ಶಿಷ್ಯರನ್ನಾಗಿ ಮಾಡಲು ನಮ್ಮಸಹಾಯಕ್ಕಾಗಿ ಕೂಟಗಳು
ಫೆಬ್ರವರಿ 5 ರ ವಾರ
ಸಂಗೀತ 25 (119)
10 ನಿ: ಸ್ಥಳಿಕ ತಿಳಿಸುವಿಕೆಗಳು. ಪ್ರಕಟನೆಯ ಕೆಳಗೆ ಹೇಳಿದಂತೆ ಫೆಬ್ರವರಿಯ ನೀಡುವಿಕೆಯನ್ನು ಎತ್ತಿಹೇಳಿ. ಸ್ಥಳಿಕವಾಗಿ ಸಂಗ್ರಹದಲ್ಲಿರುವ ಹಳೆಯ ಪುಸ್ತಕಗಳ ಹೆಸರು ತಿಳಿಸಿರಿ. ಸದ್ಯದ ಸಂಭಾಷಣೆಗಾಗಿ ವಿಷಯದೊಂದಿಗೆ ಬಳಸಬಹುದಾದ ಪೀಠಿಕೆಯನ್ನು ಚುಟುಕಾಗಿ ಚರ್ಚಿಸಿರಿ.
25 ನಿ: “ದೇವಭಕ್ತಿ” ಜಿಲ್ಲಾ ಅಧಿವೇಶನದ ಮುಖ್ಯ ವಿಷಯಗಳನ್ನು ಪರಾಮರ್ಶಿಸಿರಿ.
10 ನಿ: “ವಾಟ್ ಡಸ್ ಇಟ್ ಮೀನ್ ಟು ಬಿ ಆನೆಸ್ಟ್?” ಡಬ್ಲ್ಯೂ88 2⁄15. ಹಿರಿಯನಿಂದ ಚರ್ಚೆ.(ದೇಶೀಯ ಭಾಷೆ: ಮಾರ್ಚ್ 1989 ಕಾವಲಿನಬುರುಜು.)
ಸಂಗೀತ 24 (112) ಮತ್ತು ಸಮಾಪ್ತಿ ಪ್ರಾರ್ಥನೆ.
ಫೆಬ್ರವರಿ 12 ರ ವಾರ
ಸಂಗೀತ 54 (8)
5 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯ ತಕ್ಕದಾದ ಪ್ರಕಟನೆಗಳು. ವಾರಾಂತ್ಯದ ಸೇವೆಗಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ತಿಳಿಸಿರಿ.
25 ನಿ: ಮೆಡಿಕಲ್ ಡೊಕ್ಯುಮೆಂಟ್ ಎಂಡ್ ಐಡೆಂಟಿ ಕಾರ್ಡ್. ಸೆಕ್ರಿಟರಿ ಕಾರ್ಡ್ಗಳನ್ನು ಹಂಚುತ್ತಾನೆ ಮತ್ತು ಸ್ನಾನಿತ ಸಾಕ್ಷಿಗಳಿಗಾಗಿ ಮೆಡಿಕಲ್ ಡೊಕ್ಯುಮೆಂಟ್ ಮತ್ತು ಸಾಕ್ಷಿ ಹೆತ್ತವರ ಅಸ್ನಾನಿತ ಚಿಕ್ಕ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡಿನ ಕುರಿತಾದ ಜನವರಿ 1, 1990 ರ ಪತ್ರವನ್ನು ಪೂರ್ಣವಾಗಿ ಚರ್ಚಿಸುತ್ತಾನೆ. ಕಾರ್ಡ್ಗಳನ್ನು ನಮ್ಮ ಸುರಕ್ಷೆಗಾಗಿ ಪರಿಣಾಮಕಾರಿ ಸಾಧನವಾಗಿ ಮಾಡುವಂತೆ ಸೂಚನೆಗಳನ್ನೇಕೆ ಜಾಗ್ರತೆಯಿಂದ ಪಾಲಿಸಬೇಕೆಂದು ಸಭಿಕರೊಂದಿಗೆ ವಿವೇಚಿಸುತ್ತಾನೆ.
