“ಬಾ!” ಎಂಬ ಆಮಂತ್ರಣವನ್ನು ಧೈರ್ಯದಿಂದ ನೀಡಿರಿ
1 ತೀವ್ರವಾಗಿ ಚಲಿಸುತ್ತಿರುವ ಲೋಕವ್ಯಾಪಕ ಘಟನೆಗಳು ಈ ಸಮಯವನ್ನು “ಕಡೇ ದಿವಸ”ಗಳಾಗಿ ಗುರುತಿಸುತ್ತಿವೆ. (2 ತಿಮೊ. 3:1-5) ಪಾತಕದಲ್ಲಿ ವೃದ್ಧಿ, ಆರ್ಥಿಕ ಅಸ್ಥಿರತೆ ಮತ್ತು ಜೀವಘಾತಕ ರೋಗಗಳು ತಮ್ಮ ಒತ್ತಡವನ್ನು ಕೂಡಿಸಿವೆ. ಆದರೆ ಇವೆಲ್ಲಾ ಬಾಧೆಗಳ ನಡುವೆಯೂ, ಜನರ ಮೇಲೆ ನಿತ್ಯಕ್ಕಾಗಿ ಪರಿಣಮಿಸಬಲ್ಲ ಒಂದು ಆಮಂತ್ರಣವು ನೀಡಲ್ಪಡುತ್ತಾ ಇರುವುದು ಸಂತೋಷಕರವೇ. ಆತ್ಮನೂ ಮದಲಗಿತ್ತಿಯೂ “ಬಾ!” ಅನ್ನುತ್ತಾ ಇದ್ದಾರೆ. ಮತ್ತು ಈಗ ಒಂದು “ಮಹಾ ಸಮೂಹ” ಅವರೊಂದಿಗೆ ಜತೆಗೂಡಿ, ಎಲ್ಲೆಲ್ಲಿಯೂ ಇರುವ ಜನರಿಗೆ ಬರುವಂತೆ ಮತ್ತು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳುವಂತೆ ಬಹಿರಂಗವಾದ ಆಮಂತ್ರಣವನ್ನು ನೀಡುತ್ತಿದ್ದಾರೆ.—ಪ್ರಕಟನೆ 7:9; 22:17.
2 ಇಂದು, ಯಾರು ನೀತಿಗಾಗಿ ಬಾಯಾರಿರುತ್ತಾರೋ ಅವರು, ಈ ಆಮಂತ್ರಣಕ್ಕೆ ಮಹಾ ಸಂಖ್ಯೆಯಲ್ಲಿ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಕಳೆದ ವರ್ಷ ಲೋಕವ್ಯಾಪಕವಾಗಿ ನಡೆದ ಜಿಲ್ಲಾ ಅಧಿವೇಶನಗಳಿಗೆ ಲಕ್ಷಾಂತರ ಜನರು ಹಾಜರಾದರು, ಮತ್ತು ಸ್ಮಾರಕಾಚರಣೆಗೆ ಸುಮಾರು 100 ಲಕ್ಷ ಜನರು ಹಾಜರಾದರು. ಇತರ ಲಕ್ಷಾಂತರ ಜನರು ದೇವರ ರಾಜ್ಯದ ಸಂದೇಶಕ್ಕೆ ಕಿವಿಗೊಡುವ ಮೂಲಕ ಯೆಹೋವನ ಏರ್ಪಾಡಿಗೆ ಗಣ್ಯತೆ ತೋರಿಸುತ್ತಿದ್ದಾರೆ. ಹೀಗಿರಲಾಗಿ, ನಾವೀ ಆಮಂತ್ರಣವನ್ನು ಬಹಿರಂಗವಾಗಿ ಮತ್ತು ಮನೆಮನೆಗೆ ನೀಡುವುದರಲ್ಲಿ ನಮ್ಮ ಸಮಯವನ್ನು ಸುಜ್ಞತೆಯಿಂದ ಉಪಯೋಗಿಸುವುದು ಅದೆಷ್ಟು ಮಹತ್ವವು!
