ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಅಕ್ಟೋಬರ 8 ರ ವಾರ
ಸಂಗೀತ 154 (30)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಕ್ಷೇತ್ರಕ್ಕಾಗಿ ನೀವು ಸನ್ನದ್ಧರಾಗಿದ್ದೀರೋ? ಕ್ಷೇತ್ರಸೇವೆಯ ಬ್ಯಾಗಿನಲ್ಲಿ ಆವಶ್ಯಕಗಳಾದ ಬೈಬಲು, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್, ಗುಡ್ ನ್ಯೂಸ್ ಫಾರ್ ಆಲ್ ನೇಶ ಬುಕೆಟ್ಲ್, ಟ್ರೇಕ್ಟ್ಸ್, ಪೆನ್ಸಿಲ್, ಸದ್ಯದ ನೀಡುವಿಕೆ ಮತ್ತು ಪತ್ರಿಕೆಗಳು, ಮನೆಮನೆಯ ರೆಕಾರ್ಡ್ ಮುಂತಾದವುಗಳನ್ನು ತಿಳಿಸಿರಿ. ಮಾನಸಿಕರಾಗಿ ಸನ್ನದ್ಧರಾಗಿರಲು, ಪುಸ್ತಕದಲ್ಲಿ ಎತ್ತಿಹೇಳಬೇಕಾದ ವಿಷಯಗಳ ಪರಾಮರ್ಶೆಯು ಅಗತ್ಯ. ಹಾಗೂ, ಪವಿತ್ರಾತ್ಮಕ್ಕಾಗಿ ಮತ್ತು ಕುರಿಸದೃಶರನ್ನು ಹುಡುಕಲು ಸಹಾಯಕ್ಕಾಗಿ ಪ್ರಾರ್ಥನೆ ಮಾಡಿರಿ.—ಫಿಲಿ. 4:6, 7.
20 ನಿ: “ಸಮಸ್ತವನ್ನು ಸೃಷ್ಟಿಸಿದಾತನನ್ನು ಗೌರವಿಸಿರಿ.” ಪ್ರಶ್ನೋತ್ತರ ಚರ್ಚೆ. ಪಾರಾ 3 ಮತ್ತು 4 ನ್ನು ಚರ್ಚಿಸುವಾಗ ಪರಿಣಾಮಕಾರಿ ಪ್ರಚಾರಕನು, ಸಂಭಾಷಣೆಯ ವಿಷಯವನ್ನು ದೃಶ್ಯವಾಗಿ ಮಾಡಿ ಪುಸ್ತಕವನ್ನು ನೀಡಲಿ. ಪುನಃಸಂದರ್ಶನೆಗೆ ವಿಶಿಷ್ಟ ಏರ್ಪಾಡು ಮಾಡುವುದನ್ನು ತೋರಿಸಿರಿ.
15 ನಿ: ಕೆಲವು ಆದರ್ಶ ಮಾದರಿಯ ಯುವಕರೊಂದಿಗೆ ಹಿರಿಯನು ಮಾತಾಡುತ್ತಾನೆ. ಯಂಗ್ ಪೀಪಲ್ ಆಸ್ಕ್ ಪುಸ್ತಕದ 17ನೇ ಅಧ್ಯಾಯವಾದ, “ಶುಡ್ ಐ ಕ್ವಿಟ್ಟ್ ಸ್ಕೂಲ್”ನ ಮುಖ್ಯ ವಿಷಯಗಳನ್ನು ಚರ್ಚಿಸಿರಿ. ದೇವರ ಸಂಸ್ಥೆಯೊಂದಿಗೆ ಮತ್ತು ರಾಜ್ಯಾಭಿವೃದ್ಧಿಯ ಬೆನ್ನಟ್ಟುವಿಕೆಗಾಗಿ ಅವರ ಭವಿಷ್ಯವನ್ನು ಕಟ್ಟಲು ವ್ಯಾವಹಾರ್ಯವೂ ಉಪಯುಕ್ತವೂ ಆದ ಕಲೆಗಳನ್ನು ಆರಿಸಿಕೊಳ್ಳುವಂತೆ ಹೆತ್ತವರು ತಮ್ಮ ಮಕ್ಕಳನ್ನು ಮಾರ್ಗದರ್ಶಿಸುವ ಅಗತ್ಯವನ್ನು ಒತ್ತಿಹೇಳಿ.
ಸಂಗೀತ 225 (117) ಮತ್ತು ಸಮಾಪ್ತಿ ಪ್ರಾರ್ಥನೆ.
