ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 2 ಪು. 3
  • ಜೀವನವೇ ಸಾಕಾಗಿ ಹೋದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನವೇ ಸಾಕಾಗಿ ಹೋದಾಗ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಅನುರೂಪ ಮಾಹಿತಿ
  • ‘ಇನ್ನು ನನ್ನಿಂದ ಆಗಲ್ಲ’ ಅಂತ ಅನಿಸಿದಾಗ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಪ್ರಿಯರು ಸಾವನ್ನಪ್ಪಿದಾಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ದುರಂತಗಳು ಸಂಭವಿಸಿದಾಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಧುತ್ತೆಂದು ದುರಂತಗಳು ಸಂಭವಿಸಿದಾಗ. . .
    ಎಚ್ಚರ!—2014
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 2 ಪು. 3
ಕೆಲಸದ ಸ್ಥಳದಲ್ಲಿ ಅಳುತ್ತಿರುವ ಯುವತಿ

ಜೀವನವೇ ಸಾಕಾಗಿ ಹೋದಾಗ

ಎಲ್ಲವೂ ಸುಗಮವಾಗಿ ಸಾಗುತ್ತಿರುವಾಗ ಜೀವನ ಹೂವಿನ ಹಾದಿಯಲ್ಲಿ ನಡೆದಂತಿರಬಹುದು. ಆದರೆ ಕೆಲವೊಮ್ಮೆ ಸಮಸ್ಯೆಗಳಿಂದಾಗಿ ಜೀವನ ಮುಳ್ಳಿನ ಹಾದಿಯಲ್ಲಿ ನಡೆಯುತ್ತಿರುವಂತೆ ಆಗಸಾಧ್ಯವಿದೆ. ನಿಮಗೆ ಹಾಗೆ ಅನಿಸಿದೆಯಾ?

ಉದಾಹರಣೆಗೆ, ಚಂಡಮಾರುತದಿಂದಾಗಿ ಎಲ್ಲವನ್ನೂ ಕಳೆದುಕೊಂಡ ಅಮೆರಿಕಾದ ಸ್ಯಾಲಿa ಹೀಗೆ ಹೇಳುತ್ತಾಳೆ: ‘ನನಗೆ ಸಾಕಾಗಿ ಹೋಗಿತ್ತು. ಇನ್ನು ಸಹಿಸೋಕೆ ನನ್ನಿಂದಾಗಲ್ಲ ಎಂದು ಅನೇಕ ದಿನಗಳವರೆಗೆ ಅನಿಸುತ್ತಿತ್ತು.’

ಜೀವನದಲ್ಲಿ ಎದುರಾಗುವ ಇನ್ನೊಂದು ಸಮಸ್ಯೆ ಪ್ರಿಯರ ಮರಣ. ಆಸ್ಟ್ರೇಲಿಯದ ಜೆನಿಸ್‌ ಹೀಗನ್ನುತ್ತಾಳೆ: “ನನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡಾಗ, ನನ್ನ ಜೀವನ ನುಚ್ಚು ನೂರಾಯಿತು. ಆದರೆ ನಾನು ನನ್ನ ಜೀವನವನ್ನು ಮುಂಚಿನ ಸ್ಥಿತಿಗೆ ತರಲು ನನ್ನಿಂದಾದಷ್ಟು ಪ್ರಯತ್ನಿಸಬೇಕಿತ್ತು. ನನಗದನ್ನು ಮಾಡುವುದೇ ಕಷ್ಟ ಆಗುತ್ತಿತ್ತು. ಆಗ ನಾನು ‘ನನ್ನಿಂದ ಇದನ್ನು ಸಹಿಸೋಕೆ ಆಗಲ್ಲ, ನನ್ನ ಜೀವ ತೆಗೆದು ಬಿಡು, ನನಗೆ ನಿರಂತರ ನಿದ್ರೆ ಕೊಡು’ ಅಂತ ದೇವರ ಹತ್ತಿರ ಬೇಡಿಕೊಂಡೆ.”

ಸಹಿಸಲಾಗದ ಇನ್ನೊಂದು ಸಮಸ್ಯೆ ಸಂಗಾತಿಯ ದ್ರೋಹ. ತನ್ನ ಪತ್ನಿ ದ್ರೋಹ ಮಾಡಿದಾಗ ಡ್ಯಾನಿಯೆಲ್‌ಗೆ ಹೇಳಲಾಗದಷ್ಟು ನೋವಾಯಿತು. ಅವರು ಹೇಳುವುದು: “ನನ್ನ ಪತ್ನಿ ನನಗೆ ದ್ರೋಹ ಮಾಡಿದ್ದನ್ನು ತಿಳಿಸಿದಾಗ ನನ್ನ ಹೃದಯದೊಳಗೆ ಚಾಕುವಿನಿಂದ ತಿವಿದ ಹಾಗಾಯಿತು. ಅನೇಕ ತಿಂಗಳುಗಳವರೆಗೆ ನನಗೆ ಆಗಾಗ ಈ ರೀತಿ ತಿವಿದಂಥ ನೋವು ಬರುತ್ತಿತ್ತು.”

ಈ ಕೆಳಗಿನ ಸನ್ನಿವೇಶಗಳಲ್ಲೂ ಅರ್ಥಪೂರ್ಣ ಜೀವನ ನಡೆಸುವುದು ಹೇಗೆಂದು ಕಾವಲಿನಬುರುಜುವಿನ ಈ ಸಂಚಿಕೆಯಲ್ಲಿ ನೋಡೋಣ:

  • ನೈಸರ್ಗಿಕ ವಿಪತ್ತು ಸಂಭವಿಸಿದಾಗ

  • ಪ್ರಿಯರು ಸಾವನ್ನಪ್ಪಿದಾಗ

  • ಸಂಗಾತಿಯು ದ್ರೋಹಬಗೆದಾಗ

  • ಗಂಭೀರ ಕಾಯಿಲೆಗೆ ತುತ್ತಾದಾಗ

  • ಜೀವನದಲ್ಲಿ ಜಿಗುಪ್ಸೆ ಬಂದಾಗ

ಈಗ ಮೊದಲನೆಯದಾಗಿ ದುರಂತ ಸಂಭವಿಸಿದಾಗ ನಿಭಾಯಿಸುವುದು ಹೇಗೆ ಎಂದು ತಿಳಿಯೋಣ.

a ಈ ಸರಣಿ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