ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/90 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1990 ನಮ್ಮ ರಾಜ್ಯದ ಸೇವೆ
1990 ನಮ್ಮ ರಾಜ್ಯದ ಸೇವೆ
km 2/90 ಪು. 3

ಪ್ರಕಟಣೆಗಳು

● ಪುಸ್ತಕ ನೀಡುವಿಕೆಗಳು:

ಫೆಬ್ರವರಿ ಮತ್ತು ಮಾರ್ಚ್‌: 192 ಪುಟಗಳ ಎರಡು ಹಳೇ ಪುಸ್ತಕಗಳು, ಇಂಗ್ಲಿಷ್‌ 10 ರೂಪಾಯಿ, ದೇಶೀಯ ಭಾಷೆ 5 ರೂಪಾಯಿ. (ಕೆಎಮ್‌88 ಫೆಬ್ರವರಿ, “ಪ್ರಕಟಣೆ”ಯ ಕೆಳಗೆ ಉಪಯೋಗಿಸಲ್ಪಡುವ ಪ್ರಕಾಶನಗಳ ಪಟ್ಟಿಯನ್ನು ನೋಡಿರಿ.) ಎಪ್ರಿಲ್‌: ಸರ್ವೈವಲ್‌ ಇಂಟು ಎ ನ್ಯೂ ಅರ್ಥ್‌ 10 ರೂಪಾಯಿಗೆ. (ಎಲ್ಲಿ ಈ ಪ್ರಕಾಶನವು ದೊರೆಯುವದಿಲ್ಲವೋ ಅಲ್ಲಿ ಎರಡು ಹಳೇ 192 ಪುಟಗಳ ವಿಶೇಷ ನೀಡಿಕೆಯನ್ನು 10 ರೂಪಾಯಿಗೆ ನೀಡಿರಿ.) ದೇಶೀಯಭಾಷೆ: ವಿಶೇಷ ನೀಡಿಕೆಯ ಹಳೇ ಪುಸ್ತಕಗಳಲ್ಲಿ ಒಂದನ್ನು 5 ರೂಪಾಯಿಗೆ. ಮೇ ಮತ್ತು ಜೂನ್‌: ವಾಚ್‌ಟವರ್‌ ಚಂದಾ 40 ರೂಪಾಯಿಗೆ. ಆರು ತಿಂಗಳ ಮತ್ತು ತಿಂಗಳ ಮಾಸಿಕದ ವಾರ್ಷಿಕ ಚಂದಾ 20 ರೂಪಾಯಿ. ತಿಂಗಳ ಪತ್ರಿಕೆಗೆ ಅರ್ಧ ವರ್ಷದ ಚಂದಾ ಇರುವದಿಲ್ಲ. ಜುಲೈ: 192 ಪುಟದ ವಿಶೇಷ ನೀಡಿಕೆಯ ಒಂದು ಹಳೇ ಪುಸ್ತಕ 5 ರೂಪಾಯಿಗೆ.

● ಅಧ್ಯಕ್ಷ ಮೇಲ್ವಿಚಾರಕ ಅಥವಾ ಅವನಿಂದ ನೇಮಿತನಾದ ಯಾರಾದರೂ ಮಾರ್ಚ್‌ 1 ರಂದು ಯಾ ಅನಂತರ ಆದಷ್ಟು ಬೇಗ ಎಕೌಂಟ್ಸ್‌ಗಳ ಆಡಿಟನ್ನು ಮಾಡತಕ್ಕದ್ದು.

● ಜ್ಞಾಪಕದಿನ: 1989ರಲ್ಲಿ ಬಳಸಲಾದ ಹೊರಮೇರೆಯನ್ನು (ಎಸ್‌-31 10⁄85) 1990 ರಲ್ಲಿ ಪುನ: ಉಪಯೋಗಿಸಲಾಗುವದು. ಜ್ಞಾಪಕಾಚರಣೆಯ ತಾರೀಕು ಎಪ್ರಿಲ್‌ 10ನೇ ಮಂಗಳವಾರ ಸೂರ್ಯಾಸ್ತಮಾನದ ನಂತರ. ಆ ತಾರೀಕಲ್ಲಿ ಬೇರೆ ಯಾವ ಸಭಾಕೂಟಗಳನ್ನೂ ನಡಿಸಬಾರದು. ಮಂಗಳವಾರ ಸಾಮಾನ್ಯವಾಗಿ ನಡಿಯುವ ಕೂಟಗಳನ್ನು ಇನ್ನೊಂದು ದಿನದಲ್ಲಿ ನೇಮಿಸಬಹುದು. ಸರ್ಕಿಟ್‌ ಮೇಲ್ವಿಚಾರಕರು ವಾರದಲ್ಲಿ ತಮ್ಮ ತಖ್ತೆಯನ್ನು ಇದಕ್ಕನುಸಾರ ಅಳವಡಿಸಬೇಕು.

