ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp19 ನಂ. 2 ಪು. 4-5
  • ದುರಂತಗಳು ಸಂಭವಿಸಿದಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದುರಂತಗಳು ಸಂಭವಿಸಿದಾಗ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲಿನಲ್ಲಿರುವ ಸತ್ಯ ತಿಳಿಯುವುದರಿಂದ ಜೀವನ ಸಾರ್ಥಕವಾಗುತ್ತದೆ
  • ನೀವು ತಯಾರಿದ್ದೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಚಿಂತೆಯಿಂದ ಹೊರಗೆ ಬರೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಪುರುಷರ ಚಿಂತೆಗೆ ಬೈಬಲಿನ ಮದ್ದು
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
wp19 ನಂ. 2 ಪು. 4-5
ಕಟ್ಟಡದ ಅವಶೇಷಗಳ ಮಧ್ಯದಲ್ಲಿ ಇಬ್ಬರು ಕುಳಿತಿದ್ದಾರೆ

ದುರಂತಗಳು ಸಂಭವಿಸಿದಾಗ

“ನಮಗೆ ಸಿಡಿಲು ಬಡಿದಂತಾಯಿತು. ದಿಕ್ಕೇ ಕಾಣಲಿಲ್ಲ. ಪ್ರವಾಹ ಮತ್ತು ಭೂಕುಸಿತದಿಂದಾಗಿ ನಮಗಿದ್ದ ಎಲ್ಲವೂ ನಾಶವಾಗಿತ್ತು.” —ಸಿಯೆರಾ ಲಿಯೋನ್‌ನಲ್ಲಿರುವ ಆ್ಯಂಡ್ರು.

“ಚಂಡಮಾರುತ ನಿಂತ ಮೇಲೆ, ನಾವು ನಮ್ಮ ಮನೆಗೆ ಹೋದೆವು. ಅಲ್ಲಿ ಏನೂ ಉಳಿದಿರಲಿಲ್ಲ. ಅದನ್ನು ನೋಡಿ ನಮಗೆ ಮಾತೇ ಹೊರಡಲಿಲ್ಲ. ನನ್ನ ಮಗಳು ನೆಲಕ್ಕೆ ಬಿದ್ದು ಜೋರಾಗಿ ಅತ್ತು ಬಿಟ್ಟಳು.”—ವರ್ಜಿನ್‌ ದ್ವೀಪಗಳಲ್ಲಿನ ಡೇವಿಡ್‌.

ನಿಮ್ಮ ಜೀವನದಲ್ಲೂ ಯಾವತ್ತಾದರೂ ಈ ರೀತಿ ವಿಪತ್ತು ಸಂಭವಿಸಿದೆಯಾ? ಹಾಗಿದ್ದರೆ, ಅದನ್ನು ಅನುಭವಿಸಿದವರಿಗೆ ಆಗುವ ಆಘಾತ, ಗಲಿಬಿಲಿ, ಚಿಂತೆ, ಅವರಿಗೆ ಬರುವ ಕೆಟ್ಟ ಕನಸುಗಳು ಮತ್ತು ಅವರ ಪರಿಸ್ಥಿತಿ ನಿಮಗೆ ಚೆನ್ನಾಗಿ ಅರ್ಥ ಆಗಿರುತ್ತದೆ. ವಿಪತ್ತನ್ನು ಅನುಭವಿಸಿದ ಅನೇಕರು ಎಷ್ಟು ನಿರುತ್ಸಾಹಗೊಂಡಿದ್ದಾರೆಂದರೆ ಜೀವಿಸುವ ಆಸೆಯನ್ನೇ ಕಳೆದುಕೊಂಡಿದ್ದಾರೆ.

ವಿಪತ್ತಿನಿಂದಾಗಿ ನೀವು ಸಹ ಎಲ್ಲವನ್ನೂ ಕಳೆದುಕೊಂಡಿದ್ದರೆ ನಿಮಗೂ ಕಷ್ಟಗಳಿಂದಾಗಿ ಸಾಕೆನಿಸಬಹುದು. ಜೀವನ ವ್ಯರ್ಥ ಎಂಬ ಭಾವನೆ ಮೂಡಬಹುದು. ಆದರೆ ನೀವು ಜೀವಿಸುವುದು ಯಾಕೆ ಸಾರ್ಥಕ ಎಂದು ಬೈಬಲ್‌ ವಿವರಿಸುತ್ತದೆ. ಮಾತ್ರವಲ್ಲ, ಮುಂದೆ ನಿಮಗೆ ಒಳ್ಳೆಯ ಭವಿಷ್ಯ ಸಿಗುತ್ತದೆಂದು ನಿರೀಕ್ಷಿಸಲು ಆಧಾರ ಕೊಡುತ್ತದೆ.

