ಕ್ಷೇತ್ರಸೇವೆಯಲ್ಲಿರುವಾಗ ಇತರರಿಗೆ ಸಹಾಯ ಕೊಡುವುದು
1 ಆರಂಭದಿಂದಲೇ ಕ್ರೈಸ್ತ ಸಭೆಯು, ಸೌವಾರ್ತಿಕರ ಒಂದು ಸಂಘಟನೆಯಾಗಿತ್ತು. ವೈಯಕ್ತಿಕವಾಗಿ ಯೇಸು ತನ್ನ ಶಿಷ್ಯರನ್ನು ಸಾರುವ ಕೆಲಸದಲ್ಲಿ ತರಬೇತು ಮಾಡಿದ್ದನು ಮತ್ತು “ಇಬ್ಬರಿಬ್ಬರಾಗಿ ಕಳುಹಿಸಲಾರಂಭಿ”ಸಿದ್ದನು. (ಮಾರ್ಕ 6:7; ಲೂಕ 8:1) ಅಪೊಸ್ತಲ ಪೌಲನು ಫಿಲಿಪ್ಪಿಯ ಸಭೆಯ ತನ್ನ “ಜೊತೆಕೆಲಸದವರ” ಕುರಿತು ತಿಳಿಸುತ್ತಾ ಅವರು, “ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು” ಎಂದು ಹೇಳಿದ್ದಾನೆ. (ಫಿಲಿ. 4:3) ಶುಶ್ರೂಷೆಯಲ್ಲಿ ಯಾವಾಗಲೂ ಒಬ್ಬ ಸಂಗಡಿಗನಿರುವ ಅವಶ್ಯವಿಲ್ಲದಿದ್ದರೂ, ನಮ್ಮಲ್ಲಿ ಹೆಚ್ಚಿನವರು ಇತರರೊಂದಿಗೆ ಕೂಡಿ ಸೇವೆ ಮಾಡುವುದನ್ನು ಗಣ್ಯಮಾಡುತ್ತೇವೆ. (ಪ್ರಸಂ. 4:9) ಹೀಗಿರಲಾಗಿ ನಾವು ಸಾರುವಾಗ, ಒಬ್ಬರಿಗೊಬ್ಬರು ಹೇಗೆ ಪ್ರೋತ್ಸಾಹನೆ ಮತ್ತು ಸಹಾಯವನ್ನು ನೀಡಬಹುದು?
2 ಕ್ಷೇತ್ರ ಸೇವೆಗಾಗಿ ಕೂಟಗಳ ಉದ್ದೇಶಗಳಲ್ಲಿ ಒಂದು, ಹೊಸ ಮತ್ತು ಕಡಿಮೆ ಅನುಭವಿಗಳಾದ ಪ್ರಚಾರಕರಿಗೆ ಸಹಾಯ ನೀಡುವುದೇ. (ಒಎಮ್ ಪುಟ 77, 97) ಹೊಸತಾಗಿ ನೇಮಿತರಾದ ಪಯನೀಯರರು ಸಹಾ ಹೆಚ್ಚು ಅನುಭವವಿರುವ ಪ್ರಚಾರಕರೊಂದಿಗೆ ಅಥವಾ ಒಬ್ಬ ಹಿರಿಯ ಯಾ ಶುಶ್ರೂಷೆ ಸೇವಕನೊಂದಿಗೆ ಸೇವೆ ಮಾಡಬಯಸಬಹುದು. ‘ಉತ್ತೇಜನದ ಪರಸ್ಪರ ವಿನಿಮಯಕ್ಕಾಗಿ’ ಎಂಥ ಉತ್ತಮ ಸಂದರ್ಭವಿದು!’—ರೋಮಾ. 1:12.
