ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/91 ಪು. 3
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1991 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಚೌಕ
    2002 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ಸಾರುವ ವಿಧಾನಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಗುಂಪು ಸಾಕ್ಷಿಕಾರ್ಯವು ಆನಂದವನ್ನು ತರುತ್ತದೆ
    2003 ನಮ್ಮ ರಾಜ್ಯದ ಸೇವೆ
  • ಸಭೆಯು ಭಕ್ತಿಯಲ್ಲಿ ಬೆಳೆಯಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
1991 ನಮ್ಮ ರಾಜ್ಯದ ಸೇವೆ
km 6/91 ಪು. 3

ಪ್ರಶ್ನಾ ಪೆಟ್ಟಿಗೆ

● ಪ್ರಚಾರಕರು ತಾವು ಎಲ್ಲಿ ವಾಸಿಸುತ್ತಾರೋ ಆ ಟೆರಿಟೆರಿಯನ್ನು ಹಿಡಿದಿರುವ ಸಭೆಯೊಂದಿಗೆ ಸೇವೆ ಮಾಡುವಂತೆ ಶಿಫಾರಸು ಮಾಡಲ್ಪಡುವುದೇಕೆ?

ವಿಷಯಗಳನ್ನು ಕ್ರಮಬದ್ಧವಾಗಿ ಮತ್ತು ದೇವಪ್ರಭುತ್ವ ವಿಧಾನದಲ್ಲಿ ನಡಿಸುವುದು ಮಹತ್ವವುಳ್ಳದ್ದು. ಅಪೊಸ್ತಲ ಪೌಲನು ಬರೆದದ್ದು: “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಅಕ್ರಮಕ್ಕೆ ಕಾರಣನಲ್ಲ. . . .ಎಲ್ಲವೂ ಮರ್ಯಾದೆಯಿಂದಲೂ ಕ್ರಮಪ್ರಕಾರವಾಗಿಯೂ ನಡಿಯಲಿ.”—1 ಕೊರಿ. 14:33, 40.

ಪ್ರಯಾಣ ಸೌಕರ್ಯದ ತೊಂದರೆಗಳು, ಐಹಿಕ ಕೆಲಸದ ಕಾಲತಖ್ತೆಗಳು ಅಥವಾ ಮೇಲ್ವಿಚಾರದಲ್ಲಿ ಸಹಾಯದ ಅಗತ್ಯತೆಯೇ ಮುಂತಾದ ಕೆಲವು ವಿನಾಯಿತಿಗಳು ಇರುವುದಾದರೂ, ಯಾವ ಸಭಾ ಟೆರಿಟೆರಿಯಲ್ಲಿ ನಾವು ವಾಸಿಸುತ್ತೇವೂ ಆ ಸಭೆಯನ್ನೇ ಹಾಜರಾಗುವುದು ಸಾಮಾನ್ಯವಾಗಿ ಒಳ್ಳೆಯದು. ಇದು ಕ್ಷೇತ್ರಸೇವೆಯನ್ನು ಅಧಿಕ ಅನುಕೂಲವನ್ನಾಗಿ ಮಾಡುವುದು, ಮತ್ತು ನಮ್ಮ ನೆರೆಹೊರೆಯ ಹೊರಗಿರುವ ಒಂದು ಗುಂಪಿನೊಂದಿಗೆ ಸೇವೆಮಾಡಲು ಅಷ್ಟು ದೂರ ಪ್ರಯಾಣ ಮಾಡಬೇಕೆಂದಿರುವುದಿಲ್ಲ. ಅದು ನಮ್ಮನ್ನು ನಮ್ಮ ಸಭೆಯ ಇತರರೊಂದಿಗೆ ಕೆಲಸಮಾಡುವ ಉತ್ತಮ ಸ್ಥಾನದಲ್ಲಿಡುವುದು ಮತ್ತು ಹೊಸಾಸಕ್ತರನ್ನು ಅವರಿಗೆ ಅತ್ಯಂತ ಅನುಕೂಲವಾದ ಕೂಟಗಳಿಗೆ ನಡಿಸಲು ಸಾಧ್ಯವಾಗುವುದು. ಮತ್ತು ಇದು ನಮ್ಮನ್ನು, ಅಗತ್ಯದ ಸಮಯದಲ್ಲಿ ಸಹಾಯ ನೀಡಶಕ್ತರಾದ ನಮ್ಮ ಬೇರೆ ಸಹೋದರ ಮತ್ತು ಸಹೋದರಿಯರೊಂದಿಗೆ ಆಪ್ತ ಸಂಪರ್ಕದಲ್ಲಿಡುವುದು.

ನಾವು ಸ್ವತಂತ್ರ ವರ್ತನೆಯ ಭಾವವನ್ನು ವರ್ಜಿಸಬೇಕು ಮತ್ತು ರಾಜ್ಯದಭಿರುಚಿಗಳನ್ನು ಮೊದಲಾಗಿಟ್ಟು ಮಾಡಲ್ಪಟ್ಟ ಏರ್ಪಾಡಿನೊಳಗೇ ಕಾರ್ಯನಡಿಸಬೇಕು. (ಲೂಕ 16:10) ಒಂದು ಹೊಸ ಸಭೆಯು ಸ್ಥಾಪಿಸಲ್ಪಟ್ಟಾಗ ಅಥವಾ ಸಭಾ ಪುಸ್ತಕಭ್ಯಾಸಗಳ ಮರುಏರ್ಪಾಡಾದಾಗ, ನಿರ್ದಿಷ್ಟ ಮಿತ್ರರೊಂದಿಗೆ ಉಳಿಯಲು ನಾವು ಇಷ್ಟಪಡಬಹುದು. ಆದರೆ ಹೊಸ ಏರ್ಪಾಡನ್ನು ಸ್ವೀಕರಿಸುವ ಮೂಲಕ ನಾವು ಹೊಸ ಮಿತ್ರರನ್ನು ಮಾಡಬಲ್ಲೆವು ಮತ್ತು ನಮ್ಮ ದೇವಪ್ರಭುತ್ವ ಸಹವಾಸಗಳನ್ನು ವಿಸ್ತರಿಸಬಲ್ಲೆವು. ಅಲ್ಲದೆ ಪ್ರಚಾರಕರು, ತಾವು ಜತೆಗೂಡಿರುವ ಸಭಾ ಟೆರಿಟೆರಿಯ ಕ್ಷೇತ್ರದಲ್ಲೀ ವಾಸಿಸುವಾಗ ಹಿರಿಯರಿಗೆ ಕುರಿಪಾಲನೆಯ ಕೆಲಸವು ಸುಲಭವಾಗುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