ಬೈಬಲಿನಲ್ಲಿರುವ ಸತ್ಯ ತಿಳಿಯುವುದರಿಂದ ಜೀವನ ಸಾರ್ಥಕವಾಗುತ್ತದೆ

ಪ್ರಸಂಗಿ 7:8 ಹೇಳುವುದು: “ಆದಿಗಿಂತ ಅಂತ್ಯವು ಲೇಸು;” ದುರಂತ ಸಂಭವಿಸಿದ ಆರಂಭದಲ್ಲಿ ನಿಮಗೆ ದಿಕ್ಕೇ ಕಾಣದೆ ಜೀವನ ಕಷ್ಟ ಎಂದೆನಿಸಬಹುದು. ಆದರೆ, ತಾಳ್ಮೆಯಿಂದ ನಿಮ್ಮ ಜೀವನವನ್ನು ಮತ್ತೆ ಕಟ್ಟಲು ಪ್ರಾರಂಭಿಸುವಾಗ ನಿಧಾನವಾಗಿ ಸುಧಾರಣೆಯಾಗುತ್ತಾ ಹೋಗುತ್ತದೆ.

‘ರೋದನಶಬ್ದವೂ ಪ್ರಲಾಪಧ್ವನಿಯೂ ಕೇಳಿಸದ’ ಕಾಲ ಬರುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. (ಯೆಶಾಯ 65:19) ಇದು, ದೇವರ ರಾಜ್ಯ ಅಥವಾ ಸರಕಾರದ ಆಡಳಿತದ ಕೆಳಗೆ ಇಡೀ ಭೂಮಿ ಸುಂದರ ತೋಟವಾಗುವಾಗ ನಿಜವಾಗುತ್ತದೆ. (ಕೀರ್ತನೆ 37:11,29) ಆಗ ಯಾವುದೇ ವಿಪತ್ತು, ದುರಂತಗಳು ಸಂಭವಿಸುವುದಿಲ್ಲ. ವಿಪತ್ತುಗಳಿಂದ ನಿಮ್ಮ ಮೇಲಾದ ಕೆಟ್ಟ ಪರಿಣಾಮಗಳನ್ನು ಸರಿಪಡಿಸಲಾಗುತ್ತದೆ ಮತ್ತು ನಿಮಗಿರಬಹುದಾದ ಕಹಿನೆನಪುಗಳನ್ನೆಲ್ಲಾ ಸಂಪೂರ್ಣವಾಗಿ ಅಳಿಸಲಾಗುತ್ತದೆ. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಸರ್ವಶಕ್ತ ದೇವರೇ ಮಾತುಕೊಟ್ಟಿದ್ದಾನೆ.—ಯೆಶಾಯ 65:17.

ಸ್ವಲ್ಪ ಯೋಚಿಸಿ, ಸೃಷ್ಟಿಕರ್ತ ದೇವರು ತನ್ನ ಪರಿಪೂರ್ಣ ಆಡಳಿತದ ಕೆಳಗೆ ಶಾಂತಿ ನೆಮ್ಮದಿಯಿಂದ ಜೀವಿಸುವ ‘ಭವಿಷ್ಯವನ್ನೂ ನಿರೀಕ್ಷೆಯನ್ನೂ’ ನಿಮಗೆ ಕೊಡಲಿಕ್ಕಾಗಿ ಏರ್ಪಾಡುಗಳನ್ನು ಮಾಡಿದ್ದಾನೆ. (ಯೆರೆಮೀಯ 29:11, ಪವಿತ್ರ ಗ್ರಂಥ ಭಾಷಾಂತರ) ಈ ಸತ್ಯವನ್ನು ತಿಳಿದಿರುವುದರಿಂದ ನಿಮ್ಮ ಜೀವನ ಸಾರ್ಥಕ ಆಗುತ್ತಾ? ನಿಮಗೆ ಜೀವಿಸಲು ಒಂದು ಉದ್ದೇಶ ಕೊಡುತ್ತಾ? ಹಿಂದಿನ ಲೇಖನದಲ್ಲಿ ನೋಡಿದ ಸ್ಯಾಲಿ ಹೇಳುವುದು: “ದೇವರ ರಾಜ್ಯವು ನಮಗೋಸ್ಕರ ಮಾಡಲಿರುವ ಅದ್ಭುತಗಳ ಬಗ್ಗೆ ಯೋಚಿಸುವುದರಿಂದ, ಹಿಂದೆ ಆದ ದುರಂತಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಸಹಾಯವಾಗುತ್ತದೆ.”

