ಶಿಷ್ಯರನ್ನಾಗಿ ಮಾಡಲು ನಮ್ಮಸಹಾಯಕ್ಕಾಗಿ ಕೂಟಗಳು
ಮಾರ್ಚ್ 12 ರ ವಾರ
ಸಂಗೀತ 180 (100)
10 ನಿ: ಸ್ಥಳಿಕ ತಿಳಿಸುವಿಕೆಗಳು. ಮೇ ತಿಂಗಳಲ್ಲಿ ಸಹಾಯಕ ಪಯನೀಯರಾಗಲು ಈಗಲೇ ಯೋಜಿಸಿರಿ. ಎಪ್ರಿಲ್ ಮತ್ತು ಮೇ ಗಾಗಿ ಬೇಕಾದ ಅಧಿಕ ಪತ್ರಿಕೆಗಳಿಗೆ ಆರ್ಡರ್ ಮಾಡಿರಿ. ದೊರೆಯುವ ಹಳೇ ಪುಸ್ತಕಗಳು ಯಾವವೆಂದು ಸಭೆಗೆ ತಿಳಿಸಿರಿ.
20 ನಿ: “ದೇವರ ವಾಕ್ಯವನ್ನು ಸರಿಯಾಗಿ ಉಪಯೋಗಿಸುವ ಕುಶಲ ಕೆಲಸಗಾರರು.” ಪ್ರಶ್ನೋತ್ತರ ಚರ್ಚೆ. ಸಮಯವಿದ್ದ ಹಾಗೆ ವಚನಗಳನ್ನು ತೆರೆದು ಓದಿರಿ. ಮೊತ್ತಮೊದಲಾಗಿ ಮತ್ತು ಮುಖ್ಯವಾಗಿ ನಾವು ಶುಶ್ರೂಷಕರೆಂಬದನ್ನು ಒತ್ತಿಹೇಳಿ. ಬೈಬಲನ್ನು ಉಪಯೋಗಿಸುವುದರಲ್ಲಿ ಕುಶಲರಾಗುವಂತೆ ಪ್ರಯಾಸಪಡಿರಿ. ಬರೇ ಪುಸ್ತಕ ನೀಡುವುದರಲ್ಲಿ ತೃಪ್ತರಾಗಬೇಡಿ. ಶಾಲಾ ಅಥವಾ ಸೇವಾ ಮೇಲ್ವಿಚಾರಕನು ಹೊಸ ಪ್ರಚಾರಕನಿಗೆ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ (1984 ರ ಅವೃತಿ) ಬೈಬಲಿನ ವೈಶಿಷ್ಟ್ಯಗಳ ಪರಿಚಯ ಮಾಡಿಸುವ ದೃಶ್ಯ ಮಾಡಿ.
15 ನಿ: ಪ್ರಶ್ನಾ ಪೆಟ್ಟಿಗೆ. ಹಿರಿಯನಿಂದ ಭಾಷಣ. ಸೂಚನೆಯ ಅನ್ವಯವನ್ನು ಸ್ಥಳಿಕ ಪರಿಸ್ಥಿತಿಗೆ ಬೇಕಾದ ಹಾಗೆ ಜಾಣತನದಿಂದ ಆದರೆ ವಿಶಿಷ್ಟವಾಗಿ ತಿಳಿಸಿರಿ. ಸಭಿಕರನ್ನು ಚರ್ಚೆಗೆಳೆಯಬಹುದು.
ಸಂಗೀತ 190 (107) ಮತ್ತು ಸಮಾಪ್ತಿ ಪ್ರಾರ್ಥನೆ.