15 ನಿ: “ಬೈಬಲ್ ಸಾಹಿತ್ಯವನ್ನು ನೀಡಲು ಎಚ್ಚರಿದಿಂದಿರ್ರಿ.” ಲೇಖನದ ಪ್ರಶ್ನೋತ್ತರ ಚರ್ಚೆ. ಪಾರಾ 5ನ್ನು ಗಮನಿಸುವಾಗ, ನೀಡುವ ಪುಸ್ತಕದ ಪ್ರತಿಯು ಈವಾಗಲೇ ಇರುವ ಮನೆಯವನಿಗೆ ಪ್ರಚಾರಕನು ಬೈಬಲಭ್ಯಾಸ ನೀಡುವದನ್ನು ದೃಶ್ಯವಾಗಿ ಮಾಡಲಿ. ಹಾಗೂ, ಪುಸ್ತಕ ನೀಡಿ ಅಭ್ಯಾಸ ಆರಂಭಿಸುವದರಲ್ಲಿ ಸಫಲರಾಗಿರುವ ಪ್ರಚಾರಕರನ್ನು ಸಂಕ್ಷೇಪವಾಗಿ ಇಂಟರ್ವ್ಯೂ ಮಾಡಿರಿ.
ಸಂಗೀತ 63 (32) ಮತ್ತು ಸಮಾಪ್ತ ಪ್ರಾರ್ಥನೆ.
ಫೆಬ್ರವರಿ 19 ರ ವಾರ
ಸಂಗೀತ 4 (19)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ಜನವರಿ ಸ್ಟೇಟಮೆಂಟ್ನಲ್ಲಿ ಸೂಚಿಸಿದ ಎಲ್ಲಾ ಕಾಣಿಕೆಗಳನ್ನು ಸೊಸೈಟಿಯು ಅಂಗೀಕರಿಸಿದ್ದನ್ನು ತಿಳಿಸಿರಿ. ಸ್ಥಳಿಕವಾಗಿ ಮತ್ತು ಲೋಕವ್ಯಾಪಕವಾಗಿ ರಾಜ್ಯ ಕಾರ್ಯಕ್ಕಾಗಿ ಸಭೆಯು ಕೊಡುವ ಆರ್ಥಿಕ ಬೆಂಬಲವನ್ನು ಪ್ರಶಂಸಿಸಿರಿ.
20 ನಿ: “ಸುವಾರ್ತೆಯನ್ನು ನೀಡುವದು—ಟ್ರೇಕ್ಟ್ಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ.” ಪ್ರಶ್ನೋತ್ತರಗಳು. ಪಾರಾ 5 ಮತ್ತು 6 ನ್ನು ಗಮನಿಸುವಾಗ ಎರಡು ದೃಶ್ಯಗಳನ್ನು ಮಾಡಿರಿ. (1) ಶಾಂತಿಭರಿತ ಹೊಸಲೋಕದಲ್ಲಿ ಜೀವಿತ ಮತ್ತು (2) ಬೈಬಲನ್ನು ನಂಬ ಸಾಧ್ಯವಿದೇಕೆ ಎಂಬ ವಿಷಯಗಳನ್ನು ಪೀಠಿಕೆಯಾಗಿ ಉಪಯೋಗಿಸಿರಿ. ಇಡೀ ಪ್ರಸಂಗವನ್ನು ಕೊಡುವ ಅಗತ್ಯವಿಲ್ಲ ಬದಲಾಗಿ ಸಂಭಾಷಣೆಗಾಗಿ ವಿಷಯಕ್ಕೆ ಪೀಠಿಕೆಯನ್ನು ಹೇಗೆ ಜೋಡಿಸುವದೆಂಬದನ್ನು ತೋರಿಸಿರಿ. ಪ್ರತಿಯೊಂದು ಸಂದರ್ಭದಲ್ಲಿ ಟ್ರೇಕ್ಟನ್ನು ಬಳಸಲು ಮುಂದರಿಯುವ ಮಹತ್ವವನ್ನು ಒತ್ತಿಹೇಳಿರಿ. ಸಭೆಯ ಕ್ಷೇತ್ರಸೇವಾ ಏರ್ಪಾಡನ್ನು ತಿಳಿಸಿರಿ ಮತ್ತು ಎಲ್ಲರೂ ಪಾಲಿಗರಾಗುವಂತೆ ಆಮಂತ್ರಿಸಿರಿ.