ದೇವರ ಸರಕಾರವು ಅತಿ ಬೇಗನೆ ಮಾನವರಿಗಾಗಿ ಇನ್ನೂ ಏನೆಲ್ಲಾ ಮಾಡುತ್ತದೆ ಎಂದು ದಯವಿಟ್ಟು ತಿಳಿಯಿರಿ. ಹೀಗೆ ಮಾಡುವುದರಿಂದ, ಈ ಹಿಂದೆ ನೀವು ದುರಂತವನ್ನು ಅನುಭವಿಸಿದ್ದರೂ ಭವಿಷ್ಯದಲ್ಲಿ ದುರಂತಗಳೇ ಇಲ್ಲದಿರುವ ಜೀವನಕ್ಕಾಗಿ ಎದುರುನೋಡಬಹುದು. ಇದು ನಿಮ್ಮ ಜೀವನವನ್ನು ಸಾರ್ಥಕವಾಗಿಸುತ್ತದೆ ಅಥವಾ ಜೀವನಕ್ಕೆ ಅರ್ಥ ನೀಡುತ್ತದೆ.

ನಿಮಗೆ ಸಹಾಯ ಮಾಡುವ ಬೈಬಲ್‌ ವಚನಗಳು

ಸಾಕಷ್ಟು ವಿಶ್ರಾಂತಿ ಪಡೆಯಿರಿ.

“ತುಸು ದಣಿವಾರಿಸಿಕೊಳ್ಳಿರಿ.”—ಮಾರ್ಕ 6:31.

ಆಘಾತವನ್ನು ಅನುಭವಿಸಿದ ಮೇಲೆ “ಸಾಕಷ್ಟು ನಿದ್ದೆ ಸಿಗದಿದ್ದರೆ ಆಘಾತದಿಂದ ಆಗುವ ಕೆಟ್ಟ ಪರಿಣಾಮಗಳು ಇನ್ನೂ ಹೆಚ್ಚಾಗುತ್ತವೆ. ಆಗ ನಿಮ್ಮ ಭಾವನೆಗಳನ್ನು ಸಮತೋಲನದಲ್ಲಿಡಲು ಕಷ್ಟವಾಗುತ್ತದೆ” ಎಂದು ಸಂಶೋಧಕರು ಹೇಳುತ್ತಾರೆ. ಹಾಗಾಗಿ, ಸಾಕಷ್ಟು ವಿಶ್ರಾಂತಿ ಪಡೆಯುವುದು ಒಳ್ಳೇದು.

ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಬೇಡಿ.

“ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.”—ಜ್ಞಾನೋಕ್ತಿ 12:25.

ನಿಮಗೆ ಆಪ್ತರಾಗಿರುವ ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಮಾತನಾಡಿ. ಅವರು ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತಾರೆ ಮಾತ್ರವಲ್ಲ, ನಿಮಗೆ ಪ್ರೋತ್ಸಾಹ ಮತ್ತು ಪ್ರಾಯೋಗಿಕ ನೆರವು ನೀಡುತ್ತಾರೆ.a

ಭವಿಷ್ಯದ ಬಗ್ಗೆ ನಿರೀಕ್ಷೆಯಿಂದಿರಿ.

“ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.

a ಒಬ್ಬ ವ್ಯಕ್ತಿಯು ಹೆಚ್ಚು ಸಮಯದವರೆಗೆ ಖಿನ್ನನಾಗಿರುವುದಾದರೆ ಅಥವಾ ವಿಪರೀತ ಚಿಂತೆಯಿಂದ ಬಳಲುತ್ತಿರುವುದಾದರೆ ಅವನು ವೈದ್ಯರ ಬಳಿಗೆ ಹೋಗಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