ಮಾರ್ಚ್ 19 ರ ವಾರ
ಸಂಗೀತ 85 (44)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟಣೆಗಳು. ಈ ವಾರಾಂತ್ಯ ಎಲ್ಲರೂ ಕ್ಷೇತ್ರ ಸೇವೆ ಮಾಡುವಂತೆ ಉತ್ತೇಜನ ಕೊಡಿ. ಸ್ಥಳಿಕ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಬಹುದಾದ ಹೊಸ ಪತ್ರಿಕೆಗಳ ಲೇಖನಗಳನ್ನು ಪುನರ್ವಿಮರ್ಶಿರಿ. ಎಕೌಂಟ್ಸ್ ರಿಪೋರ್ಟ್. ಫೆಬ್ರವರಿಯಲ್ಲಿ ಕಾಣಿಕೆಗಳನ್ನು ಅಂಗೀಕರಿಸಿ ಸೊಸೈಟಿ ಬರೆದ ಪತ್ರವನ್ನು ಓದಿರಿ. ಸ್ಥಳಿಕ ಸಭೆಗಾಗಿ ಸಹೋದರರು ಕೊಡುವ ಕಾಣಿಕೆಗಳನ್ನು ಪ್ರಶಂಸಿಸಿರಿ.
15 ನಿ: “ಮಹತ್ತಾದ ವಿಷಯಗಳುಳ್ಳ ಪತ್ರಿಕೆಗಳು.” ಭಾಷಣ ಮತ್ತು ಕೆಲವು ಪ್ರಶ್ನೆಗಳೊಂದಿಗೆ ಲೇಖನದ ಚರ್ಚೆ. ಬೀದಿ ಸಾಕ್ಷಿ, ಅನೌಪಚಾರಿಕ ಸಾಕ್ಷಿ, ಅಥವಾ ಪತ್ರಿಕಾ ಮಾರ್ಗದಲ್ಲಿ ಪತ್ರಿಕೆಗಳನ್ನು ನೀಡಿದ ಪ್ರಚಾರಕರ ಕೆಲವು ಸ್ಥಳಿಕ ಅನುಭವಗಳನ್ನು ಸೇರಿಸಿರಿ.
20 ನಿ: ಪತ್ರಿಕೆಗಳನ್ನು ನೀಡುವುದಕ್ಕೆ ವ್ಯಾವಹಾರ್ಯ ಸಲಹೆಗಳು. ಕೆಳಗಿನ ಸಲಹೆಗಳನ್ನು ಚರ್ಚಿಸಿರಿ ಮತ್ತು ಅವನ್ನು ಅನ್ವಯಿಸಿದರಿಂದ ದೊರೆತ ಸಾಫಲ್ಯವನ್ನು ಪ್ರಚಾರಕರು ಹೇಳಲಿ: (1) ಪತ್ರಿಕೆಗಳನ್ನು ಓದಿರಿ ಮತ್ತು ಲೇಖನಗಳನ್ನು ಚೆನ್ನಾಗಿ ತಿಳಿಯಿರಿ. (2) ಸಮಾಜದಲ್ಲಿ ವಿಶೇಷ ಆಸಕ್ತಿ ಹುಟ್ಟಿಸಬಹುದಾದ ಲೇಖನಗಳನ್ನು ಆರಿಸಿರಿ. (3) ಪತ್ರಿಕೆಗಳೊಂದಿಗೆ ಸಂಜಾವೇಳೆಯ ಸಾಕ್ಷಿಯನ್ನು ಪ್ರಯತ್ನಿಸಿನೋಡಿರಿ. (4) ಒಂದೇ ವಿಷಯದ ಕುರಿತು ಮಾತಾಡಿರಿ, ಕೇವಲ ಒಂದೇ ಪತ್ರಿಕೆಯನ್ನು ಎತ್ತಿಹೇಳಿರಿ, ಇನ್ನೊಂದನ್ನು ಜೊತೆಯಾಗಿ ನೀಡಿರಿ. (5) ನಿಧಾನವಾಗಿ ಮತ್ತು ಸ್ಪಷ್ಟವಾಗಿ ಸ್ನೇಹದ ದ್ವನಿಯಲ್ಲಿ ಮಾತಾಡಿರಿ. ತಮ್ಮ ಸ್ಥಳಿಕ ಕ್ಷೇತ್ರದಲ್ಲಿ ಪತ್ರಿಕೆಗಳನ್ನು ನೀಡುವಾಗ ಎಲ್ಲರೂ ಈ ವ್ಯಾವಹಾರಿಕ ಸಲಹೆಗಳನ್ನುಪಯೋಗಿಸುವಂತೆ ಉತ್ತೇಜನ ಕೊಡಿ.