15 ನಿ: “ಸ್ನೇಹಿತರ ಒತ್ತಡವನ್ನು ನಾನು ನಿಭಾಯಿಸುವದು ಹೇಗೆ?” ನುರಿತ ಹಿರಿಯನು ಇಬ್ಬರು ಆದರ್ಶ ಯುವಕರೊಂದಿಗೆ ಯಂಗ್ ಪೀಪಲ್ ಆಸ್ಕ್ ಪುಸ್ತಕದ 9ನೇ ಅಧ್ಯಾಯದಿಂದ ವಿಷಯಗಳನ್ನು ಜಾಣತನದಿಂದ ಚರ್ಚಿಸುತ್ತಾನೆ. ಜನಪ್ರಿಯರಾಗುವ ಹಾಗೂ ಮಿತ್ರದಿಂದ ಮೆಚ್ಚಲ್ಪಡುವ ಅಪೇಕ್ಷೆ ಬಲವಾಗಿರುವದನ್ನು ಚುಟುಕಾಗಿ ಅಂಗೀಕರಿಸಿರಿ. ಪ್ರೌಡರು ಸಹಾ ಅಂತಹ ಒತ್ತಡದಿಂದ ಪ್ರಭಾವಿತರಾಗುತ್ತಾರೆ. ಇದನ್ನೆದುರಿಸಲು ಯುವಕರಿಗೆ ಸುಲಭವೋ? ಅವನ್ನೆದುರಿಸುವದರಲ್ಲಿ ಅವರು ಹೇಗೆ ಸಫಲರಾಗಿದ್ದಾರೆ? 80ನೇ ಪುಟದ “ಕ್ವೆಶ್ಚನ್ಸ್ ಫಾರ್ ಡಿಸ್ಕಶನ್” ಬಳಸಿ ಯುವಕರ ಮನದ ವಿಚಾರವನ್ನು ಹೊರತೆಗೆಯಿರಿ ಮತ್ತು ಸ್ನೇಹಿತರ ಒತ್ತಡವನ್ನು ಎದುರಿಸಲು ಶಕ್ತಿಯನ್ನು ವಿಕಾಸಿಸುವ ವಿಧವನ್ನು ತಿಳಿಸಿರಿ. ಸಭೆಯ ಯುವಕರು ಇಡುವ ಒಳ್ಳೇ ಮಾದರಿಗಾಗಿ ಗಣ್ಯತೆಯನ್ನು ಹೇಳಿರಿ. ಅವರ ಒಳ್ಳೇ ನಡತೆಯನ್ನು ಯೆಹೋವನು ಮೆಚ್ಚುತ್ತಾನೆ ಮತ್ತು ಗೌರವಿಸಲ್ಪಡುತ್ತಾನೆ.—ಜ್ಞಾನೋ.27:11.
ಸಂಗೀತ 188 (70) ಮತ್ತು ಸಮಾಪ್ತಿ ಪ್ರಾರ್ಥನೆ.
ಫೆಬ್ರವರಿ 26 ರ ವಾರ
ಸಂಗೀತ 171 (16)
8 ನಿ: ಸ್ಥಳಿಕ ತಿಳಿಸುವಿಕೆಗಳು. ಸಭೆಯ ವಾರದ ಕ್ಷೇತ್ರಸೇವಾ ತಖ್ತೆಯನ್ನು ಪರಾಮರ್ಶಿಸಿರಿ. ಸಾಧ್ಯವಾದವರೆಲ್ಲರೂ ಈ ವಾರಾಂತ್ಯಕ್ಕಾಗಿ ಸೇವಾ ಏರ್ಪಾಡುಗಳನ್ನು ಮಾಡುವಂತೆ ಉತೇಜಿಸಿರಿ.
