ಪಯನೀಯರಾಗುವ ಮೂಲಕ ಯೆಹೋವನಲ್ಲಿ ಭರವಸ ತೋರಿಸುವುದು
1 ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡಲು ಯೆಹೋವನಲ್ಲಿ ಭರವಸ ಅತ್ಯಾವಶ್ಯಕ. (ಕೀರ್ತ. 56:11; ಜ್ಞಾನೋ. 3:5; ಮತ್ತಾ. 6:33) ಲೋಕವು ಏನನ್ನು ಮಹತ್ವವೆಂದೆಣಿಸುತ್ತದೋ ಅದರಿಂದ ನಮ್ಮ ಮನಸ್ಸನ್ನು ದೂರಸರಿಸಬೇಕು ಮತ್ತು ಆತ್ಮಿಕ ಮೌಲ್ಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಬೇಕು. ಲೋಕವು ಐಹಿಕ ವಸ್ತುಗಳನ್ನು ಆಶಿಸುವಂತೆ ಅಪ್ಪೀಲು ಮಾಡುವಾಗ, ನಾವಾದರೋ ನಿಜವಾಗಿ ಮಹತ್ವವುಳ್ಳ ವಿಷಯಗಳಲ್ಲಿ ಸಂತೃಪ್ತರಾಗಿರುವಂತೆ ಯೆಹೋವನು ಬಯಸುತ್ತಾನೆ.—1 ತಿಮೋ. 6:8; ಫಿಲಿ. 1:10.
2 ಯೆಹೋವನ ಆಜ್ನೆಗಳನ್ನು ಗಂಭೀರವಾಗಿ ತಕ್ಕೊಳ್ಳುವ ಕ್ರೈಸ್ತ ಯುವಕರಿಗೆ ವಿಶೇಷವಾಗಿ ಇದೊಂದು ಪಂಥಾಹ್ವಾನವು. ಸಾಫಲ್ಯ ಜೀವನಕ್ಕೆ ಉಚ್ಚ ಶಿಕ್ಷಣವು ಅತ್ಯಾವಶ್ಯಕವೆಂದು ನೆನಸುವ ಅವರ ಅಧ್ಯಾಪಕರಿಂದ ಮತ್ತು ಸಹಪಾಠಿಗಳಿಂದ ಅವರು ಒತ್ತೈಸಲ್ಪಡಬಹುದು. ಐಹಿಕ ಅಗತ್ಯತೆಗಳು ತಮಗೂ ಇವೆಂಬದನ್ನು ಮನಗಂಡರೂ ಅನೇಕ ಕ್ರೈಸ್ತ ಯುವಕರು ಅಂತಹ ಒತ್ತಡವನ್ನು ಸುಜ್ಞಾನದಿಂದ ಎದುರಿಸುತ್ತಾರೆ. ಪಯನೀಯರ ಸೇವೆಯನ್ನು ತಮ್ಮ ಜೀವಿತದ ಕಸಬಾಗಿ ಮಾಡಿರುತ್ತಾರೆ. ಯೆಹೋವನ ವಾಗ್ದಾನಗಳಲ್ಲಿ ಭರವಸವಿಟ್ಟವರಾಗಿ ಅವರು ತಮ್ಮ ಅಗತ್ಯತೆಗಳನ್ನು ಪೂರೈಸಲು ಆತನ ಕಡೆಗೇ ನೋಡುವವರಾಗಿದ್ದಾರೆ.—ಕೀರ್ತ. 62:2; 68:19; 1 ತಿಮೋ. 5:8; 6:9, 10.
