ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ದಶಂಬರ 10 ರ ವಾರ
ಸಂಗೀತ 180 (62)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಈ ವಾರದಲ್ಲಿ ನೀಡಬಲ್ಲ ಪ್ರಸ್ತುತ ಪತ್ರಿಕೆಗಳಿಂದ ವಿಶಿಷ್ಟ ಲೇಖನಗಳನ್ನು ಎತ್ತಿಹೇಳಿರಿ. ಮುಂದಿನ ವಾರ ಸೇವಾ ಕೂಟಕ್ಕೆ ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷೂರ್ ತರುವಂತೆ ಸಹೋದರರಿಗೆ ನೆನಪು ಮಾಡಿರಿ.
20 ನಿ: “ದೇವರ ವಾಕ್ಯವನ್ನು ಶಿಫಾರಸು ಮಾಡುವುದು.” ಪ್ರಶ್ನೋತ್ತರ ಚರ್ಚೆ. ಪಾರಾ 3 ಮತ್ತು 4 ನ್ನು ಚರ್ಚಿಸುವಾಗ ನುರಿತ ಪ್ರಚಾರಕನು, ಹೊಸ ಸಂಭಾಷಣೆಯ ವಿಷಯವನ್ನು ದೃಶ್ಯ ಮಾಡಲಿ.
15 ನಿ: ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್ನ ಮೂಲ್ಯತೆ. ಚರ್ಚೆ. ರೆಫರೆನ್ಸ್ ಬೈಬಲ್ನ ಒಳ್ಳೇ ಉಪಯೋಗ ಮಾಡಿರುವ ಒಬ್ಬಿಬ್ಬರು ಪ್ರಚಾರಕರೊಂದಿಗೆ ಹಿರಿಯನು ಅದರ ಮೂಲ್ಯತೆಯನ್ನು ಚರ್ಚಿಸುತ್ತಾನೆ. 5 ನೇ ಪುಟದಲ್ಲಿರುವ ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯ ಹೇಳಿಕೆಯನ್ನು ಗಮನಿಸಿರಿ. ಪಾದಟಿಪ್ಪಣಿಗಳು, ಕ್ರಾಸ್ ರೆಫರೆನ್ಸ್ಗಳು, ಎರಡು ಕನ್ಕಾರ್ಡೆನ್ಸ್, ಮತ್ತು ಪರಿಶಿಷ್ಟದ ಮೂಲ್ಯತೆಯನ್ನು ಎತ್ತಿಹೇಳಿರಿ. ವ್ಯಕ್ತಿಪರ ಅಧ್ಯಯನದಲ್ಲಿ ಮತ್ತು ಸಭಾ ಕೂಟಗಳಿಗೆ ತಯಾರಿಯಲ್ಲಿ ಈ ಪ್ರಕಾಶನವನ್ನು ಬಳಸುವ ಮೂಲ್ಯತೆಯನ್ನು ಒತ್ತಿಹೇಳಿರಿ.
ಸಂಗೀತ 46 (20) ಮತ್ತು ಸಮಾಪ್ತಿ ಪ್ರಾರ್ಥನೆ.
ದಶಂಬರ 17 ರ ವಾರ
ಸಂಗೀತ 6 (4)
8 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ಸೊಸೈಟಿಯ ಜಗವ್ಯಾಪ್ತ ಕಾರ್ಯಕ್ಕಾಗಿ ಕೊಡಲ್ಪಟ್ಟ ದಾನವನ್ನು ಸೊಸೈಟಿಯು ಅಂಗೀಕರಿಸಿ ಬರೆದ ಪತ್ರವನ್ನು ಓದಿರಿ. ಹಾಗೂ, ಸ್ಥಳೀಕ ಸಭೆಯ ಭೌತಿಕ ಬೆಂಬಲಕ್ಕಾಗಿ ಗಣ್ಯತೆ ವ್ಯಕ್ತಪಡಿಸಿರಿ. ದಶಂಬರ 25 ಕ್ಕಾಗಿ ವಿಶೇಷ ಸೇವಾ ಏರ್ಪಾಡುಗಳನ್ನು ತಿಳಿಸಿರಿ.