12 ನಿ: ಹೆಚ್ಚುಸಾರಿ ಸೇವೆಯಾಗದ ಕ್ಷೇತ್ರ. ಸ್ಥಳಿಕ ಸಭೆಯೊಂದಿಗೆ ಹೆಚ್ಚು ಸಾರಿ ಸೇವೆಯಾಗದ ಕ್ಷೇತ್ರವಿದ್ದರೆ, ಅದನ್ನು ಅಧಿಕ ಕ್ರಮವಾಗಿ ಆವರಿಸುವಂತೆ ಉತ್ತೇಜಿಸಿರಿ. ಸ್ಥಳಿಕವಾಗಿ ಅನ್ವಯಿಸಿರಿ.
15 ನಿ: “ಶುಶ್ರೂಷಕರಾಗಿದ್ದು ನಮ್ಮ ಪರಿಣಾಮಕಾರತೆಯನ್ನು ಹೆಚ್ಚಿಸುವದು.” ಪ್ರಶ್ನೋತ್ತರ ಚರ್ಚೆ. 4ನೇ ಪಾರಾವನ್ನು ಗಮನಿಸುವಾಗ ಎರಡು ಚಿಕ್ಕ ದೃಶ್ಯಗಳನ್ನು ಸೇರಿಸಿರಿ. ವಾಚ್ಟವರ್ ಜುಲೈ 15, 1988 16ನೇ ಪುಟದ 5 ಮತ್ತು 6 ಪಾರಾದಲ್ಲಿ ಸೂಚಿಸಲಾದ ಪೀಠಿಕೆಗಳನ್ನುಪಯೋಗಿಸಿರಿ. ಅವನ್ನು ಯಥಾರ್ಥ ಮತ್ತು ಖಂಡಿತಭಾವದಿಂದ ಹೇಳಬೇಕು. (ದೇಶೀಯಭಾಷೆ: “ರೀಸನಿಂಗ್” ಪುಸ್ತಕದ 15ನೇ ಪುಟದಲ್ಲಿರುವ “ಇನ್ ಟೆರಿಟೆರಿ ಆಫನ್ ವಕ್ಡ್” ಉಪಯೋಗಿಸಿರಿ.)
10 ನಿ: ಸ್ಥಳಿಕ ಅಗತ್ಯತೆಗಳು ಅಥವಾ “ವಾಟ್ ಇಟ್ ಮೀನ್ಸ್ ಟುಬಿಎ ಕ್ರಿಶ್ಚನ್” ಭಾಷಣ. ಇದು ಇನ್ಸೈಟ್ ಪುಸ್ತಕದ 1ನೇ ಆವೃತ್ತಿ ಪುಟ 440-1ರಲ್ಲಿನ ಸಮಾಚಾರದಲ್ಲಿ ಆಧರಿಸಿರಬೇಕು. ಪ್ರೀತಿ ಮತ್ತು ಆತ್ಮತ್ಯಾಗದಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸುವ ಮಹತ್ವವನ್ನು ಎತ್ತಿಹೇಳಿ. (ದೇಶೀಯಭಾಷೆ: “ದೇವರು ಪಕ್ಷಪಾತಿಯಲ್ಲ” ಡಬ್ಲ್ಯೂ89 ಮೇ.)
ಸಂಗೀತ 168 (84) ಮತ್ತು ಸಮಾಪ್ತ ಪ್ರಾರ್ಥನೆ.
ಮಾರ್ಚ್ 5 ರ ವಾರ
ಸಂಗೀತ 135 (72)
10 ನಿ: ಸ್ಥಳಿಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. “ರಾಜ್ಯ ಸಭಾಗೃಹಗಳನ್ನು ಗುರುತಿಸುವದು.” ಸ್ಥಳಿಕ ಅನ್ವಯದ ಮೇಲೆ ಹೇಳಿಕೆಕೊಡಿ.