ಸಂಗೀತ 6 (4) ಮತ್ತು ಸಮಾಪ್ತಿ ಪ್ರಾರ್ಥನೆ.
ಮಾರ್ಚ್ 26 ರ ವಾರ
ಸಂಗೀತ 207 (112)
8 ನಿ: ಸ್ಥಳಿಕ ತಿಳಿಸುವಿಕೆಗಳಲ್ಲಿ ವಾರಾಂತ್ಯದ ಕ್ಷೇತ್ರಸೇವಾ ಏರ್ಪಾಡುಗಳನ್ನೂ ಸೇರಿಸಿರಿ. ದೇವಪ್ರಭುತ್ವವಾರ್ತೆ.
7 ನಿ: ಕ್ರಮದ ಕುಟುಂಬ ಬೈಬಲಧ್ಯಯನದ ಪ್ರಯೋಜನಗಳು. ಭಾಷಣ. ಕುಟುಂಬ ಸದಸ್ಯರೊಂದಿಗೆ ಕ್ರಮದ ಬೈಬಲಧ್ಯಯನ ಮಾಡುವಂತೆ ಕುಟುಂಬ ತಲೆಗಳನ್ನು ಯೆಹೋವನ ಸಂಸ್ಥೆಯು ದಶಮಾನಗಳಿಂದ ಉತ್ತೇಜಿಸುತ್ತಾ ಇದೆ. ಎಲ್ಲಿ ಇದು ಮಾಡಲ್ಪಟ್ಟಿದೆಯೋ ಅಲ್ಲಿ ದೊರೆತ ಪ್ರಯೋಜನಗಳಾದರೋ ಅನೇಕ. ಅಂತಹ ಅಭ್ಯಾಸವು ಕುಟುಂಬ ಚಕ್ರದೊಳಗೆ ಪ್ರೀತಿ ಮತ್ತು ಸಮಾಧಾನದ ಭಾವಕ್ಕೆ ನೆರವಾಗಿದೆ. ಅವರ ಮಕ್ಕಳು ಯೆಹೋವನ ಸಮರ್ಪಿತ ಸೇವಕರಾಗುವ ಬಿಂದುವಿಗೆ ಪ್ರಗತಿ ಮಾಡಿದ್ದಾರೆ, ಸ್ಥಳಿಕ ಸಭೆಯ ಮೇಲೆ ಒಳ್ಳೇ ಪ್ರಭಾವವನ್ನು ಹಾಕಿದ್ದಾರೆ ಮತ್ತು ಹೆಚ್ಚಾಗಿ ಪೂರ್ಣ ಸಮಯದ ಸೇವೆಗೂ ಇಳಿದಿದ್ದಾರೆ. ಅವರು ಮಾಡಿರುವ ಪ್ರಗತಿಯನ್ನು ನೋಡಿರುವ ಕ್ರೈಸ್ತ ಹೆತ್ತವರಿಗೆ ಮತ್ತು ಇತರರಿಗೆ ಇದು ಮಹಾನಂದವನ್ನು ಕೊಟ್ಟಿದೆ.
