ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು:
ಮಾರ್ಚ್: ಎರಡು ಹಳೇ 192 ಪುಟದ ಪುಸ್ತಕ ಇಂಗ್ಲಿಷಲ್ಲಿ 10 ರೂಪಾಯಿಗೆ. ದೇಶಭಾಷೆಯಲ್ಲಿ ಒಂದು ಪುಸ್ತಕ 5 ರೂಪಾಯಿಗೆ. (ಬಳಸಬಹುದಾದ ಹಳೇ ಪುಸ್ತಕಗಳ ಲಿಸ್ಟಿಗಾಗಿ ರಾಸೇ88 ಫೆಬ್ರವರಿ, “ಪ್ರಕಟಣೆ” ಕೆಳಗೆ ನೋಡಿ.) ಎಪ್ರಿಲ್: ಸರ್ವೈವಲ್ ಇಂಟು ಎ ನ್ಯೂ ಅರ್ಥ್ 10 ರೂಪಾಯಿಗೆ. (ಎಲ್ಲಿ ಈ ಪುಸ್ತಕ ದೊರೆಯುವದಿಲ್ಲವೋ ಅಲ್ಲಿ ಎರಡು ಹಳೇ 192 ಪುಸ್ತಕಗಳ ವಿಶೇಷ ನೀಡಿಕೆಯನ್ನು 10 ರೂಪಾಯಿಗೆ ನೀಡಿ.) ದೇಶಭಾಷೆ: ಒಂದು ಹಳೇ 192 ಪುಟದ ಬೌಂಡ್ ಪುಸ್ತಕ 5 ರೂಪಾಯಿಗೆ. ಮೇ ಮತ್ತು ಜೂನ್: ವಾಚ್‌ಟವರ್ ಚಂದಾ. ಒಂದು ವರ್ಷದ ಚಂದಾ ಒಂದಕ್ಕೆ 40 ರೂಪಾಯಿ. ಆರು ತಿಂಗಳ ಚಂದಾ ಮತ್ತು ತಿಂಗಳ ಸಂಚಿಕೆಗಳ ವಾರ್ಷಿಕ ಚಂದಾ 20 ರೂಪಾಯಿ. ತಿಂಗಳ ಸಂಚಿಕೆಗಳಿಗೆ ಆರು ತಿಂಗಳ ಚಂದಾ ಇಲ್ಲ. ಜುಲೈ: 192 ಪುಟದ ಹಳೇ ಪುಸ್ತಕ ಒಂದರ ವಿಶೇಷ ನೀಡಿಕೆ 5 ರೂಪಾಯಿಗೆ. ಅಗೋಸ್ತ್ ಮತ್ತು ಸಪ್ಟಂಬರ: ಸ್ಕೂಲ್ ಬ್ರೋಷರನ್ನು ಬಿಟ್ಟು ಬೇರೆ ಯಾವುದೇ 32 ಪುಟದ ಬ್ರೋಷರ್.
• ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕನು ಎಲ್ಲಾ ಕ್ರಮದ ಪಯನೀಯರರ ಚಟುವಟಿಕೆಯನ್ನು ಪರಾಮರ್ಶಿಸಬೇಕು. ತಾಸುಗಳ ಆವಶ್ಯಕತೆಯನ್ನು ಮುಟ್ಟಲು ಯಾರಿಗಾದರೂ ಕಷ್ಟವಿದ್ದರೆ, ಹಿರಿಯರು ಸಹಾಯ ಕೊಡಲು ಏರ್ಪಡಿಸಬೇಕು. ಸಲಹೆಗಳಿಗಾಗಿ ಸೊಸೈಟಿಯ ಒಕ್ಟೋಬರ 1, 1988 ಮತ್ತು ಒಕ್ಟೋಬರ 1, 1989 ರ ಪತ್ರಗಳನ್ನು (ಎಸ್-201) ಪರಾಮರ್ಶಿಸಿರಿ. ಹಾಗೂ ಒಕ್ಟೋಬರ 1986 ರ ನಮ್ಮ ರಾಜ್ಯದ ಸೇವೆ ಪುರವಣಿ ಪಾರಾ 12-20 ನೋಡಿ.
• ಜ್ಞಾಪಕಾಚರಣೆಯು ಎಪ್ರಿಲ್ 10, 1990ನೇ ಮಂಗಳವಾರ ನಡೆಯಲಿರುವುದು. ಭಾಷಣವನ್ನು ಬೇಗ ಆರಂಭಿಸಬಹುದಾದರೂ ಜ್ಞಾಪಕ ರೊಟ್ಟಿ ಮತ್ತು ದ್ರಾಕ್ಷಾರಸದ ದಾಟಿಸುವಿಕೆಯನ್ನು ಸೂರ್ಯಾಸ್ತಮಾನಕ್ಕೆ ಮೊದಲು ಆರಂಭಿಸಬಾರದು ಎಂಬದನ್ನು ದಯವಿಟ್ಟು ನೆನಪಿಡಿರಿ. ನಿಮ್ಮ ಕ್ಷೇತ್ರದಲ್ಲಿ ಸೂರ್ಯಾಸ್ತಮಾನ ಯಾವಾಗ ಎಂದು ನಿರ್ಧರಿಸಲು ಸ್ಥಳಿಕ ಮೂಲಗಳನ್ನು ಸಂಪರ್ಕಿಸಿರಿ. ಆ ತಾರೀಕಿನಲ್ಲಿ ಬೇರೆ ಯಾವುದೇ ಕೂಟಗಳು ನಡಿಸಲ್ಪಡುವುದಿಲ್ಲ. ನಿಮ್ಮ ಸಭೆಯು ಸಾಮಾನ್ಯವಾಗಿ ಮಂಗಳವಾರ ಕೂಟಗಳನ್ನು ನಡಿಸುತ್ತಿದ್ದರೆ ಅವನ್ನು ವಾರದ ಇನ್ನೊಂದು ಸಮಯದಲ್ಲಿ ನಡಿಸಿರಿ. ನಿಮ್ಮ ಸೇವಾಕೂಟ ಆ ದಿನವಿದ್ದರೆ ಅದರಲ್ಲಿ ನಿಮ್ಮ ಸಭೆಗೆ ವಿಶೇಷವಾಗಿ ಅನ್ವಯಿಸುವ ಭಾಗಗಳನ್ನು ಇನ್ನೊಂದು ವಾರದ ಸೇವಾಕೂಟದೊಂದಿಗೆ ಸೇರಿಸಿರಿ.
• “ಪೋಲೆಂಡ್ ಅಧಿವೇಶನಗಳಲ್ಲಿ ಯೆಹೋವನಲ್ಲಿ ಹರ್ಷಿಸುವುದು” ಎಂಬ ಸ್ಲೈಡ್ ಶೋ ಎಪ್ರಿಲ್ 1 ರ ಅನಂತರ ಆದಷ್ಟು ಬೇಗ ತೋರಿಸಲ್ಪಡುವಂತೆ ಸರ್ಕಿಟ್ ಮೇಲ್ವಿಚಾರಕರು ಏರ್ಪಡಿಸಬಹುದು.