ಯೆಹೋವನನ್ನು ಸಂಗೀತದಲ್ಲಿ ಸ್ತುತಿಸುವುದು
1 ದಯವಿಟ್ಟು, ನಿಮ್ಮ ಸಂಗೀತ ಪುಸ್ತಕದ ಕಡೇ ಹಾಳೆಯನ್ನು ತೆರೆಯಿರಿ. ನೀವೇನನ್ನು ಕಾಣುತ್ತೀರಿ? ಒಂದು ಲೇವ್ಯ ಗಾಯಕ ತಂಡವು ಯೆಹೋವನ ಪರಿಶುದ್ಧಾಲಯದಲ್ಲಿ ನಿಂತಿದೆ; ಅವರು ಬಾಯಿ ಅಗಲವಾಗಿ ತೆರೆದು ಉತ್ಸಾಹದಿಂದ ಹಾಡುತ್ತಿದ್ದಾರೆ. ಗಾಯನವು ಯೆಹೋವನ ಆಲಯದಲ್ಲಿ ಸತ್ಯಾರಾಧನೆಯ ಒಂದು ಪ್ರಧಾನ ವೈಶಿಷ್ಟ್ಯವಾಗಿತ್ತು. ಅರಸ ದಾವೀದನ ಸಮಯದಲ್ಲಿ ಆಲಯದಲ್ಲಿ ಸೇವೆ ಮಾಡುತ್ತಿದ್ದವರಲ್ಲಿ, 10 ಸೇಕಡಾಕ್ಕೂ ಮಿಕ್ಕಿದ ಜನರು, ಸಂಗೀತದೊಂದಿಗೆ ಯೆಹೋವನನ್ನು ಸ್ತುತಿಸುವುದಕ್ಕೆ ನೇಮಿತರಾಗಿದ್ದರು, ಮತ್ತು ಅವರಲ್ಲಿ 288 ಮಂದಿ ತರಬೇತು ಹೊಂದಿದ ಗಾಯಕರಾಗಿದ್ದರು, ಇವರೆಲ್ಲರೂ “ಗಾಯನ ಪ್ರವೀಣರು.” ಅವರು ತಮ್ಮ ಗಾಯನವನ್ನು ಗಂಭೀರವಾಗಿ ತಕ್ಕೊಂಡಿದ್ದರೆಂಬದು ನಿಸ್ಸಂಶಯ.—1 ಪೂರ್ವ. 23:3, 5; 25:7.
2 ಕ್ರೈಸ್ತ ಕಾಲಕ್ಕೆ ಬರುವಲ್ಲಿ, ಯೇಸು ಮತ್ತು ಅವನ ಅಪೊಸ್ತಲರು ಕರ್ತನ ಸಂಜಾ ಭೋಜನದ ಕೊನೆಯಲ್ಲಿ ಒಂದು ಗಾನವನ್ನು ಹಾಡಿದರ್ದೆಂದು ನಮಗೆ ತಿಳಿಯುತ್ತದೆ. (ಮಾರ್ಕ 14:26) ಮತ್ತು ನಮ್ಮ ದೇವರಿಗೆ ಸ್ತುತಿಗೀತಗಳನ್ನು ಹಾಡುವಂತೆ ಅಪೋಸ್ತಲ ಪೌಲನು ಪದೇ ಪದೇ ನಮಗೆ ಹೇಳುತ್ತಾನೆ. ಕೊಲೊಸ್ಸೆಯ 3:16ರಲ್ಲಿ ಅವನು ಬರೆದದ್ದು: “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲ ಜ್ಞಾನದಿಂದ ಕೂಡಿದವರಾಗಿ ಒಬ್ಬರಿಗೊಬ್ಬರು ಉಪದೇಶ ಮಾಡಿಕೊಳ್ಳಿರಿ, ಬುದ್ಧಿಹೇಳಿಕೊಳ್ಳಿರಿ. ಕರ್ತನ ಕೃಪೆಯನ್ನು ನೆನಸಿಕೊಳ್ಳುವವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ.”—ಎಫೆಸ 5:19, 20ನ್ನೂ ನೋಡಿ.
3 ರಾಜ್ಯ ಸಂಗೀತಗಳನ್ನು ಹಾಡುವುದು ನಾವು ಯೆಹೋವನನ್ನು ಸ್ತುತಿಸುವ ಒಂದು ವಿಧಾನವಾಗಿದೆ. ಆದ್ದರಿಂದ ನಾವದನ್ನು ನಮ್ಮೆಲ್ಲಾ ಹೃದಯದಿಂದ ಹಾಡಬೇಡವೇ? ಹಾಗೆ ಹಾಡುವಾಗ ನಾವು ಯೆಹೋವ ದೇವರನ್ನು ಸ್ತುತಿಸುತ್ತೇವೆ. ನಮ್ಮ ಪ್ರಾರ್ಥನೆಗಳನ್ನು ಆತನು ಕೇಳುವಂತೆಯೇ, ಆತನಿಗೆ ಸಂಬೋಧಿಸಲ್ಪಡುವ ನಮ್ಮ ಹಾಡುಗಳನ್ನೂ ಆತನು ಆಲಿಸುತ್ತಾನೆ. ನಾವು ನಿಜವಾಗಿ ಗಟ್ಟಿಯಾಗಿ ಹಾಡುವಾಗ, ಇತರರಿಗೂ ಸಂತೋಷವನ್ನು ತರುತ್ತೇವೆ, ಸಥ್ವಾ ನಮಗೂ ಪ್ರಯೋಜನ ಸಿಗುತ್ತದೆ.