● ಜ್ಞಾಪಕದಿನದ ಬೈಬಲ್‌ ವಾಚನ ಕಾರ್ಯಕ್ರಮ: ಜ್ಞಾಪಕಾಚರಣೆಗೆ ನಡಿಸುವ ಆರು ದಿನಗಳ ಸಮಯದಲ್ಲಿ ಎಲ್ಲರೂ ಕೆಳಗಿನ ಬೈಬಲ್‌ ವಾಚನವನ್ನು ಮಾಡುವಂತೆ ಉತ್ತೇಜಿಸಲಾಗಿದೆ:

ಗುರುವಾರ, ಎಪ್ರಿಲ್‌ 5:

ನೈಸಾನ್‌ 9 ಯೋಹಾನ 12:2-19; ಮಾರ್ಕ 11:1-11

ಶುಕ್ರವಾರ, ಎಪ್ರಿಲ್‌ 6:

ನೈಸಾನ್‌ 10 ಯೋಹಾನ 12:.20-50

ಶನಿವಾರ, ಎಪ್ರಿಲ್‌ 7:

ನೈಸಾನ್‌11 ಲೂಕ21:1-36

ಭಾನುವಾರ, ಎಪ್ರಿಲ್‌ 8:

ನೈಸಾನ್‌ 12 ಮಾರ್ಕ 14:1,2,10,11

ಸೋಮವಾರ, ಎಪ್ರಿಲ್‌ 9:

ನೈಸಾನ್‌ 13 ಮತ್ತಾ. 26:17-19; ಮಾರ್ಕ 14:12-16;

ಲೂಕ 22:7-13

ಮಂಗಳವಾರ, ಎಪ್ರಿಲ್‌ 10:

ನೈಸಾನ್‌14 ಯೋಹಾನ 19:1-42.

● ಜುಲೈಯಿಂದಾರಂಭಿಸಿ ಸರ್ಕಿಟ್‌ ಮೇಲ್ವಿಚಾರಕರ ಹೊಸ ಬಹಿರಂಗ ಭಾಷಣವು “ಪೋಲೆಂಡ್‌ ಸಮ್ಮೇಲನಗಳಲ್ಲಿ ಯೆಹೋವನಲ್ಲಿ ಹಿಗ್ಗುವದು.” ಪೋಲೆಂಡ್‌ನಲ್ಲಿ 1989 ರಲ್ಲಿ ನಡೆದ “ದೇವಭಕ್ತಿ” ಜಿಲ್ಲಾ ಸಮ್ಮೇಲನಗಳ ಕೆಲವು ಮುಖ್ಯಾಂಶಗಳನ್ನು ತೋರಿಸುವ ಕೆಲವು ಸ್ಲೈಡ್ಸ್‌ ಪ್ರದರ್ಶನವು ಇದಾಗಿರುವದು.

● 1990 ರ ಜ್ಞಾಪಕಾವಧಿಗಾಗಿ ವಿಶೇಷ ಬಹಿರಂಗ ಭಾಷಣವು ಮಾರ್ಚ್‌ 25 ರ ಭಾನುವಾರಂದು ಕೊಡಲಾಗುವದು. ಭಾಷಣದ ವಿಷಯವು “ನಿಜ ಜೀವಿತಕ್ಕಾಗಿ ಎಟಕಿಸಿರಿ!” ಒಂದು ಹೊರಮೇರೆಯನ್ನು ಒದಗಿಸಲಾಗುವದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನೆ, ಸರ್ಕಿಟ್‌ ಸಮ್ಮೇಲನ ಅಥವಾ ವಿಶೇಷ ಸಮ್ಮೇಲನ ದಿನವಿರುವ ಸಭೆಗಳು ವಿಶೇಷ ಭಾಷಣವನ್ನು ಮುಂದಿನವಾರ ಏರ್ಪಡಿಸಬಹುದು. ಮಾರ್ಚ್‌ 25ಕ್ಕೆ ಮುಂಚೆ ಯಾವ ಸಭೆಯೂ ಈ ವಿಶೇಷ ಭಾಷಣವನ್ನು ಕೊಡಬಾರದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