ಅಕ್ಟೋಬರ 15 ರ ವಾರ
ಸಂಗೀತ 71 (92)
5 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆ. ಕ್ಷೇತ್ರ ಸೇವಾ ಏರ್ಪಾಡನ್ನು ನೆನಪಿಸಿರಿ, ಸಂಜಾ ಸಾಕ್ಷಿಕಾರ್ಯಕ್ಕೆ ಬೆಂಬಲವನ್ನು ಉತ್ತೇಜಿಸಿರಿ.
15 ನಿ: “ಸುವಾರ್ತೆಯನ್ನು ನೀಡುವುದು—ಪತ್ರಿಕೆಗಳೊಂದಿಗೆ.” ಪ್ರಶ್ನೋತ್ತರ ಚರ್ಚೆ. ಪಾರಾ 8 ನ್ನು ಚರ್ಚಿಸುವಲ್ಲಿ, ನಿಜಾಸಕ್ತಿಯನ್ನು ತೋರಿಸುವ ವ್ಯಕ್ತಿಯೊಂದಿಗೆ ಪತ್ರಿಕಾ ಮಾರ್ಗವನ್ನು ಸ್ಥಾಪಿಸುವ ವಿಧವನ್ನು ದೃಶ್ಯಮಾಡಿರಿ. ಸ್ಥಳೀಕ ಆಸಕ್ತಿಯ ವಿಷಯವನ್ನು ಪತ್ರಿಕೆಯಿಂದ ಎತ್ತಿಹೇಳಿರಿ.
15 ನಿ: “ಕೂಟಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಮಕ್ಕಳಿಗೆ ನೆರವಾಗಿರಿ.” ಲೇಖನದ ಪ್ರಶ್ನೋತ್ತರ ಚರ್ಚೆ. ಮಕ್ಕಳನ್ನು ಕೂಟಗಳಿಗೆ ತರುವ ಮತ್ತು ಅವರೊಂದಿಗೆ ಅಭ್ಯಾಸಮಾಡುವ ಹಾಗೂ ಕೇತ್ರಸೇವೆ ಮಾಡುವ ಮೂಲ್ಯತೆಯನ್ನು ತೋರಿಸಿರಿ.
10 ನಿ: “ಪ್ರಾಯಸ್ಥರನ್ನು ನಾವು ಗಣ್ಯಮಾಡುತ್ತೇವೆ.” ಫೆಬ್ರವರಿ 1, 1986 ರ ವಾಚ್ಟವರ್ ಪುಟ 28-29 ಆಧರಿತ ಭಾಷಣ, ಹಿರಿಯನಿಂದ. ಸ್ಥಳೀಕ ಅನ್ವಯವನ್ನು ಮಾಡಿರಿ. ಅಂಥವರೊಂದಿಗೆ ಕ್ಷೇತ್ರದಲ್ಲಿ, ಅವರ ನಿಧಾನ ಗತಿಗೆ ಹೊಂದಿಸಿಕೊಳ್ಳುವುದು, ಶಾಪಿಂಗ್, ಡಾಕ್ಟರ್ ಕಾಲನಿಶ್ಚಯ ಮುಂತಾದವುಗಳಲ್ಲಿ ನೆರವಾಗುವುದು, ಅವರ ಅನುಭವ ಮತ್ತು ವಿವೇಕದಿಂದ ಪ್ರಯೋಜನವನ್ನು ಪಡೆಯುವದು ಮುಂತಾದ ವಿಶಿಷ್ಟ ಸಂಗತಿಗಳನ್ನು ತಿಳಿಸಿರಿ.—ಯೋಬ 15:10; ಜ್ಞಾನೋ. 16:31; 1 ತಿಮೊ. 5:1, 2. (ದೇಶಭಾಷೆ: “ವೃದ್ಧರಿಗೂ ನಿರ್ಬಲರಿಗೂ ನೆರವಾಗಿರಿ.” (ರಾ.ಸೇ.12⁄88.)
ಸಂಗೀತ 116 (108) ಮತ್ತು ಸಮಾಪ್ತಿ ಪ್ರಾರ್ಥನೆ.
ಅಕ್ಟೋಬರ 22ರ ವಾರ
ಸಂಗೀತ 160 (88)
8 ನಿ: ಸ್ಥಳೀಕ ತಿಳಿಸುವಿಕೆಗಳು. ಎಕೌಂಟ್ಸ್ ರಿಪೋರ್ಟ್ ಮತ್ತು ದಾನದ ಅಂಗೀಕಾರಗಳು. ಲೋಕವ್ಯಾಪಕ ಕಾರ್ಯಕ್ಕಾಗಿ ಸಭೆಯು ಕೊಟ್ಟ ಬೆಂಬಲವನ್ನು ಪ್ರಶಂಸಿಸಿರಿ.—ಜ್ಞಾನೋ. 3:9.