17 ನಿ: ಯುವಕರ ಹೃದಯವನ್ನು ತಲಪುವದು. ವಿಶೇಷವಾಗಿ ಯುವಕರಿಗೆ ನೆರವಾಗಲು ತಯಾರಿಸಲ್ಪಟ್ಟ ಪುಸ್ತಕಗಳಿಂದ ವಿಷಯವನ್ನು ಹಿರಿಯನು ಸಂಕ್ಷೇಪವಾಗಿ ಚರ್ಚಿಸುತ್ತಾನೆ. ಕ್ರಮದ ಕುಟುಂಬ ಅಭ್ಯಾಸ ಮಾತ್ರವಲ್ಲದೆ ಸಂದರ್ಭಾನುಸಾರ ಆತ್ಮಿಕ ಚರ್ಚೆಗಳಿಂದಲೂ ಕುಟುಂಬ ಸದಸ್ಯರು ಪ್ರಯೋಜನ ಪಡೆಯುವರು. ಮಕ್ಕಳೊಂದಿಗೆ ಬೆಚ್ಚಗೆನ ಸಂಬಂಧವಿರುವ ಒಬ್ಬ ತಂದೆಯು ಕುಟುಂಬ ಚರ್ಚೆಮಾಡುವುದನ್ನು ದೃಶ್ಯವಾಗಿ ಮಾಡಿರಿ. ಅವರ ಚರ್ಚೆಯು ಅನೌಪಚಾರಿಕವಾಗಿ ನಡಿಸುವ ಸಂಭಾಷಣಾ ವಿನಿಮಯವೇ ಹೊರತು ಪ್ರಶ್ನೋತ್ತರ ಕಾರ್ಯಕ್ರಮವಲ್ಲ. ಕುಟುಂಬದ ಚಿಕ್ಕವನೊಬ್ಬನು ತಾನು ನೆರೆಯ ಮಕ್ಕಳೊಂದಿಗೆ ಚೆಂಡಾಡಬಹುದೋ ಎಂದು ಕೇಳುತ್ತಾನೆ. ಯಂಗ್ ಪೀಪಲ್ ಆಸ್ಕ್ ಪುಸ್ತಕದ 64-7 ಪುಟದ ಸಮಾಚಾರವನ್ನು ವಿಕಾಸಿಸಿರಿ. ಒಳಗೂಡಿರುವ ಶಾಸ್ತ್ರೀಯ ತತ್ವಗಳು ಮಗುವಿಗೆ ತಿಳಿದದೆಯೋ ಮತ್ತು ಅವನ್ನು ಒಪ್ಪುತ್ತಾನೋ ಎಂದು ಗೊತ್ತುಮಾಡಲು ತಂದೆ ಶೋಧಕ ಪ್ರಶ್ನೆಗಳನ್ನು ಹಾಕುತ್ತಾನೆ. ಸಮಪ್ರಾಯದವರೇ ಆಪ್ತ ಮಿತ್ರರಾಗಿರಬೇಕೆಂದಿಲ್ಲ ಎಂಬದನ್ನು ಒತ್ತಿಹೇಳಿ. ಪುಸ್ತಕದ ಅಂಶಗಳನ್ನು ಓದಿರುವ ಯುವಕರನ್ನು ಆರಿಸಿ ಅವರ ವೀಕ್ಷಣೆಗಳೇನೆಂದು ಕೇಳಿರಿ. ಸಮಾಚಾರವು ಏಕೆ ಸಹಾಯಕಾರಿ ಎಂದವರು ಹೇಳಲಿ. ಯುವಕರು ಆ ಪುಸ್ತಕವನ್ನು ಓದುವಂತೆ ಉತ್ತೇಜನ ಕೊಡಿ ಮತ್ತು ಕುಟುಂಬ ಚರ್ಚೆಗಳಲ್ಲಿ ತಕ್ಕದಾದ ಹೇಳಿಕೆಗಳನ್ನು ಸೇರಿಸುವಂತೆ ಹೆತ್ತವರು ಪುಸ್ತಕದಲ್ಲಿರುವ ವಿಷಯಗಳನ್ನು ಪರಿಚಯಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿ.