3 ಕೆಲವು ಕ್ಷೇತ್ರಗಳಲ್ಲಿ ಸುರಕ್ಷೆಯ ಕಾರಣಗಳಿಂದಾಗಿ ಪ್ರಚಾರಕರು ಒಟ್ಟಾಗಿ ಸೇವೆ ಮಾಡುವುದು ಯುಕ್ತವಾಗಿರಬಹುದು. ಅಥವಾ ಕೆಲವು ಸಾರಿ, ಸೇವೆಗಾಗಿ ಕೂಟಕ್ಕೆ ಬಂದಿರುವ ಅನನುಭವಿ ಪ್ರಚಾರಕರನ್ನು ಸೇರಿಸಿಕೊಳ್ಳುವರೇ, ಇನ್ನೊಬ್ಬರೊಂದಿಗೆ ಸೇವೆ ಮಾಡಲು ನಡಿಸಿದ ಪೂರ್ವ ಯೋಜನೆಯನ್ನು ಬದಲಾಯಿಸುವುದು ಅವಶ್ಯವಾಗಿ ಕಂಡೀತು. ಹಾಗೆ ಮಾಡಲು ನಮ್ಮನ್ನು ಕೇಳಲ್ಪಟ್ಟಲ್ಲಿ, ಮಾಮೂಲಿಯಾಗಿ ನಾವು ಒಬ್ಬ ನಿರ್ದಿಷ್ಟ ಸಂಗಡಿಗನೊಂದಿಗೆ ಸೇವಾ ಮಾಡುತ್ತೇವಾದರೂ, “ಬಲವಿಲ್ಲದವರಿಗೆ ನೆರವಾಗಲಿಕ್ಕಾಗಿ” ಬೇಕಾದ ಯಾವುದೇ ಬದಲಾವಣೆಗಳನ್ನು ಮಾಡುವುದು ಪ್ರೀತಿಯ ಕ್ರಿಯೆಯಾಗಿದೆ ನಿಶ್ಚಯ.—ಅಪೊ. 20:35.
ಹೊಂದಿಕೆಯಲ್ಲಿ ಕೆಲಸಮಾಡಿರಿ
4 ಕ್ಷೇತ್ರದಲ್ಲಿ ಬೇರೆಯವರೊಂದಿಗೆ ಸೇವೆಮಾಡುವಾಗಲ್ಲೆಲ್ಲಾ ಒಂದು ತಂಡದೋಪಾದಿ, ಹೊಂದಿಕೆಯಲ್ಲಿ ಸೇವೆ ಮಾಡಲು ನಾವು ಬಯಸಬೇಕು. (1 ಕೊರಿಂ. 3:6, 9 ಹೋಲಿಸಿ.) ಸಾಕ್ಷಿಕೊಡುವುದರಲ್ಲಿ ಇಬ್ಬರೂ ಪಾಲಿಗರಾಗುತ್ತಾ ಬಾಗಲಲ್ಲಿ ಸಂಭಾಷಣೆ ಆರಂಭಿಸುವ ಸರದಿಯನ್ನು ತಕ್ಕೊಳ್ಳಬಹುದು. ನಮ್ಮ ಸಂಗಡಿಗನು ಮಾತಾಡುವಾಗ ನಾವು ವಿನಯದಿಂದ ಮತ್ತು ಲಕ್ಷ್ಯಕೊಟ್ಟು ಕೇಳುವಂತೆ ಸಭ್ಯಾಚಾರವು ನಮ್ಮನ್ನು ಆದೇಶಿಸುತ್ತದೆ.