17 ನಿ: “ಬೈಬಲ್ ವಿದ್ಯಾರ್ಥಿಗಳನ್ನು ಯೆಹೋವನ ಸಂಸ್ಥೆಗೆ ನಡಿಸುವುದು.” ಪ್ರಶ್ನೋತ್ತರ ಚರ್ಚೆ. ಪಾರಾ 3 ನ್ನು ಆವರಿಸುವಾಗ ನುರಿತ ಪ್ರಚಾರಕನು, ವಿದ್ಯಾರ್ಥಿಯು ಸಭಾಕೂಟಗಳಿಗೆ ಹಾಜರಾಗುವಂತೆ ಹೇಗೆ ಪ್ರೋತ್ಸಾಹಿಸಬಹುದೆಂಬದನ್ನು, ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷೂರ್ ಪುಟ 14 ಮತ್ತು 15 ರಿಂದ ವಿಶಿಷ್ಟ ಸಮಾಚಾರವನ್ನುಪಯೋಗಿಸಿ, ದೃಶ್ಯಮಾಡಲಿ.
20 ನಿ: “ವಿಶೇಷ ಅಧಿವೇಶನಗಳು ಯೆಹೋವನನ್ನು ಗೌರವಿಸುತ್ತವೆ.” ಲೇಖನದ ಪ್ರಶ್ನೋತ್ತರ ಚರ್ಚೆ. ವಿಶೇಷ ಅಧಿವೇಶನಗಳಿಗಾಗಿ ಸೊಸೈಟಿಯ ಏರ್ಪಾಡಿನೊಂದಿಗೆ ಎಲ್ಲರೂ ಪೂರ್ಣವಾಗಿ ಸಹಕರಿಸುವ ಮಹತ್ವವನ್ನು ಒತ್ತಿಹೇಳಿರಿ.
ಸಂಗೀತ 36 (14) ಮತ್ತು ಸಮಾಪ್ತಿ ಪ್ರಾರ್ಥನೆ.
ದಶಂಬರ 24 ರ ವಾರ
ಸಂಗೀತ 101 (23)
5 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವ ಪ್ರಭುತ್ವ ವಾರ್ತೆ. ವಾರಾಂತ್ಯದ ಸೇವಾ ಚಟುವಟಿಕೆಯನ್ನು ಬೆಂಬಲಿಸುವಂತೆ ಎಲ್ಲರಿಗೆ ಉತ್ತೇಜನ ಕೊಡಿರಿ.
20 ನಿ: “ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ನಿಪುಣರಾಗುವಂತೆ ಇತರರಿಗೆ ನೆರವಾಗಿರಿ.” ಪ್ರಶ್ನೋತ್ತರ ಚರ್ಚೆ. ಶುಶ್ರೂಷೆಯ ಬೇರೆ ಬೇರೆ ಲಕ್ಷಣಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತೆ ಒಬ್ಬರಿಗೊಬ್ಬರು ಸಹಾಯ ಮಾಡುವ ಅಗತ್ಯವನ್ನು ಒತ್ತಿ ಹೇಳಿರಿ. ಪ್ರಚಾರಕರು ಯೋಗ್ಯತೆ ಪಡೆದ ಬೈಬಲ್ ವಿದ್ಯಾರ್ಥಿಗಳಿಗೆ ಅಥವಾ ಹೆತ್ತವನು ತನ್ನ ಅಪ್ರಾಯಸ್ಥ ಮಗನಿಗೆ ಸೇವೆಗಾಗಿ ತಯಾರಿಸಲು ಹೇಗೆ ಸಹಾಯ ಮಾಡಬಹುದೆಂದು ದೃಶ್ಯ ಮಾಡಿರಿ.
20 ನಿ: “ನಂಬಿಕೆ-ಪಂಥಾಹ್ವಾನಿಸುವ ಒಂದು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ಧರೋ?” ನುರಿತ ಹಿರಿಯನಿಂದ ಪ್ರಶ್ನೋತ್ತರ ಚರ್ಚೆ. ಪುರವಣಿಯ ಪ್ರಾರಂಭದಿಂದ ಹಿಡಿದು ಉಪಶೀರ್ಷಿಕೆಯಾದ “ಅಗತ್ಯದ ಸಮಯದಲ್ಲಿ ಬೆಲೆಯುಳ್ಳ ಸಹಾಯ” ತನಕದ ಪಾರಾಗಳನ್ನು ಆವರಿಸಿರಿ. ಏನು ಮಾಡಲಿ ಎಂದು ಯೋಚಿಸಲು, ಏನಾದರೂ ಸಂಭವಿಸುವ ತನಕ ಕಾಯಬಾರದೆಂಬದನ್ನು ಒತ್ತಿಹೇಳಿರಿ. ಕುಟುಂಬವಾಗಿ ಈಗಲೇ ಮುಂದಾಗಿ ಯೋಜಿಸಿರಿ—ಸಿದ್ಧರಾಗಿರ್ರಿ !