ವೈಯಕ್ತಿಕ ಪರಿಸ್ಥಿತಿಗಳನ್ನು ಪುನರ್ವಿಮರ್ಶಿಸಿರಿ
3 ನವಂಬರ 15, 1982 ರ ವಾಚ್ಟವರ್ ನಮ್ಮಲ್ಲಿ ಪ್ರತಿಯೊಬ್ಬನನ್ನು ಹೀಗೆ ಕೇಳುವಂತೆ ಉತ್ತೇಜಿಸಿತ್ತು: ‘ನಾನು ಪಯನೀಯರನಲ್ಲವೆಂಬ ನಿಜತ್ವವನ್ನು ಯೆಹೋವನ ಮುಂದೆ ನಿಜವಾಗಿ ಸಮರ್ಥಿಸಬಲ್ಲೆನೋ?’ ಒಂದುವೇಳೆ ಆಗ ಅನೇಕರು ಪಯನೀಯರಾಗುವ ಸ್ಥಾನದಲ್ಲಿರದೇ ಇದ್ದಿರಬಹುದು. ಆದರೆ ಅವರು ನಿರಾಶೆಗೊಳ್ಳಲ್ಲಿಲ್ಲ. ಯಾಕೆಂದರೆ ಯಾವುದೇ ಮೊತ್ತದ ಪೂರ್ಣಾತ್ಮದ ಸೇವೆಯು ಯೆಹೋವನಿಗೆ ಯಾವಾಗಲೂ ಸ್ವೀಕರಣೀಯವೆಂದು ಅವರಿಗೆ ತಿಳಿದದೆ. (ಮೀಕ 6:8; 2 ಕೊರಿ. 8:12) ತದನಂತರ, ವೈಯಕ್ತಿಕ ಪರಿಸ್ಥಿತಿಗಳು ಬದಲಾದಷ್ಟಕ್ಕೆ, ಆ 1982 ರ ವಾಚ್ಟವರ್ ಲೇಖನದ ಪ್ರಾರ್ಥನಾಪೂರ್ವಕ ಮನನವು, ಇತ್ತೀಚೆಗೆ ಕ್ರಮದ ಪಯನೀಯರ ಸೇವೆಗಿಳಿದಿರುವ ಸಾವಿರಾರು ಜನರಲ್ಲಿ ತಾವೂ ಸೇರುವಂತೆ ಕೆಲವರಿಗೆ ಶಕ್ಯವಾಗಿ ಮಾಡಿದೆ.
4 ಮೇಲಿನ ಹೇಳಿಕೆಯು 1982 ರಲ್ಲಿ ಮುದ್ರಿಸಲ್ಪಟ್ಟಾಗ ಪಯನೀಯರ ಸೇವೆಗಿಳಿಯಲು ವೈಯಕ್ತಿಕ ಪರಿಸ್ಥಿತಿಗಳು ಒಂದುವೇಳೆ ನಿಮಗೆ ತಡೆಯಾಗಿದ್ದರೆ, ಈಗ ಅವು ಬದಲಾಗಿವೆಯೋ? ಯುನೊಯಿಟೆಡ್ ಸ್ಟೇಟ್ಸ್ನಲ್ಲಿ ಕಳೆದ ವರ್ಷದಲ್ಲಿ 17,000 ಪಯನೀಯರ ಅರ್ಜಿಗಳು ನಿರ್ವಹಿಸಲ್ಪಟ್ಟವು. ಆ ಅರ್ಜಿದಾರರಲ್ಲಿ ಹೆಚ್ಚಿನವರು ಹೆಚ್ಚು ಬೇಗನೇ ಪಯನೀಯರಾಗಲು ಬಯಸಿದ್ದರೂ, ಪರಿಸ್ಥಿತಿಗಳು ಬದಲಾಗುವ ತನಕ ಅವರಿಗೆ ಕಾಯಬೇಕಾಯಿತು.