20 ನಿ: “ಬೈಬಲಧ್ಯಯನ ಆರಂಭಿಸಲು ಎಚ್ಚರವಿರ್ರಿ.” ಪ್ರಶ್ನೋತ್ತರ ಚರ್ಚೆ. ಸಭೆಯು ನಡಿಸುತ್ತಿರುವ ಅಧ್ಯಯನಗಳ ಸಂಖ್ಯೆಯನ್ನು ತಿಳಿಸಿರಿ. 5ನೇ ಪಾರಾದಲ್ಲಿ, ಮೊದಲ ಸಂದರ್ಶನೆಯಲ್ಲಿ ಹೇಗೆ ಅಭ್ಯಾಸ ಪ್ರಾರಂಭಿಸಬಹುದೆಂಬದನ್ನು ತೋರಿಸಿರಿ. ಮನೆಯವನು ವಿಕಾಸವಾದದಲ್ಲಿ ಸ್ವಲ್ಪವೂ ಆಸಕ್ತಿ ತೋರಿಸದಿದ್ದರೂ, ತಕ್ಕದಾದ ಟ್ರೇಕ್ಟನ್ನು ಸಂತೋಷದಿಂದ ಸ್ವೀಕರಿಸುವ ದೃಶ್ಯದಿಂದ ಆರಂಭಿಸಿರಿ. ಪ್ರಚಾರಕನು ಟ್ರೇಕ್ಟ್ನಿಂದ ಒಂದೆರಡು ಪಾರಾಗಳನ್ನು ಚರ್ಚಿಸಿ, ಪುನ: ಬರಲು ವಿಶಿಷ್ಟ ಕಾಲನಿಶ್ಚಯ ಮಾಡುತ್ತಾನೆ. ಅನಂತರ, ನೇರವಾದ ವಿಧಾನವನ್ನು, ರೀಸನಿಂಗ್ ಪುಸ್ತಕದ 12 ನೇ ಪುಟದ “ಹೋಮ್ ಬೈಬಲ್ ಸಡ್ಟಿ” ಕೆಳಗಿನ ಪೀಠಿಕೆಗಳನ್ನುಪಯೋಗಿಸಿ ಮಾಡುತ್ತಾನೆ. ಸಂಜೆಯ ಸಾಕ್ಷೀ ಕಾರ್ಯವು ಇಡೀ ಕುಟುಂಬದೊಂದಿಗೆ ಅಧ್ಯಯನಗಳನ್ನು ಮಾಡಲು ಹೆಚ್ಚು ಸಂದರ್ಭಗಳನ್ನು ಕೊಡುತ್ತದೆ ಯಾಕಂದರೆ ಗಂಡಂದಿರು ಆಗ ಸಾಮಾನ್ಯವಾಗಿ ಮನೆಯಲ್ಲಿರುತ್ತಾರೆ.
17 ನಿ: “ಕಲಿಸುವಾಗ, ಹೃದಯವನ್ನು ತಲುಪಿರಿ.” ಅಗೋಸ್ತ್ 1, 1984 ರ ವಾಚ್ಟವರ್ ಪುಟ 13-17 ರ ನಾಲ್ಕು ಮುಖ್ಯ ವಿಷಯಗಳನ್ನು ಚರ್ಚಿಸುವ ಭಾಷಣ. ಪ್ರಗತಿಪರ ಬೈಬಲಧ್ಯಯನ ನಡಿಸುವ ಅಗತ್ಯವನ್ನು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡಿರಿ. ಫಲಕೊಡದ ಅಭ್ಯಾಸಗಳನ್ನು ಯಾವಾಗ ನಿಲ್ಲಿಸುವದೆಂಬದರ ಮೇಲೂ ಹೇಳಿಕೆ ಕೊಡಿರಿ. (ದೇಶಭಾಷೆ: ಕಾ.ಬು.89⁄2, “ಯೇಸುವಿನ ಹೆಜ್ಜೇಜಾಡಿನಲ್ಲಿ ನಡೆಯುವ ಜನರು.”)
