತಿಯೊಬ್ಬನ ಪುನರುತ್ಥಾನವನ್ನು ತಡೆಗಟ್ಟುವುದಿಲ್ಲ. ಮತ್ತು ಬೂದಿಯ ಚೆದರಿಸುವಿಕೆಯು ಯೋಗ್ಯವಾದ ಹೇತುವಿನೊಂದಿಗೆ ಹಾಗೂ ಸುಳ್ಳು ಧಾರ್ಮಿಕ ವ್ರತಾಚರಣೆಗಳಿಲ್ಲದೆ ಮಾಡಲ್ಪಡುವುದಾದರೆ, ಅದು ಶಾಸ್ತ್ರಗಳೊಂದಿಗೆ ಅಸಂಬದ್ಧವಾಗಿರಲಾರದು.

ಬೂದಿಯ ಚೆದರಿಸುವಿಕೆಯ ಪರವಾಗಿ ನಿರ್ಣಯಿಸುವವರು, ದೇಶದ ನಿಯಮಕ್ಕೆ ಗಮನಕೊಡುವ ಅಗತ್ಯವಿರುವುದು. ಅವರು ವಿಯೋಗಿಗಳ ಹಾಗೂ ಇತರರ ಅನಿಸಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದೂ ಸೂಕ್ತವಾಗಿರುವುದು. ಈ ಸಂಬಂಧದಲ್ಲಿ ತಮ್ಮ ಶಾಸ್ತ್ರೀಯ ಸ್ವಾತಂತ್ರ್ಯವನ್ನು ಪ್ರಯೋಗಿಸುವುದು, ಕ್ರೈಸ್ತರು ಪಡೆದಿರುವ ಒಳ್ಳೆಯ ಹೆಸರಿನ ಮೇಲೆ ನಿಂದೆಯನ್ನು ತರುವುದಿಲ್ಲವೆಂಬ ವಿಷಯದಲ್ಲಿ ಯೆಹೋವನ ಸೇವಕರು ಜಾಗರೂಕರಾಗಿರುವುದು ಒಳ್ಳೆಯದು. ಇದು ದಹನಕ್ರಿಯೆ ಮತ್ತು ಬೂದಿಯ ಚೆದರಿಸುವಿಕೆಯು ನ್ಯಾಯಸಮ್ಮತವಾಗಿ ಅನುಮತಿಸಲ್ಪಟ್ಟಿರುವುದಾದರೂ, ಸಮುದಾಯದಲ್ಲಿ ಪೂರ್ಣವಾಗಿ ಸ್ವೀಕರಿಸಲ್ಪಟ್ಟಿರದ ದೇಶಗಳಲ್ಲಿ ವಿಶೇಷವಾಗಿ ಪ್ರಾಮುಖ್ಯವಾಗಿದೆ. ನಿಶ್ಚಯವಾಗಿಯೂ, ಕ್ರೈಸ್ತನೊಬ್ಬನು ಮಾನವ ಪ್ರಾಣದ ಅಮರತ್ವದಲ್ಲಿನ ನಂಬಿಕೆಯ ಮೇಲೆ ಆಧರಿಸಿದ ಯಾವುದೇ ಸಂಸ್ಕಾರಗಳು ಅಥವಾ ಪದ್ಧತಿಗಳಿಂದ ದೂರವಿರುವನು.

ಸಮಾಧಿಯಿಂದ ಸಂಪೂರ್ಣ ಸ್ವಾತಂತ್ರ್ಯ!

ಬೂದಿಯ ಚೆದರಿಸುವಿಕೆಯನ್ನು ಪ್ರತಿಪಾದಿಸುವ ಕೆಲವರು, ಅದು ಸಮಾಧಿಗಳಲ್ಲಿ ಹೂಳುವುದರಿಂದ ಸ್ವಾತಂತ್ರ್ಯವನ್ನು ಅರ್ಥೈಸುತ್ತದೆ ಎಂದು ಹೇಳುತ್ತಾರೆ. ಆದರೆ ಅತ್ಯಂತ ಅಧಿಕ ಉಪಶಮನವನ್ನು ತರುವಂತಹದ್ದು, “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು” ಎಂಬ ಬೈಬಲಿನ ವಾಗ್ದಾನದ ನೆರವೇರಿಕೆಯೇ.—1 ಕೊರಿಂಥ 15:24-28.

ಇದರ ಅರ್ಥವೇನೆಂದರೆ, ಸಮಾಧಿಗಳು, ಗೋರಿಗಳು, ದಹನಕ್ರಿಯೆ ಮತ್ತು ಬೂದಿಯ ಚೆದರಿಸುವಿಕೆಯು ಸಹ ಗತಕಾಲದ ಪದ್ಧತಿಗಳಾಗುವುವು. ಹೌದು, ಮರಣವು ಇನ್ನಿರದು. ದೈವಿಕ ಪ್ರೇರಣೆಯಿಂದ ಅಪೊಸ್ತಲ ಯೋಹಾನನು ಬರೆದುದು: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.”—ಪ್ರಕಟನೆ 21:3, 4.

ಇದೆಲ್ಲವೂ ದೇವರ ರಾಜ್ಯದ ಕೆಳಗೆ ಆದಾಮನ ಪಾಪದಿಂದ ಫಲಿಸುವ ಮಾನವ ಮರಣವು ಸಂಪೂರ್ಣವಾಗಿ ತೆಗೆದುಹಾಕಲ್ಪಡುವಾಗ ಸಂಭವಿಸುವುದು. ಆ ಸಮಯದಲ್ಲಿ ವಿಧೇಯ ಮಾನವಕುಲವು ಮಣ್ಣಿಗೆ ಹಿಂದಿರುಗುವ ಪ್ರತೀಕ್ಷೆಯಿಂದ ಎದುರಿಸಲ್ಪಡದಿರುವುದು.

[ಪುಟ 29 ರಲ್ಲಿರುವ ಚಿತ್ರಗಳು]

ಮಾನವ ಶವಗಳನ್ನು ನಿರ್ವಹಿಸುವ ಸಾಮಾನ್ಯ ವಿಧಾನಗಳು

[ಪುಟ 31 ರಲ್ಲಿರುವ ಚಿತ್ರ]

ಜಪಾನಿನ ಸಗಾಮಿ ಕೊಲ್ಲಿಯಲ್ಲಿ ಬೂದಿಯನ್ನು ಚೆದರಿಸುವುದು

[ಕೃಪೆ]

Courtesy of Koueisha, Tokyo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