ಸಮಸ್ತವನ್ನು ಸೃಷ್ಟಿಸಿದಾತನನ್ನು ಗೌರವಿಸಿರಿ
1 ಹತ್ತೊಂಭತ್ತನೇ ಶತಕದಲ್ಲಿ ಮಾನವರನ್ನು ಮಂಕುಮಾಡಲು ಸೈತಾನನು ಒಂದು ಮೋಸಕರವಾದ—ವಿಕಾಸವಾದ ತತ್ವವೆಂಬ ಒಳಸಂಚನ್ನು ಹೂಡಿದನು. (2 ಕೊರಿ. 4:4) ಇದು ಬೈಬಲಿನ ಸೃಷ್ಟಿಕ್ರಮದ ಮತ್ತು ಪಾಪದಲ್ಲಿ ಮಾನವನ ಪತನದ ಕಂಠೋಕ್ತ ಅಲ್ಲಗಳೆಯುವಿಕೆಯಾಗಿದೆ. ಅದು ಯೇಸುವಿನ ವಿಮೋಚನಾ ಯಜ್ಞವನ್ನು ಮತ್ತು ಬೈಬಲಿನ ಬೋಧನೆಗಳಾದ ದೇವರಾಜ್ಯ ಮತ್ತು ನಿತ್ಯಜೀವವನ್ನು ಅರ್ಥವಿಲದ್ಲಾಗಿ ಮಾಡುವುದು. ಅದಲ್ಲದೆ ವಿಕಾಸವಾದವು ಹಿಂಸಾಚಾರ ಮತ್ತು ಯುದ್ಧಗಳಿಗೆ, ನೈತಿಕ ದುರಾಚಾರ ಮತ್ತು ಎಲ್ಲಾ ತರದ ನಿಯಮರಾಹಿತ್ಯತೆಗೆ ದಾರಿಮಾಡುತ್ತದೆ. ಈ ಮಾರಕ ಬೋಧನೆಯ ಅಪಾಯಗಳ ಕುರಿತು ಮಾನವಕುಲವನ್ನು ಎಚ್ಚರಿಸುವವರು ಯಾರು?
2 ಅಕ್ಟೋಬರ ತಿಂಗಳಲ್ಲಿ, ನಾವದನ್ನು ಮಾಡಲಿದ್ದೇವೆ ಯಾಕೆಂದರೆ ಅ ತಿಂಗಳಲ್ಲಿ ಯೆಹೋವನ ನಿರ್ಮಾಣಿಕತ್ವದ ಘೋಷಣೆಯಲ್ಲಿ ನಾವು ಕಾರ್ಯಮಗ್ನರಿರುವೆವು. ಮನೆಮನೆಯ ಸೇವೆಯಲ್ಲಿ, ಬೀದಿ ಸಾಕ್ಷಿಯಲ್ಲಿ, ನಮ್ಮ ಐಹಿಕ ಉದ್ಯೋಗದ ವಿರಾಮದ ವೇಳೆ ಮತ್ತು ಶಾಲೆಯಲ್ಲಿ, ಲೈಫ್— ಹೌ ಡಿಡ್ ಇಟ್ ಗೆಟ್ ಹಿಯರ್ ಬೈ ಎವಲ್ಯೂಶನ್ ಆರ್ ಬೈ ಕ್ರಿಯೇಶನ್? ಪುಸ್ತಕವನ್ನು ನೀಡಲಿರುವೆವು. ವಿಕಾಸವಾದದ ಬೋಧನೆಯು ಮಾನವಕುಲದ ನಿರ್ಮಾಣಿಕನನ್ನು ಹೇಗೆ ಅಗೌರವಿಸುತ್ತದೆ ಎಂಬದನ್ನು ಎಲ್ಲರೂ ತಿಳಿಯುವಂತೆ ಮಾಡಲು ನಾವು ಬಯಸುತ್ತೇವೆ.