4 ನಮ್ಮ ಸಂಗೀತಗಳ ಸುಂದರವಾದ ಮಾತುಗಳೆಡೆಗೆ ಮನಕೊಡಿರಿ. “ಒಬ್ಬರಿಗೊಬ್ಬರು ಉಪದೇಶ ಮಾಡಲು ಮತ್ತು ಬುದ್ಧಿಹೇಳಲು” ಅವು ನಮಗೆ ಸಹಾಯಕಾರಿ ನಿಶ್ಚಯ. ನಮ್ಮ ಹಾಡುಗಳಲ್ಲಿ ಎಂಥ ಉತ್ತಮ ಸೂಚನೆ ಅಡಕವಾಗಿದೆ! ಆ ಸೂಚನೆಯನ್ನು ಗಂಭೀರವಾಗಿ ತಕ್ಕೊಳ್ಳುವ ಮೂಲಕ ಆತ್ಮದ ಫಲಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಸಿಗುವುದು ಮತ್ತು ಅದರಲ್ಲಿ ಸಮೃದ್ಧರಾಗಿ, ಮಾಂಸಿಕವಾದ ಐಹಿಕ ಪ್ರಭಾವಗಳು ಒಳಸೇರದಂತೆ ತಡೆಯಲು ಶಕ್ತರಾಗುವೆವು. ‘ಹೃದಯದಲ್ಲಿ ಗಾನಮಾಡುವಿಕೆಯು,’ ಯೆಹೋವನನ್ನು ಧೈರ್ಯದಿಂದ ಮತ್ತು ಉಲ್ಲಾಸದಿಂದ ಸೇವಿಸುವಂತೆ ನಮಗೆ ಪ್ರೋತ್ಸಾಹನೆಯನ್ನು ಕೊಡುತ್ತದೆ.
5 ಕೂಟಗಳಲ್ಲಿ ಹಾಡುವಿಕೆಗೆ ಉತ್ತಮ ಪ್ರಾರಂಭವನ್ನು ಕೊಡಲಿಕ್ಕಾಗಿ ಅಧ್ಯಕ್ಷನು, ಸಂಗೀತ ನಂಬ್ರವನ್ನು ಮಾತ್ರವೇ ಅಲ್ಲ, ಅದರ ವಸ್ತುವಿಷಯವನ್ನು ಅಥವಾ ಶೀರ್ಷಿಕೆಯನ್ನು ಸಹಾ ಪ್ರಕಟಿಸಬೇಕು. ಕೆಲವೊಮ್ಮೆ ಅವನು ಸಂಗೀತದ ಶಾಸ್ತ್ರೀಯ ಆಧಾರವನ್ನು ಗಮನಿಸಿಬಹುದು ಮತ್ತು ನೀಡಲ್ಪಡುವ ಸಮಾಚಾರಕ್ಕೆ ಅದು ಹೇಗೆ ಒಪ್ಪುತ್ತದೆಂಬದನ್ನು ಸಂಕ್ಷೇಪವಾಗಿ ತಿಳಿಸಬಹುದು.
6 ನಮ್ಮ ಹಾಡುಗಳ ಕಿಂಗ್ಡಂ ಮೆಲೊಡೀಸ್ ಮತ್ತು ಪಿಯಾನೋ ಕ್ಯಾಸೆಟ್ಟ್ಗಳು, ನಮ್ಮ ಕುಟುಂಬಗಳಿಗೆ ಸಂಗೀತಗಳ ಒಳ್ಳೇ ಪರಿಚಯವನ್ನು ಮಾಡಿಸಲು ಉತ್ತಮ ಸಾಧನಗಳಾಗಿವೆ. ಇವನ್ನು ಹಿನ್ನೆಲೆಯ ಸಂಗೀತವಾಗಿ ಬಾರಿಸುವುದು, ನಮ್ಮ ಸಂಗೀತಗಳನ್ನು ನಾವು ಚೆನ್ನಾಗಿ ಕಲಿತುಕೊಳ್ಳುವ ಒಂದು ಅತ್ಯಾನಂದಕರ ಮಾರ್ಗವಾಗಿದೆ.
7 ನಮ್ಮ ಪ್ರೀತಿಯುಳ್ಳ ಸ್ವರ್ಗೀಯ ತಂದೆಯನ್ನು ಸಂಗೀತದೊಂದಿಗೆ ಸ್ತುತಿಸುವ ನಮ್ಮ ಹಂಗನ್ನು ದೇವರ ವಾಕ್ಯವು ಪದೇ ಪದೇ ನಮಗೆ ನೆನಪಿಸುತ್ತದೆ. ನಾವಿದನ್ನು ಪೂರ್ಣಾತ್ಮದಿಂದ ಮಾಡುವವರಾಗುವ. ಈ ಮೂಲಕ ನಾವು ನಮ್ಮ ಮಧ್ಯೆ ಬರುವ ಅಪರಿಚಿತರಿಗೆ ಒಂದು ಹೃತ್ಪೂರ್ವಕವಾದ ಸಾಕ್ಷಿ ನೀಡಬಲ್ಲೆವು. ಹೌದು, ಪುರಾತನ ದಾವೀದನು ಮಾಡಿದಂತೆ ನಾವು ಸಹಾ, ಯೆಹೋವನನ್ನು ಸ್ತುತಿಸುತ್ತಾ ಆತನಿಗೆ ಸಂಕೀರ್ತನೆಯನ್ನು ಹಾಡೋಣ.—ಕೀರ್ತ. 108:1-3.