ಧೈರ್ಯದಿಂದ ಪಾಲಿಗರಾಗಿರಿ
3 ಆದಿ ಕ್ರೈಸ್ತರು ಹಿಂಸೆಗೆ ಒಳಗಾದದ್ದು ಅವರ ಹುರುಪಿನ ಸಾರುವಿಕೆಯ ಕಾರಣದಿಂದಲೇ. (ಅಪೊ. 16:19-21; 17:2-8) ಆದರೂ ಅವರು ಸುವಾರ್ತೆಯನ್ನು ಪ್ರಕಟಿಸುವ ತಮ್ಮ ಧೈರ್ಯದ ಪ್ರಯತ್ನಗಳನ್ನು ಬಿಟ್ಟುಕೊಡಲಿಲ್ಲ. ಅದೇ ರೀತಿ ನಾವು ಸಹಾ, ಸುವಾರ್ತೆಯನ್ನು ಸಾರುವ ನಮ್ಮ ಪ್ರಯತ್ನಗಳಲ್ಲಿ ಧೀರರೂ ನಿರ್ಧರಿತರೂ ಆಗಿರತಕ್ಕದ್ದು.
4 ಕಾರ್ಯವು ನಿಷೇಧವಾಗಿರುವ ದೇಶಗಳಲ್ಲೂ ಸಹೋದರರು, ತೀವ್ರಹಿಂಸೆಯ ನಡುವೆಯೂ ಸಾರುವಿಕೆಯನ್ನು ಪೂರ್ಣ ಹೃದಯದಿಂದ ಮಾಡುತ್ತಿದ್ದಾರೆ. ಕೆಲಸಗಳನ್ನು, ಮನೆಗಳನ್ನು ಮತ್ತು ಅವರ ಸ್ವಾತಂತ್ರ್ಯವನ್ನು ಕಳಕೊಳ್ಳುವ ಸಂಭಾವ್ಯತೆಯಲ್ಲೂ ಅದರಲ್ಲಿ ಪಾಲಿಗರಾಗುತ್ತಾರೆ. ಅವರ ಉತ್ತಮ ಮಾದರಿಯು, ಇತರರನ್ನು “ಬಾ!” ಎಂದು ಆಮಂತ್ರಿಸುವುದಕ್ಕೆ ನಮಗೆ ಪ್ರೋತ್ಸಾಹನೆ ಕೊಡುತ್ತದೆ.—2 ಥೆಸ. 3:9.
5 ಸತ್ಯವನ್ನು ಕಲಿತು 35ಕ್ಕಿಂತಲೂ ಹೆಚ್ಚು ವರ್ಷದ ನಂತರ, ಒಬ್ಬಾಕೆ ಸಹೋದರಿ ಪಯನೀಯರಳಾಗುವ ಹೃದಯಾಪೇಕ್ಷೆಯನ್ನು ಕಾಪಾಡಿಕೊಂಡಳು. ಅವಳ ವೈಯಕ್ತಿಕ ಪರಿಸ್ಥಿತಿಗಳು, ಅವಳು 70 ವಯಸ್ಸಿನವಳಾದಾಗ ಬದಲಾದವು, ಮತ್ತು ಅವಳು ಕ್ರಮದ ಪಯನೀಯರ ಸೇವೆಗಿಳಿದಳು. ಆ ವಯಸ್ಸಲ್ಲಿ ಒಂದು ಹೊಸ ಜೀವನಕ್ರಮವನ್ನು ಬೆನ್ನಟ್ಟುವವರು ವಿರಳವಾದರೂ, ಅವಳದನ್ನು ಮಾಡಿದಳು. ಈಗ ಕೆಲವಾರು ವರ್ಷಗಳ ಪೂರ್ಣ ಸಮಯದ ಸೇವೆಯನ್ನು ಆನಂದಿಸಿದ ಬಳಿಕ, ಅವಳನ್ನುವುದು: “ಅದು ದಿನದಿನವೂ ಉತ್ತಮಗೊಳ್ಳುತ್ತಾ ಇದೆ.” ರಾಜ್ಯಸೇವೆಗೆ ಎಟಕಿಸಿಕೊಂಡು ಅದರಲ್ಲಿ ಪೂರ್ಣವಾಗಿ ಭಾಗವಹಿಸಲು ಯೆಹೋವನ ಆಮಂತ್ರಣವನ್ನು ಧೈರ್ಯದಿಂದ ಸ್ವೀಕರಿಸಿದರಿಂದಾಗಿ ಇತರ ಅನೇಕರಿಗೆ ಆಕೆ ಆತ್ಮಿಕ ಚೈತನ್ಯವನ್ನು ತಂದಿರುತ್ತಾಳೆ.