ಪರಿಣಾಮಕಾರಿ ಸಾಕ್ಷಿ ಕೊಡಿರಿ
3 ಅನೌಪಚಾರಿಕವಾಗಿ ಅಥವಾ ಮನೆ ಮನೆಯ ಸೇವೆ ಮಾಡುವಾಗ ಸಂಭಾಷಣೆಯನ್ನು, ವಿಕಾಸವಾದದ ವಿಷಯದಲ್ಲಿ ವಾರ್ತಾಮಾಧ್ಯಮದ ಮೂಲಕ ನೀಡಲ್ಪಲ್ಪಟ್ಟ ಕೆಲವರ ದೃಢಾಬಿಪ್ರಾಯಗಳಿಗೆ ನಿರ್ದೇಶಿಸುವ ಮೂಲಕ ನೀವು ಆರಂಭಿಸಬಹುದು. ಸಾರ್ವಜನಿಕ ಶಾಲೆಗಳಲ್ಲಿ ವಿಕಾಸ ವಾದವನ್ನು ಕಲಿಸಬೇಕೋ ಬಾರದೋ ಎಂಬ ಪ್ರಶ್ನೆಯ ಮೇಲೆ ಹಲವಾರು ಹೇಳಿಕೆಗಳು ನೀಡಲ್ಪಟ್ಟಿವೆ. ವ್ಯಕ್ತಿಯು ಸಂಬಂಧಿತ ವಾದಗಳನ್ನು ಬಹುವಾಗಿ ಓದಿರಬಹುದು ಯಾ ಕೇಳಿರಬಹುದು, ಉಗ್ರ ತರ್ಕಗಳನ್ನು ಮಾಡಿರಲೂಬಹುದು. ಆದರೂ ವಿಷಯದ ಮೇಲೆ ನೇರ ಪ್ರಭಾವ ಹಾಕುವ ಬೈಬಲಿನ ಪ್ರಾಮಾಣಿಕ ಹೇಳಿಕೆಯನ್ನು ಅವನು ಅಭಿರುಚಿಯುಳ್ಳದಾಗಿ ಕಾಣುವನೆಂಬದಕ್ಕೆ ಸಂದೇಹವಿಲ್ಲ. ಅನಂತರ ಇಬ್ರಿಯ 3:4 ರಲ್ಲಿ ಹೇಳಿರುವುದಕ್ಕೆ ನಿರ್ದೇಶಿಸಿರಿ. ವಚನವನ್ನೋದಿ ಅದರ ಮೇಲೆ ಸಂಕ್ಷಿಪ್ತ ಹೇಳಿಕೆ ನೀಡಿರಿ.
4 ವ್ಯಕ್ತಿಯು ತುಸು ಧಾರ್ಮಿಕ ಪ್ರವೃತ್ತಿಯುಳ್ಳವನಾಗಿ ಕಂಡರೆ, ಧರ್ಮದವರು ಹಾಗೂ ವಿಕಾಸವಾದವನ್ನು ನಂಬುವವರು ವ್ಯಕ್ತಿಸಂಬಂಧವಿಲ್ಲದ “ನಿಸರ್ಗ”ಕ್ಕೆ ಅಥವಾ ವ್ಯಕ್ತೀಕರಿಸಿದ “ನಿಸರ್ಗಮಾತೆ”ಗೆ, ನಮ್ಮ ಸುತ್ತಲಿರುವ ಆಶ್ಚರ್ಯಕರವಾದ ಸೃಷ್ಟಿಯೆಲ್ಲವನ್ನು ನಿರ್ಮಿಸಿದ ಶಕ್ತಿ ಎಂಬ ಕೀರ್ತಿಯನ್ನು ಕೊಡುವ ವಿಷಯವನ್ನು ತಿಳಿಸಿರಿ. ಅದರೆ ಈ ವಿಸ್ಮಯಕರ ವಿಶ್ವದ ಮಹಾ ದಾತನ ಮತ್ತು ನಿರ್ಮಾಣಕರ್ತನ ಪರಿಚಯವನ್ನು ಬೈಬಲು ಮಾಡದೆ ಬಿಟ್ಟಿಲ್ಲ. ಪ್ರಕಟನೆ 4:11 ರ ಕಡೆಗೆ ಗಮನವನ್ನು ಸೆಳೆಯಬಹುದು. ವಚನವನ್ನು ಓದಿಯಾದ ಮೇಲೆ ವ್ಯಕ್ತಿಯು ವಿಷಯದ ಕುರಿತಾದ ತನ್ನ ಅಭಿಪ್ರಾಯವನ್ನು ನೀಡಬಲ್ಲನು. ಯುಕ್ತವಾದಲ್ಲಿ ನೀವು ಕ್ರಿಯೇಶನ್ ಪುಸ್ತಕದ ಒಂದೆರಡು ವಿಶಿಷ್ಟ ವಿಷಯಗಳನ್ನು ಜೋಡಿಸಿ, ಅವನದನ್ನು ಓದುವಂತೆ ಉತ್ತೇಜಿಸಬಹುದು.