5 ನಮ್ಮ ಸಂಗಡಿಗನು ನಡಿಸುತ್ತಿರುವ ಚರ್ಚೆಯಲ್ಲಿ ಸೇರುವುದು ಕೆಲವು ಸಲ ಯುಕ್ತವೆಂದು ಕಂಡರೂ, ಯುಕ್ತಾಯುಕ್ತ ಪರಿಜ್ಞಾನದ ಅಗತ್ಯ ಇಲ್ಲಿದೆ. ಮನೆಯವನೊಂದಿಗೆ ಸತ್ಪರಿಣಾಮಕ್ಕೆ ಹಾಕಲ್ಪಟ್ಟಿರುವ ವಿವೇಚನೆಯ ಒಂದು ಪಥವನ್ನು ಭಂಗಪಡಿಸಲು ನಾವು ಬಯಸುವದಿಲ್ಲ. ಆದರೆ, ಒಬ್ಬ ಅನನುಭವಿ ಪ್ರಚಾರಕನಿಗೆ ಒಂದು ಆಕ್ಷೇಪವನ್ನು ನಿರ್ವಹಿಸಲು ಕಷ್ಟವಾಗಲು ತೊಡಗಿದರೆ, ನಿಮ್ಮ ಸುಸಂಗತವಾದ ಸಹಾಯವನ್ನು ಅವನು ಗಣ್ಯಮಾಡುವನು ನಿಶ್ಚಯ.—ಪ್ರಸಂ. 4:12.
6 ಮನೆ ಮನೆಗಳ ನಡುವೆ ಸಿಗುವ ಸಮಯವನ್ನು, ಪ್ರಸಂಗವನ್ನು ಪ್ರಗತಿ ಮಾಡುವ ವಿಧಾನಗಳನ್ನು ಚರ್ಚಿಸುವುದಕ್ಕಾಗಿ ನಾವು ಸದುಪಯೋಗಿಸಬಹುದು. ರೀಸನಿಂಗ್ ಪುಸ್ತಕದಲ್ಲಿನ ಒಂದು ಪೀಠಿಕೆ ಅಥವಾ ನಮ್ಮ ರಾಜ್ಯದ ಸೇವೆ ಯಲ್ಲಿ ಕೊಡಲ್ಪಟ್ಟ ಒಂದು ಸಲಹೆಯನ್ನು ಉಪಯೋಗಿಸುವುದು ಪ್ರಾಯಶಃ ಹೆಚ್ಚು ಫಲಕಾರಿಯಾಗಬಹುದು. ಒಟ್ಟಾಗಿ ಸೇವೆ ಮಾಡುವುದರಿಂದ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿಯುವ ಸಂದರ್ಭವೂ ಇದೆ, ಅದು ನಮ್ಮ ಕ್ರೈಸ್ತ ಬಾಂಧವ್ಯದ ಬಂಧಗಳನ್ನು ಬಲಗೊಳಿಸುವುದು.
7 ನಮ್ಮ ಶುಶ್ರೂಷೆಯು ನಿಶ್ಚಯವಾಗಿಯೂ ಒಂದು ಅಪಾರ ಬೆಲೆಯ ನಿಕ್ಷೇಪವು. (2 ಕೊರಿಂ. 4:1, 7) ಇತರರೊಂದಿಗೆ ಕ್ಷೇತ್ರ ಸೇವೆ ಮಾಡುವ ಸಂದರ್ಭದಲ್ಲಿ, ನಾವು ಒಬ್ಬರಲ್ಲೊಬ್ಬರು ಪವಿತ್ರ ಸೇವೆಗಾಗಿ ಆಳವಾದ ಗಣ್ಯತೆಯನ್ನು ಕಟ್ಟಬಹುದು. ಅದೇ ಸಮಯದಲ್ಲಿ ನಾವು ಪ್ರೋತ್ಸಾಹನೆಯನ್ನೂ ಪಡೆಯುವೆವು ಮತ್ತು ಒಬ್ಬರಿಂದೊಬ್ಬರು ಕಲಿಯಬಲ್ಲೆವು. ಫಲಿತಾಂಶವಾಗಿ ಅಧಿಕ ಸಂತೋಷ, ಸಾಕ್ಷಿಕೊಡುವುದರಲ್ಲಿ ಅಧಿಕ ಪರಿಣಾಮಕಾರತೆ, ಮತ್ತು ನಮ್ಮ ಸಹೋದರ ಮತ್ತು ಸಹೋದರಿಯರೊಂದಿಗೆ ತೃಪ್ತಿಕರವಾದ ಐಕ್ಯತೆಯ ಭಾವವು ಲಭಿಸುವುದು.—ಕೀರ್ತನೆ 133:1.