5 ಕೆಲವು ಸಂದರ್ಭಗಳಲ್ಲಿ ಆವಶ್ಯಕ ಬದಲಾವಣೆಯು ಬೇಕಾಗಿರುವುದು ಪಯನೀಯರ ಸೇವೆಯ ಕುರಿತಾದ ಒಬ್ಬನ ಮಾನಸಿಕ ಭಾವದಲ್ಲೇ. ಅಥವಾ ಸೇವೆಗಾಗಿ ಕೇವಲ ಒಂದು ಒಳ್ಳೇ ಕಾಲತಖ್ತೆಯನ್ನು ಮಾಡುವುದೇ. ಕೆಲವು ಸಾರಿ ವೈಯಕ್ತಿಕ ಜವಾಬ್ದಾರಿಕೆ ಮತ್ತು ಹಂಗುಗಳಲ್ಲಿ ಬದಲಾವಣೆಯು ಪಯನೀಯರ ಸೇವೆಗೆ ದಾರಿಮಾಡುತ್ತದೆ. ಆದ್ದರಿಂದ ನಮ್ಮ ಮತ್ತು ನಮ್ಮ ಪರಿಸ್ಥಿತಿಗಳನ್ನು ಪ್ರಾಮಾಣಿಕತೆಯಿಂದ ತೂಗಿನೋಡಿ ಅದನ್ನು ಯೆಹೋವನಿಗೆ ಕ್ರಮದ ಪ್ರಾರ್ಥನಾ ವಿಷಯವನ್ನಾಗಿ ಮಾಡುವುದು ಒಳ್ಳೆಯದು. ಸಾವಿರಾರು ಮಂದಿ ಹಾಗೆ ಮಾಡಿರುತ್ತಾರೆ ಮತ್ತು ಈಗ ಪಯನೀಯರ ಸೇವೆಯ ಆಶೀರ್ವಾದಗಳಲ್ಲಿ ಆನಂದಿಸುತ್ತಿದ್ದಾರೆ.
6 ನಿಮ್ಮ ಪರಿಸ್ಥಿತಿಗಳ ಪ್ರಾಮಾಣಿಕ ಪರೀಕ್ಷೆಯು ನಿಮಗೆ ಬೇಗನೇ ಪಯನೀಯರಾಗ ಸಾಧ್ಯವಿಲ್ಲವೆಂದು ಸೂಚಿಸುವುದಾದರೆ, ಸಹಾಯಕ ಪಯನೀಯರ ಸೇವೆಯನ್ನು ಈಗಾರಂಭಿಸಿ ಅದನ್ನೇಕೆ ಮುಂದುವರಿಸುತ್ತಾ ಇರಬಾರದು? ಕೆಲವೇ ತಿಂಗಳುಗಳೊಳಗೆ ಪುನರ್ಭೇಟಿಗಳೂ ಬೈಬಲಭ್ಯಾಸಗಳೂ ನಿಮಗೆ ದೊರೆಯಬಹುದು. ಇದು ನಿಮ್ಮನ್ನು ಕ್ರಮದ ಪಯನೀಯರ ಸೇವೆಗೆ ಸರಾಗವಾಗಿ ಇಳಿಯುವಂತೆ ಸಹಾಯ ಮಾಡಬಹುದು, ಪ್ರಾಯಶ: ಹೊಸ ಸೇವಾ ವರ್ಷದ ಆರಂಭಕ್ಕೆ ಮುಂಚೆಯೇ.
7 ಈಗಿನ ದುಷ್ಟ ವ್ಯವಸ್ಥೆಯ ಕಡೇ ದಿನಗಳಲ್ಲಿ ಯೆಹೋವನು ಮಹತ್ತಾದ ಕಾರ್ಯಗಳನ್ನು ಪೂರೈಸುತ್ತಿದ್ದಾನೆ. ಆತನ ಸಾಮೀಪ್ಯತೆಗೆ ಬಂದು “ದಿನವಿಡೀ” ಆತನ ನಾಮವನ್ನು ಸ್ತುತಿಸಲು ನಮಗೆಲ್ಲರಿಗೂ ಇರುವ ಸಮಯವಿದೇ ಆಗಿದೆ. (ಕೀರ್ತ. 145:2; ಯಾಕೋ. 4:8) ನಿಮ್ಮ ಪರಿಸ್ಥಿತಿಗಳು ಹಾಗೆ ಮಾಡುವಂತೆ ಅನುಮತಿಸುವುದಾದರೆ ಮತ್ತು ನಿಮಗೆ ಯೋಗ್ಯತೆ ಇದ್ದರೆ, ಪಯನೀಯರ ಸೇವೆಯು ಯೆಹೋವನಲ್ಲಿ ನಿಮ್ಮ ಭರವಸದ ಇನ್ನೊಂದು ರುಜುವಾತಾಗುವಂತೆ ತೋರಿಸಿಕೊಡಿರಿ.—ಕೀರ್ತ. 94:18.