15 ನಿ: 1990ರ ವರ್ಷಪುಸ್ತಕ ಹೈಲೈಟ್ಸ್. 1990 ರ ವರ್ಷಪುಸ್ತಕ ದ ಮುನ್ನುಡಿ ಸಮಾಚಾರದ ಮೇಲೆ ಚೆನ್ನಾಗಿ ತಯಾರಿಸಿದ ಭಾಷಣ. ಯೆಹೋವನ ಜನರ ಉತ್ಸಾಹದ ಸೇವೆಯ ಮೇಲೆ ಯೆಹೋವನ ಆಶೀರ್ವಾದದ ಫಲಿತಾಂಶವಾಗಿ ದೊರೆತ ಅತ್ಯುತ್ತಮ ಪೂರೈಕೆಗಳನ್ನು ತಿಳಿಸಿರಿ. ಸಮಯವಿದ್ದ ಹಾಗೆ, ಕೊಡಲ್ಪಟ್ಟ ಕೆಲವು ಉತ್ತೇಜಕ ಅನುಭವಗಳನ್ನು ತಿಳಿಸಿರಿ. ನಮ್ಮ ಸಹೋದರರ ಲೋಕವ್ಯಾಪಕ ವರದಿಗಳು ನಮ್ಮೆಲ್ಲರನ್ನು ಯೆಹೋವನ ಸೇವೆಯಲ್ಲಿ ಪೂರ್ಣವಾಗಿ ಪಾಲಿಗರಾಗುವಂತೆ ಪ್ರೇರಿಸಬೇಕು. ವರ್ಷಪುಸ್ತಕ ವನ್ನು ಓದುವದರಿಂದ ಎಲ್ಲರೂ ಪ್ರಯೋಜನ ಪಡೆಯುವಂತೆ ಉತ್ತೇಜಿಸಿರಿ. (ದೇಶೀಯಭಾಷೆ: ಜೂನ್ 1989ರ ಕಾವಲಿನಬುರುಜು “ಯೆಹೋವನ ಹಸ್ತವು ಅವರೊಂದಿಗಿತ್ತು.”)
20 ನಿ: “ಪರಿಣಾಮಕಾರಕ ಪೀಠಿಕೆಗಳು.” ಲೇಖನದ ಪ್ರಶ್ನೋತ್ತರ ಚರ್ಚೆ. ಪಾರಾ 5ರಲ್ಲಿ ಸೂಚಿತ ಪೀಠಿಕೆಯನ್ನು ದೃಶ್ಯಮಾಡಿರಿ. ಹಾಗೂ ನಿಮ್ಮ ಕ್ಷೇತ್ರಕ್ಕೆ ತಕ್ಕದಾದ ಒಂದು ಪೀಠಿಕೆಯನ್ನು ರೀಸನಿಂಗ್ ಪುಸ್ತಕದಿಂದಲೂ (ಪುಟ 9-15) ದೃಶ್ಯಮಾಡಿರಿ. ಕ್ಷೇತ್ರಸೇವೆಗೆ ರೀಸನಿಂಗ್ ಪುಸ್ತಕವನ್ನೊಯ್ಯುವಂತೆ ಸಹೋದರರನ್ನು ಪ್ರೋತ್ಸಾಹಿಸಿರಿ. ಪ್ರಶ್ನೆಗಳನ್ನುತ್ತರಿಸಲು ಮತ್ತು ಅಡ್ಡಿಗಳನ್ನು ಪರಿಹರಿಸಲು ಅದನ್ನು ಬಳಸಿರಿ. (ದೇಶೀಯಭಾಷೆ: ಕೆಎಮ್ 12⁄88; 1⁄88; 5⁄88 ಪರೀಕ್ಷಿಸಿ) ಈ ವಾರಾಂತ್ಯ ಎಲ್ಲರೂ ಕ್ಷೇತ್ರಸೇವೆಯಲ್ಲಿ ಪಾಲಿಗರಾಗುವಂತೆ ಉತ್ತೇಜಿಸಿರಿ.
ಸಂಗೀತ 108 (95) ಮತ್ತು ಸಮಾಪ್ತಿ ಪ್ರಾರ್ಥನೆ.