6 ಮೊದಲನೆಯ ಶತಕದಲ್ಲಿ ಹೇಗೋ ಹಾಗೆ ಇಂದು ಸಹಾ, ಜನರು ಈ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ, ತಮ್ಮ ಯೋಚನೆಗಳನ್ನು ಮಾರ್ಪಡಿಸಿಕೊಳ್ಳುತ್ತಾರೆ, ಮಾನಸಾಂತರ ಪಡುತ್ತಿದ್ದಾರೆ ಮತ್ತು ದೇವರನ್ನು ಅಗೌರವಿಸುವ ಪದ್ಧತಿಗಳನ್ನು ತ್ಯಜಿಸುತ್ತಿದ್ದಾರೆ. ಅವರು ಸಾಕ್ಷಿಗಳ ಒಂದು ಸಮರ್ಪಿತ ಅಂತರ್ರಾಷ್ಟ್ರೀಯ ಭ್ರಾತೃತ್ವದ ಭಾಗವಾಗಿ ಪರಿಣಮಿಸಿ, ಇನ್ನೂ ಇತರ ಪ್ರಾಮಾಣಿಕ ಹೃದಯದ ಜನರನ್ನು “ಬಾ!” ಎಂದು ಕರೆಯುವುದರಲ್ಲಿ ಆತ್ಮ ಮತ್ತು ಮದಲಗಿತ್ತಿಯೊಂದಿಗೆ ಜತೆಗೂಡುತ್ತಿದ್ದಾರೆ.
7 ರಾಜ್ಯ ಕಾರ್ಯದಲ್ಲಿ ಮಹಾ ಅಭಿವೃದ್ಧಿಯು ಮತ್ತು ವಿವಿಧ ದೇಶಗಳಲ್ಲಿ ಶಾಖಾ ಆಫೀಸುಗಳ ವಿಸ್ತಾರ್ಯವು, ಯೆಹೋವನ ಆಶೀರ್ವಾದದ ರುಜುವಾತನ್ನು ಕೊಡುತ್ತದೆ. ಆದರೆ ಈ ಹಳೇ ವ್ಯವಸ್ಥೆಯ ಅಂತ್ಯ ಹತ್ತಿರವಾಗಿದೆ. ಇತರರು ಬೇಗನೇ ಪ್ರತಿಕ್ರಿಯೆ ತೋರಿಸುವಂತೆ ಮತ್ತು ಕೇಳಿದ ವಿಷಯಕ್ಕನುಸಾರ ನಡೆಯುವಂತೆ, “ಬಾ!” ಎಂಬ ಆಮಂತ್ರಣವನ್ನು ನೀಡುವುದರಲ್ಲಿ ಧೈರ್ಯ ಮತ್ತು ಹುರುಪನ್ನು ಪ್ರದರ್ಶಿಸುವ ಸುಸಮಯವು ಈಗಲೇ.—ಅಪೊ. 20:26, 27; ರೋಮಾ. 12:11.