13 ನಿ: ಮಕ್ಕಳನ್ನು ಸತ್ಯದಲ್ಲಿ ಬೆಳೆಸುವುದರಲ್ಲಿ ಸಾಫಲ್ಯ ಪಡೆದ ಯಾ ಪಡೆಯುತ್ತಿರುವ ಹೆತ್ತವರನ್ನು ಇಂಟರ್ವ್ಯೂ ಮಾಡಿ. ದೊರೆತ ಆನಂದವನ್ನು ಒತ್ತಿಹೇಳಿ ಮತ್ತು ಕ್ರಮದ ಹಾಗೂ ಅರ್ಥಭರಿತ ಕುಟುಂಬ ಅಭ್ಯಾಸ ಮತ್ತು ಚರ್ಚೆಗಳನ್ನು ನಡಿಸುವರೇ ಅವರಿಗೆ ಯಾವುದು ಸಹಾಯಕಾರಿಯಾಗಿ ಕಂಡಿತೆಂದು ಹೇಳಲಿ. ಹೆತ್ತವರು ಕುಟುಂಬ ಅಭ್ಯಾಸವನ್ನು ಕ್ರಮವಾಗಿ ನಡಿಸುವಂತೆ ಮತ್ತು ಯುವಕರು ಸಹಕರಿಸುವಂತೆ ಹೃದಯಪ್ರೇರಕ ಉತ್ತೇಜನ ಕೊಡಿ. ಸ್ಥಿತಿಗತಿಗಳು ಯಾವಾಗಲೂ ಅನುಕೂಲವೇ ಆಗಿರವು. ಕುಟುಂಬದ ಎಲ್ಲರೂ ಕೂಡಿ ಕೆಲ್ಸಮಾಡುವ ಅಗತ್ಯವಿದೆ. ಹೀಗೆ ಮಾಡುವ ಮೂಲಕ ಅವರು ಜೀವದ ಹಾದಿಯಲ್ಲಿ ಉಳಿಯುವರೇ ಒಬ್ಬರಿಗೊಬ್ಬರು ನೆರವಾಗಶಕ್ತರು.—1 ತಿಮೋ. 4:16.
ಸಂಗೀತ 123 (63) ಮತ್ತು ಸಮಾಪ್ತಿ ಪ್ರಾರ್ಥನೆ.
ಎಪ್ರಿಲ್ 2 ರ ವಾರ
ಸಂಗೀತ 172 (92)
5 ನಿ: ಸ್ಥಳಿಕ ತಿಳಿಸುವಿಕೆಗಳು. ಸರ್ವೈವಲ್ ಪುಸ್ತಕದ ತಕ್ಕಷ್ಟು ಸಂಗ್ರಹವನ್ನು ಪಡಕೊಳ್ಳುವಂತೆ ಮತ್ತು ಈ ವಾರಾಂತ್ಯದ ಕ್ಷೇತ್ರಸೇವೆಯಲ್ಲಿ ಆ ಪುಸ್ತಕ ನೀಡಿಕೆಯಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
22 ನಿ: “ಸುವಾರ್ತೆಯನ್ನು ನೀಡುವುದು—ವೈಯಕ್ತಿಕ ನಿಶ್ಚಯದೊಂದಿಗೆ.” ಲೇಖನದ ಪ್ರಶ್ನೋತ್ತರ ಚರ್ಚೆ.
18 ನಿ: “ಪಯನೀಯರಾಗುವ ಮೂಲಕ ಯೆಹೋವನಲ್ಲಿ ಭರವಸ ತೋರಿಸುವುದು.” ಸೇವಾ ಮೇಲ್ವಿಚಾರಕನಿಂದ ಬೆಚ್ಚಗೆನ, ಉತ್ತಾಹಭರಿತ ಪ್ರಶ್ನೋತ್ತರ ಚರ್ಚೆ. ಒಬ್ಬಿಬ್ಬರು ಪಯನೀಯರರನ್ನು ಇಂಟರ್ವ್ಯೂ ಮಾಡಿರಿ. ಕಷ್ಟಗಳನ್ನು ಪರಿಹರಿಸಿದಷ್ಟಕ್ಕೆ ದೊರೆತ ಆನಂದಗಳನ್ನು ಅವರು ಎತ್ತಿಹೇಳಲಿ. ಪಯನೀಯರರಿಗೆ ವ್ಯಾವಹಾರ್ಯ ಸಹಾಯವನ್ನು ನೀಡಲು ಸ್ಥಳಿಕವಾಗಿ ಏನು ಮಾಡಲ್ಪಟ್ಟಿದೆಂದು ತಿಳಿಸಿರಿ.
ಸಂಗೀತ 14 (6) ಮತ್ತು ಸಮಾಪ್ತಿ ಪ್ರಾರ್ಥನೆ.