ಶಾಲೆಯಲ್ಲಿ
5 ಯೆಹೋವನ ಯುವ ಸೇವಕರಾದ ನೀವೆಲ್ಲರೂ ಕ್ರಿಯೇಶನ್ ಪುಸ್ತಕವನ್ನು ಪರಾಮರ್ಶಿಸ ಬಯಸ ಬಹುದು ಮತ್ತು ನಿಮ್ಮ ಸಹಪಾಠಿಗಳನ್ನು ಹಾಗೂ ಅಧ್ಯಾಪಕರನ್ನು ಅದರಲ್ಲಿ ಆಸಕ್ತಿ ತೋರಿಸುವಂತೆ ನಡಿಸುವ ವಿಧಾನಗಳನ್ನು ಹುಡುಕಬಹುದು. ಪುಸ್ತಕವನ್ನು ಅವರ ಡೆಸ್ಕಿನ ಮೇಲೆ ಬರೇ ಇಟ್ಟು ಹೋಗುವ ಮೂಲಕ, ಚರ್ಚೆಗಳು ಉಂಟಾಗಬಹುದು. ಇತರರು ಸೃಷ್ಟಿಯ ನಿರ್ಮಿತಿಯ ಕುರಿತು ಅಧ್ಯಾಪಕರನ್ನು ಮತ್ತು ಶಾಲಾ ಅಧಿಕಾರಿಗಳನ್ನು ಗೋಚರಿಸಿದ್ದಾರೆ ಮತ್ತು ಈ ರೀತಿಯಲ್ಲಿ ಅನೇಕ ಪುಸ್ತಕಗಳನ್ನು ಹಂಚಲು ಶಕ್ತರಾಗಿದ್ದಾರೆ.
6 ಪ್ರತಿಯೊಬ್ಬನು ಯೆಹೋವನನ್ನು ಸೇವಿಸುವಂಥ ಒಂದು ಲೋಕದಲ್ಲಿ ಜೀವಿಸುವ ಪ್ರತೀಕ್ಷೆಯಲ್ಲಿ ನಾವೆಲ್ಲರೂ ಉಲ್ಲಾಸಿಸುತ್ತೇವೆ. ಪ್ರಕಟನೆಯಲ್ಲಿ ಯೋಹಾನನು, ದಿವ್ಯ ಆತ್ಮ ಜೀವಿಗಳು ಯೆಹೋವನ ಮುಂದೆ ಅಡ್ಡ ಬಿದ್ದು, “ಯೆಹೋವನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಪ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುವದನ್ನು ಕಂಡನು. (ಪ್ರಕಟನೆ 4:11) ಆ ಮಾತುಗಳನ್ನು ನಾವು ಅಕ್ಟೋಬರದ ನಮ್ಮ ಶುಶ್ರೂಷೆಯಲ್ಲಿ ಪ್ರತಿಧ್ವನಿಸುವಂತಾಗಲಿ !