ಸಂಗೀತ 121 (95) ಮತ್ತು ಸಮಾಪ್ತಿ ಪ್ರಾರ್ಥನೆ
ಅಕ್ಟೋಬರ 29ರ ವಾರ
ಸಂಗೀತ 69 (75)
10 ನಿ: ಸ್ಥಳೀಕ ತಿಳಿಸುವಿಕೆಗಳು. ಶನಿವಾರದ ಪತ್ರಿಕಾ ಸೇವೆಯನ್ನು ಪ್ರೋತ್ಸಾಹಿಸಿರಿ. ಎರಡು ಚಿಕ್ಕ ದೃಶ್ಯಗಳು, ಒಂದು, ಆಸಕ್ತಿ ತೋರಿಸಿದಲ್ಲಿ, ಇನ್ನೊಂದು, ಪತ್ರಿಕೆಯಲ್ಲಿ ಯಾವ ಆಸಕ್ತಿಯೂ ಇಲ್ಲ ಆದರೆ, ಟ್ರೇಕ್ಟ್ ಓದಲು ಒಪ್ಪಿಗೆ. ಆಸಕ್ತಿ ತೋರಿಸಿದಲ್ಲಿ ಪ್ರಚಾರಕನು ವಾಚ್ಟವರ್ ನ 2 ನೇ ಪುಟ ಮತ್ತು ಅವೇಕ್!ನ 4ನೇ ಪುಟದಲ್ಲಿರುವ ಜಗವ್ಯಾಪ್ತ ಬೈಬಲ್ ಶಿಕ್ಷಣದ ಕುರಿತಾದ ಹೇಳಿಕೆಯನ್ನು ಮನೆಯವನಿಗೆ ತೋರಿಸಬಹುದು. ಅಥವಾ, ಸ್ವಯಂ ಪ್ರೇರಿತ ದಾನಗಳಿಂದ ಬೆಂಬಲಿಸಲ್ಪಡುವ ಒಂದು ಜಗವ್ಯಾಪ್ತ ಬೈಬಲ್ ಶಿಕ್ಷಣ ಕಾರ್ಯದ ಒಂದು ಭಾಗವನ್ನು ತಾನು ಮಾಡುತ್ತಿದ್ದೇನೆಂದು ಹೇಳಬಹುದು. ಸಂಭಾಷಣೆಯು ಒಂದು ಉಚಿತ ಮನೆ ಬೈಬಲಧ್ಯಯನಕ್ಕೆ ದಾರಿ ತೆರೆಯಬಹುದು.
20 ನಿ: “ನಮ್ಮ ಪಯನೀಯರರನ್ನು ಗಣ್ಯಮಾಡುವುದು.” ಸೇವಾ ಮೇಲ್ವಿಚಾರಕನು ಸಮಾಚಾರವನ್ನು ಇಬ್ಬರು ಯಾ ಮೂವರು ಪಯನೀಯರರೊಂದಿಗೆ ಚರ್ಚೆ ಮಾಡುತ್ತಾನೆ. ಅವರು ಇತರರನ್ನು ಹೇಗೆ ಉತ್ತೇಜಿಸಿದ್ದಾರೆ ಮತ್ತು ಸ್ಥಳೀಕವಾಗಿ ಅವರಿಗೆ ವಿಶೇಷ ಪ್ರೋತ್ಸಾಹನೆ ಕೊಟ್ಟದ್ದು ಯಾವುದು ಎಂಬದನ್ನು ಅವರಿಂದ ಹೊರತೆಗೆಯಿರಿ. ಪಯನೀಯರರನ್ನು ಬೆಂಬಲಿಸಿದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.
15 ನಿ: ಸ್ಥಳೀಕ ಅಗತ್ಯತೆಗಳು. ಅಥವಾ, ಅಧ್ಯಕ್ಷ ಮೇಲ್ವಿಚಾರಕನು ಜನವರಿ 1, 1983 ವಾಚ್ಟವರ್, ಪುಟ 30-1 ರಲ್ಲಿ “ವಾಚಕರಿಂದ ಪ್ರಶ್ನೆಗಳು” ಕೆಳಗಿರುವ “ಒಬ್ಬಬಹಿಷ್ಕೃತ ಸಂಬಂಧಿಕನಿರುವ ನಮ್ಮ ಸಭೆಯ ಯಾರಿಗಾದರೂ ನಾವು ಹೇಗೆ ನೆರವಾಗಬಹುದು?” ಲೇಖನವನ್ನು ಚರ್ಚಿಸುತ್ತಾನೆ. (ದೇಶೀಯ ಭಾಷೆ: ಕಾ.ಬು.89⁄1, “ಆತನ ಹೆಜ್ಜೇಜಾಡಲ್ಲಿ ನಡೆಯುವುದರ ಪಂಥಾಹ್ವಾನ.”)
ಸಂಗೀತ 62 (34) ಮತ್ತು ಸಮಾಪ್ತಿ ಪ್ರಾರ್ಥನೆ.