ಸಂಗೀತ 183 (73) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 31 ರ ವಾರ
ಸಂಗೀತ 161 (70)
5 ನಿ: ಸ್ಥಳೀಕ ತಿಳಿಸುವಿಕೆಗಳು. ಯಂಗ್ ಪೀಪಲ್ ಆಸ್ಕ್ . . . ಪುಸ್ತಕವನ್ನು ಜನವರಿಯಲ್ಲಿ ನಾವು ನೀಡಲಿದ್ದೇವೆಂದು ಸಭೆಗೆ ತಿಳಿಸಿರಿ. ಈ ಪ್ರಕಾಶನವನ್ನು ಹಂಚುವುದರಲ್ಲಿ ಪೂರ್ಣವಾಗಿ ಭಾಗಿಗಳಾಗಲು ಎಲ್ಲರೂ ಬಯಸಬೇಕು ಮತ್ತು ಚೆನ್ನಾಗಿ ತಯಾರಿಸಬೇಕು.
10 ನಿ: “ಸುವಾರ್ತೆಯನ್ನು ನೀಡುವುದು—ಪ್ರಾರ್ಥನಾಪರ ವಿಧಾನದಲ್ಲಿ.” ಹೃತ್ಪೂರ್ವಕವಾದ ರುಚಿಸುವ ಭಾಷಣ. ನಮ್ಮ ಶುಶ್ರೂಷೆಯ ಮೇಲೆ ದೇವರ ಮಾರ್ಗದರ್ಶನೆ ಮತ್ತು ಆಶೀರ್ವಾದಕ್ಕಾಗಿ ಪ್ರಾರ್ಥಿಸುವ ಅಗತ್ಯವನ್ನು ಎತ್ತಿಹೇಳಿರಿ.
18 ನಿ “ನಂಬಿಕೆ-ಪಂಥಾಹ್ವಾನಿಸುವ ಒಂದು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ಧರೋ?” ಉಪಶೀರ್ಷಿಕೆ “ಅಗತ್ಯದ ಸಮಯದಲ್ಲಿ ಬೆಲೆಯುಳ್ಳ ಸಹಾಯ”ದಿಂದ ಹಿಡಿದು ಪುರವಣಿಯ ಕೊನೆಯ ತನಕದ ಸ್ಪಷ್ಟ ಭಾಷಣ— ಅನುಭವಸ್ಥ ಭಾಷಕನಿಂದ. ಒಂದು ತುರ್ತು ವೈದ್ಯಕೀಯ ಪರಿಸ್ಥಿತಿಯೊಂದಿಗೆ ವ್ಯವಹರಿಸುವಾಗ ಹಿರಿಯರೊಂದಿಗೆ ಕಾರ್ಯನಡಿಸುವ ಪ್ರಯೋಜನವನ್ನು ಒತ್ತಿಹೇಳಿರಿ.
12 ನಿ: ಯಂಗ್ ಪೀಪಲ್ ಆಸ್ಕ್ . . . ಜನವರಿಯಲ್ಲಿ ನೀಡಿರಿ. ಹಿರಿಯನು ಪುಸ್ತಕವನ್ನು ಸಭೆಯೊಂದಿಗೆ ಚರ್ಚಿಸುತ್ತಾನೆ. ಪುಸ್ತಕದ ಹತ್ತು ಭಾಗಗಳನ್ನು ಸಂಕ್ಷೇಪವಾಗಿ ಎತ್ತಿಹೇಳಿರಿ. ಆಯ್ದ ಅಧ್ಯಾಯಗಳನ್ನು ಚರ್ಚಿಸಿರಿ. 27 ನೇ ಪುಟದ ಚಿತ್ರದಂಥಾ ಪ್ರಬಲ ಚಿತ್ರಣಗಳನ್ನು ಗಮನಿಸಿರಿ. ಪುಸ್ತಕದ ಕಾಲೋಚಿತ ಸೂಚನೆಯನ್ನು ಚರ್ಚಿಸುವಂತೆ ಯುವಕರಿಗೆ, ಹೆತ್ತವರಿಗೆ ಮತ್ತು ಇತರರಿಗೆ ಉತ್ತೇಜನ ಕೊಡಿ. ಕ್ಷೇತ್ರಸೇವೆಯಲ್ಲಿ ಈ ಪುಸ್ತಕವನ್ನುಪಯೋಗಿಸಲು ಎಲ್ಲರೂ ತಯಾರಿಸಬೇಕು. ಕುಟುಂಬ ಚರ್ಚೆಯಲ್ಲಿ ಅದನ್ನುಪಯೋಗಿಸುವ ವಿಧಾನಗಳನ್ನು ಸೂಚಿಸಿರಿ.
ಸಂಗೀತ 188 (70) ಮತ್ತು ಸಮಾಪ್ತಿ ಪ್ರಾರ್ಥನೆ.